CONNECT WITH US  

ವೈದ್ಯರೇಕೆ, ವೈದ್ಯಕೀಯ ಅಧಿಕಾರಿಯೇ ಆಗಿ

ಚುನಾವಣೆ, ಭಯೋತ್ಪಾದಕರ ದಾಳಿ, ಬಂದ್‌ಗಳು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಸೇವೆ ಅನನ್ಯ. ಇಂಥ ಪರಿಸ್ಥಿತಿಗಳಲ್ಲಿ ಹಲ್ಲೆಗೀಡಾದ ಮೀಸಲು ಪೊಲೀಸರ ಶುಶ್ರೂಷೆ ಮತ್ತು ಸೇವೆಗಾಗಿ ಪ್ರತ್ಯೇಕ ವೈದ್ಯಕೀಯ ತಂಡವಿರುತ್ತದೆ. ಅಂಥ ತಂಡದಲ್ಲಿದ್ದು ದೇಶ ರಕ್ಷಕರ ಶುಶ್ರೂಷೆ ಮಾಡುವ ಆಸೆ ನಿಮಗಿದೆಯೇ? ವೈದ್ಯಕೀಯ ಅಧಿಕಾರಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸುವುದರ ಮೂಲಕ ಕೇಂದ್ರ ಮೀಸಲು ಪೊಲೀಸ್‌ ಪಡೆ ಅಂಥದ್ದೊಂದು ಸದಾವಕಾಶವನ್ನು ವೈದ್ಯರ ಮುಂದಿಟ್ಟಿದೆ. 

ಯಾವಾಗಲೂ ಕ್ಲಿನಿಕ್‌, ಆಸ್ಪತ್ರೆ ಅಂತ ತಿರುಗಾಡೋದೇ ಆಯ್ತು! ಇವೆಲ್ಲವನ್ನೂ ಮೀರಿ ಬೇರೆ ಏನಾದ್ರೂ ಮಾಡ್ಬೇಕು. ಅದು ದೇಶಕ್ಕೂ ಸಲ್ಲಿಸುವ ಸೇವೆ ಕೂಡಾ ಆಗಬೇಕು ಅಂದುಕೊಳ್ಳುವ ವೈದ್ಯರಿದ್ದಾರೆ. ತಾವೇ ಪ್ರತ್ಯೇಕವಾಗಿ ವೈದ್ಯರ ತಂಡ ರಚಿಸಬೇಕು. ಹೊಸ ರೀತಿಯ ಕೌಶಲ್ಯಗಳನ್ನು ಅರಿತುಕೊಳ್ಳಬೇಕು. ದೇಶಾದ್ಯಂತ ತಿರುಗಾಡಿ ಸೇವೆ ಸಲ್ಲಿಸಬೇಕು ಎಂದು ಕನಸು ಕಾಣುವ ವೈದ್ಯರೂ ಇದ್ದಾರೆ. ಅಂಥವರಿಗಾಗಿ, ದೇಶಾದ್ಯಂತ ಕೇಂದ್ರ ಮೀಸಲು ಪೊಲೀಸ್‌ ಪಡೆ ತಜ್ಞ ವೈದ್ಯಕೀಯ ಅಧಿಕಾರಿ (ಉಪ ಕಮಾಂಡೆಂಟ…) 232 ಹುದ್ದೆ, ಸಹಾಯಕ ವೈದ್ಯಕೀಯ ಅಧಿಕಾರಿ( ಸಹಾಯಕ ಕಮಾಂಡೆಂಟ…) 429 ಹುದ್ದೆಗಳಿಗೆ ಪುರುಷ ಮತ್ತು ಮಹಿಳೆಯರಿಗೂ ಅವಕಾಶ ಕಲ್ಪಿಸಿದೆ.

ಪ್ರತಿ ರಾಜ್ಯದಲ್ಲಿ ಕೇಂದ್ರ ಮೀಸಲು ಪಡೆಯ ಪೊಲೀಸರ ತುಕಡಿಗಳಿರುತ್ತವೆ. ಅವರು ದೇಶದ ಆಂತರಿಕ ಭದ್ರತೆ, ಪ್ರತಿಷ್ಠಿತ ವ್ಯಕ್ತಿಗಳ ರಕ್ಷಣೆ, ಗುಪ್ತಚರ ದಳದ ಭದ್ರತೆಗಾಗಿ ಶ್ರಮಿಸುತ್ತಿರುತ್ತಾರೆ. ಚುನಾವಣೆ, ಬಂದ್‌, ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸರು, ಅವರ ಪರಿವಾರ, ಮೀಸಲು ತುಕಡಿ ಇತ್ಯಾದಿಗೆ ಸಂಬಂಧಿಸಿದಂತೆ ಆರೋಗ್ಯ ರಕ್ಷಣೆ, ಶುಷೂಷೆೆ, ವೈದ್ಯರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ತಜ್ಞ ವೈದ್ಯಾಧಿಕಾರಿಗಳದ್ದು. 

ವಿದ್ಯಾರ್ಹತೆಗಳೇನು?
ತಜ್ಞ ವೈದ್ಯಕೀಯ ಅಧಿಕಾರಿಯಾಗಲು, ಎಂ.ಬಿ.ಬಿ.ಎಸ್‌, ಎಂ.ಡಿ.ಮಾಡಿರಬೇಕು. ದಿನಕ್ಕೆ ಎರಡು ಪಾಳಿಯಲ್ಲಿ ದುಡಿದ ಕರ್ತವ್ಯದ ಅನುಭವ, ರಾಜ್ಯ ಮೆಡಿಕಲ… ಕೌನ್ಸಿಲ್‌ ಅಥವಾ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯಲ್ಲಿ ರಿಜಿಸ್ಟರ್‌ ಆಗಿರಬೇಕು. ಕಡ್ಡಾಯವಾಗಿ ವೈದ್ಯಕೀಯ ರೊಟೇಟಿಂಗ್‌ ಇಂಟರ್ನ್ಶಿಪ್‌ ಮುಗಿಸಿರಬೇಕು. ವೈದ್ಯಕೀಯ ಸ್ನಾತಕೋತ್ತರ ಪದವಿ/ ಡಿಪ್ಲೊಮಾ ಅಗತ್ಯ. ಆಸ್ಪತ್ರೆಯ ದೈನಂದಿನ ಕಾರ್ಯದ ಎ, ಬಿ ಸೆಕ್ಷನ್‌ಗಳಲ್ಲಿ ಒಂದೂವರೆ ವರ್ಷ ಕಾರ್ಯ ನಿರ್ವಹಿಸಿರಬೇಕು. ವೈದ್ಯಕೀಯ ಸ್ನಾತಕೋತ್ತರ ಪದವಿ ಸಂಬಂಧಿತ ಎರಡೂವರೆ ವರ್ಷ ವೃತ್ತಿ ನಿರ್ವಹಿಸಿದ ಅನುಭವವಿರಬೇಕು. ವೈದ್ಯಕೀಯ ಅಧಿಕಾರಿಯಾಗಲು, ಸ್ನಾತಕೋತ್ತರ ಪದವಿ ಪಡೆದಿದ್ದು, ರೊಟೇಟಿಂಗ್‌ ಇಂಟರ್ನ್ಶಿಪ್‌ ಮಾಡಿದ್ದರೆ ಸಾಕು. ತಜ್ಞ ವೈದ್ಯಕೀಯ ಅಧಿಕಾರಿಗೆ ಗರಿಷ್ಠ 40 ವರ್ಷ, ವೈದ್ಯಕೀಯ ಅಧಿಕಾರಿಗೆ 30 ವರ್ಷ ವಯೋಮಿತಿಯಿರಬೇಕು. ಪರಿಶಿಷ್ಟರಿಗೆ 5 ವರ್ಷ ಹಾಗೂ ಹಿಂದುಳಿದವರಿಗೆ 3 ವರ್ಷ ವಯೋಮಿತಿಯ ಸಡಿಲಿಕೆಯಿದೆ.

ತಜ್ಞ ವೈದ್ಯಕೀಯ ಅಧಿಕಾರಿಗೆ ತಿಂಗಳಿಗೆ 67,000- 2,08,700 ರೂ., ವೈದ್ಯಕೀಯ ಅಧಿಕಾರಿಗೆ 56,100- 1,77,500 ರೂ. ವರೆಗೆ ಸಂಬಳ ನೀಡಲಾಗುತ್ತದೆ. ದೈಹಿಕ ಮತ್ತು ವೈದ್ಯಕೀಯ ವಿವರ ಅವಶ್ಯ. ಪುರುಷ ಅಭ್ಯರ್ಥಿಯು 157 ಸೆಂ.ಮೀ ಎತ್ತರ, ದೇಹದ ಸುತ್ತಳತೆ 77ಸೆಂ.ಮೀ ನಿಂದ 82 ಸೆಂ.ಮೀ ಹೊಂದಿರಬೇಕು. ಎತ್ತರಕ್ಕೆ  ತಕ್ಕ ತೂಕ ಇರಬೇಕು. ಮಹಿಳಾ ಅಭ್ಯರ್ಥಿ, 142 ಸೆಂ. ಮೀ ಎತ್ತರವಿರಬೇಕು. ಕಣ್ಣಿಗೆ ಸಂಬಂಧಿತ ದೂರ, ಸಮೀಪ ದೃಷ್ಟಿ ದೋಷವಿದ್ದರೆ ಮೊದಲೇ ತಿಳಿಸಬೇಕು. 

ಆಯ್ಕೆ ಹೇಗೆ?
ಉಪ ಮತ್ತು ಸಹಾಯಕ ಕಮಾಂಡೆಂಟ… ಹುದ್ದೆಗೆ ಆಯ್ಕೆ ಮಾಡಿಕೊಳ್ಳಲು 200 ಅಂಕಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತಾರೆ. ಮೆಡಿಕಲ… ಆಫೀಸರ್‌ ಸೆಲೆಕ್ಷನ್‌ ಬೋರ್ಡ್‌ ನೇರ ಸಂದರ್ಶನ ನಡೆಸುತ್ತದೆ. ಅಭ್ಯರ್ಥಿಯ ಸಾಮಾನ್ಯ ಜ್ಞಾನ, ವೈದ್ಯಕೀಯ ಕೌಶಲ್ಯ, ಸ್ನಾತಕೋತ್ತರ ಪದವಿಯಲ್ಲಿ ಪಡೆದ ಕ್ಷೇತ್ರದ ಅನುಭವ, ವ್ಯಕ್ತಿತ್ವ, ಸಹನೆ, ನಾಯಕತ್ವ ಗುಣ, ಸಾಧನೆಯನ್ನು ಪರಿಗಣಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದ ಅಂಕಪಟ್ಟಿ ಸೇರಿದಂತೆ, ಎಲ್ಲ ದಾಖಲೆಗಳ ಪರಿಶೀಲನೆಯೂ ನಡೆಯುತ್ತದೆ. ಸಂದರ್ಶನದ ಬಳಿಕ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಅಭ್ಯರ್ಥಿಯ ದೈಹಿಕ ಸಾಮರ್ಥ್ಯ, ಆರೋಗ್ಯ ಮತ್ತು ಇತರ ಪರಿಶೀಲನೆ ನಡೆಸಲಾಗುತ್ತದೆ. ಇವೆಲ್ಲವನ್ನೂ ಸೇರಿಸಿ 200 ಅಂಕದ ಪಟ್ಟಿ ತಯಾರಿಸಿ ಸೆಲೆಕ್ಷನ್‌ ಬೋರ್ಡ್‌ ಆಯ್ಕೆ ಮಾಡುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ರಾಷ್ಟ್ರೀಕೃತ ಬ್ಯಾಂಕಿನ 400 ರೂ. ಗಳ ಐಪಿಒ, ಬ್ಯಾಂಕ್‌ ಡ್ರಾಫ್ಟ್, ಬ್ಯಾಂಕರ್‌ ಚೆಕ್‌ ಮೂಲಕ ಡೈರೆಕ್ಟರೇಟ್‌ ಜನರಲ್‌, ಸಿ.ಆರ್‌.ಪಿ.ಎಫ್, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ಸಿಜಿಒ ಕಾಂಪ್ಲೆಕ…, ಲೋಧಿ ರೋಡ್‌, ನವದೆಹಲಿ ಈ ವಿಳಾಸಕ್ಕೆ ಹುದ್ದೆ ಸೇರುವ ಕುರಿತು ಡ್ರಾಫ್ಟ್ ಕಳುಹಿಸಬೇಕು. ನಂತರ goo. gl/DIcGld ಜಾಲತಾಣದಿಂದ ಅರ್ಜಿಯ ಪ್ರಿಂಟ್‌ಔಟ್‌ ತೆಗೆದುಕೊಂಡು ಅಗತ್ಯ ಮಾಹಿತಿಗಳನ್ನು ತುಂಬಿ, ಭಾವಚಿತ್ರ ಅಂಟಿಸುವ ಜಾಗದಲ್ಲಿ ಚಿತ್ರಗಳನ್ನು ದಾಖಲಿಸಿ. ದೃಢೀಕರಿಸಿದ ಸಂಬಂಧಿತ ದಾಖಲೆಗಳನ್ನು ಆ ಅರ್ಜಿಯೊಂದಿಗೆ ಲಗತ್ತಿಸಬೇಕು. ಯಾವ ಹು¨ªೆಗೆ ಅರ್ಜಿ ಸಲ್ಲಿಸುತ್ತೀರೆಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ನಿಮ್ಮ ವಿಳಾಸವನ್ನು ಬರೆದಿರುವ ಸ್ಟಾಂಪ್‌ ಲಗತ್ತಿಸದ ಎರಡು ಪ್ರತ್ಯೇಕ ಕವರ್‌ಗಳನ್ನು ಅದರ ಜೊತೆಯಿಟ್ಟು ಮತ್ತೂಂದು ಕವರ್‌ನಲ್ಲಿ ಕೆಳಗೆ ನೀಡಲಾಗಿರುವ ವಿಳಾಸ ಬರೆದು ಕವರ್‌ ಅನ್ನು ಪೋಸ್ಟ್‌ ಮಾಡಬೇಕು.

THE DEPUTY INSPECTOR GENERAL (RECTT.)
MEDICAL OFFICER SELECTION BOARD (CAPFs) –2017
HQ DG CRPF, BLOCK NO. 01, CGO COMPLEX,
LODHI ROAD, NEW DELHI – 110003

ಅರ್ಜಿ ಸಲ್ಲಿಸಲು ಜುಲೈ 7 ಕಡೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ "www.crpf.nic.in'ಜಾಲತಾಣವನ್ನು ಸಂಪರ್ಕಿಸಿ.

ಎನ್‌. ಅನಂತನಾಗ್‌


Trending videos

Back to Top