CONNECT WITH US  

ರಾಷ್ಟ್ರನಾಯಕರು ಕಂಡಂತೆ ವಿವೇಕಾನಂದರು...

ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದವರಿಗೆ ಲೆಕ್ಕವಿಲ್ಲ. ಜಗತ್ತಿನಾದ್ಯಂತ ವಿವೇಕಾನಂದರ ಉಪದೇಶಗಳನ್ನು ಕೇಳಿ ಅನುಯಾಯಿಗಳಾದವರು. ಪ್ರತಿ ತಲೆಮಾರುಗಳನ್ನೂ ಪ್ರಭಾವಿಸುತ್ತಲೇ ಬಂದಿರುವ ಸೂರ್ಯ ಎಂದರೆ ತಪ್ಪಿಲ್ಲ. ಕೆಲವು ಮಹಾ ಪುರುಷರ ಅಭಿಪ್ರಾಯ ಇಲ್ಲಿ ನೀಡಲಾಗಿದೆ.

ಖಾಲಿ ಕೈಯಲ್ಲಿ ಹೋಗಬೇಡಿ
ಸ್ವಾಮಿ ವಿವೇಕಾನಂದರ ಕೃತಿಗಳೆಲ್ಲವನ್ನೂ ಬಹಳ ಗಹನವಾಗಿ ಓದಿದ ಬಳಿಕ ನನ್ನಲ್ಲಿ ದೇಶದ ಮೇಲಿನ ಪ್ರೀತಿ ಸಾವಿರ ಪಟ್ಟು ಹೆಚ್ಚಾಗಿದೆ. ಯುವಜನರೇ, ವಿವೇಕಾನಂದರು ಬದುಕಿದ ಮತ್ತು ನಿಧನರಾದ ಸ್ಥಳಕ್ಕೆ ಬಂದ ಮೇಲೆ ಏನನ್ನೂ ಖಾಲಿ ಕೈಯಲ್ಲಿ ಹೋಗಬೇಡಿ. ಒಂದಿಷ್ಟು ತುಂಬಿಕೊಳ್ಳಿ.
- ಮಹಾತ್ಮಾ ಗಾಂಧೀಜಿ, ರಾಷ್ಟ್ರಪಿತ

ಮೂಡಿದ ಹೊಸ ಭರವಸೆ
ದೇಶ ಮತ್ತು ಜನರು ಹತಾಶೆ, ನಿರಾಶೆಯಲ್ಲಿ ಮುಳುಗುತ್ತಿದ್ದ ಸಂಕಷ್ಟ ಕಾಲದಲ್ಲೇ ಸ್ವಾಮಿ ವಿವೇಕಾನಂದರು ಹುಟ್ಟಿದರು. ಅವರ ಉಪದೇಶ ಮತ್ತು ಬದುಕು ಹಾಗೆ ಮುಳುಗುತ್ತಿದ್ದವರಲ್ಲಿ ಬದುಕಿನ ಬಗ್ಗೆ ಹೊಸ ಭರವಸೆ ಮೂಡಿಸತೊಡಗಿತು. ಇದು ಸದಾ ಸ್ಮರಣೀಯವಾದುದು. 
- ಡಾ| ಸರ್ವಪಲ್ಲಿ ರಾಧಾಕೃಷ್ಣನ್‌, ಮಾಜಿ ರಾಷ್ಟ್ರಪತಿ

ಸದಾ ಧನಾತ್ಮಕ ನೆಲೆಯ ಚಿಂತಕ
ಇಡೀ ಭಾರತವನ್ನು ಸಮಗ್ರವಾಗಿ ಅರಿತುಕೊಳ್ಳಬೇಕೆಂದರೆ ಸ್ವಾಮಿ ವಿವೇಕಾನಂದರನ್ನು ಓದಿ, ಅಧ್ಯಯನ ಮಾಡಿ, ಅರ್ಥ ಮಾಡಿಕೊಳ್ಳಿ. ಅವರಲ್ಲಿ ಎಲ್ಲವೂ ಧನಾತ್ಮಕ, ರಚನಾತ್ಮಕ ಚಿಂತನೆಗಳೇ. ಒಂದೇ ಒಂದೂ ನೆಪಕ್ಕಾದರೂ ಋಣಾತ್ಮಕ ಆಲೋಚನೆಗಳಿಲ್ಲ. ಅದೇ ಅಚ್ಚರಿ.
- ರವೀಂದ್ರ ನಾಥ ಠಾಗೋರ್‌, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ

ಸದಾ ಸ್ಮರಣೀಯ
ಹಲವು ವರ್ಷಗಳು ಸಂದರೂ, ಹಲವು ತಲೆಮಾರುಗಳು ಸರಿದು ಹೋಗುವಾಗ ವಿವೇಕಾನಂದರು ಮತ್ತು ಅವರಿದ್ದ ಬಹಳ ಹಳೆಯದ್ದೆನಿಸಬಹುದು. ಆದರೆ, ಎಂದಿಗೂ ಜನರ ನೆನಪಿನಿಂದ ಮಾಸಿ ಹೋಗದು. ಆ ಮಾದರಿಯಲ್ಲಿ ತಲೆಮಾರುಗಳನ್ನು ಪ್ರಭಾವಿಸಲಿದೆ. ಇದು ಖಚಿತ ಮತ್ತು ಸ್ಪಷ್ಟ. 
- ಇ.ಪಿ. ಚೆಲೆಚೊವ್‌, ರಷ್ಯನ್‌ ಇತಿಹಾಸಜ್ಞ

ಆಕರ್ಷಕ ಪುರುಷ ಸಿಂಹ
ವಿವೇಕಾನಂದ ಅತ್ಯಂತ ಅಪರೂಪದ ವ್ಯಕ್ತಿ. ಎಲ್ಲರ ಮಧ್ಯೆ ಎದ್ದು ಕಾಣುತ್ತಿದ್ದ ಪುರುಷ ಸಿಂಹ. ತಮ್ಮ ಬದುಕು ಮತ್ತು ಕಾರ್ಯದಿಂದಲೇ ಅವರ ಕತೃತ್ವ ಶಕ್ತಿಯ ಮೊಹರು ಒತ್ತಿದ್ದಾರೆ. ಇದು ಅನುಕರಣೀಯ. ಎಲ್ಲರನ್ನೂ ಪ್ರಭಾವಿಸುವಂಥ ಆಕರ್ಷಕ ವ್ಯಕ್ತಿತ್ವ. 
- ಅರವಿಂದ್‌ ಘೋಷ್‌, ತತ್ವಶಾಸ್ತ್ರಜ್ಞರು

ಬಡವರನ್ನೂ ಪ್ರೀತಿಸಲು ಹೇಳಿ ಕೊಟ್ಟವ
ನಮ್ಮ (ಭಾರತೀಯರ) ಕೊರತೆ ಮತ್ತು ತಪ್ಪುಗಳನ್ನು ತೋರಿಸಿಕೊಟ್ಟು, ಅವುಗಳನ್ನು ನಿವಾರಿಸಿಕೊಳ್ಳಲು ಪ್ರೇರಣೆ ನೀಡಿದವರು ವಿವೇಕಾನಂದರು. ಅಜ್ಞಾನ, ಕತ್ತಲಿನಲ್ಲಿ ಮುಳುಗಿದ ಸಂದರ್ಭದಲ್ಲಿ ಬಂದು ಹೊಸ ಬೆಳಕನ್ನು ಚೆಲ್ಲಿ ಎಲ್ಲರಲ್ಲಿರುವ ಆತ್ಮ ಒಂದೇ ಎಂದು ತಿಳಿ ಹೇಳಿದವರು. ಬಡವರನ್ನೂ ಪ್ರೀತಿಸಿ ಎಂದು ಹೇಳಿದವರು.
- ವಿನೋಬಾ ಭಾವೆ, ಭಾರತರತ್ನ ಪುರಸ್ಕೃತರು

ಸ್ವಾಮಿ ವಿವೇಕಾನಂದರ ಪ್ರಭಾವ ಹೇಗಿತ್ತೆಂದರೆ, 1893ರಲ್ಲಿ ಯೋಕೋಹಾಮದಿಂದ ಕೆನಡಾಕ್ಕೆ ಹಡಗಿನಲ್ಲಿ ಹೋಗುತ್ತಿದ್ದಾಗ ಸ್ವಾಮಿ ವಿವೇಕಾನಂದರಿಗೂ ಮತ್ತು ಕೈಗಾರಿಕೋದ್ಯಮಿ ಜೆಆರ್‌ಡಿ ಟಾಟಾ ಅವರಿಗೂ ಭೇಟಿಯಾಯಿತಂತೆ. ಆಗ ವಿವೇಕಾನಂದರು, ಭಾರತದಲ್ಲಿ  ವಿಶ್ವದರ್ಜೆಯ ವಿಜ್ಞಾನ ಸಂಸ್ಥೆಯನ್ನು ನಿರ್ಮಿಸುವ ಅಗತ್ಯ ಎಷ್ಟಿದೆ ಎಂಬುದನ್ನು ಟಾಟಾರಿಗೆ ಮನದಟ್ಟು ಮಾಡಿಕೊಟ್ಟರಂತೆ. ಅದರ ಹಿನ್ನೆಲೆಯಲ್ಲೇ ಜೆಆರ್‌ ಡಿ ಟಾಟಾ ಭಾರತೀಯ ವಿಜ್ಞಾನ ಸಮಸ್ಥೆಯನ್ನು (ಐಐಎಸ್‌ ಸಿ) ಸ್ಥಾಪಿಸಿದರಂತೆ. ಅದೀಗ ಅತ್ಯಂತ ಪ್ರಸಿದ್ಧ ವಿಜ್ಞಾನ ಸಂಸ್ಥೆ. ಅಂದಿನ ದೂರದೃಷ್ಟಿ ಇಂದು ಸಾವಿರಾರು ತಲೆಮಾರುಗಳನ್ನು ಕಾಯುತ್ತಿದೆ.

ಇಂದು ಹೆಚ್ಚು ಓದಿದ್ದು

Trending videos

Back to Top