CONNECT WITH US  

ಗೋಣಿ ಚೀಲದಲ್ಲಿ ಓಡಲಿರುವ ಕೋಸ್ಟಲ್‌ ಸ್ಟಾರ್ಸ್ !

ಕೋಸ್ಟಲ್‌ವುಡ್‌ ಕಲಾವಿದರು, ತಂತ್ರಜ್ಞರು ಸಹಿತ ಸಿಬಂದಿಯೆಲ್ಲ ಸೇರಿ ಸಂಭ್ರಮಿಸುವ ನೆಲೆಯಲ್ಲಿ 'ತುಳುವೆರೆ ತುಲಿಪು' ಕಾರ್ಯಕ್ರಮ ಜು. 22ಕ್ಕೆ ಜಪ್ಪಿನಮೊಗರುವಿನಲ್ಲಿ ನಡೆಯಲಿದೆ. ಪ್ರಮುಖ ಕಲಾವಿದರಾದ ಅರ್ಜುನ್‌ ಕಾಪಿಕಾಡ್‌, ರೂಪೇಶ್‌ ಶೆಟ್ಟಿ, ಪೃಥ್ವೀ ಅಂಬಾರ್‌, ಪ್ರಕಾಶ್‌ ಶೆಟ್ಟಿ ಧರ್ಮನಗರ, ಸೌರಭ್‌ ಭಂಡಾರಿ, ಅನೂಪ್‌ ಸಾಗರ್‌, ವಿಜೇತ್‌ ಸುವರ್ಣ, ಸ್ವರಾಜ್‌ ಶೆಟ್ಟಿ, ಪ್ರಜ್ವಲ್‌ ಪ್ರಕಾಶ್‌, ರಜನೀಶ್‌ ಉಡುಪಿ, ಮನೋಜ್‌ ಪುತ್ತೂರು, ಶ್ರವಣ್‌ ಕದ್ರಿ, ಪ್ರತೀಕ್‌ ಶೆಟ್ಟಿ, ಉದಯ್‌ ಪೂಜಾರಿ, ರಿತೇಶ್‌ ನಾಯಕ್‌, ಆಸ್ತಿಕ್‌ ಶೆಟ್ಟಿ, ರಾಹುಲ್‌ ಅಮೀನ್‌, ಪೂಜಾ ಶೆಟ್ಟಿ, ಅನ್ವಿತಾ ಸಾಗರ್‌, ಶಿಲ್ಪಾ ಸುವರ್ಣ, ಅಶ್ವಿ‌ನಿ ಕೋಟ್ಯಾನ್‌, ನವ್ಯಾ ಪೂಜಾರಿ, ಚಿರಶ್ರೀ, ಆರಾಧ್ಯಾ ಶೆಟ್ಟಿ, ಸ್ವಾತಿ ಬಂಗೇರ, ನಿರೀಕ್ಷಾ ಶೆಟ್ಟಿ, ಶೀತಲ್‌ ನಾಯಕ್‌, ಅಭಿಲಾಷಾ, ವಿದ್ಯಾಶ್ರೀ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ತುಳುನಾಡಿನ ಸಂಸ್ಕೃತಿಯ ಹಲವಾರು ಸ್ಪರ್ಧೆಗಳು ನಡೆಯಲಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ - ಬಾಯಿಯಲ್ಲಿ ಲಿಂಬೆ ಚಮಚ ಇಟ್ಟು ನಡೆಯುವುದು, ಬಕೆಟ್‌ಗೆ ನೀರು ತುಂಬಿಸುವುದು, ಗೋಣಿ ಚೀಲ ಓಟ, ಮೈದಾದಿಂದ ಹಣದ ನಾಣ್ಯ ಹುಡುಕುವುದು, ಕೆಸರಿನಲ್ಲಿ ಓಡುವುದು, ಚೆಂಡು ಪಾಸ್‌ ಮಾಡುವುದು, ಹಗ್ಗ ಜಗ್ಗಾಟ, ಚೆಂಡು ಎಸೆಯುವುದು, ಕೆಸರಿನಲ್ಲಿ ಕೊಪ್ಪರಿಗೆ ಹುಡುಕುವುದು, ಜೋಡಿ ಎತ್ತಿನ ಓಟ ಇತ್ಯಾದಿ.

ಇಂದು ಹೆಚ್ಚು ಓದಿದ್ದು

Trending videos

Back to Top