ಡಯಟ್ ಆರೋಗ್ಯಕರವಾಗಿರಲಿ


Team Udayavani, Jan 22, 2019, 8:44 AM IST

sudi-7.jpg

ದೇಹದ ತೂಕ ಇಳಿಸಬೇಕು ಎನ್ನುವವರು ಸಮತೋಲಿತ ಆಹಾರ ಸೇವನೆ ಹಾಗೂ ಆರೋಗ್ಯಕರ ದಿನಚರಿಯನ್ನು ಪಾಲಿಸುವುದು ಬಹುಮುಖ್ಯ. ವಾರ ಅಥವಾ ತಿಂಗಳಲ್ಲಿ ದೇಹದ ತೂಕ ಇಳಿಸಬೇಕು ಎಂಬ ಬಗ್ಗೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಆ ಗುರಿಯನ್ನು ತಲುಪಲು ಯಾವುದೇ ಒತ್ತಡವಿಲ್ಲದೆ ಜೀವನಪದ್ಧತಿ ಪಾಲನೆ ಮಾಡುವುದು ಅಗತ್ಯ.

ತೂಕ ಇಳಿಸುವಿಕೆ ನಿಧಾನಗತಿ ಹಾಗೂ ಆರೋಗ್ಯಕರವಾಗಿರಬೇಕು. ತ್ವರಿತಗತಿಯ ಡಯೆಟ್ ದೀರ್ಘ‌ಕಾಲದ ಪ್ರಯೋಜನಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯಕರ ಡಯೆಟ್‌ಗೆ ಹೆಚ್ಚಿನ ಮಹತ್ವ ನೀಡಬೇಕು. ಇದಕ್ಕಾಗಿ ಪಾಲಿಸಬೇಕಾದ ಪ್ರಮುಖ 5 ಅಂಶಗಳು ಇಲ್ಲಿವೆ

•ಸಂಸ್ಕರಿಸಿದ ಆಹಾರಕ್ಕೆ ನೋ

ಸಂಸ್ಕರಿಸಿದ ಆಹಾರ ಎಂದರೆ ಬೇರೆನೂ ಅಲ್ಲ ಪ್ಯಾಕ್‌ ಆಗಿರುವ ಆಹಾರಗಳು. ಪ್ಯಾಕ್‌ ಆಗಿರುವ ಆಹಾರಗಳಿಗೆ ಕೆಡದಂತೆ ರಾಸಾಯನಿಕಗಳನ್ನು ಹಾಕಿರುತ್ತಾರೆ. ಈ ರಾಸಾಯನಿಕಗಳು ದೇಹಕ್ಕೆ ಹಾಗೂ ಆರೋಗ್ಯಕ್ಕೆ ಉತ್ತಮವಲ್ಲ. ಇದು ಸ್ಥೂಲಕಾಯತೆಗೆ ಕಾರಣವಾಗಬಹುದು. ಇದಕ್ಕಾಗಿ ತಾಜಾ ಹಣ್ಣುಗಳು, ಧವಸ ಧಾನ್ಯಗಳು ಅಥವಾ ಬೀಜಗಳಿಗೆ ಮೊರೆಹೋಗುವುದು ಉತ್ತಮ.

•ಸಕ್ಕರೆ, ಉಪ್ಪಿನಾಂಶದ ಕುರಿತು ನಿಗಾ ಇರಲಿ

ನಿತ್ಯದ ಆಹಾರದಲ್ಲಿರುವ ಸಕ್ಕರೆ ಹಾಗೂ ಉಪ್ಪಿನ ಪ್ರಮಾಣ ಕೂಡ ತೂಕ ಇಳಿಸುವಿಕೆಯ ಪ್ರಮುಖ ಅಂಶ. ಇದಕ್ಕಾಗಿ ತಾಜಾ ಪಾನೀಯ (ನಿಂಬೆ ರಸ, ಎಳ ನೀರು), ನೈಸರ್ಗಿಕವಾಗಿ ಸಿಹಿ ಅಂಶವುಳ್ಳ ಜೇನುತುಪ್ಪ ಹಾಗೂ ಬೆಲ್ಲವನ್ನು ಉಪಯೋಗಿಸಿ.

•5 ಬಾರಿ ಸಣ್ಣ ಆಹಾರವಿರಲಿ

ಎಲ್ಲರೂ ನಿತ್ಯ ಮೂರು ಹೊತ್ತು ಆಹಾರ ಸೇವಿಸುವುದು ಸಾಮಾನ್ಯ. ಇದರ ನಡುವೆ ಎರಡು ಬಾರಿ ಸ್ನಾಕ್ಸ್‌ ಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ದೇಹದಲ್ಲಿರುವ ಶಕ್ತಿಯನ್ನು ನಿಯಂತ್ರಣ ಮಾಡಬಹುದು. ಈ ಸ್ನಾಕ್ಸ್‌ ನೈಸರ್ಗಿಕವಾಗಿರಬೇಕು. ಇದಕ್ಕಾಗಿ ಹಣ್ಣುಹಂಪಲು, ಸಲಾಡ್‌ ಅಥವಾ ಒಣಹಣ್ಣುಗಳನ್ನು ಸೇವಿಸಬಹುದು.

• ಸಾಫ್ಟ್ ಡ್ರಿಂಕ್ಸ್‌, ಕಾಫಿ, ಟೀ ಬೇಡ

ಬಾಯರಿಕೆಯಾದಾಗ ದಾಹ ತೀರಿಸುವ ಸಲುವಾಗಿ ಎಲ್ಲರೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಾರೆ. ಇನ್ನು ಅತಿಯಾಗಿ ಕಾಫಿ, ಟೀ ಸೇವನೆಯೂ ಒಳ್ಳೆಯದಲ್ಲ. ಇದರಲ್ಲಿ ಹೆಚ್ಚಿನ ಕ್ಯಾಲೋರಿ ಹಾಗೂ ಸಕ್ಕರೆ ಅಂಶಗಳಿರುತ್ತವೆ. ಹೀಗಾಗಿ ಇವುಗಳನ್ನು ಬಿಟ್ಟು ಬ್ಲ್ಯಾಕ್‌ ಟೀ, ಗ್ರೀನ್‌ ಟೀ, ನಿಂಬೆರಸ, ನೀರು ಕುಡಿಯುವುದು ಉತ್ತಮ. ಆರೋಗ್ಯಕರ ಡಯೆಟ್ ಎಂದರೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳುವುದು ಎಂಬುದು ನೆನಪಿರಲಿ

••ರಮ್ಯಾ ಕೆದಿಲಾಯ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.