CONNECT WITH US  

160ಕ್ಕೂ ಹೆಚ್ಚಿನ ಸೇವೆ ಪಡೆಯಲು ಉಪಯೋಗಿಸಿ UMANG APP

ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರವು ಸಾರ್ವಜನಿಕರ ಸೇವೆಗಳಿಗೆ  ಒಂದು ವಿಶೇಷವಾದ ಅಧಿಕೃತ ಮೊಬೈಲ್ ಆಪ್ ಸೇವೆಯನ್ನು ಬಿಡುಗಡೆ ಮಾಡಿದ್ದು, ಇನ್ಮುಂದೆ ನೀವು ಸರ್ಕಾರದ ಸೇವೆಗಳಿಗೆ ಅಲೆಯುವ ಬದಲು ಈ ಚಿಕ್ಕ ಆಪ್ ನಿಮ್ಮ ಮೊಬೈಲಿನಲಿದ್ರೆ ಸಾಕು ಭಾರತ ಸರ್ಕಾರದ 160ಕ್ಕೂ ಹೆಚ್ಚಿನ ಸೇವೆಗಳನ್ನು ಒಂದೇ ವ್ಯವಸ್ಥೆಯಲ್ಲಿ ಪಡೆದುಕೊಳ್ಳಬಹುದು.

ಉಮಾಂಗ್ - UMANG ( Unified Mobile Application for New-age Governance ) ಎಂಬ ಹೆಸರಿನ ಈ ಸೇವೆ ಆಂಡ್ರಾಯ್ಡ್ ಆಪ್ , ಆಪಲ್ ಆಪ್ ಹಾಗೂ ಡೇಸ್ಕ್ಟಾಪ್ ತಂತ್ರಾಂಶದಲ್ಲೂ ಲಭ್ಯವಿದೆ.

ಇದರ ಅಡಿಯಲ್ಲಿ ನೀವು ಬಳಸಬಹುದಾದಂತ ಪ್ರಮುಖ ಸೇವೆಗಳೆಂದರೆ :

ಕೇಂದ್ರ ಸರ್ಕಾರದ ಸೇವೆಗಳಾದ ಆಧಾರ್ , ಪಾನ್ ಕಾರ್ಡ್ ,ಅಡುಗೆ ಅನಿಲದ ಬುಕ್ಕಿಂಗ್ & ಸಬ್ಸಿಡಿ, ಪಿಂಚಣಿ ಹಣ, ಪಾಸ್ ಫೋರ್ಟ್ ಅರ್ಜಿ, ವಾಹನದ ದಾಖಲೆ  ಪತ್ರಗಳು , ನೌಕರರ ಕಲ್ಯಾಣ ನಿಧಿ ( EPF ಮಾಹಿತಿ ) , ರೈತರ ಸೇವೆಗಳು , ವಿದ್ಯಾರ್ಥಿ ವೇತನ, ಜಿ.ಎಸ.ಟಿ , ಉದ್ಯೋಗ ಮಾಹಿತಿ ಹಾಗೂ ಕರೆಂಟ್ ಬಿಲ್, ನೀರಿನ ಬಿಲ್, ಮೊಬೈಲ್ ರೀಚಾರ್ಜ್ ಹಾಗೂ ಆದಾಯ ತೆರಿಗೆ ಸಂದಾಯ ಸೇರಿದಂತೆ 160ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾಗಿದೆ.

ಈ ಸೇವೆಯನ್ನು ನೀವು ಬಳಸಿಕೊಳ್ಳಲು - ಆಪ್ ಅಥವಾ ಜಾಲತಾಣದ ಮೂಲಕ ನಿಮ್ ಫೋನ್ ನಂ ಬಳಸಿ ನೋಂದಣಿ ಮಾಡಿಕೊಳ್ಳಬೇಕು.

ನಂತರ ನಿಮ್ಮ ಆಯ್ಕೆಯ 4 ಅಂಕೆಗಳ ಪಿನ್.ನಂ ರಚಿಸಿಕೊಳ್ಳಿ , ಹಾಗೆಯೇ  " ಆಧಾರ "ನ್ನು ಈ ಸೇವೆಗೆ ಲಿಂಕ್ ಕೂಡ ಮಾಡಬಹುದು ( ಆಧಾರ್ ಕಡ್ಡಾಯವಲ್ಲ ). ನಂತರ ನೀವು ನಿಮ್ಮ ವ್ಯಯಕ್ತಿಕ ಮಾಹಿತಿಯನ್ನು ನೀಡಿದರೆ ಯಶಸ್ವಿಯಾಗಿ ನೊಂದಣಿಯಾಗುತ್ತೀರಿ.

ಮುಂದೆ ನಿಮ್ಮ ಪರದೆಯ ಮೇಲೆ ಕಾಣುವಂತಹ ಸೇವೆಗಳ ಮೇಲೆ ಕ್ಲಿಕ್ ಮಾಡಿ - ಆ ಸೇವೆಯನ್ನು ಪಡೆಯಬಹುದು.  ಕೇಂದ್ರ ಸರ್ಕಾರ & ರಾಜ್ಯ ಸರ್ಕಾರದ ಸೇವೆಗಳನ್ನು ಆಯ್ದುಕೊಳ್ಳಲು ವಿಭಿನ್ನ ಆಯ್ಕೆಗಳು ಕೂಡ ಲಭ್ಯವಿದೆ.

ನಿಮ್ಮ ಯಾವುದೇ ಪ್ರಶ್ನೆ / ಸಮಸ್ಯೆಗಳ ಪರಿಹಾರಕ್ಕಾಗಿ ಆ "ಆಪ್" ನಲ್ಲೇ " ಲೈವ್ ಚಾಟ್ " ಎಂಬ ಆಯ್ಕೆಯಿದ್ದು ವಾರದ 7 ದಿನ ಬೆಳಗೆ 8 ರಿಂದ ರಾತ್ರಿ 8ರ ವರೆಗೆ ಇದರ ಸದುಪಯೋಗ ಮಾಡಿಕೊಳ್ಳಬಹುದು.

ಸದ್ಯ ಈ ಸೇವೆ ಪ್ರಾಥಮಿಕ ಹಂತದಲ್ಲಿದ್ದು ಕರ್ನಾಟಕ ರಾಜ್ಯ ಸರ್ಕಾರದ ಸೇವೆಗಳು ಅಲಭ್ಯವಾಗಿದ್ದು - ಮುಂದಿನ ದಿನಗಳಲ್ಲಿ ಸೇರ್ಪಡೆಯಾಗಲಿದೆ.

ಈ ಆಪ್ ಅನ್ನು ನಿಮ್ಮ ಮೊಬೈಲ್ಗೆ ಡೌನ್ಲೋಡ್ ಮಾಡಿಕೊಳ್ಳಲು ಈ ನಂ 97183 97183  ಗೆ ಮಿಸ್ ಕಾಲ್ ಕೊಡುವುದರ ಮೂಲಕ ಅಧಿಕೃತ ಡೌನ್ಲೋಡ್ ಲಿಂಕ್ ಪಡೆಯಬಹುದು, ಹಾಗೆಯೇ ಇದು ಪ್ಲೇಸ್ಟೋರ್ , ಆಪಲ್ ಸ್ಟೋರ್ & ವಿಂಡೋಸ್ ಸ್ಟೋರ್ ನಿಂದಲೂ ಡೌನ್ಲೋಡ್ ಮಾಡಿಕೊಳ್ಳಬಹುದು.

*ಸೂರಜ್ ಅಣ್ವೇಕರ್, ಬೆಂಗಳೂರು


Trending videos

Back to Top