CONNECT WITH US  

"ಗ್ರ್ಯಾಂಡ್‌' ಕಾರ್ನಿವಲ್‌! ಕಿಯಾ ಮೋಟಾರ್ನಿಂದ ಹೊಸ ಹೆಜ್ಜೆ

ಇನ್ನೋವಾ ಕ್ರಿಸ್ಟಾಗೆ ಪ್ರತಿಸ್ಪರ್ಧಿ ನಿರೀಕ್ಷೆ

ಭಾರತದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಎಸ್‌ಯು, ಎಂಪಿ ವಾಹನಗಳಿಗೆ ಬೇಡಿಕೆ ಹೆಚ್ಚು. ಇದು ಗೊತ್ತಿಲ್ಲದ ವಿಷಯವೇನಲ್ಲ, ಕಳೆದ ಐದಾರು ವರ್ಷಗಳಿಂದೀಚೆ ಎಸ್‌ಯು ವಾಹನಗಳ ತಯಾರಿಕೆಯಲ್ಲಿ ಗಣನೀಯ ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿ.

 ಆದರೆ ವಿಷಯ ಅದಲ್ಲ, ಎಸ್‌ಯು ವಾಹನಗಳ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚಲಾರಂಭಿಸಿದೆ. ಕಾರು ತಯಾರಿಸುವ ಹೆಚ್ಚಿನ ಕಂಪನಿಗಳು ಕಳೆದ ನಾಲ್ಕೈದು ವರ್ಷಗಳಿಂದ ಗ್ರಾಹಕರ ಬೇಡಿಕೆ, ತಂತ್ರಜಾnನ ಅಳವಡಿಕೆಯ ಉದ್ದೇಶಗಳಿಗಾಗಿ ಹೊಸ ಹೊಸ ಮಾಡೆಲ್‌ಗ‌ಳನ್ನು ಪರಿಚಯಿಸುತ್ತಲೇ ಬಂದಿವೆ. ವಿಶ್ವದ ಅಗ್ರ ಪಂಕ್ತಿಯಲ್ಲಿರುವ ಹೆಚ್ಚಿನ ಕಂಪನಿಗಳೂ ಈಗಾಗಲೇ ಭಾರತದ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಬೇರೂರಿದ್ದು, ಅಷ್ಟೇ ಸುಲಭವಾಗಿ ಗ್ರಾಹಕನ ನಾಡಿ ಮಿಡಿತವನ್ನೂ ಅರಿತುಕೊಂಡು ಈ ಬದಲಾವಣೆ ಮಾಡುತ್ತ ಬಂದಿವೆ. ಈ ಎಲ್ಲಾ ಕಂಪನಿಗಳ ಎಸ್‌ಯು ವಾಹನಗಳಿಗೆ ಸ್ಪರ್ಧೆಯೊಡ್ಡಲು ಇದೀಗ ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆ ಕಿಯಾ ಮೋಟಾರ್, ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿದೆ.

 ಹೌದು, ಭಾರತದ ಮಾರುಕಟ್ಟೆಯ ಪ್ರಗತಿ ಅರಿತು ತನ್ನ ಉತ್ಪನ್ನದ ಮಾರಾಟಕ್ಕೆ ಇದೇ ಸಕಾಲ ಎಂದು ನಿರ್ಧರಿಸಿರುವ ಕಿಯಾ ಮೋಟಾರ್ ಟೊಯೋಟ ಸಂಸ್ಥೆಯ ಇನ್ನೋವಾಗೆ ಸ್ಪರ್ಧೆಯೊಡ್ಡುವಂತಹ 11 ಸೀಟರ್‌ ಎಂಪಿ ವಾಹನವೊಂದನ್ನು ಪರಿಚಯಿಸುತ್ತಿದೆ. ಇನ್ನೋವಾ ಕ್ರಿಸ್ಟಾ ಮಾಡೆಲ್‌ನ ವಿನ್ಯಾಸಕ್ಕೆ ಸಾಕಷ್ಟು ಸಾಮ್ಯತೆ ಹೊಂದಿರುವ ವಾಹನ ಇದಾಗಿದೆ. ಅದೇ ಗ್ರ್ಯಾಂಡ್‌ ಕಾರ್ನಿವಲ್‌.

 2018ರ ವರ್ಷಾರಂಭದಲ್ಲಿ ನಡೆದ ಆಟೋ ಎಕ್ಸ್‌ಪೋನಲ್ಲಿ ಗ್ರ್ಯಾಂಡ್‌ ಕಾರ್ನಿವಲ್‌ ವಾಹನವನ್ನು ಪ್ರದರ್ಶಿಸಿದ್ದ ಕಿಯಾ ಮೋಟಾರ್ ಆಗ ದೊರೆತ ಪ್ರೋತ್ಸಾಹದ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಶೀಘ್ರ ಮಾರುಕಟ್ಟೆ ಪ್ರವೇಶಿಸಲು ತಯಾರಿ ನಡೆಸಿದೆ. ಜೊತೆ ಜೊತೆಗೆ ಕ್ರಾಸ್‌ ಓವರ್‌ ಮಾದರಿಯ ಸ್ಟಾನಿಕ್‌ ಎಸ್‌ಯು ಕಾರನ್ನೂ ಪರಿಚಯಿಸುವ ಸಿದ್ಧತೆ ಮಾಡಿಕೊಂಡಿದೆಯಾದರೂ ಅದು 2019ರ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು.

ಹ್ಯುಂಡೈ ಜತೆ ಟೈಅಪ್‌
ಮಾರುಕಟ್ಟೆಯಲ್ಲಿ ಬಲಾಡ್ಯ ಸಂಸ್ಥೆ ಎನಿಸಿಕೊಂಡಿರುವ ಹ್ಯುಂಡೈ ಜತೆ ಕೈಜೋಡಿಸಿರುವ ಕಿಯಾ ಮೋಟಾರ್ ಭಾರತದಲ್ಲಿ ತನ್ನದೇ ಪ್ರೊಡಕ್ಷನ್‌ ಪ್ಲಾಂಟ್‌ ಹೊಂದಿಲ್ಲ. ಗಮನಿಸಬೇಕಾದ ಒಂದು ಅಂಶ ಏನೆಂದರೆ, ಹ್ಯುಂಡೈನ ಕೋನಾ ಹೋಲಿಕೆ ಹೊಂದಿರುವ ಗ್ರ್ಯಾಂಡ್‌ ಕಾರ್ನಿವಲ್‌ ತಯಾರಿಕೆ ಮಾತ್ರ ದೇಶಿ ಮಾರುಕಟ್ಟೆಯಲ್ಲಿನ ಬೇಡಿಕೆಗಳನ್ನು ಆಧರಿಸಿರುತ್ತದೆ. ಅನಗತ್ಯ ಪ್ರೊಡಕ್ಷನ್‌ಗೆ ಮುಂದಾಗುವ ಸಾಧ್ಯತೆಗಳೂ ಇಲ್ಲ. ಹ್ಯುಂಡೈ ಕೂಡ ಒಂದು ಪ್ರಬಲ ಸ್ಪರ್ಧಿಯೇ ಆಗಿರುವುದೂ ಇದಕ್ಕೊಂದು ಕಾರಣ.

ಟೂರಿಸ್ಟ್‌ಗಳಿಗೆ ಉತ್ತಮ ಆಯ್ಕೆ
ಇನ್ನೋವಾದಂಥ ಮಲ್ಟಿ ಯೂಸ್‌ ಕಾರುಗಳ ಸಾಲಿಗೆ ಸೇರುವ ಗ್ರ್ಯಾಂಡ್‌ ಕಾರ್ನಿವಲ್‌ ಟೂರಿಸ್ಟ್‌ಗಳಿಗೆ ಉತ್ತಮ ಆಯ್ಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಮೆರಿಕ ಸೇರಿ ವಿಶ್ವದ ಇನ್ನೂ ಕೆಲ ರಾಷ್ಟ್ರಗಳಲ್ಲಿ ಈಗಾಗಲೇ ಗ್ರ್ಯಾಂಡ್‌ ಕಾರ್ನಿವಲ್‌ (ಸೆಡೂನಾ) ಬೇಡಿಕೆಯ ಕಾರಾಗಿ ಮಾರುಕಟ್ಟೆ ಸೃಷ್ಟಿಸಿಕೊಂಡಿದೆ. 11 ಸೀಟರ್‌ ಸಾಮರ್ಥ್ಯದ ಈ ಕಾರಿನ, ಬೂಟ್‌ ಸ್ಪೇಸ್‌ ಕೂಡ ಅತ್ಯುತ್ತಮ. ಅಷ್ಟೇ ಅಲ್ಲ, ಅಗತ್ಯ ಬಿದ್ದರೆ ಲಗೇಜ್‌ ಕ್ಯಾರಿಯರ್‌ ಅನ್ನೂ ಅಳವಡಿಸಿಕೊಳ್ಳಬಹುದಾಗಿದೆ.

ತಂತ್ರಜಾnನ ಅಳವಡಿಕೆ
ಹೈಎಂಡ್‌ ಕಾರುಗಳಲ್ಲಿ ಇರಬಹುದಾದ ಸಾಕಷ್ಟು ಆಧುನಿಕ ತಂತ್ರಜಾnನದ ವ್ಯವಸ್ಥೆಯನ್ನು ಗ್ರ್ಯಾಂಡ್‌ ಕಾರ್ನಿವಲ್‌ನಲ್ಲಿ ಅಳವಡಿಸಲಾಗಿದೆ. ಪವರ್‌ ಸ್ಲಿಡಿಂಗ್‌ ಡೋರ್‌ ವ್ಯವಸ್ಥೆ ಹೊಂದಿರುವ ಈ ಕಾರಿನಲ್ಲಿ ಡೋರ್‌ಗಳನ್ನು ಬಟನ್‌ ಒತ್ತುವ ಮೂಲಕವೇ ಒಳಕ್ಕೆ ಎಳೆದುಕೊಳ್ಳಬಹುದು. ಹಾಗೇ, ಎರಡು ರೀತಿಯ ಸನ್‌ ರೂಫ್ ಅಳವಡಿಸಲಾಗಿದೆ.  ಜತೆಗೆ ಮೂರು ವಲಯಗಳ ಹವಾನಿಯಂತ್ರಿತ ವ್ಯವಸ್ಥೆಯೂ ಇದೆ. ಉಳಿದಂತೆ ಡ್ಯಾಶ್‌ಬೋರ್ಡ್‌ನಲ್ಲಿ ಟೊಯೋಟದಲ್ಲಿರುವ ಬಹುತೇಕ ಫ್ಯೂಚರ್‌ಗಳನ್ನೇ ಇದೂ ಹೊಂದಿದೆ.

ಎಂಜಿನ್‌ ಸಾಮರ್ಥ್ಯ
3.3 ಲೀಟರ್‌ 6 ಪೆಟ್ರೋಲ್‌ ಎಂಜಿನ್‌ ಹಾಗೂ 2.2ಲೀಟರ್‌ 4 ಸಿಲಿಂಡರ್‌ ಡೀಸೆಲ್‌ ಎಂಜಿನ್‌ನ ಕಾರುಗಳು ಈಗಾಗಲೇ ದೇಶಿ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ಅದನ್ನೇ ಭಾರತದಲ್ಲಿಯೂ ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆಟೋ ಟ್ರಾನ್ಸ್‌ಮಿಷನ್‌ 6ಸ್ಪೀಡ್‌ ಗೇರ್‌ ಬಾಕ್ಸ್‌ ಇದರದ್ದಾಗಿದೆ. 199ಬಿಎಚ್‌ಪಿ, 441ಎನ್‌ಎಂ ಸಾಮರ್ಥ್ಯ ಈ ಎಂಜಿನ್‌ಗಳದ್ದಾಗಿದೆ. ಎಂಥಹುದೇ ಘಟ್ಟ ಪ್ರದೇಶಗಳನ್ನೂ, ಆಫ್ ರೋಡ್‌ನ‌ಲ್ಲಿಯೂ ಸಲೀಸಾಗಿ ಮುನ್ನುಗ್ಗಬಲ್ಲದು.

ಎಕ್ಸ್‌ ಶೋ ರೂಂ ಬೆಲೆ: 17ರಿಂದ 21 ಲಕ್ಷ ರೂ.

ಹೈಲೈಟ್‌
- ಇನ್ನೋವಾ ಕ್ರಿಸ್ಟಾಕ್ಕಿಂತ 40 ಮಿ.ಮೀ.ನಷ್ಟು ಎತ್ತರ ಕಡಿಮೆ
- ಇನ್ನೋವಾ ಕ್ರಿಸ್ಟಾಗಿಂತ 310ಮಿ.ಮೀ.ನಷ್ಟು ಉದ್ದ ಜಾಸ್ತಿ
- ಉದ್ದ 5,115ಮಿ.ಮೀ./ಅಗಲ 1,985ಮಿ.ಮೀ./ಎತ್ತರ 1,755 ಮಿ.ಮೀ.

- ಗಣಪತಿ ಅಗ್ನಿಹೋತ್ರಿ


Trending videos

Back to Top