CONNECT WITH US  

ಕೊಂಕಣಿಯ ಕಾಂತಾರ್‌ನಲ್ಲಿ ಜಾಕಿಶ್ರಾಫ್‌!

ಇತ್ತೀಚೆಗೆ ಉತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ರಾಜ್ಯ ಪ್ರಶಸ್ತಿ ಪಡೆದ 'ಸೋಫಿಯಾ' ಕೊಂಕಣಿ ಚಿತ್ರದ ನಿರ್ಮಾಪಕಿ ಜಾನೆಟ್‌ ನೊರೊನ್ಹಾ ನಿರ್ಮಾಣದ ಎರಡನೇ ಚಿತ್ರ 'ಕಾಂತಾರ್‌' ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ್ದು, ಕಳೆದ ವಾರ ಚಿತ್ರದ ಆಡಿಯೋ ಮತ್ತು ಟೀಸರ್‌ ರಿಲೀಸ್‌ ಆಗಿದೆ. ಬಾಲಿವುಡ್‌ ನಟ ಜಾಕಿಶ್ರಾಫ್ ಇದೇ ಮೊದಲ ಬಾರಿ ಕೊಂಕಣಿ ಚಿತ್ರಕ್ಕೆ ಬಣ್ಣಹಚ್ಚಿರುವುದು ಚಿತ್ರದ ವಿಶೇಷ. ಗೋವಾ ಕೊಂಕಣಿ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಕರಾವಳಿಯ ಕೊಂಕಣಿ ಭಾಷೆಗೂ ಡಬ್‌ ಆಗಲಿದೆ.

ಬಹುಭಾಷಾ ತಾರೆ ಎಸ್ತಾರ್‌ ನೊರೊನ್ಹಾ ನಾಯಕಿಯಾಗಿದ್ದು, ಟಾಲಿವುಡ್‌ ರ್ಯಾಪರ್‌ ನೋಯಲ್‌ ಸಿಯಾನ್‌ ನಾಯಕ. ವೆಲ್‌ರೋಸ್‌ ಪಿರೇರ, ಲೂಯಿಸ್‌ ಬಚನ್‌, ಡೊಮಿನಿಕ್‌, ಡೊಲ್ಲಾ, ಲಿಬಿ, ಮೀನಾ, ಚಿತ್ರಾ ಅಫೋನ್ಸೊ, ಡೊನಾಲ್ಡ್‌ ಕೊಲಾಸೊ ಬಣ್ಣಹಚ್ಚಿದಾರೆ. ಗೋವಾದಲ್ಲೇ ಶೂಟಿಂಗ್‌ ನಡೆದಿದ್ದು, ಅಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರ ಸೆಟ್ಟೇರಿದೆ. ಕಾಂತಾರ್‌ ಎಂದರೆ ಹಾಡು. ಇದೊಂದು ಸಂಗೀತಮಯ ಲವ್‌ ಸ್ಟೋರಿ ಎನ್ನುತ್ತಾರೆ ನಟಿ ಎಸ್ತಾರ್‌. ಆದಿತ್ಯ ಬರ್ವೆ ಸಂಗೀತ ಸಂಯೋಜನೆಯಲ್ಲಿ ನಾಲ್ಕು ಹಾಡುಗಳಿವೆ. ಜನವರಿಯಲ್ಲಿ ಸಿನೆಮಾ ಬಿಡುಗಡೆಯಾಗಲಿದೆಯಂತೆ!

ಇಂದು ಹೆಚ್ಚು ಓದಿದ್ದು

Trending videos

Back to Top