ಭಾರತದ ಮಾರುಕಟ್ಟೆಗೆ ಬರಲಿದೆ ಸ್ಯಾಮ್ಸಂಗ್ ಗೆಲಾಕ್ಸಿ S9 & S9+….!
Team Udayavani, Mar 5, 2018, 5:55 PM IST
ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಸ್ಯಾಮ್ಸಾಂಗ್ ಮೊಬೈಲ್ ಕಂಪನಿ ಕಳೆದ ವರ್ಷ ಗೆಲಾಕ್ಸಿ S8 ಮತ್ತು S8+ ನ ಮೂಲಕ ಸುದ್ದಿಯಲ್ಲಿತ್ತು, ಆದರೆ ಇದೀಗ 2018 ರಸ್ಮಾರ್ಟ್ ಫೋನ್’ಗಳಾಗಿ ಸ್ಯಾಮ್ಸಾಂಗ್ ಗೆಲಾಕ್ಸಿ S9 ಮತ್ತು S9+ ಅನ್ನು ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್’ನಲ್ಲಿ ಬಿಡುಗಡೆ ಮಾಡಿದ್ದು, ಭಾರತೀಯ ಮಾರುಕಟ್ಟೆಗೆ ಅತಿ ಶೀಘ್ರದಲ್ಲೇ ಕಾಲಿಡಲಿದೆ.
ತನ್ನದೇ ಆದ ವಿಭಿನ್ನ ವಿಶಿಷ್ಟತೆಗಳಿಂದ ಸುದ್ದಿಯಲ್ಲಿರುವ ಈ ಹೊಸ ಫೋನ್`ಗಳ ಸಂಪೂರ್ಣ ಮಾಹಿತಿಯನ್ನು ನೋಡೋಣ :
ಸ್ಯಾಮ್ಸಂಗ್ ಗ್ಯಾಲಕ್ಸಿ S9+
6.2 ಇಂಚಿನ ಕ್ಯುಎಚ್ಡಿ + ಸೂಪರ್ AMOLED 18.5:9 ಪರದೆ, 6 ಜಿಬಿ RAM, 3500 mah ಬ್ಯಾಟರಿ ಸಾಮರ್ಥ್ಯ, ಡ್ಯೂಯಲ್ ಹಿಂಬದಿಯ ಕ್ಯಾಮೆರಾ ಸೆಟಪ್, ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್ 12- ಮೆಗಾಪಿಕ್ಸೆಲ್ ಆಟೋಫೋಕಸ್ f / 1.5 – f / 2.4 ಸಂವೇದಕ ಮತ್ತು 12-ಮೆಗಾಪಿಕ್ಸೆಲ್ ಆಟೋಫೋಕಸ್ f / 2.4 ಸಂವೇದಕದೊಂದಿಗೆ ಟೆಲಿಫೋಟೋ ಲೆನ್ಸ್ ಇದೆ . ಇದು 158.1×73.8×8.5 ಮಿ.ಮೀ ಅಳತೆ ಮತ್ತು 189 ಗ್ರಾಂ ತೂಕವಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S9
5.8 ಇಂಚಿನ ಕ್ಯೂಎಚ್ಡಿ + ಸೂಪರ್ AMOLED 18.5:9 ಪರದೆ, 4 ಜಿಬಿ RAM, 3000mah ಬ್ಯಾಟರಿ ಮತ್ತು ಸೂಪರ್ ಸ್ಪೀಡ್ ಡ್ಯುಯಲ್ ಪಿಕ್ಸೆಲ್ 12 ಮೆಗಾಪಿಕ್ಸೆಲ್ ಆಟೋಫೋಕಸ್ f /1.5 – f / 2.4 ಸಂವೇದಕವನ್ನು ಹೊಂದಿದೆ. ಇದು 147.7×68.7×8.5mm ಅಳತೆ ಮತ್ತು 163 ಗ್ರಾಂ ತೂಕವಿದೆ.
ಎರಡರಲ್ಲೂ ಏಕ್ಸಿನೋಸ್ 9801 / ಸ್ನ್ಯಾಪ್ಡ್ರ್ಯಾಗನ್ 845 – ಆಕ್ಟಾ ಕೋರ್ ಪ್ರೋಸೆಸ್ಸರ್ ಇರಲಿದ್ದು, v8 ಒರಿಯೋ OS ಹೊಂದಿದೆ.
ಕ್ಯಾಮೆರಾ
ಹಿಂಬದಿಯಲ್ಲಿ 12MP ಯ 2 ಕ್ಯಾಮೆರಾ ಇದ್ದು , ಕ್ಯಾಮೆರಾ ಸಂವೇದಕದಲ್ಲಿ ಉಭಯ ದ್ಯುತಿರಂಧ್ರದ ಸೆಟಪ್ ಆಗಿದ್ದು, ಇದು ಸಾಕಷ್ಟು ಬೆಳಕು ಇದ್ದಾಗ f / 2.4 ನಲ್ಲಿ ಚಿತ್ರೀಕರಣ ಮಾಡುವ ಹಾಗೂ ಕಡಿಮೆ ಬೆಳಕಿನ ಪರಿಸ್ಥಿತಿಗಳನ್ನು ಪತ್ತೆಹಚ್ಚಿದಾಗ f / 1.5 ಗೆ ಬದಲಾಯಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.
ಹಾಗೂ ಇದು ಪ್ರತಿ ಸೆಕೆಂಡಿಗೆ 960 ಫ್ರೇಮ್ಗಳನ್ನು ರೆಕಾರ್ಡಿಂಗ್ ಮಾಡುವ ಸೂಪರ್ ಸ್ಲೋ ಮೊಷನ್ ಇದರಲ್ಲಿದೆ.
ಸ್ಯಾಮ್ಸಂಗ್ AR ಎಮೊಜಿಯನ್ನು ಪರಿಚಯಿಸುತಿದ್ದು ನಿಮ್ಮ ಭಾವಚಿತ್ರಗಳ ಎಮೊಜಿಯನ್ನು (ವ್ಯಂಗ್ಯ ಚಿತ್ರವನ್ನು ) ಸಂದೇಶಗಳಲ್ಲಿ ಹಂಚಿಕೊಳ್ಳಬಹುದು.
ಮುಂಭಾಗದಲ್ಲಿ 8MP ಯ ಆಕರ್ಷಕ ಕ್ಯಾಮೆರಾ ಇದೆ.
ಬ್ಯಾಟರಿ
ಎರಡರಲ್ಲೂ ವೇಗದ ಚಾರ್ಜಿಂಗ್ ವ್ಯವಸ್ತೆ ಇದ್ದು, ಬ್ಲೂಟೂತ್`ನ ಮೂಲಕವು ಚಾರ್ಜ್ ಮಾಡಬಹುದಾಗಿದೆ. S9 ನಲ್ಲಿ 3000mah ಹಾಗೂ S9+ ನಲ್ಲಿ 3500mah ಬ್ಯಾಟರಿ ಸಾಮರ್ಥ್ಯ ಇರಲಿದೆ.
ಮುಂದೆ ಹಾಗೂ ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ – 5 ಇದ್ದು, ಜಲ ಹಾಗು ಧೂಳಿನ ಕಣಗಳಿಂದ ನಿರೋಧಕವಾಗಿದೆ.
ಇದರಲ್ಲಿ ಡೊಲ್ಬಿ ಅಟ್ಮೋಸ್`ನ ಧ್ವನಿವರ್ಧಕವಿದೆ. ಎರಡೂ ಫೋನ್`ಗಳು 64/128/256GB ಮೆಮೊರಿ ಸಾಮರ್ಥ್ಯದಲ್ಲಿ, ಮಿಡ್ನೈಟ್ ಬ್ಲ್ಯಾಕ್, ಕೋರಲ್ ಬ್ಲೂ, ಟೈಟಾನಿಯಮ್ ಗ್ರೇ, ಲಿಲಾಕ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿದೆ.
ಬೆಲೆ :
S9 – 64gb – 57,900, 256gb – 65,900, S9+ – 64gb – 64,900, 256gb – 72,900 ಎಂದು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. 128gb ಯ ಫೋನ್`ಗಳು ಮುಂದಿನ ದಿನಗಳಲ್ಲಿ ಬರಲಿದೆ.
*ಸೂರಜ್ ಅಣ್ವೇಕರ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು