‘ಅಣ್ಣಪ್ಪ’ನಿಗಾಗಿ ಕೋಸ್ಟಲ್ಗೆ ಬಂದ ರಂಗಾಯಣ!
Team Udayavani, Aug 30, 2018, 12:41 PM IST
ರಂಗಾಯಣ ರಘು ಹೆಸರು ಕೇಳುವಾಗಲೇ ಸ್ಯಾಂಡಲ್ವುಡ್ನಲ್ಲಿ ನಗು ಕಾಣಿಸಿಕೊಳ್ಳುತ್ತದೆ. ಹಾಸ್ಯಪ್ರಧಾನವಾದ ಹಲವು ಪಾತ್ರದಲ್ಲಿ ಮಿಂಚಿರುವ ಅವರು ಯಾವತ್ತಿಗೂ ನಗುವಿನ ರಾಜ. ಪ್ರಸ್ತುತ ಅವರು ಕನ್ನಡ ಫಿಲ್ಮ್ ನ ಬ್ಯುಸೀ ಶೆಡ್ನೂಲ್ ಮಧ್ಯೆ ತುಳುವಿಗೆ ಎಂಟ್ರಿ ಕೊಟ್ಟಿದ್ದರು.
ಕೋಸ್ಟಲ್ವುಡ್ನಲ್ಲಿ ನಿರೀಕ್ಷೆ ಮೂಡಿಸಿದ ‘ಮೈ ನೇಮ್ ಈಸ್ ಅಣ್ಣಪ್ಪೆ’ ಸಿನೆಮಾದಲ್ಲಿ ರಂಗಾಯಣ ರಘು ಅವರು ಸಂಗೀತ ಮಾಸ್ಟರ್ ಪಾತ್ರದಲ್ಲಿ ಕಾಣಿಸಿದ್ದಾರೆ. ಮಯೂರ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಇನ್ನೇನು ಕೆಲವೇ ದಿನದಲ್ಲಿ ತೆರೆಕಾಣಲಿರುವ ಅಣ್ಣಪ್ಪ ಸಿನೆಮಾದಲ್ಲಿ ರಂಗಾಯಣ ರಘು ಅಭಿನಯಿಸಿದ್ದಾರೆ. ಇದು ಅವರ ತುಳುವಿನ ಮೊದಲ ಸಿನೆಮಾ.
ಸಿನೆಮಾದಲ್ಲಿ ಉಮೇಶ್ ಮಿಜಾರ್ ಅವರ ಲವರ್ನ ತಂದೆಯ ರೋಲ್ನಲ್ಲಿದ್ದಾರೆ. ಅಂದಹಾಗೆ ಅಣ್ಣಪ್ಪ ಸಿನೆಮಾದ ಆಡಿಯೋ ರಿಲೀಸ್ ಇತ್ತೀಚೆಗೆ ಕದ್ರಿ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ವಿಜಯ್ಪ್ರಕಾಶ್ರಿಂದ ಆರಂಭವಾಗಿ ಗಣ್ಯರ ಬಹುದೊಡ್ಡ ಟೀಮ್ ಸಮಾರಂಭದಲ್ಲಿ ಭಾಗವಹಿಸಿತ್ತು. ಚಿತ್ರದ ಎಲ್ಲ ಹಾಡುಗಳು ಈಗಾಗಲೇ ಸೋಶಿಯಲ್ ಮೀಡಿಯಾ ಮೂಲಕ ಸಾಕಷ್ಟು ಸೌಂಡ್ ಮಾಡಿವೆ ಮಂಜು ರೈ ಮೂಳೂರು ಮುಖ್ಯಭೂಮಿಕೆಯ ಈ ಸಿನೆಮಾದಲ್ಲಿ ಕೋಸ್ಟಲ್ವುಡ್ನ ಖ್ಯಾತ ಕಲಾವಿದರು ಬಣ್ಣಹಚ್ಚಿದ್ದಾರೆ. ಕೆಲವೇ ದಿನದಲ್ಲಿ ಸಿನೆಮಾ ರಿಲೀಸ್ಗೆ ಡೇಟ್ ಅನೌನ್ಸ್ ಕೂಡ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ