CONNECT WITH US  

ಶತಕ ಬರೆದ 'ಟೀಚರ್‌'

ಕೋಸ್ಟಲ್‌ವುಡ್‌ನ‌ಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿಯಾದ 'ಅಪ್ಪೆ ಟೀಚರ್‌ ಸಿನೆಮಾ ಈಗ ಶತದಿನದ ಸಂಭ್ರಮದಲ್ಲಿದೆ. ಜೂ. 30ರಂದು ಸಿನೆಮಾದ ಶತದಿನದ ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಸಹಿತ ಕೋಸ್ಟಲ್‌ವುಡ್‌ನ‌ ಪ್ರಮುಖ ತಾರಾಗಣವಿರುವ ಈ ಸಿನೆಮಾ ಕರಾವಳಿ ಮಾತ್ರವಲ್ಲದೆ, ಇತರ ಜಿಲ್ಲೆಗಳಲ್ಲೂ ರಿಲೀಸ್‌ ಆಗುವ ಮೂಲಕ ಗಮನಸೆಳೆದಿತ್ತು.

ಕಿಶೋರ್‌ ಮೂಡಬಿದಿರೆ ಅವರ ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬಂದಿದ್ದು, ಇದು ಕರಾವಳಿಯಾದ್ಯಂತ ಹೊಸ ಸಂಚಲನ ಸೃಷ್ಟಿಸಿತ್ತು. ಹೊಸ ಹುಡುಗನ ಮೊದಲ ಪ್ರಯತ್ನವೇ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಕಿಶೋರ್‌ ಮುಂದೇನು ಮಾಡಲಿದ್ದಾರೆ ಎಂಬ ಬಗ್ಗೆ ಸಿನೆಮಾ ಲೋಕದಲ್ಲೊಂದು ಕುತೂಹಲವೂ ಮೂಡಿದೆ. ಸದ್ಯಕ್ಕಂತೂ ಹೊಸ ಸಿನೆಮಾದ ಯೋಚನೆ ಮಾಡಿರದ ಕಿಶೋರ್‌ 'ಅಪ್ಪೆ ಟೀಚರ'ನ್ನು ಇನ್ನಷ್ಟು ಭಾಗಗಳಿಗೆ ಕರೆದುಕೊಂಡು ಹೋಗುವ ತವಕದಲ್ಲಿದ್ದಾರೆ .

ಇಂದು ಹೆಚ್ಚು ಓದಿದ್ದು

Trending videos

Back to Top