ಪೆಸಿಫಿಕ್‌ ಸಾಗರದಲ್ಲಿ Hydrogen bomb ಪರೀಕ್ಷೆ ಮಾಡಿದ್ರೆ ಏನಾಗುತ್ತೆ


Team Udayavani, Sep 30, 2017, 12:09 PM IST

Hydrogen_Bomb.jpg

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಉತ್ತರ ಕೊರಿಯಾವನ್ನು ಸಂಪೂರ್ಣ ಧ್ವಂಸ ಮಾಡುತ್ತೇವೆ ಎಂದು ಹೇಳಿದ
ಬೆನ್ನಲ್ಲೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪೆಸಿಫಿಕ್‌ ಸಾಗರದ ಮೇಲೆ ಹೈಡ್ರೋಜನ್‌ ಬಾಂಬ್‌ ಪರೀಕ್ಷೆ ನಡೆಸುವುದಾಗಿ ಬೆದರಿಕೆ ಹಾಕಿದ್ದು ಇತ್ತೀಚೆಗೆ ಸುದ್ದಿಯಾಗಿದೆ. ಹೈಡ್ರೋಜನ್‌ ಬಾಂಬ್‌ ಅತಿ ಪ್ರಬಲ ಬಾಂಬ್‌ ಆಗಿದ್ದು, ಅಣು ಬಾಂಬ್‌ ಗಿಂತಲೂ ಶಕ್ತಿಶಾಲಿಯಾಗಿದೆ. ಒಂದು ವೇಳೆ ಉ.ಕೊರಿಯಾ ಪೆಸಿಫಿಕ್‌ ಸಾಗರದ  ಮೇಲೆ ಹೈಡ್ರೋಜನ್‌ ಬಾಂಬ್‌ ಹಾಕಿದರೆ ಏನಾಗುತ್ತೆ? ಹೈಡ್ರೋಜನ್‌ ಬಾಂಬ್‌ ಅದೆಷ್ಟು ಪ್ರಬಲ? ಎಂಬುದರ ಕುರಿತ ಮಾಹಿತಿಗಳು ಇಲ್ಲಿವೆ. 

ಹೈಡ್ರೋಜನ್‌ ಬಾಂಬ್‌ ಅಂದರೇನು?
ಹೈಡ್ರೋಜನ್‌ ಅಥವಾ ಥರ್ಮೋನ್ಯೂಕ್ಲಿಯರ್‌ ಶಸ್ತ್ರ ಎನ್ನುವುದು ಪರಮಾಣು ಬಾಂಬ್‌ನ ಹೊಸ ತಲೆಮಾರು.
ಪರಮಾಣು ಬಾಂಬ್‌ ಗಳಿಗಿಂತಲೂ ಇದು ಅತಿ ಹೆಚ್ಚು ಪ್ರಬಲ. ಪರಮಾಣು ಬಾಂಬ್‌ ಗಳಲ್ಲಿ ಅಣು ವಿದಳನ ನಡೆದರೆ, ಹೈಡ್ರೋಜನ್‌ ಬಾಂಬ್‌ಗಳಲ್ಲಿ ಸಮ್ಮಿಳನ ನಡೆಯುತ್ತದೆ.

ಸಾಮಾನ್ಯ ಪರಮಾಣು ಬಾಂಬ್‌ ಗಳಲ್ಲಿ ಅಣು ವಿದಳನ ವೇಳೆ ಶಕ್ತಿ ಸೃಷ್ಟಿಯಾದರೆ, ಹೈಡ್ರೋಜನ್‌ ಬಾಂಬ್‌ಗಳಲ್ಲಿ ಸಮ್ಮಿಳನದ ಸಂದರ್ಭ ಶಕ್ತಿ ಸೃಷ್ಟಿಯಾಗುತ್ತದೆ. ಆದರೆ ಹೈಡ್ರೋಜನ್‌ ಬಾಂಬ್‌ ತಂತ್ರಜ್ಞಾನದಲ್ಲಿ ಅಣು ಸಮ್ಮಿಳನಕ್ಕೆ ಅತಿ ಶಾಖ ಬೇಕಾಗುತ್ತದೆ. ನಕ್ಷತ್ರ ಮತ್ತು ಸೂರ್ಯನಲ್ಲೂ ಇದೇ ತೆರನಾದ ಪ್ರಕ್ರಿಯೆ ಜರುಗುತ್ತದೆ. 

ಹೈಡ್ರೋಜನ್‌ ಮತ್ತು ಅಣು ಬಾಂಬ್‌ ವ್ಯತ್ಯಾಸವೇನು?
ಹಿರೋಶಿಮಾ ನಾಗಸಾಕಿ ಮೇಲೆ ಅಮೆರಿಕ ಹಾಕಿದ ಅಣು ಬಾಂಬ್‌ ಅನ್ನು ಗಣನೆಗೆ ತೆಗೆದುಕೊಂಡರೆ, ಅಂದು 2 ಲಕ್ಷ ಜನ ಮೃತಪಟ್ಟಿದ್ದರು. ಹೈಡ್ರೊಜನ್‌ ಅದಕ್ಕಿಂತ 1 ಸಾವಿರ ಪಟ್ಟು ಶಕ್ತಿಯುತವಾದದ್ದು. ಹೈಡ್ರೋಜನ್‌ ಬಾಂಬ್‌ನಿಂದ ಭಾರೀ ಪ್ರಮಾಣದ ಸ್ಫೋಟ, ತೀವ್ರತೆ, ಶಾಖ ಮತ್ತು ವಿಕಿರಣ ಹೊರಸೂಸುವಿಕೆ ಪ್ರಮಾಣ ಎಲ್ಲವೂ ಹೆಚ್ಚು. ಇದುವರೆಗೆ ಯಾವುದೇ ಯುದ್ಧಗಳಲ್ಲೂ ಹೈಡ್ರೋಜನ್‌ ಬಾಂಬ್‌ ಪ್ರಯೋಗ ಮಾಡಿಲ್ಲ. ಪರಿಣಿತರು ಹೇಳುವಂತೆ ಹೈಡ್ರೋಜನ್‌ ಬಾಂಬ್‌ ಯಾವುದೇ ನಗರವನ್ನು ನಾಮಾವಶೇಷ ಮಾಡಬಲ್ಲದು. ಅಣುಬಾಂಬ್‌ನಿಂದ ಹಾನಿಯಾಗುತ್ತಾದರೂ, ಹೈಡ್ರೋಜನ್‌ ಬಾಂಬ್‌ಗ
ಹೋಲಿಸಿದರೆ ಕಡಿಮೆ ಎನ್ನುವುದು ಹೇಳಿಕೆ. 

ಮೊದಲ ಹೈಡ್ರೋಜನ್‌ ಬಾಂಬ್‌ ಪ್ರಯೋಗ
1952 ನ.1ರಂದು ಅಮೆರಿಕ ಜಗತ್ತಿನಲ್ಲೇ ಮೊದಲ ಬಾರಿಗೆ ಹೈಡ್ರೋಜನ್‌ ಬಾಂಬ್‌ ಪರೀಕ್ಷೆಯನ್ನು ನಡೆಸಿತ್ತು. ಪೆಸಿಫಿಕ್‌ ಸಾಗರದ ಆಳದಲ್ಲಿ ಇದರ ಪರೀಕ್ಷೆ ನಡೆದಿತ್ತು. ಇದರ ಸ್ಫೋಟದ ತೀವ್ರತೆ 11 ಮೆಟ್ರಿಕ್‌ ಟನ್‌ಗಳಷ್ಟಿತ್ತು. ಹಿರೋಶಿಮಾ ನಾಗಸಾಕಿ ಮೇಲೆ ಹಾಕಿದ ಬಾಂಬ್‌ ತೀವ್ರತೆ 0.015 ಮೆಟ್ರಿಕ್‌ ಟನ್‌ನಷ್ಟಿತ್ತು. ಅಂದರೆ ಮೊದಲ ಬಾರಿಗೆ ಪ್ರಯೋಗ ಮಾಡಿದ್ದ ಹೈಡ್ರೋಜನ್‌ ಬಾಂಬ್‌ 700 ಪಟ್ಟು ಪ್ರಬಲವಾಗಿತ್ತು. 

ಯಾರ್ಯಾರ ಬಳಿ ಇದೆ ಹೈಡ್ರೋಜನ್‌ ಬಾಂಬ್‌? 
1952ರಲ್ಲಿ ಅಮೆರಿಕ ಮೊದಲ ಬಾರಿಗೆ ಹೈಡ್ರೋಜನ್‌ ಬಾಂಬ್‌ ಪರೀಕ್ಷೆ ನಡೆಸಿದ ಬಳಿಕ ರಷ್ಯಾ 1952ರಲ್ಲಿ ಇಂತಹ ಪರೀಕ್ಷೆ ನಡೆಸಿತ್ತು. ಇಂದು ಜಗತ್ತಿನಲ್ಲಿ ಚೀನ, ಫ್ರಾನ್ಸ್‌ , ಬ್ರಿಟನ್‌ ಬಳಿ ಅಧಿಕೃತವಾಗಿ, ಭಾರತ, ಪಾಕಿಸ್ಥಾನ, ಉ.ಕೊರಿಯಾ, ನ್ಯಾಟೋ ಸದಸ್ಯ ರಾಷ್ಟ್ರಗಳಾದ ಬೆಲ್ಜಿಯಂ, ಜರ್ಮನಿ, ಇಟಲಿ, ನೆದರ್ಲೆಂಡ್‌, ಟರ್ಕಿ ಬಳಿ ಜಂಟಿ ಸಂಗ್ರಹದಲ್ಲಿದೆ. ಇಸ್ರೇಲ್‌ ಬಳಿಯೂ ಹೈಡ್ರೋಜನ್‌ ಬಾಂಬ್‌ ತಂತ್ರಜ್ಞಾನ ಇದೆ ಎನ್ನಲಾಗಿದೆ.

ತಂತ್ರಜ್ಞಾನ ತುಂಬ ದುಬಾರಿ
ಹೈಡ್ರೋಜನ್‌ ಬಾಂಬ್‌ ಅನ್ನು ಕ್ಷಿಪಣಿ ಸಿಡಿತಲೆಗಳಲ್ಲೂ ಅಳವಡಿಸಿಕೊಳ್ಳಬಹುದು. ಆದರೆ ಇದರ ತಂತ್ರಜ್ಞಾನ ತುಂಬ ದುಬಾರಿ. ಇದು ಹೇಗೆಂದರೆ ಶಾಪಿಂಗ್‌ ಹೋಗಲು ದುಬಾರಿ ರೋಲ್ಸ್‌ರಾಯ್ಸ ಕಾರು ಖರೀದಿಸಿದಂತೆ ! ಹೈಡ್ರೋಜನ್‌ ಬಾಂಬ್‌ ಇದ್ದ ಮಾತ್ರಕ್ಕೆ ಇಡೀ ದೇಶ ಸುರಕ್ಷಿತ ಎಂದು ಹೇಳುವಂತಿಲ್ಲ. ಆದರೂ, ಸರಕಾರಗಳು ಇದರ ಮೇಲೆ ಕೋಟ್ಯಂತರ ರೂ.ಗಳನ್ನು ರಾಜಕೀಯ ಕಾರಣಕ್ಕಾಗಿ ಖರ್ಚು ಮಾಡುತ್ತವೆ. 

ಪೆಸಿಫಿಕ್‌ ಸಾಗರಕ್ಕೆ  ಬಾಂಬ್‌ ಪ್ರಯೋಗಿಸಿದ್ರೆ ಏನಾಗುತ್ತೆ?
ಒಂದು ವೇಳೆ ಉ.ಕೊರಿಯಾ ಬೆದರಿಕೆ ಹಾಕಿದಂತೆ ಪೆಸಿಫಿಕ್‌ ಸಾಗರಕ್ಕೇನಾದ್ರೂ ಬಾಂಬ್‌ ಪ್ರಯೋಗಿಸಿದ್ದೇ ಆದಲ್ಲಿ ಸ್ಫೋಟಕ್ಕೆ ಅಣಬೆ ರೀತಿ ವಾತಾವರಣ ಸೃಷ್ಟಿಯಾಗುತ್ತದೆ. ಅಪಾರ ಪ್ರಮಾಣದಲ್ಲಿ ಜೀವವೈವಿಧ್ಯಕ್ಕೆ ಹಾನಿಯಾಗಬಹುದು. ಪೆಸಿಫಿಕ್‌ ಸಾಗರದಲ್ಲಿ ಪ್ರಯೋಗಿಸಿದ್ದಲ್ಲಿ ಸುಮಾರು 40 ವರ್ಷ ಪೆಸಿಫಿಕ್‌ ಸಾಗರದ ವಾತಾವರಣ ಹದಗೆಡಲಿದೆ. ಪರಿಸರ ಹಾನಿಯೊಂದಿಗೆ ಯುದ್ಧಕ್ಕೂ ಕಾರಣವಾಗಬಹುದು. ಇಡೀ ಸಮುದ್ರದಲ್ಲಿ ವಿಕಿರಣ ಹರಡಿ ಹಲವು ದೇಶಗಳು ಸಮಸ್ಯೆ ಎದುರಿಸಬಹುದು.

ದೀರ್ಘಾವಧಿಯಲ್ಲಿ ಮಾನವರಿಗೆ, ಜೀವಿಗಳಿಗೂ ಹಾನಿಯಾಗಲಿದೆ. ಇದುವರೆಗೂ ಅಣು ಬಾಂಬ್‌ ಪರೀಕ್ಷೆಗಳನ್ನು ಭೂಮಿಯ ಆಳದಲ್ಲಿ ಉ.ಕೊರಿಯಾ ನಡೆಸಿದೆ. ಇತ್ತೀಚೆಗೆ ಹೈಡ್ರೋಜನ್‌ ಬಾಂಬ್‌ ಪರೀಕ್ಷೆಯನ್ನೂ ಭೂಮಿಯಲ್ಲೇ ನಡೆಸಿತ್ತು. ಈ ವೇಳೆ 48
ಕಿ.ಮೀ. ವಿಸ್ತಾರದಲ್ಲಿ ರಿಕ್ಟರ್‌ ಮಾಪನದಲ್ಲಿ 5.1ರಷ್ಟು ತೀವ್ರತೆಯ ಕಂಪನ ದಾಖಲಾಗಿತ್ತು. ಆದರೆ ಪೆಸಿಫಿಕ್‌ ಸಾಗರಕ್ಕೇನಾದರೂ ಅದು ಬಾಂಬ್‌ ಹಾಕಿದರೆ, ಊಹಿಸಲೂ ಆಗದಷ್ಟು ಹಾನಿಯಾಗಲಿದೆ. 

ನ್ಯೂಯಾರ್ಕ್‌ ಮೇಲೆ ಹಾಕಿದ್ರೆ?
ಒಂದು ವೇಳೆ ಉ.ಕೊರಿಯಾ ಹುಚ್ಚಾಟದಲ್ಲಿ ಅಮೆರಿಕದ ನ್ಯೂಯಾರ್ಕ್‌ ಮೇಲೆ ಹೈಡ್ರೋಜನ್‌ ಬಾಂಬ್‌ ಅನ್ನು ಪ್ರಯೋಗ ಮಾಡಿದ್ರೆ ಏನಾಗಬಹುದು ಎಂಬುದಕ್ಕೆ ತಜ್ಞರು ಹೀಗೆ ವಿವರಿಸಿದ್ದಾರೆ. 150 ಕಿಲೋಟನ್‌ ಭಾರದ ಹೈಡ್ರೋಜನ್‌ ಬಾಂಬ್‌ ಅನ್ನು ನ್ಯೂಯಾರ್ಕ್‌ ಮೇಲೆ ಪ್ರಯೋಗಿಸಿದರೆ, ತತ್‌ಕ್ಷಣ 1.09 ಕಿ.ಮೀ. ವ್ಯಾಪ್ತಿಯಲ್ಲಿ ಸರ್ವನಾಶವಾಗಲಿದೆ. 66 ಲಕ್ಷ ಸೆಲ್ಸಿಯಸ್‌ ಉಷ್ಣತೆ ಸ್ಥಳದಲ್ಲಿ ಕಾಣಿಸಿಕೊಳ್ಳಲಿದ್ದು ಎಲ್ಲವೂ ಕರಟಿ ಹೋಗಲಿದೆ. ತತ್‌ಕ್ಷಣ 3.85 ಲಕ್ಷ ಸಾವು ಸಂಭವಿಸಬಹುದು. 6.32 ಲಕ್ಷ ಮಂದಿ ಗಾಯಾಳುಗಳಾಗಬಹುದು. ಬಾಂಬ್‌ ಪ್ರಯೋಗವಾದ ಸುಮಾರು 68 ಕಿ.ಮೀ. ದೂರದವರೆಗೆ ಜನರು ತೀವ್ರ
ಸುಟ್ಟಗಾಯಗಳಿಗೆ ಈಡಾಗಬಹುದು. ಸಾವಿರಾರು ಕಿ.ಮೀ.ದೂರದ ವರೆಗೆ ಪರಮಾಣು ವಿಕಿರಣ ಸಮಸ್ಯೆ ತಲೆದೋರಬಹುದು. ಹಲವು ವರ್ಷಗಳ ಕಾಲ ಇದು ಮುಂದುವರಿಯಬಹುದು. 

ನಿಮಗೆ ಗೊತ್ತೇ ? 
1952 ಮೊದಲ ಬಾರಿಗೆ ಹೈಡ್ರೋಜನ್‌ ಬಾಂಬ್‌ ಪ್ರಯೋಗ

1000 ಪಟು ಸಾಮಾನ್ಯ ಅಣು ಬಾಂಬ್‌ಗಿಂತ ಶಕ್ತಿಶಾಲಿ

66ಲಕ್ಷ ಡಿಗ್ರಿ ಸೆಲ್ಸಿಯಸ್‌ ಬಾಂಬ್‌ ಪ್ರಯೋಗದ ಸ್ಥಳದಲ್ಲಿ ಉಂಟಾಗುವ ಉಷ್ಣತೆ 

40 ವರ್ಷ ಪೆಸಿಫಿಕ್‌ ಮೇಲೆ ಪ್ರಯೋಗಿಸಿದರೆ ಆಗುವ ಪರಿಣಾಮ

 
*ಈಶ

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.