CONNECT WITH US  

ತುಳುವಿನಲ್ಲಿ ಖಡಕ್‌ ಡೈಲಾಗ್‌ ಹೇಳಿದ ಕಿಂಗ್‌!

ಬಿಗ್‌ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ರಮಾನಂದ್‌ ನಾಯಕ್‌ ಜೋಡುರಸ್ತೆ (ರಾಮ್‌ ಜೊ) ಅವರ "ಗೋಲ್‌ಮಾಲ್‌' ಚಿತ್ರದ ಫ‌ಸ್ಟ್‌ಲುಕ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ತುಳುನಾಡಿನ ಜನರ ಅಭಿರುಚಿಗೆ ತಕ್ಕಂತೆ ಚಿತ್ರ ರೆಡಿಯಾಗಿದೆ. ಚಿತ್ರದಲ್ಲಿ ಹಾಸ್ಯ ದಿಗ್ಗಜರ ಸಮಾಗಮವೇ ಇರಲಿದೆ. ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ ವಾಮಂಜೂರು, ಸತೀಶ್‌ ಬಂದಲೆ, ಉಮೇಶ್‌ ಮಿಜಾರ್‌, ಸುನೀಲ್‌ ನೆಲ್ಲಿಗುಡ್ಡೆ, ಸುಂದರ್‌ ರೈ ಮಂದಾರ, ವಸಂತ ಮುನಿಯಾಲ್‌, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು ಹೀಗೆ ಹಾಸ್ಯ ಚಕ್ರವರ್ತಿಗಳ ಮೂಲಕವೇ ಗೋಲ್‌ ಮಾಲ್‌ ಸಿದ್ಧಗೊಂಡಿದೆ. ವಿಶೇಷವೆಂದರೆ, ಖಡಕ್‌ ಪಂಚಿಂಗ್‌ ಡೈಲಾಗ್‌ ಮೂಲಕ ಸಿನಿರಸಿಕರ ಮನ ಗೆದ್ದಿರುವ 'ಡೈಲಾಗ್‌ ಕಿಂಗ್‌' ಸಾಯಿಕುಮಾರ್‌ ಈ ಚಿತ್ರದಲ್ಲಿ ಪೊಲೀಸ್‌ ಗೆಟಪ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ, ಅವರದು ಪೊಲೀಸ್‌ ಐಜಿ ಪಾತ್ರ. ಇಲ್ಲೂ ಖಡಕ್‌ ಡೈಲಾಗ್‌ ಇರಲಿದೆ. ಮತ್ತೊಂದು ವಿಶೇಷವೆಂದರೆ ತುಳುವಿನಲ್ಲಿ ಸಾಯಿಕುಮಾರ್‌ ಮಾತನಾಡಿದ್ದಾರೆ. 

ಇಂದು ಹೆಚ್ಚು ಓದಿದ್ದು

Trending videos

Back to Top