CONNECT WITH US  

ಪ್ರಪಂಚದ 3ನೇ ಶರ್ಕರಪಿಷ್ಟದ ಮೂಲ ಮರಗೆಣಸು

ನಮ್ಮ ಅಪ್ಪ- ಅಮ್ಮ, ಅಜ್ಜ- ಅಜ್ಜಿಂದಿರ ಬಾಲ್ಯ ಕಾಲದಲ್ಲಿ ಹೆಚ್ಚಿನ ಮನೆಗಳಲ್ಲಿ ಕಡು ಬಡತನವಿದ್ದಾಗ ಆಹಾರವಾಗಿ ಬಳಸುತ್ತಿದ್ದದ್ದು ಮರಗೆಣಸನ್ನು ಅಂದರೆ ನೀವು ನಂಬಲೇಬೇಕು. 

ಹಸಿವನ್ನು ನೀಗಿಸಲು ಆ ಕಾಲದಲ್ಲಿ ಈ ಬಗೆಯ ಬೇರಿನ ಆಹಾರ ಸಹಾಯ ಮಾಡುತ್ತಿದ್ದುದರ ಜೊತೆಗೆ ಈ ಗೆಣಸಿನ ವಿಪರೀತ ಸೇವನೆ ಕೆಲವೊಂದು ಸಾರಿ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತಿತ್ತಂತೆ. ಏನೇ ಆದರೂ ಹೊಟ್ಟೆಗಿಲ್ಲದ ಹೊತ್ತು ನಮ್ಮ ಪ್ರಾಣ ಉಳಿಸಿತ್ತು ಅಂದಿದ್ದಳು ಅಜ್ಜಿ ಮರಗೆಣಸಿನ ಕುರಿತು ವಿವರಿಸುತ್ತ. ಕಾಡು- ಮೇಡುಗಳಲ್ಲಿ ನೈಸರ್ಗಿಕವಾಗೇ ಬೆಳೆಯುವ ಈ ಮರಗೆಣಸು ಅಪಾರ ಪ್ರಮಾಣದ ಶರ್ಕರಪಿಷ್ಟವನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಮರ ಗೆಣಸು ಕೆಲವು ದೇಶಗಳಲ್ಲಿ ಪ್ರಮುಖ ಆಹಾರವಾಗಿ - ಖಾದ್ಯವಾಗಿ ಬಳಸಲಾಗುತ್ತಿದೆ.

ಅಮೆರಿಕಾ ಮೂಲ
ಅಂದ ಹಾಗೆ ಈ ಮರಗೆಣಸು ಅಮೆರಿಕಾ ಮೂಲದ ಪೊದೆಯಂತಹ ಸಸ್ಯ. ಪ್ರಪಂಚದ ಮೂರನೇ ಮುಖ್ಯ ಶರ್ಕರಪಿಷ್ಟದ ಮೂಲವಾಗಿರುವ ಮರಗೆಣಸನ್ನು ನೈಜೀರಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಭಾರತದ ಕೇರಳದಲ್ಲೂ ಮರಗೆಣಸನ್ನು ಹೆಚ್ಚಾಗಿ ಆಹಾರವಾಗಿ ಬಳಸಲಾಗುತ್ತದೆ. ಮರ ಗೆಣಸು ಒಂದುರೀತಿಯ ಕಹಿ-ಸಿಹಿ ರುಚಿಯನ್ನು ಒಳಗೊಂಡಿರುವುದರಿಂದ ಇದನ್ನು ಬೇಯಿಸಿ ತಿನ್ನಲು ಮತ್ತು ಚಿಪ್ಸ್‌ ನಂತಹ ಖಾದ್ಯಗಳ ತಯಾರಿಯಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಪೌಷ್ಟಿಕಾಂಶ ಅಪಾರ
ಅತೀ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟನ್ನು ಹೊಂದಿರುವ ಆಹಾರಗಳ ಸಾಲಿನಲ್ಲಿ ಅಕ್ಕಿ ಮತ್ತು ಮೆಕ್ಕೆ ಜೋಳಗಳು ಸ್ಥಾನವನ್ನು ಪಡೆದಿದ್ದರೆ, ಮರಗೆಣಸಿಗೆ ಈ ಸಾಲಿನಲ್ಲಿ ಪದಕ ಪಟ್ಟಿಯಲ್ಲಿ ಕಂಚು ಲಭಿಸುತ್ತದೆ. ಮರಗೆಣಸು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ರಮುಖ ಆಹಾರವಾಗಿ ಅರ್ಧ ಬಿಲಿಯನ್‌ ಜನರಿಗೆ ಮೂಲಭೂತ ಆಹಾರವಾಗಿ ಬಳಸ್ಪಡುತ್ತಿದೆ. ನೈಜೀರಿಯಾ ದೇಶವೇ ಮರಗೆಣಸಿನ ಪ್ರಥಮ ಸ್ಥಾನಿಗ ಉತ್ಪಾದಕ ದೇಶವಾದರೆ, ಥೈಲ್ಯಾಂಡ್‌ ದೇಶ ಒಣಗಿದ ಮರಗೆಣಸಿನ ಅತಿದೊಡ್ಡ ರಫ್ತುದಾರನಾಗಿದೆ. ಮನಿಹಾಟ್‌ ಎಸ್ಕಾಲೆಂಟ (Manihot esculenta) ಎಂದು ವೈಜ್ಞಾನಿಕವಾಗಿ ಹೆಸರಿಸಲಾಗುವ  ಮರಗೆಣಸಿನಲ್ಲಿ  ಶಕ್ತಿ 160 ಕ್ಯಾಲರಿ, ಕಾರ್ಬೋಹೈಡ್ರೇಟ್‌ 38.06 ಗ್ರಾಂ., ಪ್ರೊಟೀನ್‌ 1.36 ಗ್ರಾಂ., ನಾರಿನಾಂಶ 1.8 ಗ್ರಾಂ.,  ವಿಟಮಿನ್‌ ಸಿ 20.06 ಮಿ.ಗ್ರಾಂ., ಸೋಡಿಯಂ 14 ಮಿ.ಗ್ರಾಂ., ಕ್ಯಾಲ್ಷಿಯಂ 16 ಮಿ.ಗ್ರಾಂ., ಕಬ್ಬಿಣಾಂಶ 0.27 ಮಿ.ಗ್ರಾಂ. ಇನ್ನಿತರ ಪೋಷಕಾಂಶಗಳನ್ನು ಒಳಗೊಂಡಿದೆ.

- ಸದಾ ಸಕಲೇಶಪುರ

ಇಂದು ಹೆಚ್ಚು ಓದಿದ್ದು

Trending videos

Back to Top