CONNECT WITH US  

ಜು. 13ಕ್ಕೆ ಪಡ್ಡಾಯಿ; 20ಕ್ಕೆ 'ದಗಲ್‌ಬಾಜಿಲು'

ಕಾರ್ಕಳದ ನಿತ್ಯಾನಂದ ಪೈ ನಿರ್ಮಾಣ ಹಾಗೂ ಖ್ಯಾತ ನಿರ್ದೇಶಕ ಅಭಯಸಿಂಹ ಅವರ ನಿರ್ದೇಶನದ 'ಪಡ್ಡಾಯಿ' ತುಳು ಸಿನೆಮಾ ಜು. 13ಕ್ಕೆ ರಿಲೀಸ್‌ ಆಗಲಿದೆ. ಬಿಡುಗಡೆಗೆ ಮೊದಲೇ ಈ ಸಿನೆಮಾ 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿರುವುದರಿಂದ ಸಿನಿ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಿನೆಮಾದ ಬಹುಪಾಲು ದೃಶ್ಯಗಳನ್ನು ಮಲ್ಪೆಯ ಪಡುಕರೆಯಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.

ಮಂಗಳೂರು ಹಾಗೂ ಉಡುಪಿಯ ಇತರ ಕೆಲವು ಭಾಗಗಳಲ್ಲೂ ಈ ಸಿನೆಮಾದ ಚಿತ್ರೀಕರಣ ಸಾಗಿದೆ. ಸಿಂಕ್‌ ಸೌಂಡ್‌ನ‌ಲ್ಲಿ ನಿರ್ಮಾಣವಾದ ಮೊದಲ ತುಳು ಸಿನೆಮಾ ಎಂಬ ಖ್ಯಾತಿಗೂ ಪಾತ್ರವಾಗಿದೆ. ಕುಂಬ್ಳೆ ಸಂತೋಷ್‌ ಶೆಟ್ಟಿ ಮತ್ತು ಸ್ನೇಹಿತರು ನಿರ್ಮಿಸಿರುವ ಎ. ಪ್ರಶಾಂತ್‌ ನಿರ್ದೇಶಿಸಿರುವ 'ದಗಲ್‌ಬಾಜಿಲು' ಸಿನೆಮಾ ಜು. 20ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ. ಸಿನೆಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ಸುರೇಶ್‌ ಅಂಚನ್‌ ಒದಗಿಸಿದ್ದಾರೆ. ಖ್ಯಾತ ನಿರ್ದೇಶಕ ಎಂ.ಡಿ. ಶ್ರೀಧರ್‌ ಗರಡಿಯಲ್ಲಿ ಪಳಗಿರುವ ಎ.ಎಸ್‌. ಪ್ರಶಾಂತ್‌ ಸಿನೆಮಾವನ್ನು ನಿರ್ದೇಶಿಸಿದ್ದಾರೆ ಎಂದರು.

ದಿನೇಶ್‌ ಇರಾ/ ಕಿರಣ್‌ ಸರಪಾಡಿ

ಇಂದು ಹೆಚ್ಚು ಓದಿದ್ದು

Trending videos

Back to Top