ಸಾಲ ಇದ್ದ  ವೇಳೆ ಹೂಡಿಕೆ ಹೇಗಿರಬೇಕು?


Team Udayavani, Jul 16, 2018, 3:33 PM IST

16-july-18.jpg

ಸಾಲ ಎಂಬುದು ಜೀವನದ ಅನಿವಾರ್ಯ ಭಾಗ. ಅದೇ ರೀತಿ ಬದುಕಿನ ಭದ್ರತೆಗೆ ಹೂಡಿಕೆ ಕೂಡ ಮುಖ್ಯ. ಸಾಲ ಮತ್ತು ಹೂಡಿಕೆಯ ಮಧ್ಯೆ ಸಮತೋಲನ ಸಾಧಿಸುವುದು ಅತೀ ಅಗತ್ಯ. ಅವೆರಡನ್ನೂ ಸರಿದೂಗಿಸಲು ನಿಮಗೆ ನೆರವಾಗುವ ಕೆಲ ಸಂಗತಿಗಳು ಇಲ್ಲಿವೆ.

ಹಣಕಾಸಿನ ವಿಚಾರಕ್ಕೆ ಬಂದಾಗ ಹೂಡಿಕೆ ಮತ್ತು ಸಾಲ ಎರಡೂ ಮುಖ್ಯವಾಗುತ್ತವೆ. ಗೃಹ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಮದುವೆ, ವೈದ್ಯಕೀಯ ವೆಚ್ಚಗಳಿಗಾಗಿ ದೊಡ್ಡ ಮೊತ್ತದ ಹಣ ಬೇಕಾದಾಗ ಸಾಲ ಮಾಡಲೇಬೇಕಾಗುತ್ತದೆ. ಆದರೆ ಇದೇ ವೇಳೆ ಹೂಡಿಕೆ ಇಲ್ಲದೇ ಹೋದರೆ, ಭವಿಷ್ಯದಲ್ಲಿ ಬಗೆ ಬಗೆಯ ಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಗಳಿವೆ. ಕಷ್ಟಕಾಲದಲ್ಲಿ, ಕಾಸಿಲ್ಲ ಎಂಬ ಒಂದೇ ಕಾರಣದಿಂದ ಅತಂತ್ರ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭವೂ ಜತೆಯಾಗಬಹುದು. ಹಾಗಾಗಿ, ವೈಯಕ್ತಿಕ ಹಣಕಾಸನ್ನು ನಿರ್ವಹಿಸುವಾಗ, ಸಾಲ ಮತ್ತು ಹೂಡಿಕೆಯಲ್ಲಿ ಯಾವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂಬ ಗೊಂದಲಕ್ಕೆ ಬೀಳುವುದು ಸಹಜ.

ಸಾಲದ ಮರುಪಾವತಿಯನ್ನು ನೀವು ನಿರ್ಲಕ್ಷಿಸಿದರೆ ಬಡ್ಡಿ ಹೆಚ್ಚುತ್ತಾ ಹೋಗುತ್ತದೆ. ಅದು ನಿಮ್ಮನ್ನು ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿಸಬಹುದು. ನೀವು ಸಾಲ ತೀರಿಸುವುದರ ಕಡೆಗೆ ಮಾತ್ರ ಗಮನ ನೀಡಿ ಹೂಡಿಕೆಯನ್ನು ನಿರ್ಲಕ್ಷಿಸಿದರೆ, ಇದರಿಂದ ಹಣಕಾಸು ಉದ್ದೇಶಗಳನ್ನು ಈಡೇರಿಸಲು ನೀವು
ವಿಫ‌ಲಗೊಳ್ಳಬಹುದು. ಹಾಗಾಗಿ, ಸಾಲ ಮತ್ತು ಹೂಡಿಕೆಯ ಮಧ್ಯೆ ಸಮತೋಲನವನ್ನು ಕಾಪಾಡುವುದು ಅತೀ ಮುಖ್ಯ.

ಈಗಾಗಲೇ ಸಾಲದಲ್ಲಿರುವಾಗ, ನೀವು ಹಣ ಹೂಡಿಕೆ ಮಾಡಬೇಕೇ ಅಥವಾ ಪ್ರಸ್ತುತ ಇರುವ ಸಾಲ ಶೂನ್ಯವಾಗುವ ತನಕ ಕಾಯಬೇಕೇ? ಬಡ್ಡಿ ದರದಂಥ ನಿರ್ದಿಷ್ಟ ಅಂಶಗಳು ಹೂಡಿಕೆ ಮಾಡಬೇಕೇ ಅಥವಾ ಸಾಲವನ್ನು ಮೊದಲು ಪಾವತಿಸಬೇಕೇ ಎಂಬುದನ್ನು ನಿರ್ಧರಿಸಲು ನೆರವಾಗುತ್ತವೆ. ನೀವು ಹೂಡಿಕೆಯ ಮೂಲಕ ಗಳಿಸುವ ನಿರೀಕ್ಷೆ ಇರುವ ಬಡ್ಡಿ ಅಥವಾ ರಿಟರ್ನ್ಗೆ ಹೋಲಿಸಿದಾಗ ಸಾಲದ ಮೇಲೆ ಪ್ರಸ್ತುತ ಇರುವ ಮತ್ತು ನಿರೀಕ್ಷಿತ ಬಡ್ಡಿದರವು ಗಣನೀಯವಾಗಿ ಕಡಿಮೆ ಇದ್ದರೆ, ಆಗ ನೀವು ಸಾಲದ ಪೂರ್ವಪಾವತಿಯ ಬದಲು ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಸೂಕ್ತ ಹೂಡಿಕೆ ಮಾಡಿ
ಉದಾಹರಣೆಗೆ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ. 8.5ರಷ್ಟಿದ್ದು ವಾರ್ಷಿಕ ಬೋನಸ್‌ ಮೂಲಕ ಹೆಚ್ಚುವರಿ ಗಳಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ನೀವು ಸಾಲವನ್ನು ಪೂರ್ವ ಪಾವತಿ ಮಾಡುವ ಅಥವಾ ಬೋನಸ್‌ ಮೊತ್ತವನ್ನು ಸಮತೋಲಿತ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡುವ ಆಯ್ಕೆಗಳನ್ನು ಹೊಂದುತ್ತೀರಿ. ಫ‌ಂಡ್‌ನ‌ಲ್ಲಿ ಮಾಡುವ ಹೂಡಿಕೆ ತೆರಿಗೆ ಕಳೆದು ಶೇ. 12ರಷ್ಟು ವಾರ್ಷಿಕ ರಿಟರ್ನ್ ನೀಡುವ ನಿರೀಕ್ಷೆ ಇರುತ್ತದೆ. ಹೀಗಿದ್ದಾಗ ನೀವು ಗೃಹ ಸಾಲದ ಇಎಂಐ ಮುಂದುವರಿಸಿಕೊಂಡು, ಉತ್ತಮ ಗಳಿಕೆಗಾಗಿ ಬೋನಸ್‌ ಮೊತ್ತವನ್ನು ಫ‌ಂಡ್‌ನ‌ಲ್ಲಿ ಹೂಡಲು ಬಳಸಬೇಕು. ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಣ ಹೂಡುವಾಗ ರಿಸ್ಕ್  ಬಗ್ಗೆ ಎಚ್ಚರದಿಂದಿರಿ.

ಸಾಲದ ಬಡ್ಡಿದರವು ಹೂಡಿಕೆಯ ನಿರೀಕ್ಷಿತ ರಿಟರ್ನ್ನಷ್ಟೇ ಇದ್ದರೆ ಅಥವಾ ಹೆಚ್ಚಿದ್ದರೆ, ಆಗ ನಿಮ್ಮ ಹೆಚ್ಚುವರಿ ಆದಾಯದಿಂದ ಮೊದಲು ಬಾಕಿಯಿರುವ
ಸಾಲ ತೀರಿಸಬೇಕು. ಅನಂತರವೂ ಹಣ ಉಳಿದರೆ ಅದನ್ನು ಸೂಕ್ತ ಹೂಡಿಕೆಗೆ ಬಳಸಬೇಕು.

ಅವಲೋಕನ ಅಗತ್ಯ
ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನಿಮ್ಮ ನಿವೃತ್ತಿಯ ಗುರಿ ಮತ್ತು ಇತರೆ ಹಣಕಾಸು ಉದ್ದೇಶಗಳ ಮೇಲಾಗುವ ಪರಿಣಾಮಗಳನ್ನು ಅವಲೋಕಿಸಿ. ಯೋಚಿಸದೆ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಹೆಚ್ಚು ಸಾಲವಿದ್ದವನು ಬೇಗನೆ ಸೋತುಹೋಗುತ್ತಾನೆ. ಹಾಗಾಗಿ, ಗಳಿಕೆಯ ಸಾಮರ್ಥ್ಯ ಇಲ್ಲ ಅನ್ನಿಸಿದರೆ ಸಾಲ ಪಡೆಯುವ ವಿಚಾರದಲ್ಲಿ ಅಪಾಯದ ಸಂಗತಿಗಳಿಗೆ ಕೈ ಹಾಕಬೇಡಿ. 

ಆದಾಯ ಹೆಚ್ಚಿಸಿ
ನೀವು ಬಿಗ್‌ ಟಿಕೆಟ್‌ ಖರೀದಿಗಾಗಿ ಸಾಲ ಮಾಡಲು ಯೋಚಿಸುತ್ತಿದ್ದರೆ ಆಗ ಹೆಚ್ಚುವರಿ ಆದಾಯವನ್ನು ಈ ಸಂದರ್ಭದಲ್ಲಿ ಸಾಲದ ಮರುಪಾವತಿಯ ಬದಲಾಗಿ ಸೂಕ್ತ ಹೂಡಿಕೆಗೆ ಬಳಸಿ ಅನಂತರ ನಿಮ್ಮ ಖರೀದಿಗಾಗಿ ಅದನ್ನು ಬಳಸುವುದು ಒಳ್ಳೆಯದು. ಉದಾಹರಣೆಗೆ ಮೂರು ತಿಂಗಳ ಅನಂತರ ನೀವು ಕಾರು ಖರೀದಿಸಲು ಯೋಜಿಸುತ್ತಿದ್ದೀರಿ ಮತ್ತು ನಿಮ್ಮ ಕೈಗೆ ಈಗ 5 ಲಕ್ಷ ರೂ. ನಷ್ಟು ಹೆಚ್ಚುವರಿ ಆದಾಯ ಬಂತು ಎಂದುಕೊಳ್ಳೋಣ. ಪ್ರಸ್ತುತ ಶೇ. 8.8 ಬಡ್ಡಿದರದ ಗೃಹ ಸಾಲ 20 ಲಕ್ಷ ರೂ. ನಷ್ಟು ಬಾಕಿ ಇದೆ. 15 ವರ್ಷಗಳಷ್ಟು ಪಾವತಿ ಅವಧಿ ಉಳಿದಿದೆ ಎಂದಾದರೆ ಆ ಹೆಚ್ಚುವರಿ ಆದಾಯವನ್ನು ನಿಮ್ಮ ಗೃಹ ಸಾಲದ ಪೂರ್ವಪಾವತಿಗೆ ಬಳಸಿ ಕಾರು ಖರೀದಿಸಲು ವಾಹನ ಸಾಲ ಮಾಡುವ ಬದಲು, ನೀವು ಮೂರು ತಿಂಗಳ ಕಾಲಕ್ಕೆ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡಬೇಕು. ಹೂಡಿಕೆ ಮಾಡಿದ ಹಣ ಕೈಗೆ ಬಂದ ಅನಂತರ ಕಾರು ಖರೀದಿಸಬೇಕು.

 ರಾಧಾ

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.