ರಮಣೀಯ ತಾಣ, ಶಿವಪ್ಪನಾಯಕನ ಕೋಟೆ


Team Udayavani, Nov 8, 2018, 2:12 PM IST

8-november-13.gif

ಸಣ್ಣ ಮಟ್ಟದ ಪ್ರವಾಸ ಕೈಗೊಳ್ಳುವುದಿದ್ದರೆ ಕಾಸರಗೋಡು ಸಮೀಪದ ಬೇಕಲ್‌ ಕೋಟೆ ಒಂದು ಉತ್ತಮ ಆಯ್ಕೆ. ಬೀಚ್‌ ಹಾಗೂ ಕೋಟೆಯು ಪ್ರವಾಸಿಗರ ಮನಸೆಳೆಯುತ್ತದೆ.

ದಿನನಿತ್ಯದ ಕೆಲಸದ ಜಂಜಾಟದ ನಡುವೆ ಒಂದು ಬ್ರೇಕ್‌ ಬೇಕೆನಿಸಿತು. ಹೀಗಿರುವಾಗ ಒಂದು ದಿನ ಸಂಜೆ ತಂಪಾದ ಗಾಳಿ ಬೀಸುತ್ತಿತ್ತು, ಆಕಾಶದಲ್ಲಿ ಮೋಡಕವಿದ ವಾತಾವರಣವಿತ್ತು. ಇಂಥ ಚುಮುಚುಮು ಚಳಿಯಲ್ಲಿ ನಾವೆಲ್ಲ ನಾಲ್ಕೈದು ಗೆಳೆಯರು ಕೂಡಿ ಹರಟೆ ಹೊಡೆಯುತ್ತಿದ್ದೆವು. ಕೆಲವು ಸಮಯದ ಅನಂತರ ಗೆಳೆಯರೆಲ್ಲರೂ ಕೂಡಿ ಟೀ ಕುಡಿಯಲು ಹೋಟೆಲ್‌ಗೆ ಹೋದೆವು. ಅಲ್ಲಿ ಹಲವಾರು ವಿಷಯಗಳ ಚರ್ಚೆ ನಡೆಸುತ್ತಿರುವಾಗ ಗೆಳೆಯನೊಬ್ಬನು ಇಂಥ ಒಳ್ಳೆಯ ವಾತಾವರಣದಲ್ಲಿ ಯಾಕೆ ನಾವೆಲ್ಲರೂ ಒಂದೆರಡು ದಿನ ಟೂರ್‌ಗೆ ಹೋಗಬಾರದು ಎಂದನು. ಅದಕ್ಕೆ ಒಬ್ಬ ಗೆಳೆಯನು ಸದ್ಯ ಮಳೆಗಾಲದಲ್ಲಿ ಟೂರ್‌ ಬೇಡ ಎಂದನು. ಆಗ ಇನ್ನೊಬ್ಬ ಗೆಳೆಯ ಸದ್ಯ ಟೂರ್‌ ಮಾಡಬಹುದು ಎಂದು ಹಲವಾರು ರೀತಿಯ ಮಾಹಿತಿಗಳನ್ನು ನೀಡಿದನು.

ದೀರ್ಘ‌ ಪ್ರಯಾಣ
ಹೀಗೆ ಹಾಗೆ ಚಡಪಡಿಸುತ್ತಾ ಎಲ್ಲರ ಸಮ್ಮತದೊಂದಿಗೆ 8 ಮಂದಿ ಬೆಳಗ್ಗೆ 7:30ಕ್ಕೆ ಸರಿಯಾಗಿ ನಾವೆಲ್ಲರೂ ಗೆಳೆಯನ ಕಾರನ್ನು ಹತ್ತಿ ಮಂಗಳೂರಿನಿಂದ ಸುಮಾರು 63 ಕಿ.ಮೀ. ದೂರದಲ್ಲಿರುವ ಬೇಕಲ್‌ ಕೋಟೆಗೆ ಹೊರಟೆವು. ದೀರ್ಘ‌ ಕಾಲದ ಪ್ರಯಾಣದ ಅನಂತರ ಸಮಯ 9:15ಕ್ಕೆ ಶಿವಪ್ಪನಾಯಕನ ಕೋಟೆಯ ಮುಂದೆ ನಾವೆಲ್ಲರೂ ಹಾಜರಾಗಿದ್ದೆವು.

ಸೂರ್ಯಾಸ್ತಮಾನ
ಅನಂತರ ಅಲ್ಲಿಯೇ ಸ್ವಲ್ಪ ಹೊತ್ತು ಕಳೆದು ಎಲ್ಲರೂ ತಂದಿದ್ದ ತಿಂಡಿ ಪೊಟ್ಟಣಗಳನ್ನು ತಿನ್ನಲು ಆರಂಭಿಸಿದೆವು. ಕೋಟೆಯ ಒಳಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಅನುಭವಿಸಿದೆವು. ಗೆಳೆಯರೊಂದಿಗೆ ಕೂಡಿ ಹತ್ತಾರು ಆಟಗಳನ್ನು ಆಡಿ ತಮ್ಮ ಬಾಲ್ಯವನ್ನು ಮತ್ತೊಮ್ಮೆ ನೆನೆಪಿಸಿ ಕೊಂಡೆವು. ಕೋಟೆಯ ಪಕ್ಕದಲ್ಲೇ ಇದ್ದ ಬೀಚ್‌ ಗೆ ಇಳಿದು ಸಂತೋಷದಿಂದ ಕುಣಿದಾಡಿದೆವು. ಸಂಜೆಯ ಸೂರ್ಯಾಸ್ತಮಾನವನ್ನು ಕೋಟೆಯ ಮಧ್ಯೆ ನಿಂತು ನೋಡಿದ ಅನುಭವ ನಯನಮನೋಹರವಾಗಿತ್ತು ಮನಸಿಲ್ಲದ ಮನಸ್ಸಿಂದ ಕೋಟೆಯಿಂದ ಮತ್ತೆ ಮನೆಯ ಹಾದಿ ಹಿಡಿದೆವು. ನಮಗೆಲ್ಲರಿಗೂ ಈ ಬೇಕಲ್‌ ಕೋಟೆಯ ಪ್ರವಾಸ ಇನ್ನೂ ನಮ್ಮ ಮನದಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ.

ಕೋಟೆಯ ವಿಶೇಷತೆ
ಪ್ರಕೃತಿ ರಮಣೀಯ, ಇತಿಹಾಸ ಸ್ಮರಣೀಯ ಬೇಕಲ ಕೋಟೆ ಅಂತಾರಾಷ್ಟ್ರೀಯ ಪ್ರವಾಸಿ ತಾಣಗಳ ಲ್ಲೊಂದು. ಇಲ್ಲಿ ಸಿನೆಮಾ ಮತ್ತು ಧಾರವಾಹಿಯ ಅನೇಕ ಚಿತ್ರೀಕರಣಗಳು ನಡೆದಿವೆ. 385 ವರ್ಷಗಳ ಚಾರಿತ್ರಿಕ ಬೇಕಲ ಕೋಟೆಯನ್ನು ಕಟ್ಟಿದವನು ಬಿದನೂರಿನ ಕನ್ನಡಿಗ ಅರಸ ಶಿವಪ್ಪ ನಾಯಕ. ಇಂದಿಗೂ ಈ ಅತ್ಯಂತ ಮನೋಹರವಾದ ಕೋಟೆಯನ್ನು ನೋಡುವಾಗ ಸಿಗುವ ಖುಷಿಯೇ ಬೇರೆ. ಬೇಕಲ ಕೋಟೆಯ ವಿಹಂಗಮ ನೋಟದ ಜತೆಗೆ ಕೋಟೆ ಮೇಲೆ ನಿಂತು ನೀಲಿಗೆಂಪು ಕಡಲಂಚಿನಲ್ಲಿ ಸೂರ್ಯಾಸ್ತ ವೀಕ್ಷಣೆಯ ಸೊಬಗು ಸವಿಯುವುದೇ ಅದ್ಭುತ ಅನುಭವ.

ಪಕ್ಕದಲ್ಲೇ ಬೀಚ್‌ ಪಾರ್ಕ್‌ ಇದೆ. ಇತಿಹಾಸಬೇಕಲ್‌ ಕೋಟೆ ಸುಮಾರು 15 ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ. ಸ್ಥಳೀಯ ಆಡಳಿತಗಾರ ಹಿರಿಯ ವೆಂಕಟಪ್ಪನ್‌ ನಾಯಕ ಎಂಬವರು ಇದನ್ನು ನಿರ್ಮಿಸಲು ಪ್ರಾರಂಭಿಸಿದರು. ಅನಂತರ ಇದನ್ನು ಶಿವಪ್ಪ ನಾಯಕ ಎಂಬವರು ಪೂರ್ಣಗೊಳಿಸಿದರು. ಬಳಿಕ ಇದು ಹೈದರಾಲಿಯ ಅಧೀನಕ್ಕೆ ಒಳಪಟ್ಟಿತು. ಮುಂದೆ ಟಿಪ್ಪು ಇದನ್ನು ತನ್ನ ಮುಖ್ಯ ಸೇನಾ ಕೆಂದ್ರವನ್ನಾಗಿ ಮಾಡಿಕೊಂಡನು. 1799ರಲ್ಲಿ ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಟಿಪ್ಪು ಮರಣದ ಅನಂತರ ಈಸ್ಟ್‌ ಇಂಡಿಯಾ ಕಂಪೆನಿ ಈ ಕೋಟೆಯನ್ನು ವಶಪಡಿಸಿಕೊಂಡಿತು. ವಿಸ್ತೀರ್ಣದಲ್ಲಿ ಇದು ಸುಮಾರು 40 ಎಕರೆಗಳಷ್ಟು ಇದ್ದು ವೀಕ್ಷಣಾ ಗೋಪುರ, ಪಿರಂಗಿಗಳು ಮತ್ತು ರಕ್ಷಣೆಗಾಗಿ ಗೋಡೆಯಲ್ಲಿ ಕಿಂಡಿಗಳನ್ನು ಒಳಗೊಂಡಿದೆ. ಇದು ಕೇರಳದಲ್ಲಿರುವ ಅತಿ ದೊಡ್ಡದಾದ ಕೋಟೆ. ಇದರಲ್ಲಿ ಅರಮನೆ ಇದ್ದ ಕುರುಹು ಏನೂ ಇಲ್ಲ. ಇದನ್ನು ಕೇವಲ ರಕ್ಷಣೆಗಾಗಿ ಮಾತ್ರ ನಿರ್ಮಿಸಲಾಗಿದೆ. ಕೋಟೆಯ ಮುಖ್ಯ ದ್ವಾರದಲ್ಲಿ ಮುಖ್ಯ ಪ್ರಾಣ (ಹನುಮಾನ್‌) ದೇವಾಲಯ ಮತ್ತು ಮಸೀದಿಗಳಿವೆ. ಇದು ಸಮುದ್ರ ತೀರದಲ್ಲಿದ್ದು ಕೊಟೆಯ ಒಳಗಿನಿಂದ ಸಮುದ್ರಕ್ಕೆ ಹೋಗಲು ಸುರಂಗ ಮಾರ್ಗವಿದೆ.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ -ಬೇಕಲಕೋಟೆಗೆ ಸುಮಾರು 68 ಕಿ.ಮೀ. ದೂರ.
· ನೀರು, ಸ್ನ್ಯಾಕ್ಸ್‌ ಸಹಿತ ತಿಂಡಿ- ತಿನಿಸುಗಳು ಇಲ್ಲಿಯೇ ಲಭ್ಯ. 

ಸುಶಾಂತ್‌ ತೊಕ್ಕೊಟ್ಟು 

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.