CONNECT WITH US  

ಒತ್ತಡ ನಿವಾರಣೆಗೆ ಪಕ್ಷಿಗಳ ಕಲರವ

ನೀವು ವಾಸ ಮಾಡುವ ಸ್ಥಳದ ಸುತ್ತಮುತ್ತ ಮರಗಳು, ಪೊದೆಗಳು, ಸದಾ ಹಕ್ಕಿಗಳ ಕಲರವದಿಂದ ಕೂಡಿದ್ದರೆ ಸಂತೋಷ ಪಡಿ. ಯಾಕೆಂದರೆ ಅವು ಮತ್ತು ಆ ವಾತಾವರಣ ನಿಮ್ಮನ್ನು ಒತ್ತಡ ಮತ್ತು ಆತಂಕ ಮುಕ್ತರಾಗಿಸಬಹುದು. ಪಕ್ಷಿ ವಿಜ್ಞಾನಕ್ಕೆ ಸಂಬಂಧಿಸಿದ ಬ್ರಿಟಿಷ್‌ ಟ್ರಸ್ಟ್‌ ನ ಎಕ್ಸೆಟರ್‌ ವಿಶ್ವವಿದ್ಯಾನಿಲಯ ಮತ್ತು ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾನಿಲಯಗಳ ಸಂಶೋಧಕರು ನಡೆಸಿದ ಹೊಸ ಅಧ್ಯಯನದ ಪ್ರಕಾರ, ಪಕ್ಷಿಗಳನ್ನು ನೋಡುವುದು, ಸುತ್ತಲಿನ ಹಸುರು ಪರಿಸರವನ್ನು ಕಣ್ತುಂಬಿಕೊಳ್ಳುವುದು, ಪೊದೆ, ಮರಗಳನ್ನು ಗಮನಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಬಯೋ ಸೈನ್ಸ್‌ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. 'ಈ ಅಧ್ಯಯನವು ನಮ್ಮ ಮಾನಸಿಕ ಸ್ವಾಸ್ಥ್ಯಕ್ಕೂ ಪ್ರಕೃತಿಗೂ ಇರುವ ಸಂಬಂಧವನ್ನು ಸ್ಪಷ್ಟವಾಗಿ ಹೇಳುತ್ತದೆ. ಮನೆ ಸುತ್ತಮುತ್ತ ಇರುವ ಗಿಡ, ಮರ, ಪರಿಸರ, ಪಕ್ಷಿಗಳ ಸಂಕುಲವನ್ನು ಕಾಳಜಿಯಿಂದ ನೋಡಿಕೊಂಡರೆ ನಮ್ಮ ನಗರಗಳನ್ನೂ ಸ್ವಸ್ಥವಾಗಿಟ್ಟುಕೊಳ್ಳಬಲ್ಲೆವು. ನಗರ ಬದುಕಿನ ಒತ್ತಡದಿಂದ ಮುಕ್ತವಾಗಲು ಹೊಸ ಭರವಸೆಗಳಾಗಬಹುದು ಎಂದಿದ್ದಾರೆ ಸಂಶೋಧಕರು.

ಸಂಶೋಧಕರಲ್ಲಿ ಒಬ್ಬರಾದ ಕಾಕ್ಸ್‌ ಅವರ ಇತ್ತೀಚಿನ ಸಂಶೋಧನೆಯೂ ಹಕ್ಕಿಗಳನ್ನು ನೋಡುವುದರಿಂದ ನಮ್ಮ ಮನಸ್ಸು ನಿರಾಳಗೊಳ್ಳುತ್ತದೆ ಮತ್ತು ಪ್ರಕೃತಿಯೊಂದಿಗೆ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬಲ್ಲದು ಎಂಬುದಾಗಿದೆ. ನೀವು ವೀಕೆಂಡ್‌ನ‌ಲ್ಲಿ ಯಾವುದಾದರೂ ಬೀಚ್‌ಗೆ ಟ್ರಿಪ್‌ ಹೋಗಿದ್ದಿರಾ? ನೀರನ್ನು ಕಂಡು ನಿಮ್ಮ ಮನಸ್ಸು ಪ್ರಫ‌ುಲ್ಲವಾಯಿತೇ? ಹೌದಾದರೆ, ಅಲ್ಲಿಯೂ ಒಂದು ವಿಜ್ಞಾನವಿದೆ. ನೀರನ್ನು ಸದಾ ನೋಡುತ್ತಾ ಬದುಕುವ (ಸಮುದ್ರ, ಹೊಳೆ ಬದಿಯ ಮನೆಗಳು) ನಿವಾಸಿಗಳು ಒತ್ತಡ ರಹಿತರಾಗಿರುತ್ತಾರೆ ಎಂದು ಮಿಚಿಗನ್‌ ವಿಶ್ವವಿದ್ಯಾಲಯದ ಆ್ಯಂಬರ್‌ ಎಲ್‌. ಪಿಯರ್‌ಸನ್‌ ಅವರ ಅಧ್ಯಯನ ಹೇಳುತ್ತದೆ.  ವಿವಿಧ ಪ್ರದೇಶಗಳ ಅಂಕಿಅಂಶಗಳನ್ನು ಕಲೆ ಹಾಕಿ, ಆಧ್ಯಯನ ನಡೆಸಲಾಗಿದ್ದು, ಅದರಲ್ಲಿ  ಈ ಅಂಶವನ್ನು ಉಲ್ಲೇಖೀಸಲಾಗಿದೆ.

ಇಂದು ಹೆಚ್ಚು ಓದಿದ್ದು

Trending videos

Back to Top