CONNECT WITH US  

ಕಟ್ಟದ ಕೋರಿ ಇದು, ಕೋಳಿ ಅಂಕದ ಕಥೆಯಲ್ಲ

ಕೋಳಿ ಅಂಕ ಕರಾವಳಿಯಲ್ಲಿ ಫೇಮಸ್‌. ಅದರಲ್ಲೂ ಗ್ರಾಮೀಣ ಭಾಗದಲ್ಲಂತೂ ನೇಮ-
ಉತ್ಸವ-ಕಾರ್ಯಕಲಾಪಗಳಲ್ಲಿ ಕೋಳಿ ಅಂಕಕ್ಕೆ ಜನ ಜಾಸ್ತಿ ಸೇರುತ್ತಾರೆ. ಅದರ ಮೂಲಕ ಸಂಭ್ರಮ ಪಡುವವರು ತುಂಬಾ ಜನ ಇದ್ದಾರೆ. ಜತೆಗೆ ಕಟ್ಟದ ಕೋರಿಯ ಪದಾರ್ಥ ಅಂದರೆ ಊರಲ್ಲಿ ಸ್ವಲ್ಪ ಜನ ಜಾಸ್ತಿ ಬರುತ್ತಾರೆ. ಯಾಕೆಂದರೆ ಆ ಪದಾರ್ಥ ತುಂಬಾನೇ ಟೇಸ್ಟ್‌ ಅನ್ನುವ ಮಾತಿದೆ. ಹೀಗೆ ಕೋಳಿ ಅಂಕ-ಕಟ್ಟದ ಕೋರಿ ಇದೆಲ್ಲ ತುಳುನಾಡಿನ ಮನಸುಗಳ ಜತೆಗೆ ಬೆಸೆದುಕೊಂಡ ಸಂಗತಿಗಳು. ಇದೆಲ್ಲ ವಿಚಾರ ಇಲ್ಲಿ ಯಾಕೆ ಅನ್ನುತ್ತೀರಾ? ವಿಷಯ ಇರುವುದೇ ಇಲ್ಲಿ. ಇದೇ ಸಂಗತಿಯ ಹೆಸರನ್ನು ಇಟ್ಟುಕೊಂಡು ಕೋಸ್ಟಲ್‌ ವುಡ್‌ನ‌ಲ್ಲೊಂದು ಸಿನೆಮಾ ಮಾಡಲು ಸಿದ್ಧತೆ ನಡೆಯುತ್ತಿದೆ. ಹೆಸರು 'ಕಟ್ಟದ ಕೋರಿ'!

ಆದರೆ, ಈ ಹೆಸರು ಕೇಳಿ ಕೋಳಿ ಅಂಕದ ಕಥೆ ಅಂದುಕೊಂಡರೆ ನಿಮ್ಮ ಭಾವನೆ ತಪ್ಪಾಗಬಹುದು. ಯಾಕೆಂದರೆ ಪಾತಕಿಗಳ ಲೋಕದಲ್ಲಿ ಕೂಡ 'ಕಟ್ಟದ ಕೋರಿ' ಎಂಬ ಪದ ಜಾರಿಯಲ್ಲಿರುವುದರಿಂದ ಈ ಟೈಟಲ್‌ ಅಲ್ಲಿಗೆ ಮಾತ್ರ ಅನ್ವಯವಾಗುತ್ತದೆ! ಅಂದರೆ ಇದು ಪಾತಕ ಲೋಕದ ಕಥೆ. ಪತ್ರಿಕೆಯೊಂದರಲ್ಲಿ 'ಫಲ್ಗುಣಿ ನದಿ ತೀರದಲ್ಲಿ' ಎಂಬ ಅಂಕಣವೊಂದು ಪ್ರಕಟವಾಗುತ್ತಿತ್ತು. ಕರಾವಳಿಯ ಭೂಗತ ಲೋಕದ ಕತೆಗಳೆಲ್ಲ ಇದರಲ್ಲಿ ಬರುತ್ತಿದ್ದವು. ಈ ಬರೆಹಗಳನ್ನೇ ಇಟ್ಟುಕೊಂಡು ನಿರ್ದೇಶಕ ಇಸ್ಮಾಯಿಲ್‌ ಮೂಡುಶೆಡ್ಡೆ ಇದೀಗ ಕಥೆಯ ರೂಪ ನೀಡುತ್ತಿದ್ದಾರೆ. ಹೆಚ್ಚಾ ಕಡಿಮೆ ಫೆಬ್ರವರಿ ವೇಳೆಗೆ ಕಟ್ಟದ ಕೋರಿಯ ಶೂಟಿಂಗ್‌ ಆರಂಭವಾಗುವ ನಿರೀಕ್ಷೆಯಿದೆ. ಪ್ರಸ್ತುತ 'ಭೋಜರಾಜ್‌ ಎಂಬಿಬಿಎಸ್‌' ಚಿತ್ರದ ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಇಸ್ಮಾಯಿಲ್‌ ಅವರು ಡಿಸೆಂಬರ್‌ ನಲ್ಲಿ ಈ ಚಿತ್ರದ ಶೂಟಿಂಗ್‌ ಪೂರ್ಣಗೊಳಿಸಲಿದ್ದಾರೆ. 

ದಿನೇಶ್‌ ಇರಾ 

ಇಂದು ಹೆಚ್ಚು ಓದಿದ್ದು

Trending videos

Back to Top