CONNECT WITH US  

ಸೆನ್ಸಾರ್‌ನಲ್ಲೂ ಫೈಟ್‌!

ತುಳುವಿನಲ್ಲಿ ಸಿನೆಮಾ ಮಾಡುವುದೇ ಬಹುದೊಡ್ಡ ಸವಾಲು. ಯಾಕೆಂದರೆ ಸೀಮಿತ ಮಾರುಕಟ್ಟೆಯನ್ನು ಮನಸ್ಸಲಿಟ್ಟು ಇಲ್ಲಿ ಸಿನೆಮಾ ಮಾಡಬೇಕಾಗಿದೆ. ಇದರಲ್ಲಿ ಒಂದಿನಿತು ವ್ಯತ್ಯಾಸವಾದರೆ ಸಿನೆಮಾ ಕೈತಪ್ಪುತ್ತದೆ. ಅದರಲ್ಲೂ ಜನರ ಕಮೆಂಟ್‌ ಸ್ವಲ್ಪ ತಪ್ಪಿದರೆ ಸಿನೆಮಾಕ್ಕೆ ಹೊಡೆತ ಆಗುವುದು ಕೂಡ ಗ್ಯಾರಂಟಿ.

ಈ ಮಧ್ಯೆ ಸಿನೆಮಾ ಬಿಡುಗಡೆಯ ಸ್ಪರ್ಧೆ ಕೂಡ ಕೋಸ್ಟಲ್‌ವುಡ್‌ನ‌ಲ್ಲಿ ಸಣ್ಣನೆ ಹೊಡೆತ ನೀಡುವುದು ಸುಳ್ಳಲ್ಲ. ಮೂರು ವಾರಗಳ ಕಟ್ಟುಪಾಡು ಈಗ ಕಳಚಿ ಹೋಗಿದ್ದು, ತುಳು ಚಿತ್ರ ನಿರ್ಮಾಪಕರ ಸಂಘದ ಪ್ರಕಾರ ಈಗ ಎರಡು ವಾರದ ಗಡುವು ನೀಡಲಾಗಿದೆ. ಆದರೆ ಅಷ್ಟೂ ಕೂಡ ಕಾಯುವ ಸಂಗತಿಯಲ್ಲಿ ತುಳು ಚಿತ್ರರಂಗವಿಲ್ಲ.

ಅಷ್ಟರ ಮಟ್ಟಿಗೆ ಫೈಟ್‌ ಶುರುವಾಗಿದೆ. ಆದರೆ, ಈಗ ಬಂದ ವಿಷಯ ಏನೆಂದರೆ ಸೆನ್ಸಾರ್‌ ಕಳುಹಿಸಲು ಕೂಡ ತುಳು ಸಿನೆಮಾಗಳು ಫೈಟ್‌ ಮಾಡಿದಂತಿದೆ. ಅಂದರೆ ಸೆನ್ಸಾರ್‌ನಿಂದ ಒಪ್ಪಿಗೆ ಪ್ರತಿ ದೊರೆತ ಅನಂತರ ಆ ಪ್ರತಿಯನ್ನು ಥಿಯೇಟರ್‌ಗೆ ನೀಡಿದ ಬಳಿಕವಷ್ಟೇ ಸಿನೆಮಾ ರಿಲೀಸ್‌ಗೆ ಅವಕಾಶ. ಹೀಗಾಗಿ ಈ ಒಪ್ಪಿಗೆ ಪತ್ರ ತನಗೆ ಬೇಗ ಸಿಗಬೇಕು ಎಂಬ ರೀತಿಯಲ್ಲಿ ಕೆಲವು ಸಿನೆಮಾದವರು ಜಿದ್ದಿಗೆ ಬಿದ್ದಿರುವ ಮಾಹಿತಿಯಿದೆ. ಸದ್ಯ ರಿಲೀಸ್‌ನ ಹೊಸ್ತಿಲಲ್ಲಿರುವ ಎರಡು ತುಳು ಸಿನೆಮಾಗಳು ಇದೇ ರೀತಿ ಫೈಟ್‌ ಮಾಡಿವೆ ಎಂದು ಕೋಸ್ಟಲ್‌ ವುಡ್‌ ಅಂಗಳದಲ್ಲಿ ಮಾತು ಹರಿದಾಡುತ್ತಿದೆ. ಇದು ನಿಜವೇ ಆದರೆ ತುಳುಚಿತ್ರರಂಗದ ಪಾಲಿಗೆ ಇದು ಒಳ್ಳೆಯ ಲಕ್ಷಣವಲ್ಲ.

ಇಂದು ಹೆಚ್ಚು ಓದಿದ್ದು

Trending videos

Back to Top