ಗ್ಯಾಸ್‌ ಒಲೆ ಬಹುರೂಪ


Team Udayavani, Mar 6, 2017, 12:51 AM IST

Gas-Stove-5-3.jpg

ಬೇಗಬೇಗನೆ ಎಲ್ಲ ಕೆಲಸಗಳು ಮುಗಿಯಬೇಕು ಎಂಬ ಒದ್ದಾಟ ಎಲ್ಲರಲ್ಲೂ ಇದೆ. ಅದರಲ್ಲೂ ಅಡುಗೆ ಮನೆಯಲ್ಲಂತೂ ಇದು ತುಸು ಹೆಚ್ಚೇ ಎಂದರೆ ತಪ್ಪಾಗಲಾರದು. ಅಡುಗೆ ಕಾರ್ಯಗಳನ್ನು ಶೀಘ್ರದಲ್ಲಿ ಮುಗಿಸಲು ಗ್ಯಾಸ್‌ ಒಲೆಗಳು ಅಡುಗೆ ಮನೆಯನ್ನು ಪ್ರವೇಶಿಸಿ ಅನೇಕ ವರ್ಷಗಳೇ ಸಂದಿವೆ. ಅವುಗಳಲ್ಲೂ ಹೊಸತನದ ಹುಡುಕಾಟ ನಿರಂತರ ನಡೆಯುತ್ತಲೇ ಇದೆ. ಇದರಲ್ಲಿ ಈಗ ಹೊಸತೇನಿದೆ ಎಂಬುದೇ ಕುತೂಹಲ.

ಕಾಲ ಬದಲಾದಂತೆ ಜನರ ಜೀವನ ಶೈಲಿ ಬದಲಾಗಿದೆ. ಆಧುನಿಕತೆ ನಮ್ಮ ಜೀವನದ ಪ್ರತಿ ಭಾಗದಲ್ಲಿಯೂ ಆವರಿಸಿಕೊಂಡಿದೆ. ಮನೆಯ ಪ್ರಮುಖ ಭಾಗವಾದ ಅಡುಗೆ ಮನೆ, ಅಡುಗೆ ಮಾಡುವ ವಿಧಾನ, ಅದಕ್ಕಾಗಿ ಬಳಸುವ ಸಾಧನಗಳಲ್ಲೂ ಹಲವು ಮಾರ್ಪಾಡುಗಳನ್ನು ತಂದಿವೆ. ವಿಭಿನ್ನ ಶೈಲಿಯ, ವಿನ್ಯಾಸದ ಅನೇಕ ಗ್ಯಾಸ್‌ ಒಲೆಗಳು ವಾರಕ್ಕೊಂದರಂತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಮನೆಯ ಅಂದ, ಬಣ್ಣ, ವಿನ್ಯಾಸಕ್ಕೆ ಒಪ್ಪುವಂತಹ‌ ಗ್ಯಾಸ್‌ ಒಲೆಗಳು ಸಿಗುತ್ತವೆ. ಅವುಗಳಲ್ಲಿ ನಮಗೆ ಬೇಕಾದಂತಹ ಒಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಕಾಲಘಟ್ಟಕ್ಕೆ ನಾವು ಬಂದಿದ್ದೇವೆ. ಹಿಂದೆ ಕಟ್ಟಿಗೆ, ಬೆರಣಿಗಳನ್ನು ಉರಿಸಿ ಅಡುಗೆ ಮಾಡುತ್ತಿದ್ದರು. ಬಳಿಕ ಮರದ ಹುಡಿ ಸ್ಟೌವ್‌, ಸೀಮೆ ಎಣ್ಣೆ ಸ್ಟೌವ್‌ ಅಡುಗೆ ಮನೆಗೆ ಕಾಲಿರಿಸಿತು. ಈಗ ಗ್ಯಾಸ್‌ ಒಲೆ, ಎಲೆಕ್ಟ್ರಿಕಲ್‌ ಓವನ್‌ ಚಾಲ್ತಿಯಲ್ಲಿದೆ. ಅಡುಗೆ ಮಾಡಲು ಹಾಗೂ ನಿರ್ವಹಣೆಗೆ ಸೂಕ್ತವಾದ ಮಾದರಿಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೀರ್ಘ‌ಕಾಲ ಬಾಳಿಕೆ ಬರುವ, ಕಡಿಮೆ ಅವಧಿಯಲ್ಲಿ  ಬೇಗನೆ ಅಡುಗೆ ತಯಾರಿಸಬಹುದು ಎಂಬ ಕಾರಣಕ್ಕೆ ಗ್ಯಾಸ್‌ ಒಲೆಗೆ ಮಹಿಳೆಯರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ನಾನಾ ವಿಧ
ಈ ಗ್ಯಾಸ್‌ ಒಲೆಯಲ್ಲೂ ನಾನಾ ವಿಧಗಳಿವೆ. ಮೊದಲು ಎರಡು ಉರಿಯುವ ಒಲೆಯೇ ಬಳಸಲಾಗುತ್ತಿತ್ತು. ಈಗ ಮೂರು, ನಾಲ್ಕು ಉರಿಯುವ ಒಲೆಯ ಸ್ಟವ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಏಕಕಾಲದಲ್ಲಿ ವಿವಿಧ ಅಡುಗೆಗಳನ್ನು ಬೇಗನೆ ತಯಾರಿಸಬಹುದು ಎಂಬ ಕಾರಣಕ್ಕೆ ಮಹಿಳೆಯರು ಹೆಚ್ಚಾಗಿ ಮೂರು, ನಾಲ್ಕು ಉರಿಯುವ ಒಲೆಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ. ಆದರೆ ಒಂದೊಂದು ಒಲೆಯ ನಡುವೆ ಹೆಚ್ಚು ಅಂತರವಿಲ್ಲದಿದ್ದಲ್ಲಿ ಅಡುಗೆ ಮಾಡಲು ಸ್ವಲ್ಪ ಕಷ್ಟವಾಗುತ್ತದೆ ಹಾಗೂ ಒಲೆಯನ್ನು ಶುಚಿಗೊಳಿಸುವ ವಿಧಾನ ತಿಳಿಯದೆ ಇದ್ದರೆ ನಿರ್ವಹಣೆ ಕಷ್ಟ. ಒಂದೇ ಸಮಯಕ್ಕೆ ನಾಲ್ಕು ಒಲೆಗಳು ಉರಿಯುವುದರಿಂದ ಕೈ ಸುಟ್ಟು ಹೋಗುವ ಸನ್ನಿವೇಶಗಳು ಎದುರಾಗುವುದು ಹೆಚ್ಚು. ಅದಕ್ಕಾಗಿ ಒಲೆ ಖರೀದಿಸುವಾಗ ನಮ್ಮ ಆವಶ್ಯಕತೆಗೆ ಸಾಕಾಗುವಷ್ಟು ಹಾಗೂ ನಿರ್ವಹಣೆ ಸುಲಭವಾಗುವಂತಹ ಒಲೆಗಳನ್ನು ಖರಿದಿಸಿದರೆ ಉತ್ತಮ.

ಗ್ಯಾಸ್‌ನೊಂದಿಗೆ ಇಂಡಕ್ಷನ್‌
ಪ್ರಸ್ತುತ ಕಂಪೆನಿಯೊಂದು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಗ್ಯಾಸ್‌ ಒಲೆ ತುಸು ವಿಭಿನ್ನವಾಗಿದೆ.ಮೂರು ಉರಿಯುವ ಒಲೆಗಳಿರುವ ಇದರಲ್ಲಿ ಎರಡು ಗ್ಯಾಸ್‌ ಮೂಲಕ ಉರಿಯುತ್ತದೆ. ಮಧ್ಯಭಾಗದ ಒಲೆ ಎಲೆಕ್ಟ್ರಿಕಲ್‌ ಇಂಡಕ್ಷನ್‌ ಅಗಿರುತ್ತದೆ. ಇದಕ್ಕೆ ಎಲೆಕ್ಟ್ರಿಕಲ್‌ ಕನೆಕ್ಷನ್‌ ಇರುತ್ತದೆ. ಒಂದು ವೇಳೆ ಗ್ಯಾಸ್‌ ಮುಗಿದರೆ ನೀವು ಇಂಡಕ್ಷನ್‌ ಮೂಲಕ ಅಡುಗೆ ತಯಾರಿಸಬಹುದು. ಈ ಗ್ಯಾಸ್‌ ಒಲೆ ಖರೀದಿಸಿದರೆ ನಿಮಗೆ ಗ್ಯಾಸ್‌ ಮುಗಿದರೆ ಅದು ಬರುವವರೆಗೆ ತಲೆ ಕೆಡಿಸಿಕೊಳ್ಳಬೇಕೆಂದಿಲ್ಲ. ವಿದ್ಯುತ್‌ ಇರುವವರೆಗೆ ಅಡುಗೆ ಮಾಡಲು ತೊಂದರೆ ಇರುವುದಿಲ್ಲ.

ಲೈಟರ್‌ ಬೇಕಿಲ್ಲ
ಇನ್ನು ಕೆಲವು ಕಂಪೆನಿಗಳ ನೂತನ ಮಾದರಿಯ ಗ್ಯಾಸ್‌ ಒಲೆ ಉರಿಸಲು ಲೈಟರ್‌ ಬೇಕಾಗಿಲ್ಲ. ಕೇವಲ ಬಟನ್‌ ಪ್ರಸ್‌ ಮಾಡಿದರೆ ಸಾಕು. ಲೈಟರ್‌ ಬಳಸಿ ಅದು ಕೆಟ್ಟಾಗ ಬೇರೊಂದು ಲೈಟರ್‌ ತರಬೇಕಾಗಿಲ್ಲ. ಕೇವಲ ಬಟನ್‌ ಅದುಮಿದರೆ ಬೆಂಕಿ ಉರಿಯುತ್ತದೆ. ಬಳಿಕ ಅಡುಗೆ ತಯಾರಿಸಿಕೊಳ್ಳಬಹುದು.

ಶುಚಿಯಾಗಿಟ್ಟುಕೊಳ್ಳಿ
ಅಡುಗೆ ತಯಾರಾದ ಬಳಿಕ ಗ್ಯಾಸ್‌ ಮೇಲೆಲ್ಲ ಪದಾರ್ಥಗಳು ಚೆಲ್ಲಿ ಹಾಳಾಗಿರುತ್ತದೆ. ಅದನ್ನು ಶುಚಿ ಮಾಡದೆ ಇದ್ದಲ್ಲಿ ಅದು ಅಲ್ಲಿಯೇ ಅಂಟಿಹೋಗುತ್ತದೆ. ಹಾಗಾಗಿ ಅಡುಗೆ ಮಾಡಿದ ತಕ್ಷಣವೇ ಶುಚಿ ಮಾಡಿಕೊಂಡರೆ ಒಳ್ಳೆಯದು.

– ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.