CONNECT WITH US  

 ಗುಬ್ಬಿಯಾದ ಮೊಟ್ಟೆ..! 

ಕುಡ್ಲದ ಕಲಾವಿದರಿಂದ ನಿರ್ಮಾಣಗೊಂಡು ಸ್ಯಾಂಡಲ್‌ವುಡ್‌ನ‌ಲ್ಲಿ ಸಕತ್‌ ಸದ್ದು ಮಾಡಿದ ಸಿನೆಮಾ 'ಒಂದು ಮೊಟ್ಟೆಯ ಕಥೆ'.  ಮೊಟ್ಟೆಯನ್ನು ಸೃಷ್ಟಿಸಿದ್ದು ಮಂಗಳೂರಿನ ರಾಜ್‌ ಬಿ. ಶೆಟ್ಟಿ. ಕಾಮಿಡಿ ಲುಕ್‌ನಲ್ಲಿ ಮೂಡಿಬಂದ ಗಂಭೀರ ವಿಷಯವನ್ನೊಳಗೊಂಡ ಸಿನೆಮಾವಿದು. ಈಗ ರಾಜ್‌ ಶೆಟ್ಟಿ ಮತ್ತೊಮ್ಮೆ ಹಾಸ್ಯ ಚಿತ್ರವೊಂದರ ಮೂಲಕ ಗಂಭೀರ ವಿಷಯವೊಂದನ್ನು ತಿಳಿಸಲು ಮುಂದಾಗಿದ್ದಾರೆ. ಚಿತ್ರದ ಹೆಸರು 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'. ಸುಜಯ್‌ ಶಾಸ್ತ್ರಿ ನಿರ್ದೇಶನದ ಈ ಚಿತ್ರಕ್ಕೆ ಕಥಾನಾಯಕ ರಾಜ್‌.

ಚಿತ್ರದಲ್ಲಿ ಕಥಾನಾಯಕ ಬೆಂಗಳೂರಿನಂತಹ ಮಹಾನಗರದಲ್ಲಿ ಕಳೆದು ಹೋದ ಒಂದು ಚಿಕ್ಕ ಗುಬ್ಬಿ. ಅಂತಹ ಗುಬ್ಬಿ ಮೇಲೆ ಇಡೀ ಜಗತ್ತೇ ಬ್ರಹ್ಮಾಸ್ತ್ರ ಪ್ರಯೋಗಿಸುವ ಚಿತ್ರಣವಿರುವ ಸಿನೆಮಾವಿದು. ಕಾರ್ಪೊರೇಟ್‌ ಕಂಪೆನಿಗಳಲ್ಲಿ ದುಡಿಯುವ ಮಂದಿ ಕಷ್ಟಗಳನ್ನು ಹೇಗೆ ಎದುರಿಸುತ್ತಾರೆ, ಅವರ ಮುಂದೆ ಎದುರಾಗುವ ಸವಾಲುಗಳು ಏನು? ಮೊದಲಾದ ವಿಷಯವನ್ನು ಹಾಸ್ಯದ ಮೂಲಕ ರಾಜ್‌ ವಿವರಿಸಲು ಹೊರಟಿದ್ದಾರೆ. 

ಇಂದು ಹೆಚ್ಚು ಓದಿದ್ದು

Trending videos

Back to Top