ಪರಿಸರ ಸ್ನೇಹಿ ಡ್ರೋನ್‌

Team Udayavani, Sep 2, 2018, 12:59 PM IST

2-september-15.jpg

ಆನ್‌ ಲೈನ್‌ ಶಾಪಿಂಗ್‌ ಆರಂಭವಾದ ಬಳಿಕ ಆಹಾರ, ಔಷಧ ಸಹಿತ ಎಲ್ಲವನ್ನೂ ಈಗ ನಾವಿದ್ದ ಸ್ಥಳಕ್ಕೆ ತರಿಸಿಕೊಳ್ಳಬಹುದು. ಟ್ರಾಫಿಕ್‌ ಕಿರಿಕಿರಿಯಿಲ್ಲದೆ, ಹೊಗೆ, ಧೂಳು ಮೆತ್ತಿಕೊಳ್ಳುವ ಆತಂಕವಿಲ್ಲದೆ, ಇಂಧನವನ್ನೂ ಉಳಿಸಿ ಹೊಸ ರೀತಿಯ ಪರಿಸರ ಸ್ನೇಹಿ ಸೇವೆಯೊಂದು ಈಗ ಚರ್ಚೆಯಲ್ಲಿದೆ ಅದುವೇ ಡ್ರೋನ್‌ ಪರಿಸರ ಸ್ನೇಹಿ ಸ್ಮಾರ್ಟ್‌ ಸೇವೆ. ಫೋಟೋ, ವೀಡಿಯೋ ಶೂಟಿಂಗ್‌, ಮಕ್ಕಳ ಆಟಿಕೆಗಷ್ಟೇ ಸೀಮಿತವಾಗಿದ್ದ ಡ್ರೋನ್‌ ಅನ್ನು ಇನ್ನು ಮುಂದೆ ನಗರದ ಸಮಗ್ರ ಚಿತ್ರಣವನ್ನು ಪಡೆಯಲು, ಕಾಮಗಾರಿ ಪರಿಶೀಲಿಸಲು, ಸರ್ವೆ ಕಾರ್ಯಗಳಿಗಾಗಿಯೂ ಬಳಸಬಹುದು. ಅಲ್ಲದೇ ತುರ್ತು ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಲು ಬಳಸಬಹುದಾಗಿದೆ.

ಆನ್‌ ಲೈನ್‌ ಶಾಪಿಂಗ್‌ ನಂತೆ ಡ್ರೋನ್‌ ಮೂಲಕ ಮನೆ ಬಾಗಿಲಿಗೆ ಆರ್ಡರ್‌ ಮಾಡಿದ ವಸ್ತುವನ್ನು ತಲುಪಿಸಲು ಸಾಧ್ಯ. ಇದರಿಂದ ಮಾಲಿನ್ಯವೂ ಕಡಿಮೆ, ಸಮಯವೂ ಉಳಿತಾಯವಾಗುತ್ತದೆ ಎನ್ನುವ ದೃಷ್ಟಿಯಿಂದ ಇಂಗ್ಲೆಂಡ್‌, ಝರಿಚ್‌, ಸ್ವಿಝರ್‌ ಲ್ಯಾಂಡ್‌, ರೈಕಾjವಿಕ್‌, ಐಲ್ಯಾಂಡ್‌ಗಳಲ್ಲಿ ಈಗಾಗಲೇ ಈ ಪ್ರಯೋಗ ಆರಂಭಗೊಂಡಿದೆ.

ಮಹಾನಗರಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅವರಿಗೆ ತುರ್ತು ಚಿಕಿತ್ಸೆ ನೀಡುವುದು ಕಷ್ಟ. ಇದರಿಂದ ಸಾಕಷ್ಟು ಮಂದಿ ಈಗಾಗಲೇ ಪ್ರಾಣ ಕಳೆದುಕೊಂಡವರು ಇದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸಲು ಈ ಡ್ರೋನ್‌ ಡೆಲಿವರಿ ವ್ಯವಸ್ಥೆ ಸಹಕಾರಿಯಾಗಿದೆ. ಇದರ ಮುಖ್ಯ ಧ್ಯೇಯವೇ ಇದು. ವಿದೇಶಗಳಲ್ಲಿ ಹೆಚ್ಚಾಗಿ ಇದನ್ನೇ ಉದ್ದೇಶವಾಗಿಟ್ಟುಕೊಂಡು ಬಳಸುವ ಪ್ರಯತ್ನ ಮಾಡಲಾಗುತ್ತಿದೆ.

ಬಹೂಪಯೋಗಿ
ಡ್ರೋನ್‌ ಮಕ್ಕಳ ಆಟದ ವಸ್ತುವಲ್ಲ. ಏಕೆಂದರೆ ಹೆಚ್ಚಿನವರಲ್ಲಿ ಡ್ರೋನ್‌ ಬಗ್ಗೆ ತಪ್ಪು ಕಲ್ಪನೆಗಳಿವೆ. ಆದರೆ ಅದರ ಸರಿಯಾದ ಉಪಯೋಗವನ್ನು ತಿಳಿದರೆ ಅದರ ಆವಶ್ಯಕತೆ ಅರಿವಾಗುತ್ತದೆ. ಈಗಾಗಲೇ ಹಲವೆಡೆ ಡ್ರೋನ್‌ ಅನ್ನು ಸರ್ವೆ ಕಾರ್ಯಗಳಿಗಾಗಿ, ಸೈಟ್‌ಗಳ ಕಾಮಗಾರಿ ವೀಕ್ಷಿಸಲು ಉಪಯೋಗಿಸಲಾಗುತ್ತಿದೆ.

ಡ್ರೋನ್‌ ಹಾಗೂ ವ್ಯಾನ್‌ ಮೂಲಕ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಸಾಧ್ಯವಿದೆ. ದೊಡ್ಡ ಫ್ಯಾಟ್‌ ಅಥವಾ ಅಪಾರ್ಟ್‌ಮೆಂಟ್‌ಗಳಿಗೆ ಹೋಗಿ ಮನೆ ಮನೆಗೆ ಕೊಡುವುದಕ್ಕಿಂತ ಈ ಡ್ರೋನ್‌ ಮೂಲಕ ಡೆಲಿವರಿ ಮಾಡುವುದು ಸುಲಭ. ಪಾರ್ಸೆಲ್‌ ತೆಗೆದುಕೊಳ್ಳಲು ವ್ಯಾನ್‌ಗೆ ಬಂದರಾಯಿತು. ಈ ರೀತಿಯಲ್ಲೂ ಹಲವು ಪ್ರಯೋಗಗಳು ನಡೆಯುತ್ತಿವೆ.

ಒಟ್ಟಾರೆ ಈ ಬಗ್ಗೆ ಹಲವು ಸಂಶೋಧನೆ ನಡೆಯುತ್ತಿದ್ದು. ಈ ಸೇವೆ ಯಲ್ಲಿ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಸ್ವಲ್ಪ ಮಟ್ಟಿಗೆ ದುಬಾರಿಯಾದರೂ ಮಹಾನಗರಗಳಿಗೆ ಇದು ಉಪಯುಕ್ತವೆನಿಸುವ ಸೇವೆಯಾಗಲಿದೆ.

 ಭರತ್‌ ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.