CONNECT WITH US  

ಟ್ಯಾಟೂ : ಹಚ್ಚಿದರೆ ಬೇಕು ಹೆಚ್ಚಿನ ಕಾಳಜಿ

ಫ್ಯಾಶನ್‌ ಪ್ರಿಯರು ಟ್ಯಾಟೂ ಅಥವಾ ಹಚ್ಚೆ ಹಚ್ಚಿಸಿಕೊಳ್ಳುವುದು ಈಗ ಸಾಮಾನ್ಯ. ಕೆಲವು ಕಡೆಗಳಲ್ಲಿ ಇದು ಸಾಂಪ್ರದಾಯಿಕ ಮಾನ್ಯತೆ ಯನ್ನೂ ಪಡೆದುಕೊಂಡಿದೆ. ಟ್ಯಾಟೂ ಅಥವಾ ಹಚ್ಚೆ ಹಚ್ಚಿದ ಮೇಲೆ ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇದ್ದರೆ ಭಾರೀ ಅಪಾಯಗಳಾಗುವ ಸಾಧ್ಯತೆ ಇರುತ್ತದೆ.

ಹೀಗಾಗಿ ಹಚ್ಚೆ ಹಚ್ಚಿಸಿ ಕೊಂಡವರು ಚರ್ಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇಬೇಕು. ಹಚ್ಚೆ ಹಚ್ಚಿಸುವಾಗ ಚರ್ಮದ ಮೇಲಿನ ಪದರಕ್ಕೆ ಬಣ್ಣದ ಪಿಗ್‌ಮೆಂಟ್ಸ್‌ಗಳನ್ನು ಸೂಜಿಗಳ ಮೂಲಕ ಹಾಕಿ ವಿವಿಧ ಚಿಹ್ನೆಗಳು ಮತ್ತು ಅಕ್ಷರಗಳನ್ನು ಬಿಡಿ ಸಿಕೊಳ್ಳುತ್ತಾರೆ.

ಒಂದು ರೀತಿಯಲ್ಲಿ ಇದು ಚರ್ಮಕ್ಕೆ ಗಾಯ ಮಾಡಿಕೊಂಡ ಹಾಗೆ. ಆದರೆ ಇದನ್ನು ಹಾಕುವ ಮುಂಚೆ ಇದು ಎಷ್ಟು ಸುರಕ್ಷಿತ ಎಂದು ಯೋಚಿಸುವುದು ಒಳ್ಳೆಯದು. ಸೂಜಿಗಳ ಮೂಲಕ ಹಚ್ಚಿಸಿಕೊಂಡ ಟ್ಯಾಟುಗಳ ಜಾಗದಲ್ಲಿ ಒಂದು ತಿಂಗಳವರೆಗೆ ನೋವು ಮತ್ತು ಊತ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಬಳಸಲಾದ ಇಂಕ್‌ ನಿಂದ ಕೆಲವರಿಗೆ ಅಲರ್ಜಿ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಈ ಶಾಯಿಯು ದೀರ್ಘ‌ಕಾಲಿಕವಾಗಿ ನಮ್ಮ ದೇಹದ ಪ್ರತಿ ರಕ್ಷಣಾ ವ್ಯವಸ್ಥೆ ಮತ್ತು ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಮರ್‌ಕ್ಯುರಿ, ಬೇರಿಯಮ್‌ ನಂತಹ ಅಸುರ ಕ್ಷಿತ ಘಟಕವನ್ನು ಹೊಂದಿರುವ ಈ ಶಾಯಿಯು ಚರ್ಮದ ಕ್ಯಾನ್ಸರ್‌ಗೂ ಕಾರಣವಾಗಬಹುದು.

ಟೆಟನಸ್‌, ಹೆಪಟೈಟಿಸ್‌-ಬಿ, ಹೆಪಟೈಟಿಸ್‌- ಸಿ ನಂತಹ ರಕ್ತ ದಿಂದ ಹರಡುವ ರೋಗಗಳು ಇದರ ಮೂಲಕ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಬಗ್ಗೆಯೂ ಎಚ್ಚರಿಕೆ ಯಿಂದಿರ ಬೇಕು. ಒಂದು ಬಾರಿ ಹಚ್ಚೆ ಅಥವಾ ಟ್ಯಾಟೂ ಹಾಕಿಸಿ ಕೊಂಡರೆ ಮತ್ತೆ ಅದನ್ನು ತೆಗೆಯುವುದು ಕಷ್ಟ. ಕೆಲವರಲ್ಲಿ ಗಾಯ ಸರಿಯಾಗಿ ವಾಸಿಯಾಗದೆ ದೀರ್ಘ‌ಕಾಲಿನ ಅಥವಾ ಶಾಶ್ವತವಾದ ಕಲೆ, ಗುರುತುಗಳಾಗುವ ಸಾಧ್ಯತೆಗಳು ಇವೆ.

 ಡಾ| ರಶ್ಮೀ ಭಟ್‌

ಇಂದು ಹೆಚ್ಚು ಓದಿದ್ದು

Trending videos

Back to Top