ರಾಜಕಾಲುವೆಗಳ ಸುಸ್ಥಿತಿಗೆ ಸಮಗ್ರ ಕಾರ್ಯಯೋಜನೆ ರೂಪುಗೊಳ್ಳಲಿ

Team Udayavani, Oct 14, 2018, 12:43 PM IST

14-october-8.gif

ಸ್ಮಾರ್ಟ್‌ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ರಾಜಕಾಲುವೆಗಳ ಅಭಿವೃದ್ಧಿಗೂ ಪರಿಪೂರ್ಣ ಯೋಜನೆಯೊಂದು ರೂಪುಗೊಳ್ಳಬೇಕಿದೆ. ಇತ್ತೀಚಿನ ಮಹಾಮಳೆ ಮುಂಬರುವ ಅಪಾಯವನ್ನು ಮುಂಚಿತವಾಗಿಯೇ ಸೂಚಿಸಿದ್ದು ಈ ನಿಟ್ಟಿನಲ್ಲಿ ಈಗಲೇ ಎಚ್ಚೆತ್ತುಕೊಂಡು ಯೋಜನೆ ಅನುಷ್ಠಾನಗೊಳಿಸಿದರೆ ಭವಿಷ್ಯದಲ್ಲಿ ಸ್ವಚ್ಛ, ಸುಂದರ ನಗರವಾಗಿ ಬೆಳೆಯುವಲ್ಲಿ ರಾಜಕಾಲುವೆಗಳ ಪಾತ್ರವೂ ಪ್ರಮುಖವಾಗಲಿದೆ.

ಮಂಗಳೂರಿನ ರಾಜಕಾಲುವೆಗಳ ವಸ್ತುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿರುವ ಎನ್‌ಐಟಿಕೆ ತಜ್ಞರ ತಂಡ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದೆ. ರಾಜಕಾಲುವೆಗಳ ವಾಸ್ತವಿಕಾಂಶಗಳನ್ನು ತೆರೆದಿಟ್ಟು ಸುಧಾರಣೆಗೆ ಕೆಲವು ಶಿಫಾರಸ್ಸುಗಳನ್ನು ಮಾಡಿದೆ.  ಹೆದ್ದಾರಿಯ ಬದಿಯಲ್ಲಿರುವ ತೋಡುಗಳ ಅಗಲವನ್ನು ಕನಿಷ್ಠ 30 ಅಡಿ ಇರುವಂತೆ ನೋಡಿಕೊಳ್ಳಬೇಕು, ತೋಡಿನಲ್ಲಿ ತುಂಬಿರುವ ಗಿಡಗಂಟಿಗಳನ್ನು, ಹೂಳು ತೆರವುಗೊಳಿಸಬೇಕು ಮುಂತಾದ ಸಲಹೆಗಳನ್ನು ಮಾಡಿದೆ. ಕೆಲವು ಕಡೆ ತೋಡುಗಳು ಅತಿಕ್ರಮಣ ಆಗಿರುವುದರ ಬಗ್ಗೆ ಗಮನ ಸೆಳೆದಿದೆ.

ಉನ್ನತೀಕರಣಗೊಳ್ಳಲಿ
ಮಂಗಳೂರು ನಗರ ತ್ವರಿತಗತಿಯಲ್ಲಿ ಬೆಳೆದಿದೆ. ಇನ್ನಷ್ಟು ಬೆಳೆಯುತ್ತಿದೆ. ಜನದಟ್ಟನೆ ಹೆಚ್ಚುತ್ತಿದೆ. ಮನೆಗಳು, ವಸತಿ ಸಮುತ್ಛಯಗಳು ಯಥೇತ್ಛವಾಗಿ ನಿರ್ಮಾಣಗೊಂಡಿದೆ. ಹೊಸ ಬಡಾವಣೆಗಳು, ವಸತಿ ಸಮುತ್ಛಯಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಪೂರಕವಾಗಿ ರಾಜಕಾಲುವೆಗಳು ಉನ್ನತೀಕರಣಗೊಂಡಿಲ್ಲ. ಬದಲಿಗೆ ಮಳೆ ನೀರು ಹರಿದು ಹೋಗುತ್ತಿದ್ದ ಅನೇಕ ಮೂಲಗಳು ಮುಚ್ಚಿವೆ ಇಲ್ಲವೆ ಒತ್ತುವರಿಗಳು ನಡೆದಿವೆ.

ಈ ಹಿನ್ನೆಲೆಯಲ್ಲಿ ನಗರ ಬೆಳವಣಿಗೆಗೆ ಪೂರಕವಾಗಿ ಪ್ರಸ್ತುತ ಇರುವ ರಾಜಕಾಲುವೆಗಳು ಹಾಗೂ ಅದಕ್ಕೆ ಸೇರ್ಪಡೆಯಾಗುವ ಇತರ ಕಾಲುವೆಗಳನ್ನು ಮೇಲ್ದರ್ಜೆಗೇರಿಸಿ ಸುಸ್ಥಿತಿಯಲ್ಲಿ ಇಡಲು ಶಾಶ್ವತ ಕ್ರಮಗಳನ್ನು ಒಳಗೊಂಡು ಒಂದು ಕಾರ್ಯಯೋಜನೆ ಸಿದ್ಧಪಡಿಸುವುದು ಅಗತ್ಯವಾಗಿದೆ.

ಬೆಂಗಳೂರು ನಗರದಲ್ಲಿ ಇಂತದ್ದೇ ಕಾರ್ಯಯೋಜನೆ ಈಗಾಗಲೇ ಆರಂಭಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಕಾಲುವೆ ಹಾಗೂ ಮಳೆ ನೀರು ಹರಿದು ಹೋಗುವ ತೋಡುಗಳ ಒತ್ತುವರಿ ಹಾಗೂ ಅವ್ಯವಸ್ಥೆಯಿಂದಾಗಿ ಕೃತಕ ನೆರೆ ಸಮಸ್ಯೆಯಿಂದ ಪಾಠ ಕಲಿತಿರುವ ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ ( ಬಿಬಿಎಂಪಿ), ಬಿಡಿಎ ಇವುಗಳನ್ನು ಮೇಲ್ದರ್ಜೆಗೇರಿಸುವ ಯೋಜನೆ ರೂಪಿಸಿ ಹಂತಹಂತವಾಗಿ ಅನುಷ್ಠಾನಗೊಳಿಸುತ್ತಿದೆ.

ಸಮಸ್ಯೆಗಳ ಪುನರಾವರ್ತನೆ
ಮಂಗಳೂರು ನಗರದಲ್ಲಿ ಅತ್ತಾವರ, ಕಂಕನಾಡಿ, ಕುದ್ರೋಳಿ, ಬಳ್ಳಾಲ್‌ ಭಾಗ್‌, ಜೆಪ್ಪಿನಮೊಗರು, ಪಂಪ್‌ ವೆಲ್‌, ಕೊಟ್ಟಾರಚೌಕಿ, ಕೋಡಿಕಲ್‌, ಮಾಲೆಮಾರ್‌, ಉಜ್ಜೋಡಿ, ಜೆಪ್ಪು ಮಹಾಕಾಳಿಪಡ್ಪು, ಕೊಂಚಾಡಿ, ಪಾಂಡೇಶ್ವರ ಸಹಿತ ಅನೇಕ ಪ್ರಮುಖ ರಾಜಕಾಲುವೆಗಳಿವೆ. ಇದರ ಜತೆಗೆ ನಗರದಲ್ಲಿ ಹಲವಾರು ದೊಡ್ಡ ಹಾಗೂ ಸಣ್ಣಗಾತ್ರದ ತೋಡುಗಳಿವೆ. ಇವುಗಳ ಹೂಳೆತ್ತುವ ಕಾರ್ಯ ಪ್ರತಿವರ್ಷವೂ ನಡೆಯುತ್ತಿದೆ. ಆದರೂ ಈ ಪ್ರದೇಶಗಳಲ್ಲಿ ಕೃತಕ ನೆರೆ ಪ್ರತಿವರ್ಷ ಪುನಾರಾವರ್ತನೆಯಾಗುತ್ತಿದೆ. ಆದ್ದರಿಂದ ಸಮಸ್ಯೆಯ ಮೂಲವನ್ನು ಹುಡುಕಿ ಪರಿಹಾರ ಕಂಡುಕೊಳ್ಳುವ ಕಾರ್ಯ ತುರ್ತು
ನೆಲೆಯಲ್ಲಿ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ. ಈಗಾಗಲೇ ಎನ್‌ ಐಟಿಕೆ ತಜ್ಞರ ತಂಡ ಸಲ್ಲಿಸಿರುವ ವರದಿಯಲ್ಲಿ ಕೆಲವು ಅಂಶಗಳನ್ನು ಉಲ್ಲೇಖೀಸಲಾಗಿದೆ.

ಈ ವರ್ಷದ ಮೇ 29ರಂದು ಸುರಿದ ಭಾರೀ ಮಳೆ ರಾಜಕಾಲುವೆಗಳ ವಾಸ್ತವಿಕ ಸ್ಥಿತಿಯನ್ನು ಅನಾವರಣಗೊಳಿಸಿದೆ. ಒಂದೆಡೆ ರಾಜಕಾಲುವೆಗಳ ಒತ್ತುವರಿ ಸಮಸ್ಯೆಯಾದರೆ ಇನ್ನೊಂದೆಡೆ ನಗರ ಬೆಳವಣಿಗೆಯ ಗತಿಗೆ ಅನುಗುಣವಾಗಿ ರಾಜಕಾಲುವೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಆಗದಿರುವುದು ಕೂಡ ಒಟ್ಟು ಸಮಸ್ಯೆಯ ರಾಜಕಾಲುವೆಗಳ ವಸ್ತು ಸ್ಥಿತಿಯ ಬಗ್ಗೆ ಗಮನಹರಿಸುವ ಅವಶ್ಯಕತೆಯನ್ನು ತೆರೆದಿಟ್ಟಿದೆ.

ಸಾಮಾನ್ಯವಾಗಿ ಈವರೆಗೆ ನಡೆದುಕೊಂಡು ಬಂದಿರುವ ಕ್ರಮ ಎಂದರೆ ಮಳೆಗಾಲ ಪ್ರಾರಂಭಕ್ಕೆ ಕೆಲವು ದಿನಗಳು ಇರುವಾಗ ರಾಜಕಾಲುವೆಗಳು, ತೋಡುಗಳತ್ತ ಆಡಳಿತ ವ್ಯವಸ್ಥೆ ಯ ಗಮನ ಹರಿಯುತ್ತದೆ. ಮಳೆಗಾಲ ಪ್ರಾರಂಭವಾಗುವ ವೇಳೆ ತೋಡುಗಳ ಒಂದಷ್ಟು ಹೂಳೆತ್ತುವ ಕಾರ್ಯದೊಂದಿಗೆ ಸಿದ್ಧತೆ ಪೂರ್ಣಗೊಳ್ಳುತ್ತದೆ. ಆದರೆ ಮಳೆ ಗಾ ಲದ ಎದುರಿಸಲು ಸಂಪೂರ್ಣ ಸನ್ನದ್ಧವಾಗಿದ್ದೇವ ಎಂದುಕೊಂಡು ಮೌನ ವಾ ಗಿ ರುವ ಆಡ ಳಿತ ಬಳಿಕ ಭಾರೀ ಮಳೆಗೆ ನಗರವೇ ಕೊಚ್ಛೆ ಯಾ ದಾಗ ಮತ್ತೆ ಎಡ ವಿ ದ್ದೆಲ್ಲಿ ಎಂಬ ಪ್ರಶ್ನೆಯನ್ನು ಹುಡುಕಿಕೊಂಡು ಹೋಗುತ್ತದೆ. ಅದರ ಬದಲು ಇದಕ್ಕೆ ಶಾಶ್ವತ ಪರಿಹಾರ ಹೇಗೆ ಕೈಗೊಳ್ಳಬಹುದು ಎನ್ನು ವು ದ ರತ್ತ ಯೋಚನೆ ಮಾಡಿ, ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತಂದರೆ ಬಹು ತೇಕ ಸಮಸ್ಯೆ ಪರಿಹಾರವಾದಂತೆಯೇ ಸರಿ.

ನಗರದಲ್ಲಿ ಆಗಿರುವ ಪ್ರಸ್ತುತ ಬೆಳವಣಿಗೆ ಹಾಗೂ ಮುಂದಿನ ದಿನಗಳಲ್ಲಿ ಆಗಬಹುದಾದ ಬೆಳವಣಿಗೆಗಳನ್ನು ಅಂದಾಜಿಸಿ ಹಾಗೂ ಇದಕ್ಕೆ ಪೂರಕವಾಗಿ ಪ್ರಸ್ತುತ ಇರುವ ರಾಜಕಾಲುವೆಗಳು, ಸಂಪರ್ಕ ತೋಡುಗಳ ಧಾರಣಾ ಶಕ್ತಿಯನ್ನು ಅಧ್ಯಯನ ನಡೆಸಿ ನಗರದ ಬೆಳವಣಿಗೆಯ ಗತಿಗೆ ಅನುಗುಣವಾಗಿ ಇವುಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ಕಾರ್ಯಯೋಜನೆಗಳು ಬಗ್ಗೆ ಈಗಿಂದಲೇ ಪ್ರಕ್ರಿಯೆಗಳು ಆರಂಭಗೊಳ್ಳಬೇಕಾಗಿದೆ.

ಧಾರಣಾ ಸಾಮರ್ಥ್ಯದ ಅಧ್ಯಯನ
ಮೇ 29ರಂದು ಮಂಗಳೂರಿನಲ್ಲಿ ಆರು ತಾಸುಗಳಲ್ಲಿ ದಾಖಲೆಯ 400 ಮಿ.ಮೀ.ಗಿಂತಲೂ ಅಧಿಕ ಮಳೆ ಸುರಿದಿತ್ತು. ಜತೆಗೆ ಸಮುದ್ರದಲ್ಲಿ ತೀವ್ರ ಗಾಳಿಯ ಹಿನ್ನೆಲೆಯಲ್ಲಿ ನೀರು ಸಮುದ್ರ ಸೇರಲು ತಡೆಯುಂಟಾಗಿತ್ತು. ಈ ಮಹಾಮಳೆಯು ಮಂಗಳೂರು ನಗರಕ್ಕೆ ಪ್ರಕೃತಿ ನೀಡಿದ ಮುನ್ನಚ್ಚರಿಕೆಯ ಜತೆಗೆ ಮಳೆ ಎದುರಿಸಲು ಆಡಳಿತ ವ್ಯವಸ್ಥೆಮಾಡಿಕೊಂಡಿರುವ ಸಿದ್ಧತೆಗಳ ಸತ್ವಪರೀಕ್ಷೆ ಆಗಿತ್ತು. ಮಳೆಗಾಲ ಎದುರಿಸಲು ಮಾಡಿಕೊಂಡಿದ್ದ ಮುಂಜಾಗ್ರತಾ ಕ್ರಮಗಳಲ್ಲಿನ ಹುಳುಕುಗಳನ್ನು ಎತ್ತಿತೋರಿಸಿತ್ತು. ಇನ್ನೊಂದೆಡೆ ಈ ರೀತಿ ಭಾರೀ ಮಳೆಯಾದರೆ ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿಕೊಳ್ಳುವ ಆವಶ್ಯಕತೆಯ ಬಗ್ಗೆಯೂ ಎಚ್ಚರಿಸಿದೆ.

 ಕೇಶವ ಕುಂದರ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.