CONNECT WITH US  

ಕತೆ: ಭವದಲಿ ಬರಿದೆ...

ನಾನು ಯಾರಿಗೇಂತ ಯೆಂತಕ್ಕೇಂತ ಬದುಕಿರ್ಬೇಕು? ಅಂತ ರಘುನಂದನ ಎಣಿಸ್ಲಿಕ್ಕೆ ಸುರುಮಾಡಿದ್ದ. ಅವ ಯಾಕೆ ಹಾಗೆ ಎಣಿಸ್ತಾ ಇದ್ದ? ಅನ್ನುದನ್ನು ಹೇಳೆನೆ ಕೇಳಿ. ರಘುನಂದನ ಊರಿನ ಪ್ರವೇಟ್‌ ಕಾಲೇಜೊಂದರಲ್ಲಿ ಕನ್ನಡ ಲೆಕ್ಚರರ್‌ ಆಗಿ ರಿಟೈರ್‌ ಆಗಿದ್ದವ. ಅವನದ್ದು ಭಾರೀ ತೋರ(ದಪ್ಪ)ದ ಗಿಡ್ಡದ ದೇಹ. ಸಾಣೆ ಮಂಡೆ(ಬಕ್ಕ ತಲೆ) ಗುಡಾಣದ ಹಾಗೆ ಇದ್ದ ಹೊಟ್ಟೆ. ಆ ಹೊಟ್ಟೆಯನ್ನು ಕುಣಿಸಿ ಕ್ಲಾಸಿನಲ್ಲಿ ತನ್ನನೇ ತಾನು ಮಕ್ಕಾರು (ಹಾಸ್ಯ) ಮಾಡಿಕೊಂಡು  ಪಾಠ ಮಾಡಿದ್ರೆ ಮಕ್ಕಳೆಲ್ಲ ಬಿದ್ದು ಬಿದ್ದು ನೆಗಾಡ್ತಿದ್ರು.

ತನ್ನ ಕ್ಲಾಸ್‌ ಆದ ಕೂಡ್ಳೆ ಕ್ಯಾಂಟೀನಿಗೆ ಹೋಗಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಸಮಾ ತಿಂತಿದ್ದ. ತಾನು ತಿನ್ನೂದು ಮಾತ್ರ ಅಲ್ಲ , ಡಿಪಾರ್‌r ಮೆಂಟಿನವರಿಗೆ, ಒಂದಿಷ್ಟು ಸ್ಟೂಡೆಂಟ್ಸೆಗೆ ತಿನ್ನಿಸ್ತಿದ್ದ. ಬಾಯಿತುಂಬ ಮಾತು, ಹೊಟ್ಟೆತುಂಬ ಊಟ-ತಿಂಡಿ ಅವ ಬಯಸ್ತಾ ಇದ್ದದ್ದಾಗಿತ್ತು. ಅಂಥ ರಘುನಂದನ ಈಗ ಹೀಗೆ ಚಿಂತೆಯಲ್ಲಿ ಬಿದ್ದು ತಾನು ಯಾಕೆ ಬದುಕಿರಬೇಕು ಅಂತ ಎಣಿಸ್ತಾ ಕೂತಿದ್ದಕ್ಕೆ ಒಂದು ಕಾರಣವೂ ಇತ್ತು.

ಅವನ ಬದುಕು ಒಂಥರಾ ವಿಚಿತ್ರವಾದ ತಿರುವುಗಳನ್ನು ತೆಗೆದುಕೊಂಡಿತ್ತು. ಮೂವರು ತಂಗಿಯರಿಗೆ ಮದುವೆ ಮಾಡುವ ಹೊಣೆ ಅವನ ಮೇಲೆಯೇ ಬಿದ್ದಿತ್ತು. ಎಲ್ಲ ಆಗುವಾಗ ಇವನ ಪ್ರಾಯ ನಲವತ್ತು ದಾಟಿತ್ತು. ಅಂತೂಇಂತೂ ಒಂದು ಹುಡುಗಿ ಸಿಕ್ಕಿ ಮದುವೆಯಾದ. ಅವಳು ಅವನಿಗಿಂತ ಹದಿನೈದು ವರ್ಷಕ್ಕೆ ಚಿಕ್ಕವಳು. ಮೊದಲ ರಾತ್ರಿಯ ದಿನವೇ ಅವನ ಕಾಲಿಗೆ ಬಿದ್ದು, ""ನನ್ನನ್ನು ಕ್ಷಮಿಸಿ. ನಾನು ಒಬ್ಬನನ್ನು ಲವ್‌ ಮಾಡಿದ್ದೆ. ಅವ ಬೇರೆ ಜಾತಿಯವ. ಅಪ್ಪ, ಅಣ್ಣ ಎಲ್ಲ ಒಟ್ಟಾಗಿ ನನ್ನನ್ನು ನಿಮ್ಮ ಕುತ್ತಿಗೆಗೆ ಕಟ್ಟಿದ್ರು. ನಂಗೆ ಈ ಮದುವೆ ಇಷ್ಟ ಇರ್ಲಿಲ್ಲ. ನನ್ನನ್ನು ಅವನ ಹತ್ರ ಕಳಿಸಿಕೊಡಿ. ಇಲ್ಲಾತಾದ್ರೆ ನಾನು ಜೀವ ತೆಕ್ಕೊಳೆನೆ'' ಅಂತ ಹೇಳಿದ್ಲು. ಅವ ಪಿಟ್‌ ಪಿರ್‌ ಹೇಳದೆ ಅವಳನ್ನು ಅವಳ ಲವ್ವರ್‌ನ ಹತ್ರ ಕರ್ಕೊಂಡು ಹೋಗಿ ಬಿಟ್ಟು ಬಂದಿದ್ದ. ಡೈವೋರ್ಸ್‌ ಕೊಟ್ಟು ತಾನೇ ಮುಂದೆ ನಿಂತು ಅವರಿಬ್ಬರ ಮದುವೆ ಮಾಡಿಸಿದ್ದ. ಆಗ ಅವನ ಸಂಬಂಧಿಕರೆಲ್ಲ, "ಹೆಂಡತಿಯನ್ನು ಕಂಟ್ರೋಲಲ್ಲಿ ಇಟ್ಟಕೊಳ್ಳಿಕ್ಕೆ ಆಗದ ನೀ ಯೆಂತ ಗಂಡಸಾ? ನಾನಾಗಿದ್ರೆ ಬಡಿದು ಬುದ್ಧಿ ಕಲಿಸ್ತಾ ಇದ್ದೆ' ಅಂತ ಮಕ್ಕಾರು ಮಾಡುತ್ತಿದ್ದರು. ಮಾತ್ರ ಅಲ್ಲ ಕಾಲೇಜಲ್ಲಿ ಸ್ಟೂಡೆಂಟ್ಸ್‌ ಕಲೀಗ್ಸ್‌ ಎಲ್ಲ "ಪಾಪ ಮಾರ್ರೆ ಮದುವೆಯಾದ ದಿವಸವೇ ಹೆಂಡತಿ ಅವರನ್ನು ಬಿಟ್ಟು ಹೋದದ್ದು. ಅವರು ಬಜೀ ಪಾಪದ ಜನ ಮಾರ್ರೆ. ಎಂಥವರಿಗಾದ್ರೂ ಹೀಗೆ ಆಗ್ಬಾರ್ಧು ಮಾರ್ರೆ' ಅಂತ ಹೇಳ್ತಾ ಇದ್ರು. ಈ ಸುದ್ದಿ ಪ್ರತೀ ವರ್ಷ ಪಾಸಾಗಿ, ಪಾಸಾಗಿ ಹೊಸ ವಿದ್ಯಾರ್ಥಿಗಳು ಅವನನ್ನು ಕಾಮಿಡಿಯಾಗಿ ನೋಡೂದು ಮಾತಾಡೂದು ಎಲ್ಲ ಆಗ್ತಿತ್ತು. ಕಡೆಗೆ ಅವ ಅದನ್ನು ನಿವಾರಿಸ್ಲಿಕ್ಕೆ ತಾನೇ ಕ್ಲಾಸಲ್ಲಿ ತನ್ನ ಹೆಂಡತಿ ಬಿಟ್ಟು ಹೋದದ್ದರ ಬಗ್ಗೆ ಹೇಳಿಕೊಂಡು ಮಕ್ಕಳನ್ನು ನೆಗಾಡಿಸ್ತಿದ್ದ.

ಇಂಥ ರಘುನಂದನ ತಾನೊಬ್ಬನೇ ಭೂತದ ಹಾಗೆ ಮನೆಯಲ್ಲಿ ಇರಬೇಕಾಗ್ತದೆ. ಬದಲಿಗೆ ಹಳ್ಳಿಯಿಂದ ಆಣ್ಣನ ಮಗನನ್ನು ಡಿಗ್ರಿ ಮಾಡಿಸ್ಲಿಕ್ಕೆ ಅಂತ ಕರ್ಕೊಂಡು ಬಂದ್ರೆ ಅವನಿಗೂ ಸಹಾಯ ಆಗ್ತದೆ ತನಗೂ ಸಹ ಅನುಕೂಲ ಆಗ್ತದೆ ಅಂತ ಎಣಿಸಿ ಹಾಗೆ ಮಾಡಿದ. ಆದ್ರೆ ಅವ ಓದಿ ಬರತ್ತು ಆಗ್ಲಿಲ್ಲ. ಆ ಬಿಸಿನೆಸ್‌ ಮಾಡ್ತೇನೆ, ಈ ಬಿಸಿನೆಸ್‌ ಮಾಡ್ತೇನೆ ಅಂತ ರಘುನಂದನನ ದುಡ್ಡು ಒಂದಷ್ಟು ಹಾಳು ಮಾಡಿದ ಶಿವಾಯಿ ಒಂದು ಚೂರೂ ಉದ್ಧಾರ ಆಗ್ಲಿಲ್ಲ.  "ಅವನಿಗೆ ಒಂದು ಮದುವೆ ಮಾಡಿ. ನಿಮಿಗೆ ಸಾ ಏಜಾಯ್ತು . ಯೆಷ್ಟೂಂತ ಕೈ ಮೈ ಸುಟ್ಟುಕೊಂಡು ಅಡುಗೆ ಮಾಡಿಕೊಳ್ತೀರಿ?' ಅಂತ ಯಾರೋ ಹೇಳಿದ್ರು. ಎಂತೆಂಥದೋ ಸುಳ್ಳುಹೇಳಿ ಒಂದು ಹೆಣ್ಣನ್ನು ತಂದು ಅಣ್ಣನ ಮಗನಿಗೆ ಗಂಟು ಹಾಕಿದ. ಆದ್ರೆ ಅವಳು ಬಂದವಳು, "ಮಾವಾ, ನಂಗೆ ಅದು ಮಾಡಿ ಹಾಕಿ, ಇದು ಮಾಡಿ ಹಾಕಿ' ಎಂದು ಹೇಳಿ ಕೂತು ತಿಂದೆ ಹೊರ್ತು ಇವನಿಗೆ ಅಡುಗೆ ಮಾಡಿ ಹಾಕುವ ಲಕ್ಷಣವಿರಲಿಲ್ಲ. ಗಂಡ-ಹೆಂಡತಿ ಇಬ್ರೂ ಅವನ ದುಡ್ಡನ್ನು ಪುಡಿ ಮಾಡೂದು ಹೇಗೆ ಅಂತ ಲೆಕ್ಕ ಹಾಕ್ತಾ ಇದ್ರು. 

ಅವನಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ ಆಯಿತು. ಕಾಲೇಜು ಬಿಟ್ಟ ಕೂಡೆÛ ಮನೆಗೆ ಹೋಗದೆ, ಕ್ಯಾಂಟೀನಿನಲ್ಲಿ ಸಮಾ ಗೋಳಿಬಜೆ, ಪೋಡಿ, ಬನ್ಸ್‌ ಹೀಗೆ ಕಂಡಾಪಟ್ಟೆ ತಿಂದು ಆಮೇಲೆಯೇ ಮನೆಗೆ ಹೋಗ್ಲಿಕ್ಕೆ ಸುರು ಮಾಡಿದ. ಮೊದಲೇ ತೋರ ಇದ್ದ ಅವ ಮತ್ತಷ್ಟು ದಪ್ಪ ಆದ. ಹೀಗೆ ಒಂದು ದಿನ ಕ್ಲಾಸಿನಲ್ಲಿ ಪಾಠ ಮಾಡ್ತಾ ಇ¨ªಾಗ ತಲೆತಿರುಗಿ ಕಣ್ಣುಕತ್ತಲೆ ಬಂದು ಬಿದ್ದ. ಕಾಲೇಜಿನವ್ರು ಆಸ್ಪತ್ರೆಗೆ ಎಡ್ಮಿಟ್‌ ಮಾಡಿದ್ರು. ಎಲ್ಲ ಚೆಕ್‌ ಮಾಡಿದ ಡಾಕುó, "ಕೊಲೆಸ್ಟ್ರಾಲ್‌ ಹೆಚ್ಚಾಗಿದೆ. ಬೀಪೀಯೂ ಉಂಟು. ಶುಗರ್‌ ಕೂಡಾ ಬಾರರ್‌ ದಾಟಿದೆ. ನೀವು ವೈಟ್‌ ಲಾಸ್‌ ಮಾಡಿಕೊಳ್ಳದೆ ಇದ್ರೆ ನಿಮ್ಮ ಪರಿಸ್ಥಿತಿ ಕಷ್ಟ ಆಗ್ಲಿಕ್ಕಿದೆ' ಅಂತ ಹೇಳಿದ್ರು. ಮಾತ್ರ ಅಲ್ಲ , "ನಾನು ಒಂದಿಷ್ಟು ಟ್ಯಾಬ್ಲೆಟ್ಸ್‌ ಬರೀತೇನೆ. ಅದನ್ನು ತೆಕ್ಕೊಳ್ಳಿ. ಒಂದಿಷ್ಟು ಎಕ್ಸ್‌ಸೈಜ್‌ ಮಾಡಿ ಡಯಟ್‌ ಮಾಡಿ. ಸ್ವಲ್ಪ ದಿನ ಇಲ್ಲೆ ಎಡ್ಮಿಟ್‌ ಆಗಿ. ನಾನು ಸ್ಲಿಂ ಮಾಡಿ ಕಳಿಸ್ತೇನೆ' ಅಂತ ಅಂದ್ರು. ಆಗ ಅಲ್ಲಿಯೇ ಇದ್ದ ಅವನ ಕಲೀಗ್‌ ಒಬ್ರು, "ಅದೆಲ್ಲಕ್ಕಿಂತ ಪ್ರಕೃತಿ ಚಿಕಿತ್ಸೆಗೆ ಸೇರಿಸಿ. ಇಪ್ಪತ್ತೂಂದು ದಿನ ಟ್ರೀಟ್‌ ಮೆಂಟ್‌ ಕೊಟ್ಟು ಬೀಪೀ, ಶುಗರ್‌, ಕೊಲೆಸ್ಟ್ರಾಲ್‌ ಎಲ್ಲ ತೆಗೀತಾರೆ. ಯಾವ ಮೆಡಿಸಿನ್ನೂ ಬೇಡ. ಎಂಥದೂ ಬೇಡ ಅಂತ ಅವನ ಅಣ್ಣನ ಮಗನ ಹತ್ರ ಹೇಳಿದ್ರು. ಆಗ ಸೊಸೆ, "ಹೌದು, ಮಾವನನ್ನು ಅಲ್ಲಿಗೇ ಸೇರಿಸುವಾ ಅಂತ ಗಂಡನ ಹತ್ರ ಹೇಳಿದು. ಹೊಟ್ಟೆ ತುಂಬ ತಿಂದು ಅಭ್ಯಾಸ ಇದ್ದ ಅವನಿಗೆ ಡಯಟ್‌ ಎಕ್ಸಸೈಜ್‌ ಎಲ್ಲ ಹೇಳಿದಾಗ ಕಂಗಾಲಾದ. ಡಾಕ್ಟ್ರ ಹತ್ರ ಅವ ದೀನನಾಗಿ, "ಡಾಕ್ಟ್ರೇ... ಮನುಷ್ಯ ತಿಂದ್ರೂ ಸಾಯ್ತಾನೆ. ತಿನ್ನದೇ ಇದ್ರೂ ಸಾಯ್ತಾನೆ. ಹೀಗಿರುವಾಗ ತಿಂದು ಸಾಯುದೇ ಒಳ್ಳೇದು ಅಂತ ನನ್ನ ಆಲೋಚನೆ ಅಂತ ಹೇಳಿದ. ಅದಕ್ಕೆ ಡಾಕುó," ಸಾಯುವ ಮಾತು ಬೇಡ ಮಿಸ್ಟರ್‌ ರಘುನಂದನ್‌. ಏನಾದ್ರೂ ಹೆಚ್ಚು ಕಡಮೆಯಾಗಿ ಹಾಸಿಗೆ ಹಿಡೆ› ಎಂಥ ಗತಿ? ಅದಕ್ಕೆ ಯಾರು ರೆಸ್ಪಾನ್‌ಸಿಬಲ್‌? ಅಂತ ಹೇಳಿ ಬಾಯಿ ಮುಚ್ಚಿದ್ದೇ ತಡ, ಮಗ, ಸೊಸೆ ಎಲ್ಲ ಸೇರಿಕೊಂಡು , "ಹೌದು ಡಾಕ್ಟ್ರೇ ನೀವು ಹೇಳಿದ್ದು ಕರೆಕ್ಟ್ ನಮಿಗೆ ಇವರ ಹೆಲ್ತ್‌ ತುಂಬಾ ಮುಖ್ಯ ಅಂತ ಹೇಳಿ ಪ್ರಕೃತಿ ಚಿಕಿತ್ಸೆಗೆ ಸೇರಿಸುವ ನಿರ್ಧಾರ ತೆಕ್ಕೊಂಡ್ರು. ಆಗ ರಘುನಂದನ ಇನ್ನು ಎರಡೇ ತಿಂಗಳು ಇರೂದು ರಿಟೈರ್‌ ಆಗ್ಲಿಕ್ಕೆ. ನನ್ನ ಪೆನನ್‌ ಪೇಪರ್‌ಗಳು  ಮೂವ್‌ ಆಗ್ಲಿಕ್ಕೆ ಉಂಟು. ತುಂಬಾ ಕೆಲಸ ಉಂಟು. ಆಮೇಲೆ ಬೇಕಾದ್ರೆ ನೋಡುವ ಅಂತ ದಮ್ಮಯ್ಯ ಹೊಡಿಯುವ ರೀತಿಯಲ್ಲಿ ಹೇಳಿದೆ. ಮನೆಗೆ ಹೋದಮೇಲೆ ಅಣ್ಣನ ಮಗ ಹೆಂಡತಿಯ ಹತ್ತಿರ ಗುಟ್ಟಿನಲ್ಲಿ ಮಾತಾಡ್ತಾ, "ಚಿಕ್ಕಪ್ಪ ರಿಟೈರ್‌ ಆದ ಮೇಲೆಯೇ ನಾವು ಅವರನ್ನು ನ್ಯಾಚುರೋಪತಿಗೆ ಸೇರಿಸುವಾ. ಇನ್ಷೊರೆನ್ಸ್‌, ಅದು ಇದು ಅಂತ ಲಕ್ಷಗಟೆ ಬರ್ತದೆ. ಅವ್ರಿಗೆ ಹಿಂದೆ ಮುಂದೆ ಯಾರೂ ಇಲ್ಲ. ಆ ಎಲ್ಲ ದುಡ್ಡು ನಮಿಗೆಯೇ. ಆಮೇಲೆ ಗಮ್ಮತ್ತು ಮಾಡುವಾ. ಮುದುಕ ಮೂಲೆಯಲ್ಲಿ ಬಿದ್ದಿರ್ಲಿ' ಅಂತ ಹೇಳೂದು ಕೇಳಿತು. ರಘುನಂದನನಿಗೆ ಭೂಮಿ ತನ್ನನ್ನು ನುಂಗಬಾರದಾ ಅಂತ ಅನ್ನಿಸ್ತಾ ಇತ್ತು.ಅಂತೂ ಎರಡು ತಿಂಗಳಲ್ಲಿ ರಿಟೈರ್‌ ಆದ. ಅದ್ರ ಮಾರನೆಯ ದಿವಸವೇ ಅವನನ್ನು ಪ್ರಕೃತಿ ಚಿಕಿತ್ಸೆಯ ಕೇಂದ್ರಕ್ಕೆ ಸೇರಿಸಿದ್ದಿದ್ರು.

ಯಾರ್ಯಾರೂ ಗುರುತು ಪರಿಚಯದವರು ಅಲ್ಲಿ ಇರ್ಲಿಲ್ಲ. ಟ್ರೀಟ್‌ಮೆಂಟಿಗೇಂತ ಬಂದವರಲ್ಲಿ ಹೆಚ್ಚಿನವರು ಉತ್ತರಭಾರತದ ಕಡೆಯವರು. ಹಿಂದಿ ಇಂಗ್ಲಿಶ್‌ ಮಾತಾಡುವ ಹೈ ಫೈ ಜನರು. ಒಂದಿಷ್ಟು ಮಂದಿ ಬೆಂಗಳೂರಿನವರು ಇದ್ರೂ ಅವರು ಯಾರೂ ಕನ್ನಡ ಮಾತಾಡ್ತಾ ಇರ್ಲಿಲ್ಲ. ಇವ ಮಾತಾಡಿಕ್ಕೆ ಟ್ರೆ ಮಾಡಿದ್ರೆ ಹಾಯ್‌ ಹಲೋ ಅಷ್ಟೇ ಉತ್ತರ. ಟ್ರೀಟ್‌ಮೆಂಟ್‌ ಕೊಡುವವರು ಒಂದು ದಿವಸ ದೇಹಕ್ಕೆ ಎಣ್ಣೆ ಮಸಾಜ್‌ ಮಾಡ್ತಾ ಇರುವಾಗ, "ವಾ ಬೊಡ್ಡೆಯಾ ಯೆಂಚಿನ ತಿನೆ³ನಾ ದಾನ್ನ ಬಂಜಿಗ್‌. ಯಿಂಬನ ಬಂಜಿ ತೂಲ' (ಎಂಥ ದಪ್ಪದವ ನೋಡು ಇವ. ಎಂಥ ತಿಂತಾನಾ ಹೊಟ್ಟೆಗೆ. ಇವನ ಹೊಟ್ಟೆ ನೋಡು) ಅಂತ ತುಳುವಿನಲ್ಲಿ ಮಾತಾಡಿಕೊಂಡಿದ್ರು. ಆಗ ಅವ ತುಳುವಿನಲ್ಲೇ ಉತ್ತರ ಕೊಟ್ಟಾಗ, "ನೀವು ಊರಿನವರೆಯಾ? ನೀವು ಯಾಕೆ ಇಲ್ಲಿ ಸೇರಿದ್ದು?' ಅಂತ ಒಂಥರಾ ಮರುಕದಿಂದ ಕೇಳ್ತಾ ಇದ್ರು, ಅವ ತನ್ನ ಕತೆ ಎಲ್ಲ ಹೇಳಿದ್ದ. ತಾನು ಲೆಕ್ಚರರ್‌ ಅಂತ ಹೇಳಿದ ಮೇಲೆ ಅಲ್ಲಿನ ಸಿಬ್ಬಂದಿಗಳಿಗೆ ಅವನ ಮೇಲೆ ಗೌರವ ಹೆಚ್ಚಾಯಿತು. ಆದ್ರೆ ಅಲ್ಲಿನ ಟ್ರೀಟ್‌ಮೆಂಟ್‌ಗಳ್ಳೋ ಭಯಂಕರ. ಮೊದಲ ದಿವಸವೇ ಸೋನಾಬಾತ್‌ ಅನ್ನುವ ಹೆಸರಿನಲ್ಲಿ ಎಪ್ಪತ್ತೈದು ಡಿಗ್ರಿ ಸೆಲ್ಸಿಯಸ್‌ನ ಛೇಂಬರಿನಲ್ಲಿ ಇಪ್ಪತ್ತು ನಿಮಿಷ ಕುಳ್ಳಿರಿಸಿದಾಗ ಅವನು ಕಂಗಾಲಾಗಿ ಹೋದ. ದೇಹದ ಬೊಜ್ಜು ಕರಗಲು ಕೊಡುವ ಟ್ರೀಟ್‌ಮೆಂಟುಗಳೆಲ್ಲ  ಭಯಾನಕ ಅಂತ ಅವನಿಗೆ ಅನ್ನಿಸಲು ಸುರುವಾಯ್ತು. ಇಡೀ ದಿನ ಊಟ ಇಲ್ಲದೆ ಬರೇ ಅವರು ಕೊಟ್ಟ ಕಷಾಯ, ಉಪ್ಪು-ಸಕ್ಕರೆಗಳಿಲ್ಲದ ಜ್ಯೂಸ್‌ಗಳನ್ನು ಕುಡಿದು ಹೈರಾಣಾಗಿ ಹೋದ. ಹೊರಗಡೆ ಹೋಗುವ ಹಾಗಿಲ್ಲ. ಬೇರೆ ತಿಂಡಿ ಸಿಗೂದಿಲ್ಲ. ಒಂದು ಕಡೆ ವಿಪರೀತ ಹಸಿವು. ಮತ್ತೂಂದು ಕಡೆ ಟ್ರೀಟ್‌ಮೆಂಟಿನ ನೋವು. ರಾತ್ರಿ ಮಲಗಿದ್ರೆ ನಿದ್ರೆ ಬರ್ಲಿಲ್ಲ. ಹೊರಳಾಡಿ ಹೊರಳಾಡಿ ಇಟ್ಟ. "ಊಟ ಅಂದ್ರೆ ಇಷ್ಟ ಅಂತ ಅವನ ವಾಟ್ಸ್‌ಆ್ಯಪ್‌ ಇತ್ತು. ಅದನ್ನು ನೋಡಿದ ಅವನ ಕೆಲವು ಗೆಳೆಯರು, "ಯಾಕೆ ಬೊಜ್ಜು ಬೆಳೆಸಿಕೊಂಡೆ? ಅನುಭವಿಸು ಈಗ.ಎಂಥಾ ಅವಸ್ಥೆ ಮಾರಾಯಾ ನಿಂದು? ಇಷ್ಟೆಲ್ಲ ಸಂಪಾದನೆ ಮಾಡಿ ಸಾ ಬೇಕಾದ ಹಾಗೆ ಬದುಕುವ ಸ್ವಾತಂತ್ರ್ಯ ಇಲ್ಲವಲ್ಲ ನಿಂಗೆ?' ಅಂತ ಫೋನ್‌ ಮಾಡಿ ಮಕ್ಕಾರು ಮಾಡಿದ್ದಿದ್ರು. ಮನೆಗೆ ಫೋನ್‌ ಮಾಡಿದ್ರೆ ಮಗ ಸೊಸೆ ಮಾತಾಡುವ ಸ್ಥಿತಿಯಲ್ಲಿಯೇ ಇರ್ಲಿಲ್ಲ. ಹಾಗಾಗಿ, ಅವನು, ಕತೆಯ ಸುರುವಿನಲ್ಲಿ ನಾನು ಹೇಳಿದ ಹಾಗೆ ಆವತ್ತು ಸಂಜೆ ಆ ರೀತಿ ಎಣಿಸ್ತಾ ಕೂತಿದ್ದ. ಆವತ್ತು ರಾತ್ರಿ ಡೈನಿಂಗ್‌ ಹಾಲಿಗೆ ಬಂದು ತನ್ನ ಪಾಲಿನ ಜ್ಯೂಸ್‌ ತೆಕ್ಕೊಂಡು ಕುಡೀತಾ ಇರೂವಾಗ ನಡುವಯಸ್ಸಿನ ಹೆಂಗಸೊಬ್ಬಳು ಕನ್ನಡದ ಕಾದಂಬರಿ ಓದುತ್ತ¤ ಜ್ಯೂಸ್‌ ಕುಡೀತಾ ಇರೂದು ಕಂಡಿತು. ಎಣ್ಣೆಗಪ್ಪು ಬಣ್ಣದ ಹದಾ ಎತ್ತರದ ಲಕ್ಷಣದ ಹೆಂಗಸು. ಒಬ್ಬಳೇ ಇದ್ದದ್ದು ಅವನಿಗೆ ಒಂದು ರೀತಿಯಲ್ಲಿ ಕುತೂಹಲ ಅನ್ನಿಸಿತು. ಹತ್ತಿರ ಹೋದ. "ನಮಸ್ಕಾರ' ಅಂದ. ಅವಳು ಒಮ್ಮೆಲೇ ನೋಡಿದಳು. ಆ ನೋಟದಲ್ಲಿ ಒಮ್ಮೆಗೇ ಡಿಸ್ಟರ್ಬ್ ಆದಂತೆ ಅನ್ನಿಸಿತು. ಅವಳ ನೋಟ ಒಮ್ಮೆಗೇ ಕ್ರೂರವೂ ಆಯಿತು. "ನಾನು ರಘುನಂದನ ಅಂತ. ಇದೇ ಊರಿನವ. ಕಾಲೇಜಲ್ಲಿ ಲೆಕ್ಚರರ್‌ ಆಗಿದ್ದವ ಅಂತೆಲ್ಲ ಪರಿಚಯ ಮಾಡಿಕೊಂಡ. ಅವಳು ಹೆಚ್ಚು ಏನನ್ನು ಸಾ ಮಾತಾಡಿÛಲ್ಲ.  ಮರು ದಿವಸ ಅವ ಬಿಡಿÛಲ್ಲ. ಮಾತಾಡಿÛಕ್ಕೆ ಟ್ರೆç ಮಾಡಿದ. ಆಗ ಅವಳು,"ನಾನು ರಾಜಲಕ್ಷ್ಮೀ. ಬೆಂಗಳೂರಿನಲ್ಲಿ ಲೆಕ್ಚರರ್‌ ಆಗಿ ವಾಲೆಂಟರಿ ರಿಟೈರ್‌ವೆುಂಟ್‌ ತೆಗೊಂಡಿದ್ದೇನೆ ಅಂತ ಹೇಳಿದು. ರಘುನಂದನ ತಾನು ಬೊಜ್ಜು ಕರಗಿಸ್ಲಿಕ್ಕೆ ಹ್ಯಾಗೆ ತಂಗೆ ಇಷ್ಟ ಇಲ್ಲದಿದ್ರೂ ಬಂದು ಸೇರ್ಬೇಕಾಯ್ತು' ಅನ್ನೂದನ್ನು ಹೇಳಿದ. ಎಲ್ಲ ಕೇಳಿದ ಅವಳ ಮುಖದಲ್ಲಿ, "ಅಯ್ಯೋ ನಿನ್ನ ಅವಸ್ಥೆಯೇ' ಎನ್ನುವ ಭಾವನೆ ಕಂಡು ಬಂತು. "ನಂಗೆ ಹಾಗಿಲ್ಲಪ್ಪ. ಐ ಆಮ್‌ ವೆರಿ ವೆರಿ ಲಕ್ಕೀ. ನನ್ನ ಹಸ್‌ಬೆಂಡಿಗೆ ನಾನು ಇಲ್ಲಿಗೆ ಬರೂದು ಸುತಾರಾಂ ಇಷ್ಟ ಇರಲಿಲ್ಲ. ನಾನೇ ನಂಗೆ ಶುಗರ್‌ ಸುರುವಾಗೋ ಸಿಮ್‌ಟಮ್ಸ್‌  ಕಾಣಾ¤ ಇದೆ ಅಂತ ಬಂದೆ. ಮಗಂಗೂ ಅಷ್ಟೆ. ಇಲ್ಲಿಗೆ ಬರೋದು ಇಷ್ಟಾನೇ ಇರ್ಲಿಲ್ಲ. ಮಮ್ಮಿ ನಿನ್ನ ಬಿಟ್ಟು ಇರೋಕ್ಕೇ ಆಗೋದಿಲ್ಲಮ್ಮಾ ಅಂತ ಹೇಳ್ತಿದ್ದ. ಸೊಸೆ ಕೂಡ ನೀವು ಹೋಗ್ಲೆà ಬಾರ್ಧು ಅಂತ ಹಟ ಹಿಡಿದು.  ಆದ್ರೆ ನಾನೇ ಟೆನ್‌ಡೇಸ್‌ ಕೋರ್ಸ್‌ ಮಾಡ್ಕೊಂಡು ಬರ್ತೇನೆ ಅಂತ ಹೇಳಿ ಬಿಡಿಸ್ಕೊಂಡು ಬಂದೆ. ಎಷ್ಟು ಲಕ್ಕೀ ಅಲ್ವಾ ಇಂಥ ಗಂಡ, ಮಗ, ಸೊಸೆಯನ್ನೆಲ್ಲ ಪಡಿಯೋಕೆ?'' ಅಂತ ಹೆಮ್ಮೆಯಿಂದ ಹೇಳಿಕೊಂಡು. ರಘುನಂದನ, ""ಹೌದು ಮೇಡಂ, ನೀವು ತುಂಬಾ ಲಕ್ಕಿ'' ಅಂತ ಹೇಳಿದ. ಗೊತ್ತಿಲ್ಲದೇ ದೊಡ್ಡದಾಗಿ ಒಂದು ಶ್ವಾಸ ಅವನಿಂದ ಹೊರಗೆ ಬಿತ್ತು. ಆಮೇಲಿಂದ ಯಾವಾಗ ಅವಳು ಸಿಕ್ಕಿದ್ರೂ ಮಾತಾಡಿದ್ರೆ ತನ್ನ ಬಗ್ಗೆಯೇ ಹೇಳಿಕೊಳ್ತಾ ಇದು. ತನ್ನ ಬಗ್ಗೆ ಹೇಳಿಕೊಂಡು ಕಡೇಯಲ್ಲಿ ,"ನಾನು ತುಂಬ ಲಕ್ಕಿ ಅಲ್ವಾ?' ಅಂತ ಕೇಳುದು ಮಾಮೂಲಾಗಿತ್ತು. ಹಾಗೆ ಕೇಳುವಾಗ, "ನೀನು ಬರೀ ಬುರ್‍ನಾಸು ಸ್ಥಿತಿಯಲ್ಲಿ ಇದ್ದೀಯಾ' ಎನ್ನುವ ಹಾಗೆ ನೋಡ್ತಾ ಇದು.

ಆವತ್ತು ಆದಿತ್ಯವಾರ. ಟ್ರೀಟ್‌ಮೆಂಟಿಗೆ ಬಂದವರನ್ನೆಲ್ಲ ಸಂಜೆ ಒಟ್ಟು ಸೇರಿಸಿ ಯೋಗ ಕಲಿಸಿಕೊಡುವ ಗುರುಗಳು, ""ಇವತ್ತು ಪ್ರತಿಯೊಬ್ರೂ ಎಂಥದಾದ್ರೂ ಕಾರ್ಯಕ್ರಮ ಕೊಡ್ಬೇಕು. ರಂಜನೆ ಮುಖ್ಯ. ಯಾರನ್ನೂ ನೋಯಿಸ್ಬಾರ್ಧು ಅಂತ'' ಅಂದ್ರು. ಅವಳ ಸರ್ತಿ ಬಂದಾಗ "ಭುವನೇಶ್ವರಿಯ ನೆನೆ ಮಾನಸವೇ' ಕೀರ್ತನೆಯನ್ನು ಚೆಂದ ಹಾಡಿದು. "ಭವದಲಿ ಬರಿದೇ ನವೆಯದೇ ನೋಯದೇ' ಎನ್ನುವ ಸಾಲನ್ನು ಬೇರೆ ಬೇರೆ ಸಂಗತಿಯಲ್ಲಿ ಹಾಡುವಾಗ ಅವಳ ಕಣ್ಣಂಚಿನಲ್ಲಿ ನೀರು ಉಕ್ಕಿ ಬಂದದ್ದನ್ನು ಅವ ನೋಡಿದ. ಯೆಂತಕ್ಕೋ ಹೊಟ್ಟೆಯೆಲ್ಲ ಕಿವುಚಿದ ಹಾಗೆ ಆಯಿತು. "ಚೆನ್ನಾಗಿ ಹಾಡಿದ್ರಿ'ಅಂತ ಹೇಳ್ಬೇಕು ಅಂತ ಅವ ಎಣಿಸೂದೊಳಗೆ ಅವಳು ಓಡಿ ಹೋಗಿ ರೂಮು ಸೇರಿಕೊಂಡಿದ್ದಳು.
ಮರುದಿವಸ ಸಂಜೆ ಯೋಗಮಂದಿರದಲ್ಲಿ ಎಂಥದೋ ಬಗ್ಗಿ ಬಗ್ಗಿ ಹುಡುಕ್ತಾ ಇದು ರಾಜಲಕ್ಷ್ಮೀ. " ಎಂತ ಹುಡುಕ್ತಾ ಇದ್ದೀರಿ?' ಅಂತ ಕೇಳಿದ. ಅವಳು, ""ನನ್ನ ನತ್ತು ಇಲ್ಲೇ ಎಲ್ಲೋ ಬಿದ್ದು ಹೋಗಿದೆ. ನಿನ್ನೆ ಪೋ›ಗ್ರಾಂಗೆ ಬರೋವಾಗ ಇತ್ತು. ಆವಾಗ್ಲೆ ಎಲ್ಲೋ ಬಿದ್ದು ಹೋಯೂ¤ಂತ ಅನ್ಸುತ್ತೆ. ಇವತ್ತು ಬೆಳಿಗ್ಗೆನೇ ನಂಗೆ ಫೀಲಾಗಿದ್ದು ನತ್ತು ಇಲ್ಲಾತ. ಮದುವೇ ಟೈಂನಲ್ಲಿ ನನ್ನ ಹಸ್ಬೆಂಡ್‌ ಹಾಕಿದ್ದು. ಈಗ ಕಾಣಿಸ್ತಾ ಇಲ್ಲ'' ಅಂತ ಹೇಳಿದು. ಇವನೂ ಹುಡುಕಿದ. ಸಿಗ್ಲಿಲ್ಲ. ಮರುದಿವಸ ಸಂಜೆ ಅವನು ಸಹ ಅವಳು ಸಹ ಡಿಸ್‌ಛಾರ್ಜ್‌ ಆಗುವವರು. ಅವ ರೂಮು ಖಾಲಿ ಮಾಡಿ ಇನ್ನೇನು ಬಿಲ್‌ ಪೇ ಮಾಡಿ ಹೊರಡ್ಬೇಕು ಅಂತ ಎಣಿಸ್ತಾ ಇದ್ದ. ಅಷ್ಟು ಹೊತ್ತಿಗೆ ಕೆಲಸದವಳು ಬಂದು, ""ಮೂಗುತಿ ಸಿಕ್ಕಿದೆ ನೋಡಿ'' ಅಂತ ತೋರಿಸಿದು. ಅವ ಕೂಡೆ ತೆಕ್ಕೊಂಡು ಅವಳು ಇದ್ದ ರೂಮಿನ ಕಡೆಗೆ ಹೋದ. ಆಗ ಅವಳು ಅದಾಗ್ಲೆ ಹೋಗಿಯಾಯ್ತು ಅಂತ ಉತ್ತರ ಸಿಕ್ಕಿತು. ಕೌಂಟರಿಗೆ ಬಂದು "ರಾಜಲಕ್ಷ್ಮೀಯವರ ಎಡ್ರೆಸ್‌ ಕೊಡಿ' ಅಂತ ಕೇಳಿದ. "ಹಾಗೆಲ್ಲ ಕೊಡಿÛಕ್ಕಾಗೂದಿಲ್ಲ' ಅಂತ ಖಂಡಿತವಾಗಿ ಹೇಳಿದ್ರು. ಛೆ! ಎಂತ ಕೆಲಸ ಆಯ್ತು ಅವಳ ಮೊಬೈಲ್‌ ನಂಬರೂ ಇಲ್ಲ. ಇದ್ರೆ ತಾನೇ ಈ ಮೂಗುತಿ ತಲುಪಿಸºಹುದಾಗಿತ್ತು ಅಂತ ಎಣಿಸಿ ಅದನ್ನು  ಕಿಸೆಗೆ ಹಾಕಿಕೊಂಡ. ಆಟೋ ತರಿಸಿಕೊಂಡು ಲಗೇಜ್‌ ಹಾಕಿಕೊಂಡು ಹೊರಟ. ಸೆಕ್ಯುರಿಟಿಯವನಿಗೆ ಎಗ್ಸಿಟ್‌ ಪಾಸ್‌ ಕೊಡಿಕ್ಕೆ ಅಂತ ಹೋದಾಗ ಅಲ್ಲಿ ಅವಳಿ¨ªಾಳೆ! "ಹೋ' ಅಂತ ಕೂಗ್ತಾ ( ಅಳುತ್ತಾ) ಇದ್ದಾಳೆ. ಗಾಬರಿಯಾಗಿ, ""ಯಾಕೆ ಮೇಡಂ ಎಂತದಾಯ್ತು?'' ಅಂತ ಕೇಳಿದ. ಆಗ ಅವಳು, ""ಸಾರ್‌... ನನ್ನನ್ನು ನನ್ನ ಮಗ ಸೊಸೆ ಎಲ್ಲ ಸೇರಿ ಹೊರಗೆ ಹಾಕಿದ್ದಾರೆ. ಅವ್ರೇ ಇಲ್ಲಿಗೆ ಬಲವಂತವಾಗಿ ಸೇರಿಸಿದ್ದು. ನಾನು ವೀಆರ್‌ಎಸ್‌ ಕೊಡುವ ಹಾಗೆ ಮಾಡಿದ್ದು ಕೂಡಾ ನನ್ನ ಸೊಸೆಯೇ. ನನ್ನ ಗಂಡ ತುಂಬ ವರ್ಷಗಳ ಹಿಂದೆಯೇ ಹೋಗಿºಟ್ಟಿದ್ದಾರೆ ಎಕ್ಸಿಡೆಂಟಲ್ಲಿ. ಇರುವವ ಒಬ್ನೇ ಮಗ. ಚೆನ್ನಾಗಿ ಸಾಕಿ ಬೆಳೆಸಿದೆ. ಈಗ ನನ್ನ ಗತಿ ಹೀಗಾಗಿದೆ. ಸಾರ್‌ ನನ್ನನ್ನು ಕ್ಷಮಿಸಿ... ನಾನು ನಿಮ್ಗೆ ಸುಳ್ಳು ಹೇಳಿದೆ. ಈಗ ನಾನು ಎಲ್ಲಿ ಹೋಗ್ಲಿ ಏನು ಮಾಡಿ ಅಂತ ನಂಗೆ ದಿಕ್ಕೇ ತೋಚಾ¤ ಇಲ್ಲ. ಇದ್ದ ಹಣವೂ ಖಾಲಿಯಾಗಿದೆ'' ಅಂತ ಹೇಳಿ ಸೇಂಕಿ ಸೇಂಕಿ ( ಬಿಕ್ಕಿ ಬಿಕ್ಕಿ) ಕೂಗಿದು. ಅಷ್ಟುಹೊತ್ತಿಗೆ ಅವ ಬರ್ಲಿಕ್ಕೆ ಹೇಳಿದ ಆಟೋದವ ಹಾರ್ನ್ ಮಾಡಿದ. ಅವನು, "ಬನ್ನಿ ಆಟೋ ಹತ್ತಿ ನನ್ನ ಮನೆಗೆ ಹೋಗುವಾ' ಅಂದ. ಅವಳು ಒಂದು ಸರ್ತಿ ಅವನನ್ನು ನೋಡಿದು. ಆಟೊದೊಳಗೆ ಬಂದು ಕೂತಳು. ಹೋಗ್ತಾ ಇರುವಾಗ, "ಗಡಿಬಿಡಿಯಲ್ಲಿ ಮರಿದ್ದೆ. ನಿಮ್ಮ ಮೂಗುತಿ ಸಿಕ್ಕಿದೆ' ಅಂತ ಹೇಳಿ  ತೆಗುª ತೋರಿಸಿದ. "ಮನೆಗೆ ಹೋದ್ಮೇಲೆ ದೇವ್ರ ಎದುರಲ್ಲಿ ಇಟ್ಟು ನೀವೇ ಅದನ್ನು ನಂಗೆ ಕೊಡಿ' ಅಂತ ಹೇಳಿದು. ಬೀಸುವ ಗಾಳಿ ಹೊಸ ಹಾಡು ಹಾಡ್ತಿತ್ತು. ಅವನ ಭುಜದಲ್ಲಿ ಅವಳು ಮಲಗಿದು.

ಪಿ. ಬಿ. ಪ್ರಸನ್ನ


Trending videos

Back to Top