ಮುಖವಾಡದ ಹಿಂದಿದೆ  ಸತ್ಯ

Team Udayavani, Oct 15, 2018, 2:49 PM IST

15-october-12.gif

ಬದುಕಿನ ದಾರಿ ಸ್ಪಷ್ಟವಾಗಿದೆ ಎಂದುಕೊಳ್ಳುತ್ತೇವೆ. ಆದರೆ ಸ್ಪಷ್ಟತೆಯಲ್ಲಿಯೂ ಅಸ್ಪಷ್ಟತೆಯ ನೆರಳು ಕಾಣಿಸಿಕೊಳ್ಳುತ್ತದೆ. ಅಂತೆಯೇ ಪ್ರತಿಯೊಬ್ಬರಿಗೂ ಒಂದೊಂದು ಮುಖವಿದ್ದಂತೆ ನೂರಾರು ಮುಖವಾಡಗಳಿರುತ್ತವೆ. ಒಂದು ಮುಖ ಬಾಹ್ಯ ರೂಪದಲ್ಲಿ ಶಾರೀರಿಕವಾಗಿದ್ದರೆ, ಮುಖವಾಡಗಳು ಹತ್ತಾರು ಸಂದರ್ಭಗಳಲ್ಲಿ ನೂರಾರು ರೀತಿಯಲ್ಲಿ ಹೊರ ಬರುತ್ತವೆ.

ಮುಖವಾಡಗಳು ಬೇಕೇ?, ಬೇಡವೇ ? ಎಂಬ ಪ್ರಶ್ನೆಗಳು ತೀರಾ ವೈಯಕ್ತಿಕವಾದರೂ ಇದರಲ್ಲಿ ಇನ್ನೊಬ್ಬರೂ ಸೇರಿಕೊಳ್ಳುವುದರಿಂದ ಒಂದಷ್ಟು ಯೋಚನೆ, ಭವಿಷ್ಯದಲ್ಲಿ ಉಂಟಾಗುವ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಯಾವ ಮುಖವಾಡ ಧರಿಸಬೇಕು ಎಂಬ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಅಪಾಯ ಖಂಡಿತ.

ಮುಖವಾಡಗಳು ಮನದ ಕನ್ನಡಿಯಿದ್ದಂತೆ. ನಾವು ಹೇಗಿರುತ್ತೇವೆ ಎಂದು ತಿಳಿಯುವುದೇ ಈ ಮುಖವಾಡದ ಭಾವಗಳನ್ನು ವ್ಯಕ್ತಪಡಿಸುವ ಮೂಲಕ. ಮುಖವಾಡ ಪ್ರದರ್ಶನ ಇನ್ನೊಂದು ತೆರನಾಗಿರುತ್ತದೆ. ಇದು ವ್ಯಕ್ತಿ ವಿಭಿನ್ನತೆಯನ್ನೂ ಪಡೆದಿದೆ.

ಸುಳ್ಳು ಹೇಳಬೇಕಾದರೆ ಮಾತಿನಲ್ಲಿ, ಮುಖದಲ್ಲಿ ಸತ್ಯದ ನೆರಳು ಹುಟ್ಟಿಸುವುದು, ಇನ್ನೊಬ್ಬರನ್ನು ಕಂಡರೆ ಆಗದಿದ್ದರೂ ಅವರು ಎದುರು ಬಂದಾಗ ನಗುವುದು, ಇಷ್ಟವಿಲ್ಲದಿದ್ದರೂ ಹಸ್ತಲಾಘವ ನೀಡುವುದು ಹೀಗೆ ಒಳಗೊಂದು ಹೊರಗೊಂದು ಭಾವನೆಗಳ ಹೊರಸೂಸುವಿಕೆ ಕೆಲವರಿಗೆ ಅನಿವಾರ್ಯವಾಗಿರಬಹುದು, ಇನ್ನು ಕೆಲವರಿಗೆ ನಿತ್ಯ, ಸಹಜ ಸ್ವಭಾವವೇ ಆಗಿ ಬಿಡಬಹುದು. ತೀರಾ ಹತ್ತಿರದವರು ಇಂಥ ವರ್ತನೆ ತೋರಿದರೆ ವಿಶ್ವಾಸ ದ್ರೋಹ ಎಂದೆನಿಸಿಕೊಳ್ಳುತ್ತದೆ. ಆದರೆ ಶಿಕ್ಷಕರು, ಹಿರಿಯರ ಎದುರು ಅತಿಯಾಗಿ ವಿಧೇಯನಾಗಿದ್ದೇನೆ ಎಂದು ಪ್ರದರ್ಶಿಸುವುದು ಇನ್ನೊಂದು ರೀತಿಯಲ್ಲಿ ಅತಿರೇಕತೆಯಾಗಿ ಬಿಡುತ್ತದೆ.

ಮುಖವಾಡ ಇದು ಶಾಶ್ವತವಾಗಿ ಉಳಿಯಲು ಸಾಧ್ಯವೇ ಇಲ್ಲ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ತೊಟ್ಟುಕೊಳ್ಳಬೇಕು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು, ಯಾವುದೇ ಮಾರ್ಗವಿಲ್ಲ ಎಂದಾಗ ಮಾತ್ರ ಇನ್ನೊಬ್ಬರಿಗೆ ತೊಂದರೆಯಾಗದ ರೀತಿಯಲ್ಲಿ ತೊಟ್ಟುಕೊಳ್ಳಬೇಕು. ನಮ್ಮ ನಡೆ ನುಡಿ ಶುದ್ಧವಾಗಿದ್ದರೆ, ಅದನ್ನು ಬಿಚ್ಚಿಡುವ ಧೈರ್ಯ ಪ್ರದರ್ಶಿಸಿದರೆ ಇಂಥ ಮುಖವಾಡಗಳ ಅನಿವಾರ್ಯತೆಯೇ ನಮಗೆ ಬರುವುದಿಲ್ಲ.

ವ. ಉಮೇಶ್‌ ಕಾರಂತ, ಮಂಗಳೂರು

ಟಾಪ್ ನ್ಯೂಸ್

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

15

ವೃದ್ಧಾಶ್ರಮ ಸ್ವಚ್ಛತೆ ಬಂದು ಮಾಲೀಕರ ಮನೆಗೇ ಕನ್ನ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.