ರಂಗು- ರಂಗಿನ ತಾಣ  ವರಂಗ 


Team Udayavani, Dec 6, 2018, 1:50 PM IST

6-december-14.gif

ಬಾಲ್ಯದಿಂದಲೂ ನನಗೆ ಹೊಸ ಹೊಸ ಊರುಗಳ ಸುತ್ತುವ ಹಂಬಲ. ನನ್ನಂತೆಯೇ ನನ್ನ ಮನಃ ಸ್ಥಿತಿಗೆ ಪೂರ ಕ ವಾ ಗು ವಂತೆ ಇದ್ದದ್ದು ನನ್ನ ಬಾಲ್ಯದ ಗೆಳೆಯ. ಅವನಿಗೂ ಹಾಗೆ ಬೇರೆ ಬೇರೆ ಜಾಗಗಳಿಗೆ ಭೇಟಿ ನೀಡುವುದೆಂದರೇ ಅದೇನೋ ಖುಷಿ. ಪದವಿ ಮುಗಿದ ಬಳಿಕ ಮನೆಯಲ್ಲೇ ಇದ್ದು ಬೇಸರವಾಗುತ್ತಿತ್ತು. ಗೆಳೆಯ ಕೂಡ ಇದೇ ಮಾತು ಹೇಳಿದ್ದರಿಂದ ನಮ್ಮದೊಂದು 4 ಜನರ ತಂಡ ಪ್ರವಾಸ ಹೊರಡಲು ಅಣಿಯಾಯಿತು.

ರಾತ್ರಿ ಮನೆಯ ಅಂಗಳದಲ್ಲಿ ಕುಳಿತು ಅಮ್ಮನ ಕೈತ್ತುತ್ತು ತಿನ್ನುತ್ತಾ ಯಾವ ಕಡೆಗೆ ಹೋಗುವುದು ಎನ್ನುವುದರ ಬಗ್ಗೆ ಚರ್ಚೆ ಶುರುವಾಯಿತು. ಅದೇ ಸಮಯಕ್ಕೆ ನನ್ನ ಅಕ್ಕ ಸ್ವಲ್ಪ ಸಮಯ ಯೋಚಿಸಿ ವರಂಗಕ್ಕೆ ಹೋಗೋಣವಾ ಎಂದಳು. ನಾವಿನ್ನೂ ಅದರ ಹೆಸರೇ ಕೇಳಿರಲಿಲ್ಲ. ಹಾಗಾಗಿ ಎಲ್ಲರೂ ಒಬ್ಬರ ಮುಖ ಇನ್ನೊಬ್ಬರು ನೋಡಿ ಕೊಂಡೆವು. ನಮ್ಮ ಮುಖಚರ್ಯೆ ನೋಡಿ ಅವಳು ಕಿರು ನಗೆ ಬೀರಿ ನಾಳೆ ನಿಮ್ಮನ್ನು ಕರೆದುಕೊಂಡು ಹೋಗುವ ಕೆಲಸ ನನ್ನದು. ತಲೆ ಕೆಡೆಸಿಕೊಳ್ಳಬೇಡಿ ಎಂದಳು. ಆಕೆಯ ಮಾತಿನ ಧೈರ್ಯದ ಮೇಲೆ ಹಾಗೆ ನಿದ್ದೆಗೆ ಜಾರಿದೆವು.

ಮುಂಜಾನೆಯ ಸೂರ್ಯನ ಕಿರಣ ಭೂಮಿಯನ್ನು ಸೋಕುವ ಮುನ್ನ ನಾವು ಮನೆಯಿಂದ ಹೊರಟೆವು. ಸಾಗರದಿಂದ ನಮ್ಮ ಜತೆ ಪ್ರಯಾಣಕ್ಕೆ ಸಿದ್ಧವಾಗಿದ್ದ ಗೆಳೆಯನನ್ನು ಕರೆದುಕೊಂಡು 5 ಜನ ಪಯಣ ಆರಂಭಿಸಿದೆವು. ನನಗೆ ಈ ಘಾಟಿ  ಅಂದರೆ ಅದೇನೋ ಭಯ. ನಾನು ಸಿರ್ಸಿಯ ಘಾಟಿಗ ಳಲ್ಲಿ ಓಡಾಡಿ ಬೇಸತ್ತು ಹೋಗಿದ್ದೆ. ಅವುಗಳು ನನಗೆ ವಿಪರೀತ ಭಯ ಹುಟ್ಟಿಸುತ್ತವೆ. ಆದರೆ ಅಂದು ಮಾತ್ರ ನನಗೆ ವರಂಗ ಹೇಗಿರಬಹುದೆಂದೂ ಕಣ್ಣ ಮುಂದೆ ಬರುತ್ತಿತ್ತೇ ವಿನಾ ಘಾಟಿಗಳ ಪರಿವೇ ಇರಲಿಲ್ಲ.

ಆಗುಂಬೆಘಾಟ್‌ ಬಹಳ ಪ್ರಸಿದ್ಧಿ. ಅಲ್ಲಿಯ ಸೂರ್ಯೋದಯ ನೋಡಲು ಎಷ್ಟೋ ವರ್ಷಗಳು ನಾನು ಹಂಬಲಿಸಿದ್ದುಂಟು ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ನನ್ನ ದುರದೃಷ್ಟಕ್ಕೆ ಅಂದು ಕೂಡ ನಾವು ಅಲ್ಲಿಗೆ ತಲುಪುವ ವೇಳೆಗೆ ಸೂರ್ಯ ಎದ್ದು ತನ್ನ ಸುಂದರ ಕಿರಣಗಳನ್ನೂ ಪ್ರಕೃತಿಯ ಮೇಲೆ ಸೂಸಿಬಿಟ್ಟಿದ್ದ. ಅಲ್ಲಿ ಸ್ವಲ್ಪ ಹೊತ್ತು ವಿರಮಿಸಿ. ಅಲ್ಲಿಂದ ಮುನ್ನಡೆದೆವು. ಮುಂದೆ ಹೋಗುತ್ತಿದ್ದಂತೆ ನನ್ನ ಹೊಟ್ಟೆ ತಾಳ ಹಾಕಲು ಶುರು ಮಾಡಿತ್ತು. ಆಗ ಅಕ್ಕ ಇನ್ನೇನು ಘಟ್ಟ ಮುಗಿದ ಬಳಿಕ ಅಲ್ಲೊಂದು ಹೋಟೆಲ್‌ ಇದೆ. ಅಲ್ಲಿ ತಿಂದರಾಯಿತು ಎನ್ನುವಷ್ಟರಲ್ಲಿ ನಾವು ಆ ಹೋಟೆಲ್‌ ಸಮೀಪಿಸಿದೆವು. ಹೊಟ್ಟೆಯನ್ನು ಸಂತೃಪ್ತಿ ಪಡಿಸಿ ಮುಂದೆ ಹೋಗುತ್ತಿದ್ದಂತೆ ನಮಗೆ ಸಿಕ್ಕಿದ್ದು ಹೆಬ್ರಿ ಅಲ್ಲಿಂದ ಕಾರ್ಕಳ ರಸ್ತೆಯಲ್ಲಿ ಹೋಗುತ್ತಿರುವಾಗ ನಮ್ಮ ಎಡಕ್ಕೆ ವರಂಗಕ್ಕೆ ದಾರಿ ಎಂಬ ಫ‌ಲಕ ಕಾಣುತ್ತಿದ್ದಂತೆಯೇ ನಮಗೆ ಹೇಳ ತೀರದ ಆನಂದ.

ಸಾಲು ಸಾಲು ಮರಗಳ ಸ್ವಾಗತ
ನಮ್ಮ ಬೈಕ್‌ ಆ ಒಳ ರಸ್ತೆಯಲ್ಲಿ ಸಾಗುತ್ತಿದ್ದಂತೆ ಆ ಕಾಡು ತಂಪಾದ ಗಾಳಿ ಪ್ರಕೃತಿಯ ಸೌಂದರ್ಯವನ್ನು ನಾಚಿಸುವಂತಿದ್ದವು. ಸಾಲು ಮರಗಳು ನಮ್ಮನ್ನು ಸ್ವಾಗತಿಸುವಂತಿದ್ದವು. ಅಂತೂ ಇಂತೂ ನಮ್ಮ ಪಯಣ ವರಂಗದ ಸಮೀಪಕ್ಕೆ ಬಂದು ನಿಂತಿತು. ಸುತ್ತಲೂ ಹಚ್ಚ ಹಸಿರು ಗದ್ದೆ ನಡುವಲ್ಲಿ ಒಂದು ಸಣ್ಣ ದಾರಿ. ನಡೆದು ಹೋಗುತ್ತಿದ್ದಂತೆ ನಮಗೆ ಮೊದಲು ಕಾಣುವುದು ಒಂದು ಸುಂದರವಾದ ಹಳೆಯ ಮನೆ ಅಲ್ಲಿಯೇ ಕಟ್ಟೆಯ ಮೇಲೆ ಕೂತ ಜನಗಳು. ಅಲ್ಲಿಯೇ ಪಕ್ಕ ಒಂದು ಚಿಕ್ಕ ಕೌಂಟರ್‌, ಅಲ್ಲಿ ಹರಕೆಗಳನ್ನು ಹೇಳಿಕೊಂಡಿದ್ದರೆ ಪಾವತಿ ಮಾಡಿ ಮುಂದೆ ತೆರಳಬಹುದು.

ತುಂಬಿ ತುಳುಕುವ ನೀರು
ಮುಂದೆ ಅದೇ ಗದ್ದೆಯ ಅಂಚಿನಲ್ಲಿ ಹೊಳೆ. ಅದನ್ನು ಕಂಡೊಂಡನೆ ಎಲ್ಲರೂ ಅಕ್ಕನ ಮುಖ ನೋಡಿದೆವು. ಅಕ್ಕ ಇಂತ ದ್ದೊಂದು ಸುಂದರ ಪ್ರದೇಶಕ್ಕೆ ಕರೆದುಕೊಂಡು ಬರುತ್ತಾಳೆ ಎಂಬುದನ್ನು ನಾವು ಊಹಿಸಿಯೇ ಇರಲಿಲ್ಲ. ಮನದಲ್ಲಿ ಅದೇನೋ ಖುಷಿ, ಹಾಗೇ ನನಗೆ ಸ್ವಲ್ಪ ಭಯವೂ ಪ್ರಾರಂಭವಾಯಿತು. ಏಕೆಂದರೆ ನೀರೆಂದರೆ ಸ್ವಲ್ಪ ಭಯ. ನಾವು ಹೋಗಬೇಕಾದದ್ದು ಹೊಳೆಯ ಮಧ್ಯದಲ್ಲಿರುವ ಬಸದಿಗೆ ಆ ಬಸದಿ ಸುತ್ತಲೂ ತುಂಬಿ ತುಳುಕುವ ನೀರು. ಅದರ ಅಂದವನ್ನು ಮತ್ತಷ್ಟು ಹೆಚ್ಚಿಸುವ ಚೆಂದದ ತಾವರೆ. ಹೀಗೆ ಅದನ್ನು ದೂರ ನಿಂತು ನೋಡುವಾಗಲೇ ತುಂಬಾ ಖುಷಿ ಕೊಡುತ್ತಿತ್ತು. ಅನಂತರ ನಾನು ಮತ್ತು ನನ್ನ ಅಕ್ಕ, ಎಲ್ಲರೂ ದೋಣಿ ಹತ್ತಿಯಾಗಿತ್ತು. ಅನಂತರ ನನ್ನ ಸರದಿ! ಅಕ್ಕ ಅಲ್ಲಿಂದಲೇ ಏನಾಗುವುದಿಲ್ಲ ಎಂದು ಕೈ ಮುಂದೆ ಚಾಚಿದಾಗ ಧೈರ್ಯದಿಂದ ಕುಳಿತೆ. ಅಂಬಿಗ ನಮ್ಮನ್ನು ದಡಕ್ಕೆ ತಲುಪಿಸಿ ಇಳಿಸಿದ್ದೆ ನಾವೆಲ್ಲರೂ ಬಸದಿಯೊಳಗೆ ಹೋದೆವು.

ನಾಲ್ಕೂ ಕಡೆಗಳಲ್ಲೂ ಬಾಗಿಲು ಸುತ್ತಲೂ ಜೈನರ ದೇವರು. ಅಲ್ಲಿಯೇ ಪ್ರದ ಕ್ಷಿಣೆ ಹಾಕಲು ಚಿಕ್ಕದಾರಿ ಅದೊಂದು ಅದ್ಭುತ. ದೇವರಿಗೆ ನಮಸ್ಕರಿಸಿ ಅಲ್ಲಿಯೇ ಮೆಟ್ಟಿಲ ಮೇಲೆ ಕುಳಿತು ಆನಂದಿಸಿದೆವು. ಮತ್ತೆ ಬಂದ ದೋಣಿಯನ್ನು ಏರಿ ಹಿಂತಿರುಗಿದೆವು. ಬಹುಶಃ ಅಲ್ಲಿ ನೀವು ಅದೆಷ್ಟು ಬಾರಿ ಹೋದರೂ ನಿಮಗೆ ಸಾಕೆನಿಸಲು ಸಾಧ್ಯವಿಲ್ಲ.

ರೂಟ್‌ ಮ್ಯಾಪ್‌
·ಮಂಗಳೂರಿನಿಂದ 73 ಕಿ.ಮೀ.
· ಬೇಕಾದ ತಿಂಡಿ-ತಿನಿಸುಗಳನ್ನು ನಾವೇ ಕೊಂಡೊಯ್ಯಬೇಕು.
· ಹೆಬ್ರಿಯಿಂದ ಕಾರ್ಕಳ ಮಾರ್ಗವಾಗಿ ಹೋಗುವ ಬಸ್ಸುಗಳು ವರಂಗಕ್ಕೆ ಹೋಗುತ್ತವೆ.

 ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.