ಹೆಚ್ಚುತ್ತಿದೆ ವೆಸ್ಟ್ ಕೋಟ್‌ ಟ್ರೆಂಡ್‌

Team Udayavani, Aug 3, 2018, 3:02 PM IST

3-agust-12.jpg

ಮದುವೆ ಮನೆಯಲ್ಲಿ ಅಥವಾ ಶುಭ ಸಮಾರಂಭಗಳಲ್ಲಿ ಮಿರ ಮಿರನೆ ಮಿಂಚಬೇಕೆಂಬ ಆಸೆ ಯಾರಿಗೆ ಇರಲ್ಲ ಹೇಳಿ. ಹೊಸ ಡ್ರೆಸ್‌ ಅದರಲ್ಲೂ ಸೂಟು ಬೂಟ್‌, ಟೈ ಧರಿಸಿ ಶರ್ಟ್‌ ಮೇಲೊಂದು ವೈಸ್ಟ್‌ ಕೋಟ್‌ ಹಾಕಿದರೆ ಅದರ ಗಾಂಭೀರ್ಯವೇ ಬೇರೆ.

ಇತ್ತೀಚಿನ ದಿನಗಳಲ್ಲಿ ವೆಸ್ಟ್‌ ಕೋಟ್‌ ಧಿರಿಸುವುದು ಟ್ರೆಂಡ್‌ ಆಗಿ ಬಿಟ್ಟಿದೆ. ಮದುವೆ ಸಮಾರಂಭಗಳಲ್ಲಂತೂ ಶರ್ಟ್‌ ಮೇಲೊಂದು ವೈಸ್ಟ್‌ ಕೋಟ್‌ ಧರಿಸುವ ಮಂದಿ ಹೆಚ್ಚು. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸಗಳ ವೈಸ್ಟ್‌ ಕೋಟ್‌ ಇದೆ. ಅಂದಹಾಗೆ ವೈಸ್ಟ್‌ ಕೋಟ್‌ಗಳು ಮಾಮೂಲಿ ಕೋಟಿಗಿಂತ ಭಿನ್ನವಾದುದು. ಒಂದು ಕಾಲದಲ್ಲಿ ಶ್ರೀಮಂತ ಧಿರಿಸಾಗಿದ್ದ ಈ ಕೋಟ್‌ ಇಂದು ಸಾಮಾನ್ಯ ಮಂದಿಯೂ ಬಳಕೆ ಮಾಡುತ್ತಿದ್ದಾರೆ.

ಕೋಟ್‌ಗಳಲ್ಲಿ ಅನೇಕ ವಿಧ
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮಕ್ಕಳು ಬಳಸುವಂತಹ ವೆಸ್ಟ್‌ ಕೋಟ್‌ ಗಳಿಗೂ ಬೇಡಿಕೆ ಹೆಚ್ಚಿದೆ. ಕೆಲವೊಂದು ಶಾಲಾ- ಕಾಲೇಜುಗಳಲ್ಲಿ ಸಮವಸ್ತ್ರದ ಜತೆಗೆ ಕೋಟ್‌ ಧರಿಸುವ ಕ್ರಮವಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳ ಫೆವರೇಟ್‌ ಆಗಿದೆ. ವೆಸ್ಟ್‌ ಕೋಟ್‌ನಲ್ಲಿ ಅನೇಕ ವಿಧಗಳಿದ್ದು ಅದರಲ್ಲಿ ಸಾಮಾನ್ಯವಾಗಿ ಬಳಸುವಂತಹದ್ದು ‘ದಿ ಕ್ಲಾಸಿಕ್‌ ವೆಸ್ಟ್‌ ಕೋಟ್‌’ ಈ ವೆಸ್ಟ್‌ ಕೋಟ್‌ನಲ್ಲಿ 6 ರಿಂದ 8 ಬಟನ್‌ಗಳಿರುತ್ತದೆ. ಈ ಕೋಟ್‌ನ ಹಿಂದಿನ ಬದಿಯಲ್ಲಿ ಪಟ್ಟಿ ಇದ್ದು, ಇದರಿಂದಾಗಿ ಫಿಟ್‌ ಆಗಿ ಕಾಣುತ್ತದೆ. ಇದು ಸಾಂಪ್ರದಾಯಿಕ ಉಡುಗೆಯಾಗಿದೆ.

‘ಡೊನೆಗಲ್‌ ಟ್ವೀಡ್‌’ ಮಾದರಿಯ ವೆಸ್ಟ್‌ ಕೋಟ್‌ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಕೋಟ್‌ ಧರಿಸಲು ತುಂಬಾ ಹಗುರವಾಗಿದೆ. ಕೋಟ್‌ ಪೂರ್ತಿ ಒಂದೇ ಬಣ್ಣದಿಂದ ಹರಡಿದ್ದು ಉತ್ತಮ ಲುಕ್‌ ಕೊಡುತ್ತದೆ. ಸಾಮಾನ್ಯವಾಗಿ ಬೇಸಗೆ ಸಮಯದಲ್ಲಿ ಈ ಕೋಟ್‌ ಗಳನ್ನು ಹೆಚ್ಚಾಗಿ ಬಳಸಬಹುದು. ಡಿನ್ನರ್‌, ಔತಣ ಕೂಟ ಸೇರಿದಂತೆ ರಾತ್ರಿ ನಡೆಯಲು ಶುಭ ಸಮಾರಂಭಕ್ಕೆ ಈ ಕೋಟ್‌ ಕಳೆ ನೀಡುತ್ತದೆ.

ವಿಂಡೋಪೇನ್‌ ಎಂಬ ಮಾದಿರಿಯ ವೇಸ್ಟ್‌ ಕೋಟ್‌ನ್ನು ಸಾಂಪ್ರದಾಯಿಕ ಬಟ್ಟೆಗ ಮಾದಿರಿಗೆಂದು ತಯಾರಿಸಿದಂತಿದೆ. ಸಾಮಾನ್ಯವಾಗಿ ಪ್ಲೈನ್‌ ಶರ್ಟ್‌ಗೆ ಚೆಕ್ಸ್‌ ವೇಸ್ಟ್‌ ಕೋಟ್‌ ಧಿರಿಸಲು ನಯವಾಗಿದ್ದು, ಉತ್ತಮ ನೋಟ ನೀಡುತ್ತದೆ. ಇವಿಷ್ಟೇ ಅಲ್ಲದೆ, ದಿ ಪೀಕ್‌ ಪ್ಯಾಪಲ್‌ ವೈಸ್‌ ಕೋಟ್‌, ದಿ ಡಬಲ್‌ ಬ್ರೆಸ್ಟೆಡ್‌ ಕೋಟ್‌, ಶವಲ್‌ ಕಾಲರ್‌ ಕೋಟ್‌, ದಿ ಲೋ ಕಟ್‌ ಫಾರ್ಮಲ್‌ ಕೋಟ್‌, ಲೆದರ್‌ ವೆಸ್ಟ್‌ ಕೋಟ್‌ ಸೇರಿದಂತೆ ವಿವಿಧ ಬಗೆಯ ಕೋಟ್‌ಗಳು ಮಾರುಕಟ್ಟೆಯಲ್ಲಿದೆ.

ಆನ್‌ಲೈನ್‌ನಲ್ಲಿ ಹೆಚ್ಚಿನ ಕಲೆಕ್ಷನ್‌
ಸಾಮಾನ್ಯ ಮಾರುಕಟ್ಟೆಗಳಿಗಿಂತ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಕಲೆಕ್ಷನ್‌ಗಳ ವೈಸ್ಟ್‌ ಕೋಟ್‌ಗಳು ಲಭ್ಯವಿದೆ. ಅಲ್ಲದೆ ಸಾಮಾನ್ಯವಾಗಿ 1,000 ರೂ.ನಿಂದ 20,000ಕ್ಕಿಂತ ಹೆಚ್ಚು ಬೆಲೆಯ ಕೋಟ್‌ಗಳು ಕೂಡ ಲಭ್ಯವಿವೆ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ವೆಸ್ಟ್‌ ಕೋಟ್‌ ಖರೀದಿಗೆ ಆನ್‌ಲೈನ್‌ ತಾಣವನ್ನು ಆಯ್ಕೆ ಮಾಡುತ್ತಾರೆ.

1866ರ ದಿರಿಸು
ವೈಸ್ಟ್‌ ಕೋಟ್‌ ದಿರಿಸಿಗೆ ಅನೇಕ ವರ್ಷಗಳ ಇತಿಹಾಸವಿದೆ. ಅಮೆರಿಕ ಭಾಷೆಯ ವೈಸ್ಟ್‌ ಎಂಬ ಪದದಿಂದ ಬಂದಿದೆ. ಇಂಗ್ಲಂಡ್‌, ಸ್ಕಾಟ್ಲೆಂಡ್‌ ಮತ್ತು ಐರೆಲಂಡ್‌ ದೇಶಗಳಲ್ಲಿ 1866ರಲ್ಲಿ ಬ್ರಿಟಿಷ್‌ ರಾಜಪ್ರಭುತ್ವದ ಸಮಯದಲ್ಲಿ ಅಲ್ಲಿನ ದಿರಿಸಾಗಿ ವೈಸ್ಟ್‌ ಕೋಟ್‌ ಉಪಯೋಗಕ್ಕೆ ಬಂತು. ಬಳಿಕ ಭಾರತ ಸೇರಿದಂತೆ ಇನ್ನಿತರ ದೇಶಗಳಿಗೆ ಬಂತು. 

ಬೇಡಿಕೆ ಇದೆ
ಇತ್ತೀಚಿನ ದಿನಗಳಲ್ಲಿ ವೆಸ್ಟ್‌ ಕೋಟ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದರೂ, ಹೆಚ್ಚಿನ ಮಂದಿ ಆನ್‌ಲೈನ್‌ನಲ್ಲಿ ಖರೀದಿ ಮಾಡುತ್ತಾರೆ. ಸಾಮಾನ್ಯವಾಗಿ ಕ್ಯಾಶುವಲ್‌ ಪ್ಯಾಂಟ್‌, ಶರ್ಟ್‌, ಟೈ ದಿರಿಸಿಗೆ ವೈಸ್ಟ್‌ ಕೋಟ್‌ ಹೊಂದುತ್ತದೆ. ಅಲ್ಲದೆ ಒಳ್ಳೆಯ ಲುಕ್‌ ನೀಡುತ್ತದೆ.
– ಪ್ರವೀಣ್‌ ಚೌಧರಿ,
ಅಂಗಡಿ ಮಾಲಕ

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.