ಇ- ಸ್ಕೂಟರ್‌ ಸಂಚಾರ ವ್ಯವಸ್ಥೆ ಮಂಗಳೂರಿಗೂ ಬರಲಿ


Team Udayavani, Oct 14, 2018, 1:40 PM IST

14-october-9.gif

ದೇಶದೆಲ್ಲೆಡೆ ವಾಹನ ಸಂಚಾರ ಪರಿಸರ ಸ್ನೇಹಿಯಾಗಿ ತೆರೆದುಕೊಳ್ಳುತ್ತಿರುವಾಗ ನಮ್ಮ ನಗರ ಮಂಗಳೂರು ಕೂಡ ಈ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿಕೊಳ್ಳಬೇಕಿದೆ. ಮುಖ್ಯವಾಗಿ ನಗರದಲ್ಲಿ ಇ- ವಾಹನಗಳಿಗೆ ಆದ್ಯತೆ ನೀಡಬೇಕಿದೆ.

ಹರಿಯಾಣ ರಾಜ್ಯವೂ ಇತ್ತೀಚೆಗೆ ದೇಶದ ಮೊತ್ತ ಮೊದಲ ಇ- ಬಸ್‌ ಸಂಚಾರ ವ್ಯವಸ್ಥೆಗೆ ಅಧಿಕೃತ ಚಾಲನೆ ನೀಡಿತು. ಇದೊಂದು ಸಾರ್ವಜನಿಕ ಸಂಚಾರದಲ್ಲಿ ಕ್ಷಿಪ್ರ ಕ್ರಾಂತಿಯೇ ಸರಿ. ನಮ್ಮ ಮಂಗಳೂರಿನಲ್ಲಿ ಇ- ಬಸ್‌ ಜತೆಗೆ ಸೈಕಲ್‌ ಮಾದರಿಯ ಇ- ಸ್ಕೂಟರ್‌ ಸಂಚಾರ ವ್ಯವಸ್ಥೆ ರೂಢಿಯಾದರೆ, ನಗರವನ್ನು ಪರಿಸರ ಸ್ನೇಹಿಯ ಜತೆಗೆ ನಗರ ಸ್ನೇಹಿಯನ್ನಾಗಿಯೂ ಮಾಡಬಹುದು.

ಅಮೆರಿಕಾದ ಸುಮಾರು 65 ಮಹಾನಗರಗಳಲ್ಲಿ ಇ- ಸ್ಕೂಟರ್‌ ವಾಹನಗಳು ಓಡಾಡುತ್ತಿದ್ದು, ನಮ್ಮ ನಗರದಲ್ಲೂ ಇದನ್ನೂ ಜಾರಿಗೊಳಿಸಿದರೆ ಪರಿಸರ ಸಂರಕ್ಷಣೆಯ ಜತೆಗೆ ಇಂಧನ ಉಳಿತಾಯವನ್ನೂ ಮಾಡಿದಂತಾಗುತ್ತದೆ.

ಏನು ಲಾಭ?
ಜನದಟ್ಟನೆ, ವಾಹನ ದಟ್ಟನೆ ಅಧಿಕವಾಗಿರುವ ಸ್ಥಳಗಳಲ್ಲಿ ಇ- ಸ್ಕೂಟರ್‌ ಗಳು ರಸ್ತೆಗಿಳಿಯುವುದರಿಂದ ಅನೇಕ ಲಾಭವಿದೆ. ಮುಖ್ಯವಾಗಿ ವಾಯುಮಾಲಿನ್ಯ, ಶಬ್ಧ ಮಾಲಿನವನ್ನು ತಡೆಗಟ್ಟಬಹುದು. ಇ- ಸ್ಕೂಟರ್‌ ಗಳನ್ನು ರಸ್ತೆಗಳಲ್ಲೇ ಓಡಿಸಬೇಕೆಂದೇನಿಲ್ಲ. ಬದಲಿಗೆ ಸ್ಟ್ರೀಟ್‌, ಸೈಡ್‌ ವಾಕ್‌ ಗಳಲ್ಲೂ ಓಡಾಡಿಸಬಹದಾಗಿದ್ದು, ಸದಾ ಟ್ರಾಫಿಕ್‌ ಹಾಗೂ ವಾಹನಗಳಿಂದ ತುಂಬಿರುವ ರಸ್ತೆಯಲ್ಲಿ ತುರ್ತು ಚಾಲನೆಗೆ ತುಂಬಾ ಸಹಾಯಕಾರಿಯಾಗಲಿದೆ.

ಇ-ಸ್ಕೂಟರ್‌ ವಾಹನ ಸಂಚಾರವನ್ನು ಕೆಲವೊಂದು ರಾಷ್ಟ್ರಗಳು ಪರಿಣಾಮಕಾರಿಯಾಗಿಯೇ ಅಳವಡಿಸಿಕೊಂಡಿವೆ. ಅಮೆರಿಕ ದೇಶದ ಸ್ಕ್ಯಾನ್‌ ಫ್ರಾನಿಸ್ಕೋ, ವಾಷಿಂಗ್ಟನ್‌ನಲ್ಲಿ ಹೆಚ್ಚಾಗಿ ಇ-ಸ್ಕೂಟರ್‌ಗಳೇ ಸಂಚರಿಸುತ್ತಿವೆ. ಅದಲ್ಲ ದೇಶಿಕಾ ಗೋ, ಅಸ್ಟಿನ್‌, ಲಾಸ್‌ ಏಂಜೆಲ್ಸ್‌, ನ್ಯೂಯಾರ್ಕ್‌ ಸಿಟಿಗಳಲ್ಲಿ ಕೂಡ ಇ-ಸ್ಕೂಟರ್‌ಗಳೇ ಹೆಚ್ಚಾಗಿ ರಸ್ತೆಗೆ ಇಳಿದಿವೆ. ನೆದರ್‌ ಲ್ಯಾಂಡ್‌ನ‌ಲ್ಲೂ ಇ-ಸ್ಕೂಟರ್‌ ಸಂಚಾರ ವ್ಯವಸ್ಥೆ ಯಶಸ್ವಿಯಾಗಿವೆ.

ಅಮೆರಿಕ ಮಾದರಿ
ಅಮೆರಿಕದ ಇ-ಸ್ಕೂಟರ್‌ ಗಳಿಗೆ ಡಿಜಿಟಲ್‌ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದರಿಂದಾಗಿ ಬಾರ್‌ಕೋಡ್‌ಗಳಿಗೆ ನಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳನ್ನು ಸ್ಕ್ಯಾನ್‌ ಮಾಡಿದರೆ ಸಾಕು. ಆಗ ಸ್ಕೂಟರ್‌ ಆಫ್/ಆನ್‌ ಮಾಡಬಹುದು. ಅಲ್ಲದೇ ಇದರಲ್ಲಿ ನಮ್ಮ ಹತ್ತಿರದ ಇ-ಸ್ಕೂಟರ್‌ ಯಾವುದು ಎಂಬುದನ್ನೂ ತಿಳಿದುಕೊಳ್ಳಬಹುದು.

ಇನ್ನು ನಗರದೊಳಗೆ ಸಂಚರಿಸುವವರಿಗೆ ಇ- ಸ್ಕೂಟರ್‌ ಗಳನ್ನು ಬಾಡಿಗೆ ರೂಪದಲ್ಲಿ ನೀಡುವ ವ್ಯವಸ್ಥೆ ಮಾಡಬಹುದು. ಇತರೆ ಎಲ್ಲ ದ್ವಿಚಕ್ರ ವಾಹನಗಳನ್ನು ನಗರದೊಳಗೆ ನಿರ್ಬಂದಿಸಿ ಇ- ಸ್ಕೂಟರ್‌ ಗಳನ್ನು ನೀಡುವ ವ್ಯವಸ್ಥೆ ಕೈಗೊಳ್ಳಬಹುದು. ಅಲ್ಲಲ್ಲಿ ಇ- ಸ್ಕೂಟರ್‌ ತಂಗುದಾಣವನ್ನು ನಿರ್ಮಿಸಿ ಹೋಗಬೇಕಾದ ಸ್ಥಳಗಳಿಗೆ ತೆರಳಲು ಬಾಡಿಗೆ ಸೌಲಭ್ಯವನ್ನು ಕಲ್ಪಿಸಬಹುದಾಗಿದೆ. ಇದು ಆಡಳಿತಕ್ಕೂ ಲಾಭದಾಯಕವಾಗಲಿದೆ. ಜಿಪಿಎಸ್‌ ಅಳವಡಿಸಿ, ನಿರ್ಧಿಷ್ಟ ಕಿಲೋ ಮೀಟರ್‌ ವರೆಗೆ ಬಾಡಿಗೆ ನೀಡುವ ವ್ಯವಸ್ಥೆ ಕೈಗೊಂಡರೆ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ.

ಇದರಿಂದ ನಗರದೊಳಗೆ ಸುರಕ್ಷಿತ ಪ್ರಯಾಣದ ಜತೆಗೆ ದ್ವಿಚಕ್ರ ವಾಹನ ಸವಾರರ ವೇಗ ಮಿತಿಗೆ ನಿಯಂತ್ರಣ ಕೂಡ ಹಾಕಬಹುದು. ನಗರದ ಮುಖ್ಯ ರಸ್ತೆಗಳಿಗೆ ಕೇವಲ ಇ- ಸ್ಕೂಟರ್‌ ಮಾತ್ರ ಇಳಿಯುವಂತಿರಬೇಕು. ಈ ಮೂಲಕ ಟ್ರಾಫಿಕ್‌ ನಿಯಂತ್ರಣವೂ ಸುಲಭವಾಗುವುದು.

 ಶಿವ ಸ್ಥಾವರ ಮಠ 

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.