CONNECT WITH US  

ನೆಕ್ಸಾನ್‌ ಶೈನ್‌ ದೂರದ ಪ್ರಯಾಣಕ್ಕೂ ಸೈ

ಕಾರುಗಳ ಟ್ರೆಂಡ್‌ ಆಗಾಗ ಬದಲಾಗುತ್ತಲೇ ಇರುತ್ತದೆ. ಇದು ಆಟೋಮೊಬೈಲ್‌ ಮಾರುಕಟ್ಟೆಯ ಈಗಿನ ಟ್ರೆಂಡ್‌ ಏನು ಎನ್ನುವುದನ್ನು ಪ್ರತಿಬಿಂಬಿಸುತ್ತದೆ. ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿಯೇ ಈ ಬದಲಾವಣೆಗಳು ಆಗುತ್ತಿರುವುದನ್ನೂ ಗಮನಿಸಬಹುದಾಗಿರುತ್ತದೆ.

ಭಾರತೀಯ ಮಾರುಕಟ್ಟೆಯೂ ಇದರಿಂದ ಹೊರತಾಗಿಲ್ಲ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯು ಕಾರುಗಳು ಮಾತ್ರ ಟ್ರೆಂಡ್‌ ಕಾಯ್ದುಕೊಂಡು ಮುಂದುವರಿದಿರುವುದು ಗಮನಾರ್ಹ. ಈಗಲೂ ಅಗ್ರ ಐದು ಸ್ಥಾನಗಳಲ್ಲಿರುವ ಕಾರು ಕಂಪನಿಗಳು ಎಸ್‌ಯು ಸೆಗೆ¾ಂಟ್‌ ಕಾರುಗಳಲ್ಲಿ ಒಂದಿಷ್ಟು ಬದಲಾವಣೆ ಮಾಡುವ ಮೂಲಕ ಮಾರುಕಟ್ಟೆಗೆ ಹೊಸ ಹೊಸ ಮಾಡೆಲ್‌ಗ‌ಳನ್ನು ಪರಿಚಯಿಸುತ್ತಲೇ ಇವೆ.

ಸಾಕಷ್ಟು ಸ್ಪರ್ಧೆಯ ನಡುವೆಯೇ ಪರಿಚಯಿಸಲಾದ ಟಾಟಾ ಕಂಪನಿಯ ುನಿ ಎಸ್‌ಯು ನೆಕ್ಸಾನ್‌ ಇದೀಗ ನಿಧಾನವಾಗಿ ಮಾರುಕಟ್ಟೆಯಲ್ಲಿ ಜನಪ್ರಿಯತೆಯ ಜಾಗವನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ. ಟಾಟಾ ಕಂಪನಿ ಹೆಕ್ಸಾದಂಥ ಉತ್ತಮ ಮಲ್ಟಿ ಯೂಸ್‌ ವೆಹಿಕಲ್‌ ಪರಿಚಯಿಸಿ ಯಶಸ್ವಿಯಾದ ಬೆನ್ನಿಗೇ ನೆಕ್ಸಾನ್‌ ಅನ್ನೂ ಪರಿಚಯಿಸಿತು. ಈ ಹೊಸ ಕಾರಿನ ಮೂಲಕ ಟಾಟಾ ಈಗ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಡಸ್ಟರ್‌, ಈಕೋನ್ಪೋರ್ಟ್ಸ್, ಕ್ರೆಟಾ, ಬ್ರೇಜಾ ಕಾರುಗಳಿಗೆ ಈಚೆಗೆ ಮಾರುಕಟ್ಟೆಗೆ ಬಂದ ಟಾಟಾ ಕಂಪನಿಯ ಕಾರುಗಳು ನೇರ ಸ್ಪರ್ಧೆಯೊಡ್ಡುತ್ತಿವೆ.

ಹೇಗಿದೆ ನೆಕ್ಸಾನ್‌ ವಿನ್ಯಾಸ
ಭಿನ್ನ ವಿನ್ಯಾಸದಲ್ಲಿ ಕಾಣುವ ನೆಕ್ಸಾನ್‌ ಕಾರಿನ ಕ್ರೋಮ್‌ನ ಔಟ್‌ಲೆçನ್‌ ಹಾಗೂ ಜೇನುಗೂಡನ್ನು ಹೋಲುವ ಫ್ರಂಟ್‌ ಗ್ರಿಲ್‌ ಹೆಚ್ಚು ಆಕರ್ಷಣೀಯವಾಗಿದೆ. ಹಾಗೇ ಹಿಂಬದಿಯಲ್ಲಿನ ಶಾರ್ಪ್‌ ಕರ್ವ್‌ ಕಾರಿನ ಎಸ್‌ಯು ಮೆರುಗನ್ನು ಇನ್ನಷ್ಟು ಹೆಚ್ಚಿಸಿದೆ. ತನ್ನದೇ ತಯಾರಿಕೆಯ ಟಿಯಾಗೋ ಕಾರಿನಲ್ಲಿರುವ ಸ್ಟೀರಿಂಗ್‌, ಒಡೋಮೀಟರ್‌, ಸ್ಪೀಡೋಮೀಟರ್‌ಗಳನ್ನೇ ನೆಕ್ಸಾನ್‌ನಲ್ಲಿಯೂ ಬಳಸಿಕೊಳ್ಳಲಾಗಿದೆ. 6.5 ಇಂಚಿನ ಹಾರ¾ನ್‌ ಇನ್ಫೋಟೇನ್‌ಮೆಂಟ್‌ ಉತ್ತಮ ಗುಣಮಟ್ಟದ್ದಾಗಿದ್ದು, ಪ್ರಸ್ತುತ ಲಭ್ಯವಿರುವ ಬಹುತೇಕ ಎಲ್ಲಾ ಸ್ಮಾರ್ಟ್‌ ಫೋನ್‌ಗಳಿಗೂ ಕನೆಕ್ಟ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಡ್ಯಾಶ್‌ಬೋರ್ಡ್‌ ವಿನ್ಯಾಸವನ್ನು ಮೂರು ಬಣ್ಣಗಳಲ್ಲಿ ಮಾಡಲಾಗಿದೆ. ಸಾಮಾನ್ಯವಾಗಿ ದೊಡ್ಡ ಎಸ್‌ಯುಗಳಲ್ಲಿ ಇರುವಂತೆಯೇ ಕಪ್‌ ಹೋಲ್ಡರ್‌ಗಳನ್ನು ನೀಡಲಾಗಿದೆ. ಸಾಮಾನ್ಯವಾಗಿ ಮಿನಿ ಎಸ್‌ಯುಗಳಲ್ಲಿ ತಂಪಾಗಿ ಇರಿಸಲು ಕೂಲ್ಡ್‌ ಗ್ಲೋವ್‌ಬಾಕ್ಸ್‌ ನೀಡಲಾಗುವುದಿಲ್ಲ. ಆದರೆ ಟಾಟಾ ಇದನ್ನೂ ನೀಡಿ ಗ್ರಾಹಕನನ್ನು ಮೆಚ್ಚಿಸುವ ಪ್ರಯತ್ನ ಮಾಡಿದೆ. ಒಂದು ಹಂತದಲ್ಲಿ ಈ ಪ್ರಯತ್ನ ಫ‌ಲಿಸಿದೆ ಎನ್ನಲಡ್ಡಿ ಇಲ್ಲ. ಹಾಗೇ ಚಿಕ್ಕ ಲ್ಯಾಪ್‌ಟಾಪ್‌ ಇಟ್ಟುಕೊಳ್ಳಲೂ ಸ್ಥಳಾವಕಾಶವಿದೆ.

ಮೋಡ್‌ ಆಪ್ಶನ್‌
ಸಾಗುವ ಮಾರ್ಗದಲ್ಲಿನ ರಸ್ತೆಯ ಕಂಡೀಷನ್‌ ನೋಡಿಕೊಂಡು ಮೋಡ್‌ ಬದಲಾಯಿಸಿ ಓಡಿಸುವ ತಂತ್ರಜಾnನವನ್ನೂ ಅಳವಡಿಸಲಾಗಿದೆ. ಸಾಮಾನ್ಯವಾಗಿ ಇತ್ತೀಚೆಗಿನ ಬಹುತೇಕ ಕಾರುಗಳಲ್ಲಿ ಇಂಥ ವ್ಯವಸ್ಥೆ ಇರುತ್ತದೆಯಾದರೂ, ಟಾಟಾ ಕಡಿಮೆ ಬೆಲೆಯ ಕಾರುಗಳಲ್ಲೂ ಇದನ್ನು ನೀಡುವ ಪ್ರಯತ್ನಮಾಡಿರುವುದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗೇ ಉತ್ಕೃಷ್ಟ ಮಟ್ಟದ ಹವಾನಿಯಂತ್ರಿತ ಯಂತ್ರ ಬಳಸಲಾಗಿದೆ.

ಸ್ಪೇಸ್‌ ಪ್ರಾಬ್ಲೆಮ್‌ ಇಲ್ಲ
ನೆಕ್ಸಾನ್‌ಗೆ ಸವಾಲೊಡ್ಡುವ ಕೆಲವು ಮಿನಿ ಎಸ್‌ಯುಗಳಲ್ಲಿ ಲೆಗ್‌ರೂಂ ಸಮಸ್ಯೆ ಇದೆ. ಆರಾಮದಾಯಕವಾಗಿ ಕಾಲುಗಳನ್ನು ಮುಂದಕ್ಕೆ ಚಾಚಿಕೊಳ್ಳಲು ಅವಕಾಶ ಇರುವುದಿಲ್ಲ. ಆದರೆ ನೆಕ್ಸಾನ್‌ನಲ್ಲಿ ಈ ಸಮಸ್ಯೆ ಇಲ್ಲ. ಇದರಿಂದ ಎಷ್ಟೇ ದೂರದ ಪ್ರಯಾಣ ಬೆಳೆಸಿದರೂ ಕಾಲು ನೋವು ಸಮಸ್ಯೆ ಎದುರಾಗುವುದಿಲ್ಲ. ಅದೇ ರೀತಿ ಲಗೇಜ್‌ ಸ್ಪೇಸ್‌ ಕೂಡ ಉತ್ತಮ. ಮಿನಿ ಎಸ್‌ಯುಯಾದರೂ 350 ಲೀಟರ್‌ ಲಗೇಜ್‌ ಸ್ಪೇಸ್‌ ಇದ್ದು, ಹಿಂಬದಿಯ ಸೀಟ್‌ಗಳನ್ನು ಮಡಚಿಟ್ಟುಕೊಂಡರೆ ಜಾಗವನ್ನು ದುಪ್ಪಟ್ಟುಗೊಳಿಸಿಕೊಳ್ಳಬುದಾಗಿದೆ.

ಸುರಕ್ಷತೆಗೆ ಪ್ರಾಶಸ್ತ$Â
ಸುರಕ್ಷತೆಗೆ ಹೆಚ್ಚಿನ ಒತ್ತು ಕೊಟ್ಟು ಉತ್ಪಾದಿಸುವುದು ಟಾಟಾ ವಾಹನಗಳ ವೈಶಿಷ್ಟé ಎನ್ನಬಹುದು. ಉತ್ತಮ ಕವಚ ಹೊಂದಿರುವ ನೆಕ್ಸಾನ್‌ನಲ್ಲಿ ಆ್ಯಂಟಿ ಲಾಕ್‌ ಬ್ರೇಕಿಂಗ್‌ ವ್ಯವಸ್ಥೆ ಇದೆ.  ಮುಂಭಾಗದಲ್ಲಿ ಏರ್‌ ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಇಮ್ಮೊಬಿಲೈಜರ್‌ ಅನ್ನು ಸುರಕ್ಷತಾ ದೃಷ್ಟಿಯಿಂದ ಅಳವಡಿಸಲಾಗಿದೆ. ರಿವರ್ಸ್‌ ಪಾರ್ಕಿಂಗ್‌ ಕ್ಯಾಮೆರಾ, ಆಟೋಮ್ಯಾಟಿಕ್‌ ವೈಪರ್‌, ಡೀಫಾಗರ್‌ಗಳು ಸುರಕ್ಷತೆಗೆ ಇರುವ ಇನ್ನಷ್ಟು ಸಾಧನಗಳಾಗಿವೆ. ಇನ್ನು ಸ್ಮಾರ್ಟ್‌ ವಾಚ್‌ ಮುಖೇನವೂ ಕಾರನ್ನು ಆನ್‌-ಆಫ್ ನಿರ್ವಹಿಸಲು ಅವಕಾಶವಿದೆ.

- ಗಣಪತಿ ಅಗ್ನಿಹೋತ್ರಿ 


Trending videos

Back to Top