ಮನೆಯ ಸೌಂದರ್ಯ ಇಮ್ಮಡಿಗೆ ನೆಲದ ಹಾಸು

Team Udayavani, Nov 16, 2018, 12:58 PM IST

16-november-10.gif

ಕಾಲ ಬದಲಾದಂತೆ ಅದಕ್ಕೆ ತಕ್ಕುದಾಗಿ ಜನರು ತಮ್ಮ ಆಸಕ್ತಿ, ಜೀವನ ಶೈಲಿಗಳನ್ನು ಅದಕ್ಕೆ ಪೂರಕವಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಆಧುನಿಕತೆಯ ಮೋಹ ಹೆಚ್ಚಾದಂತೆ ವ್ಯಕ್ತಿ ತನ್ನ ಅಲಂಕಾರಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಮನೆಯ ಅಲಂಕಾರಕ್ಕೂ ನೀಡುತ್ತಿದ್ದಾನೆ.

ಮನೆ ಶುಚಿಯಾಗಿ ಸುಂದರವಾಗಿ ಇರಿಸಿಕೊಳ್ಳುವುದರ ಜತೆಗೆ ಇತರರನ್ನು ಆಕರ್ಷಿಸುವ ಬಣ್ಣಗಳ ಮೆರುಗು ತುಂಬಲು ವಿಶೇಷ ಪ್ರಾಧ್ಯಾನ್ಯತೆ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಗಾಢ ಬಣ್ಣಗಳು ಒಳಾಂಗಣ ವಿನ್ಯಾಸದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಇದರೊಂದಿಗೆ ಅದಕ್ಕೆ ತಕ್ಕುದಾಗಿ ಇಂಟಿರೀಯರ್‌ಗಳನ್ನು ಅಳವಡಿಸಿ ಮನೆಯನ್ನು ಇನ್ನಷ್ಟು ಸುಂದರಗೊಳಿಸುವ ಮೋಹ ಹೆಚ್ಚಾಗುತ್ತಿದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ.

ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ನೆಲಕ್ಕೆ ಟೈಲ್ಸ್‌ ಸಹಿತ ಪರ್ಯಾಯವಾಗಿ ಹಲವು ನೆಲಸ ಹಾಸುಗಳನ್ನು ಬಳಸಲಾಗುತ್ತದೆ. ಇದು ದೀರ್ಘ‌ ಬಾಳಿಕೆ, ಮನೆಗೆ ಹೆಚ್ಚಿನ ಸೌಂದರ್ಯವನ್ನು ನೀಡುತ್ತದೆ ಎಂಬ ಕಾರಣಕ್ಕೆ ಮನೆಗೆ ವಿವಿಧ ಬಗೆಯ ನೆಲಹಾಸುಗಳನ್ನು ಬಳಸಲಾಗುತ್ತದೆ. ಇದರಲ್ಲಿ ಬಟ್ಟೆಯ ನೆಲಹಾಸುಗಳು ಹಾಗೂ ಕಲ್ಲಿನ ನೆಲಹಾಸು ಹೆಚ್ಚು ಜನಪ್ರಿಯವಾಗಿದೆ. ತಮ್ಮ ಮನೆಯ ಸೌಂದರ್ಯ ಹಾಗೂ ಬಜೆಟ್‌ಗೆ ಅನುಗುಣವಾಗಿ ನೆಲಹಾಸುಗಳ ಆಯ್ಕೆ ಮಾಡಲಾಗುತ್ತದೆ.

ಮನೆಯ ನೆಲಕ್ಕೆ ನಾನಾ ವಿಧದ ಹಾಸುಗಳನ್ನು ಹಾಕಲಾಗುತ್ತದೆ. ಇವು ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಅದರಲ್ಲೂ ನೈಸರ್ಗಿಕ ಕಲ್ಲುಗಳಿಂದ ಮಾಡಿದ ಹಾಸು ತನ್ನದೇ ಆದ ಅಂದವನ್ನು ಹೊಂದಿರುತ್ತದೆ. ಇವು ನೋಡಲು ಸ್ಟೈಲಿಶ್‌ ಆಗಿರುವುದರ ಜತೆಗೆ, ಮನೆಯನ್ನು ಕೂಲ್‌ ಆಗಿ ಇಡಲು ನೆರವಾಗುತ್ತದೆ. ಇದರ ನಿರ್ವಹಣೆ ಕೂಡ ತುಂಬಾ ಸುಲಭ ಹಾಗೂ ಸರಳ. ದೀರ್ಘ‌ ಕಾಲ ಬಾಳಿಕೆ ಮತ್ತು ಕಡಿಮೆ ಬೆಲೆ ಕಲ್ಲಿನ ಫ್ಲೋರಿಂಗ್‌ನ ಮತ್ತೂಂದು ವಿಶೇಷ ಅನುಕೂಲತೆಯಾಗಿದೆ.

ವಿವಿಧ ಬಗೆಯ ಕಲ್ಲಿನ ನೆಲಹಾಸುಗಳು
ಸುಣ್ಣದ ಕಲ್ಲು ಅಥವಾ ಲೈಮ್‌ ಸ್ಟೋನ್‌, ದೀರ್ಘ‌ ಬಾಳಿಕೆಯ ಜತೆಗೆ ಕಡಿಮೆ ಬೆಲೆಗೆ ದೊರೆಯುವ ಸ್ಲೇಟ್‌, ಉಳಿದ ಎಲ್ಲಾ ಕಲ್ಲು ಹಾಸಿಗಿಂತ ಬೆಲೆ ಹೆಚ್ಚಿದ್ದರೂ ಬಹು ಬೇಡಿಕೆಯಲ್ಲಿರುವ ಮಾರ್ಬಲ್‌, ಗ್ರಾನೈಟ್‌ ನೆಲಹಾಸುಗಳ ಕಡೆಗೆ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ.

ಮನೆಯ ನೆಲಗಳಲ್ಲಿ ಕಾರ್ಪೆಟ್ ಗಳ ಕಮಾಲ್‌
ಕಲ್ಲಿನ ನೆಲಹಾಸಿನಂತೆಯೇ ಮನೆಯ ನೆಲಕ್ಕೆ ಇನ್ನಷ್ಟು ಸೌಂದರ್ಯ ನೀಡುವುದು ಕಾರ್ಪೆಟ್ ಗಳು. ಲಕ್ಷಾಂತರ ರೂಪಾಯಿ ಬೆಲೆಬಾಳುವ ಅದ್ದೂರಿ ಕಸೂತಿಯ ನೆಲಹಾಸುಗಳ ಕಡೆಗೂ ಜನರ ಒಲವಿರುತ್ತದೆ. ದೇಶದ ಉತ್ತರಭಾಗಗಳಲ್ಲಿ ಹೆಚ್ಚಾಗಿ ಚಳಿ ಹೆಚ್ಚಿರುವ ಪ್ರದೇಶಗಳಲ್ಲಿ ಕಾರ್ಪೆಟ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕಾರ್ಪೆಟ್ ಗಳಲ್ಲೇ ಊಟ ತಿಂಡಿ ಮಾಡುತ್ತಾರೆ. ಆ ಕಾರಣಕ್ಕಾಗಿಯೇ ಸೋಫಾದಷ್ಟೇ ಕಾರ್ಪೆಟ್ ಗಳ ಸ್ವತ್ಛತೆಯ ಕಡೆಗೂ ಗಮನ ನೀಡಲಾಗುತ್ತದೆ. ನೆಲಹಾಸುಗಳನ್ನು ಎಲ್ಲಿ ಬಳಸಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇರಬೇಕು. ಮುಖ್ಯವಾಗಿ ಮನೆಯ ಹಾಲ್‌, ಬೆಡ್‌ ರೂಂ ಅಥವಾ ಉಳಿದ ರೂಮುಗಳಿಗೋ ಎಂಬುದನ್ನು ಮೊದಲು ಇತ್ಯರ್ಥಪಡಿಸಿಕೊಳ್ಳಬೇಕು. ಯಾಕೆಂದರೆ ಎಲ್ಲೆಂದರಲ್ಲಿ ಬಳಸಿದರೆ ನೋಡಲು ಸುಂದರವಾಗಿ ಕಾಣಿಸಿಕೊಳ್ಳುವುದಿಲ್ಲ.

ನೆಲಹಾಸು ಖರೀದಿಯಲ್ಲಿರಲಿ ಎಚ್ಚರ
ಮನೆಯ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ನೆಲಹಾಸುಗಳನ್ನು ಬಳಸಬೇಕು ಎಂದು ನಿರ್ಧರಿಸುವುದು ಉತ್ತಮ ವಿಷಯ . ಆದರೆ ನೆಲಹಾಸುಗಳು ದುಬಾರಿಯಾಗಿರುವುದರಿಂದ ಖರೀದಿಸುವ ಮುನ್ನ ಕೊಂಚ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಬಣ್ಣ, ವಸ್ತುವಿನ ಗುಣಮಟ್ಟ ಪರಿಶೀಲಿಸಿಕೊಳ್ಳಬೇಕು. ಕಡಿಮೆ ಬೆಲೆಯ ನೆಲಹಾಸುಗಳನ್ನು ತಂದರೆ ತೊಳೆಯಲು ಕಷ್ಟವಾಗಬಹುದು. ಹಾಗಾಗಿ ನೆಲಹಾಸುಗಳನ್ನು ಖರೀದಿಸಲು ಹೋಗುವ ಮುನ್ನ ಸ್ವಲ್ಪ ಹೋಂವರ್ಕ್‌ ಮಾಡಲೇಬೇಕು. ಯಾವ ರೀತಿಯದ್ದು ತೆಗೆದುಕೊಂಡರೆ ದೀರ್ಘ‌ ಬಾಳಿಕೆ ಬರಬಲ್ಲದು ಹಾಗೂ ಸೊಗಸಾಗಿ ಕಾಣಬಲ್ಲದು ಎಂಬಿತ್ಯಾದಿ ಅಂಶಗಳನ್ನು ಗಮನಿಸಬೇಕು. 

ಕಲ್ಲಿನ ನೆಲಹಾಸಿನಿಂದ ತಂಪಿನ ವಾತಾವರಣ
ಮನೆಯ ಸೌಂದರ್ಯ ಹೆಚ್ಚಿಸಲು ನೆಲಹಾಸು ಬಳಸುವುದು ಸಾಮಾನ್ಯ. ಆದರೆ ಅದರಿಂದ ಸೌಂದರ್ಯ ಹೆಚ್ಚಿಸುವುದರ ಜತೆಗೆ ನಮ್ಮ ಆರೋಗ್ಯಕ್ಕೂ ಹಿತರಕವೆನಿಸಬೇಕು. ಹಾಗಾಗಿ ನಿಸರ್ಗ ಸಹಜ ಬಣ್ಣ ಮತ್ತು ತಂಪಿನ ವಾತಾವರಣ ನಿರ್ಮಿಸುವ ಮೂಲಕ ಮನೆಯ ಸೌಂದರ್ಯವನ್ನು ಹೆಚ್ಚಿಸಲು ಕಲ್ಲಿನ ನೆಲ ಹಾಸು ನೆರವಾಗುತ್ತವೆ. ಪ್ರತಿಯೊಂದು ನಮೂನೆ ಕಲ್ಲಿನ ನೆಲ ಹಾಸು ಕೂಡ ತನ್ನದೇ ಆದ ಲಾಭಗಳನ್ನು ಹೊಂದಿದೆ. 

 ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.