CONNECT WITH US  

ಶ್ರಾವಣ ಮಾಸ ಮನೆ ಹೊಸ್ತಿಲಿಗೆ ಶೃಂಗಾರ ಕಾವ್ಯ 

ಶ್ರಾವಣ ಮಾಸ ಎಂದರೆ ಪ್ರತಿ ಮನೆಯಲ್ಲೂ ಸಂಭ್ರಮ ನೆಲೆಯಾಗುತ್ತದೆ. ಒಂದೆಡೆ ಸಾಲು ಸಾಲು ಹಬ್ಬಗಳ ಸಂಭ್ರಮವಾದರೆ ಮತ್ತೊಂದೆಡೆ ಮನೆಯೊಳಗೆ ಸಾಂಪ್ರದಾಯಿಕ ಆಚರಣೆಗಳು ಗರಿಗೆದರ ತೊಡಗುತ್ತದೆ. ಹಿಂದೆ ಪ್ರತಿ ಮನೆಯಲ್ಲೂ ಮಹಿಳೆಯರು ಮುಂಜಾನೆ ಬೇಗ ಎದ್ದು ಮನೆಯ ಹೊಸ್ತಿಲನ್ನು ಶುಚಿಗೊಳಿಸಿ, ರಂಗವಲ್ಲಿ ಇಡುತ್ತಿದ್ದರು. ಆದರೆ ಈಗ ನಗರ ಬದುಕಿಗೆ ಹೊಂದಿಕೊಂಡಿರುವ ಮಹಿಳೆಯರು ಶ್ರಾವಣ ಮಾಸದಲ್ಲಷ್ಟೇ ಇದನ್ನು ಮಾಡುತ್ತಿರುವುದು ಸಾಂಪ್ರದಾಯಿಕ ಆಚರಣೆಗೆ ಹೊಸ ಮೆರುಗು ತಂದು ಕೊಟ್ಟಿದೆ.

ಹೊಸ್ತಿಲ ಶೃಂಗಾರಕ್ಕೆ ಆದ್ಯತೆ
ಶ್ರಾವಣ ಮಾಸದಲ್ಲಿ ಪ್ರತಿ ದಿನ ಮನೆಯ ಮುತ್ತೆ$çದೆಯರು ಮನೆಯ ಹೊಸ್ತಿಲನ್ನು ಶುಚಿಗೊಳಿಸಿ, ವಿವಿಧ ಸಾಮಗ್ರಿಗಳಿಂದ ಶೃಂಗರಿಸುತ್ತಾರೆ. ಮುಖ್ಯವಾಗಿ ಇಲ್ಲಿ ಹಣ್ಣು, ತರಕಾರಿ, ವಿವಿಧ ಹೂವು, ಎಲೆಗಳು, ರಂಗೋಲಿ ಬಣ್ಣಗಳೇ ವಿಶೇಷ ಪ್ರಾಧನ್ಯತೆ ಪಡೆದುಕೊಳ್ಳುತ್ತದೆ.

ರಂಗವಲ್ಲಿಯ ಅಲಂಕಾರ
ವಿವಿಧ ಬಣ್ಣ ಅಥವಾ ಹೂವುಗಳಿಂದ ಹೊಸ್ತಿಲಲ್ಲಿ ರಂಗೋಲಿ ಬರೆದು ಮುಂಬಾಗಿಲು, ದಾರಂದಕ್ಕೆ ತಳಿರು ತೋರಣ, ನೈಸರ್ಗಿಕವಾಗಿ ಸಿಗುವ ಹಣ್ಣು, ತರಕಾರಿ, ಹೂವುಗಳನ್ನಿಟ್ಟು ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ರೂಢಿಯಲ್ಲಿದೆ.  ಶ್ರಾವಣ ಮಾಸದಲ್ಲಿ ಮನೆಯ ಸುತ್ತ ಮುತ್ತ ಸಿಗುವ ವಿವಿಧ ಹೂವು, ಎಲೆಗಳಿಂದಲೇ ಹೊಸ್ತಿಲನ್ನು ಶೃಂಗರಿಸುವುದರಿಂದ ಮನೆಗೆ ಸಂಭ್ರಮದ ಜತೆಗೆ ಸಾಂಪ್ರದಾಯಿಕ ಲುಕ್‌ ಕೂಡ ಕೊಡುತ್ತದೆ.

ಧನ್ಯಾ ಬಾಳೆಕಜೆ

ಇಂದು ಹೆಚ್ಚು ಓದಿದ್ದು

Trending videos

Back to Top