ಎಗ್‌ ವೆರೈಟಿ


Team Udayavani, Oct 20, 2018, 12:37 PM IST

19-october-10.gif

ಅತ್ಯಧಿಕ ಪ್ರಮಾಣದ ಪ್ರೊಟೀನ್‌,  ಟ್ರಿಷಿಯನ್‌, ಮಿನರಲ್ಸ್‌ ಹೊಂದಿರುವ ಮೊಟ್ಟೆ ಕೇವಲ ಮಾಂಸಹಾರಿಗಳು ಮಾತ್ರವಲ್ಲ ಕೆಲವು ಮಂದಿ ಸಸ್ಯಾಹಾರಿಗಳೂ ಸೇವಿಸುತ್ತಾರೆ. ಕಾರಣ ಅದರಲ್ಲಿರುವ ಆರೋಗ್ಯಕಾರಿ ಗುಣಗಳು. ಬಾಡ್‌, ಹಾಫ್ಬಾಯ್ಲಡ್‌ ಎಂದುಕೊಂಡು ಸೇವಿಸುವ ಮೊಟ್ಟೆಯಲ್ಲಿ ದೇಹದ ಸೌಂದರ್ಯ ಹೆಚ್ಚಿಸುವ ಗುಣವೂ ಇದೆ. ಹೀಗಾಗಿ ಮೊಟ್ಟೆ ಹೆಚ್ಚಿನವರಿಗೆ ಬಲುಪ್ರಿಯ. ಮೊಟ್ಟೆ ಆಮ್ಲೆಟ್‌, ಕರಿ ಮಾತ್ರ ಮಾಡಿ ಗೊತ್ತಿದ್ದವರು ಒಂದಷ್ಟು ಹೊಸದನ್ನೂ ಪ್ರಯೋಗ ಮಾಡಿ ನೋಡಬಹುದು. ಅದಕ್ಕಾಗಿ ಇಲ್ಲಿದೆ ಕೆಲವೊಂದು ರೆಸಿಪಿ.

ಡ್ರೈ ಎಗ್‌ ಮಸಾಲ
ಬೇಕಾಗುವ ಸಾಮಗ್ರಿಗಳು
 ಮೊಟ್ಟೆ – 5
 ಟೊಮೇಟೊ- 4 ಚಿಕ್ಕದು
 ಈರುಳ್ಳಿ- 4 ಚಿಕ್ಕದು
 ಬೆಳ್ಳುಳ್ಳಿ- 6 ಎಸಳು
 ಶುಂಠಿ ಪೇಸ್ಟ್‌- 1 ಚಮಚ
 ಅರಶಿಣ- ಅರ್ಧ ಚಮಚ
 ಉಪ್ಪು- ರುಚಿಗೆ ತಕ್ಕಷ್ಟು
 ಹಸಿಮೆಣಸು- 3 ಚಿಕ್ಕದು
 ತೆಂಗಿನ ಎಣ್ಣೆ- ಸ್ವಲ್ಪ
 ಕರಿಬೇವು- 10- 12 ಎಲೆ
 ತುರಿದ ಕೊತ್ತಂಬರಿ ಸೊಪ್ಪು- ಅರ್ಧ ಕಪ್‌
 ಜೀರಿಗೆ- ಕಾಲು ಚಮಚ
 ಸಾಸಿವೆ- ಕಾಲು ಚಮಚ
 ಗರಂ ಮಸಾಲ- 1 ಚಮಚ
 ಕರಿಮೆಣಸು ಹುಡಿ- ಕಾಲು ಚಮಚ
 ಕೊತ್ತಂಬರಿ ಬೀಜ-ಕಾಲು ಚಮಚ
 ಕೆಂಪುಮೆಣಸಿನ ಹುಡಿ- ಒಂದುವರೆ ಚಮಚ

ಮಾಡುವ ವಿಧಾನ
ಮೊದಲು ಟೊಮೇಟೊ, ಈರುಳ್ಳಿ, ಕರಿಮೆಣಸನ್ನು ಒಂದು ಬಾಣಲೆಗೆ ಹಾಕಿ ಫ್ರೈ ಮಾಡಿ. ಅನಂತರ ಒಂದು ಪಾತ್ರೆಗೆ ಒಂದೆರಡು ಚಮಚ ಎಣ್ಣೆ ಹಾಕಿ, ಕೊತ್ತಂಬರಿ ಬೀಜ, ಜೀರಿಗೆ, ಸಾಸಿವೆ ಹಾಕಿ ಫ್ರೈ ಮಾಡಿಕೊಳ್ಳಿ. ಈ ಮಿಶ್ರಣವು ಸ್ವಲ್ಪ ಫ್ರೈ ಆದ ಮೇಲೆ ಬೆಳ್ಳುಳ್ಳಿ, ಶುಂಠಿ, ಕರಿಬೇವು, ಹಸಿಮೆಣಸು ಅನ್ನು ಒಟ್ಟಿಗೆ ಸೇರಿಸಿ ಫ್ರೈ ಮಾಡಿ. ಅನಂತರ ಇದಕ್ಕೆ ಟೊಮೇಟೊ, ಈರುಳ್ಳಿ, ಕರಿಮೆಣಸಿನ ಮಿಶ್ರಣ ಹಾಕಿ. ಬಳಿಕ ಅರಿಸಿನ, ಕೆಂಪುಮೆಣಸನ್ನು ಸೇರಿಸಿ ಫ್ರೈ ಮಾಡಿ. ಬಳಿಕ ಇದ ಕ್ಕೆ ಗರಂ ಮಸಾಲ ಸೇರಿಸಿ. ಇವೆಲ್ಲವನ್ನೂ ಗ್ರೈಂಡ್‌ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಮಾಡಿ ಗಾರ್ನಿಶ್‌ ಮಾಡಿ. ಹೀಗೆ ತಯಾರಿಸಿದ ಮಸಾಲವನ್ನು ಬೆಂದ ಮೊಟ್ಟೆಯ ಮೇಲೆ ಒಂದುವರೆ ಚಮಚ ಹಾಕಿ, ಚಪಾತಿಯ ಜತೆ ಸವಿಯಲು ಡ್ರೈ ಎಗ್‌ ಮಸಾಲ ಸಿದ್ಧ.

ಆಲೂ ಆಮ್ಲೆಟ್‌
ಬೇಕಾಗುವ ಸಾಮಗ್ರಿಗಳು
ಮೊಟ್ಟೆ- 12
ಆಲೂಗಡ್ಡೆ- 200 ಗ್ರಾಂ
ತೆಂಗಿನ ಎಣ್ಣೆ- 50 ಗ್ರಾಂ
ಕಾಳುಮೆಣಸಿನ ಹುಡಿ- 2 ಚಮಚ
ಟೊಮೇಟೋ- 200 ಗ್ರಾಂ

ಮಾಡುವ ವಿಧಾನ
ಮೊಟ್ಟೆಗಳನ್ನು ಒಡೆದು ಒಂದು ಪಾತ್ರೆಯಲ್ಲಿ ಶೇಖರಿಸಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಸಣ್ಣಗೆ ಚೂರು ಮಾಡಿಟ್ಟುಕೊಳ್ಳಿ. ಟೊಮೇಟೋ ತೊಳೆದು ಸಣ್ಣಗೆ ಹೆಚ್ಚಿರಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಮೊಟ್ಟೆಯ ಒಳಭಾಗವನ್ನು ಶೇಖರಿಸಿದ ಪಾತ್ರೆಗೆ ಕತ್ತರಿಸಿದ ಆಲೂಗಡ್ಡೆ, ಹೆಚ್ಚಿದ ನೀರುಳ್ಳಿ, ಟೊಮೇಟೋಗಳನ್ನು ಹಾಕಿ ಉಪ್ಪು ಬೆರೆಸಿ ಮಿಶ್ರಣವಾಗುವಂತೆ ಚೆನ್ನಾಗಿ ತಿರುಗಿಸಿ. ಒಲೆಯ ಮೇಲೆ ಕಾವಲಿ ಇಟ್ಟು ಕಾದ ಮೇಲೆ ಎಣ್ಣೆಯನ್ನು ಸವರಿ ಹಿಟ್ಟನ್ನು ಸೌಟಲ್ಲಿ ಹಾಕಿ ಹರಡಿದ ಮೇಲೆ ತಟ್ಟೆ ಮುಚ್ಚಿ. ಸ್ವಲ್ಪಹೊತ್ತು ಬಿಟ್ಟು ತಟ್ಟೆ ತೆಗೆದು ಆಮ್ಲಟ್‌ ತಿರುವಿ ಹಾಕಿ. ಎರಡೂ ಕಡೆಯೂ ಬೆಂದ ಮೇಲೆ ಪುಡಿ ಮಾಡಿದ ಕರಿಮೆಣಸಿನ ಪುಡಿಯನ್ನು ಮೇಲೆ ಉದುರಿಸಿ. ಬಿಸಿ ಇರುವಾಗಲೇ ತಿನ್ನಿ. ಪುದಿನಾ ಚಟ್ನಿಯೊಂದಿಗೆ ತಿನ್ನಲು ಬಲು ಸೊಗಸಾಗಿರುತ್ತದೆ.

ಎಗ್‌ ಸುಕ್ಕ
ಬೇಕಾಗುವ ಸಾಮಗ್ರಿಗಳು
 ಬ್ಯಾಡಗಿ ಮೆಣಸು- 2 ರಿಂದ 3
 ಸಣ್ಣ ಖಾರ ಮೆಣಸು- 2 ರಿಂದ 3
 ಕಾಳು ಮೆಣಸು- ಅರ್ಧ ಟೀ ಸ್ಪೂನ್‌
 ಕೊತ್ತಂಬರಿ ಬೀಜ- 1 ಸ್ಪೂನ್‌
 ತೆಂಗಿನ ತುರಿ- ಅರ್ಧ ಬೌಲ್‌
 ಟೊಮೇಟೋ- ಅರ್ಧ ಹೋಳು(ಜನರ ಸಂಖ್ಯೆ ಗಮನಿಸಿ)
 ಉಪ್ಪು-ರುಚಿಗೆ ತಕ್ಕಷ್ಟು
 ಶುಂಠಿ,ಬೆಳ್ಳುಳ್ಳಿ- ರುಚಿಗೆ ತಕ್ಕಷ್ಟು
 ತೆಂಗಿನ ಎಣ್ಣೆ- 2 ಟೀ ಸ್ಪೂನ್‌

ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಬ್ಯಾಡಗಿ ಮೆಣಸು, ಸಣ್ಣ ಖಾರ ಮೆಣಸು, ಕಾಳುಮೆಣಸು, ಮಿಶ್ರಣ ಮಾಡಿಕೊಳ್ಳಿ. ಇವುಗಳನ್ನು ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಅನಂತರ, ಕಾಯಿತುರಿಯನ್ನು ಹುರಿದು ಇಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಒಂದು ಈರುಳ್ಳಿ, ಅರ್ಧ ಟೊಮೇಟೋ ಹಾಕಿ ಬ್ರೌನ್‌ ಬಣ್ಣ ಬಂದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ, ಫ್ರೈ ಮಾಡಿಕೊಳ್ಳಿ, ಅನಂತರ, ಮೊದಲು ಮಾಡಿದ ಮಿಶ್ರಣವನ್ನು ಹಾಕಿ, ಪುನಃ ಸ್ವಲ್ಪ ಫ್ರೈ  ಮಾಡಿಕೊಂಡು, ಗ್ರೇವಿ ಬೇಕೆಂದರೆ ಅರ್ಧ ಲೋಟ ನೀರು ಹಾಕಬಹುದು. ಇದಕ್ಕೆ ಬೇಯಿಸಿದ ಎರಡು ಅಥವಾ ಹೆಚ್ಚು ಮೊಟ್ಟೆ ಹಾಕಿ, ಉಪ್ಪು ಹಾಕಿ, ಫ್ರೈ ಮಾಡಿ, ತದನಂತರ, ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿದರೆ ಎಗ್ಗ್ ಸುಕ್ಕ ರೆಡಿ. ನೀರು ದೋಸೆ ಎಗ್‌ ಸುಕ್ಕಕ್ಕೆ ಒಳ್ಳೆಯ ಕಾಂಬಿನೇಷನ್‌.

ಮೊಟ್ಟೆ ಪಲ್ಯ
ಬೇಕಾಗುವ ಸಾಮಗ್ರಿಗಳು
 ಬೇಯಿಸಿದ ಮೊಟ್ಟೆ- 4
 ಹೆಚ್ಚಿದ ನೀರುಳ್ಳಿ- 3
 ಕೊತ್ತಂಬರಿ ಸೊಪ್ಪು- ಅರ್ಧ ಕಪ್‌
 ಎಗ್‌ ಮಸಾಲ – ಅರ್ಧ ಟೇಬಲ್‌ ಸ್ಪೂನ್‌
 ಮೆಣಸಿನ ಹುಡಿ- ಅರ್ಧ ಟೇಬಲ್‌ ಸ್ಪೂನ್‌
 ಗರಂ ಮಸಾಲ- ಅರ್ಧ ಟೇಬಲ್‌ ಸ್ಪೂನ್‌
 ಅರಶಿಣ, ಉಪ್ಪು- ರುಚಿಗೆ ತಕ್ಕಷ್ಟು
 ಎಣ್ಣೆ- 3/4 ಟೇಬಲ್‌ ಸ್ಪೂನ್‌

ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ನೀರುಳ್ಳಿ, ಎಗ್‌ ಮಸಾಲ, ಮೆಣಸಿನ ಹುಡಿ, ಗರಂ ಮಸಾಲ ಹಾಕಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಉಪ್ಪು, ಅರಶಿಣ ಸೇರಿಸಬೇಕು. ಬೇಯಿಸಿದ ಮೊಟ್ಟೆಯನ್ನು ಸಣ್ಣ, ಸಣ್ಣ ತುಂಡುಗಳನ್ನಾಗಿ ಮಾಡಿ ಇದರ ಜತೆ ಸೇರಿಸಬೇಕು. ಕೊತ್ತಂಬರಿ ಸೊಪ್ಪು ಸೇರಿಸಿದರೆ ಮೊಟ್ಟೆ ಪಲ್ಯ ತಯಾರು.

ಎಗ್‌ ಬ್ರೆಡ್‌ ಮಸಾಲ
ಬೇಕಾಗುವ ಸಾಮಗ್ರಿಗಳು

ಮೊಟ್ಟೆ- 2
ಬ್ರೆಡ್‌ – 2 ( ಸಣ್ಣದಾಗಿ ಕತ್ತರಿಸಿಕೊಳ್ಳ ಬೇಕು)
ಹೆಚ್ಚಿದ ನೀರುಳ್ಳಿ- 1
ಹೆಚ್ಚಿದ ಟೊಮೆಟೊ- 1
ಎಗ್‌ ಮಸಾಲ- 2 ಟೇಬಲ್‌ ಸ್ಪೂನ್‌
ಮೆಣಸಿನ ಹುಡಿ, ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – 2 ಟೇಬಲ್‌ ಸ್ಪೂನ್‌
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ ನೀರುಳ್ಳಿಯನ್ನು ಹುರಿಯಬೇಕು. ನೀರುಳ್ಳಿ ಕೆಂಪಾದ ಮೇಲೆ ಅದಕ್ಕೆ ಹೆಚ್ಚಿದ ಟೊಮೆಟೊವನ್ನು ಹಾಕಬೇಕು. ಅದು ಸ್ವಲ್ಪ ಬಿಸಿಯಾದಾಗ ಎಗ್‌ ಮಸಾಲ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಹಾಕಬೇಕು. ಅನಂತರ ಮೊಟ್ಟೆಯನ್ನು ಇದಕ್ಕೆ ಹಾಕಬೇಕು. ಸರಿಯಾಗಿ ಮಿಶ್ರಣ ಮಾಡಬೇಕು. ಬ್ರೆಡ್‌ನ್ನು ಇದಕ್ಕೆ ಸೇರಿಸಬೇಕು. ಸ್ವಲ್ಪ ಹೊತ್ತು ಮಿಶ್ರಗೊಳಿಸಿ ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಿದಾಗ ಎಗ್‌ ಬ್ರೆಡ್‌ ಮಸಾಲ ಸವಿಯಲು ಸಿದ್ಧವಾಗುತ್ತದೆ. ಸಣ್ಣ ಉರಿಯಲ್ಲಿ ತಯಾರಿಸಬೇಕು.

ಎಗ್‌ ರೈಸ್‌
ಬೇಕಾಗುವ ಸಾಮಗ್ರಿಗಳು
 ಮೊಟ್ಟೆ – 3
 ನೀರುಳ್ಳಿ – 2
 ಹಸಿ ಮೆಣಸಿನಕಾಯಿ- 2
 ಗರಂ ಮಸಾಲ- 1 ಸ್ಪೂನ್‌
 ಶುಂಠಿ ಬೆಳ್ಳುಳ್ಳಿ ಪೇಸ್ಟ್‌- 2 ಸ್ಪೂನ್‌
 ಅನ್ನ – 2 ಕಪ್‌
 ಕೊತ್ತಂಬರಿ ಸೊಪ್ಪು- ಸ್ವಲ್ಪ
 ನಿಂಬೆ ರಸ- 1 ಸ್ಪೂನ್‌
 ಅರಶಿಣ- ಅರ್ಧ ಸ್ಪೂನ್‌
 ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಹಸಿ ಮೆಣಸಿನಕಾಯಿ ಹಾಗೂ ನೀರುಳ್ಳಿ ಹಾಕಿ 2 ನಿಮಿಷ ಹುರಿಯಬೇಕು. ಅನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಅದಕ್ಕೆ ಸೇರಿಸಬೇಕು. ಹಸಿ ವಾಸನೆ ಹೋದ ಮೇಲೆ ಅದಕ್ಕೆ ಅರಶಿನ, ಮತ್ತು ಉಪ್ಪು ಸೇರಿಸಬೇಕು. ನಂತರ ಮೊಟ್ಟೆಯನ್ನು ಒಡೆದು ಅದಕ್ಕೆ ಹಾಕಬೇಕು. ಗರಂ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಬೇಕು. ಬೇಯಿಸಿಟ್ಟ ಇದರ ಜತೆ ಸೇರಿಸಿ ಕೊತ್ತಂಬರಿ ಸೊಪ್ಪು ಹಾಗೂ ಲಿಂಬೆ ಸೇರಿಸಿ ಮಿಶ್ರ ಮಾಡಿ ಮುಚ್ಚಳ ಮುಚ್ಚಿ ಒಂದು ನಿಮಿಷ ಬಿಸಿ ಮಾಡಿ. ಆಗ ರುಚಿ ರುಚಿಯಾದ ಎಗ್‌ರೈಸ್‌ ತಿನ್ನಲು ಸಿದ್ಧ. 

ಶ್ರುತಿ ನೀರಾಯ/
ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.