ಬದಲಾದ ಡಿಯೋ, ಈಗ ನಾಲ್ಕು ಬಣ್ಣಗಳಲ್ಲಿ ಲಭ್ಯ | Udayavani - ಉದಯವಾಣಿ
   CONNECT WITH US  
echo "sudina logo";

ಬದಲಾದ ಡಿಯೋ, ಈಗ ನಾಲ್ಕು ಬಣ್ಣಗಳಲ್ಲಿ ಲಭ್ಯ

ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿ ಸೃಷ್ಟಿಸಿದ ದಾಖಲೆಗಳು ಒಂದೆರಡಲ್ಲ. ಈಗಾಗಲೇ ಸಾಕಷ್ಟು ಮಾಡೆಲ್‌ಗ‌ಳನ್ನು ನೀಡಿರುವ ಹೋಂಡಾ ಆಯಾ ಕಾಲ ಘಟ್ಟದಲ್ಲಿ ಎದುರಾಗುವ ಸವಾಲುಗಳನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿಯೇ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಿವೆ. ಸ್ಕೂಟರ್‌, ಬೈಕ್‌, ಕಾರುಗಳ ಮಾರುಕಟ್ಟೆಯನ್ನು ಭಾರತದಲ್ಲಿ ಬಲು ದೊಡ್ಡದಾಗಿಯೇ ಆವರಿಸಿಕೊಂಡಿರುವ ಹೋಂಡಾ ತನ್ನ ಜನಪ್ರಿಯ ಸ್ಕೂಟರ್‌ಗಳಲ್ಲಿ ಒಂದಾದ "ಡಿಯೋ'ಗೆ ಹೊಸ ರೂಪ ನೀಡಿದೆ. ಒಂದಿಷ್ಟು ಬದಲಾವಣೆಗಳನ್ನು ಮಾಡುವ ಮೂಲಕ ಅದನ್ನು ಮತ್ತೂಮ್ಮೆ ಮಾರುಕಟ್ಟೆಗೆ ಪರಿಚಯಿಸಿದೆ.

ಹೊಸ ಡಿಯೋ, ಬೇರೆ ಬೇರೆ ಬಣ್ಣಗಳಲ್ಲಿ ಲಭ್ಯವಿದ್ದು, ಒಟ್ಟಾರೆ ವಿನ್ಯಾಸದಲ್ಲಿಯೂ ಬದಲಾವಣೆ ಮಾಡಲಾಗಿದೆ. ಜೊತೆ ಜೊತೆಗೆ ಬೆಲೆಯಲ್ಲಿ ಕೊಂಚ ಮಟ್ಟಿಗಿನ ಏರಿಕೆ ಮಾಡಲಾಗಿದೆ. ಈತನಕ ಯೂನಿಕ್‌ ಬಣ್ಣಗಳಲ್ಲಿ ಈ ಸ್ಕೂಟರ್‌ ಲಭ್ಯವಿರಲಿಲ್ಲ. ಆದರೀಗ, ಲಭ್ಯಲ್ಲದ ಡಿಯೋ ಇದೀಗ ಹೊಸ ಪರಿಕಲ್ಪನೆಯ ವರ್ಣದೊಂದಿಗೆ ಲಭ್ಯ.

ಯಾವೆಲ್ಲ ಬಣ್ಣಗಳಲ್ಲಿ ?
 2018ರ ಹೊಸ ಮಾಡೆಲ್‌ಗ‌ಳು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಡ್ಯಾಜಲ್‌ ಎಲ್ಲೋ ಮೆಟಾಲಿಕ್‌, ಮ್ಯಾಟ್‌ ಎಕ್ಸಿಸ್‌ ಗ್ರೇ, ಪರ್ಲ್ ಬ್ಯಾÉಕ್‌ ಹಾಗೂ ಮ್ಯಾಟ್‌ ಮಾರ್ಷಲ್‌ ಗ್ರೀನ್‌ ಬಣ್ಣಗಳ ಡಿಯೋ ಈಗಾಗಲೇ ಶೋರೂಂಗಳಲ್ಲಿವೆ.

ಎಂಜಿನ್‌ ಸಾಮರ್ಥ್ಯ
 ಡಿಯೋ, ಮಲ್ಟಿಪರ್ಪಸ್‌ ಬಳಕೆಯ ಸ್ಕೂಟರ್‌. ಅದರಲ್ಲೂ ಮಹಿಳೆಯರು ಬಹಳ ಇಷ್ಟಪಡುವ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಸರ್ಕಾರದ ಕಡ್ಡಾಯದ ಹಿನ್ನೆಲೆಯಲ್ಲಿ ಬಿಎಸ್‌4 ಮಾದರಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಗೇರ್‌ಬಾಕ್ಸ್‌ ಹೊಂದಿರುವ ವಿಡಿಯೋ 109.19 ಸಿಸಿ, ಸಿಂಗಲ್‌ ಸಿಲಿಂಡರ್‌ ಹೊಂದಿದೆ. ಏರ್‌ ಕೂಲ್ಡ್‌ ಎಂಜಿನ್‌ ಅಳವಡಿಸಲಾಗಿದೆ. 8ಬಿಎಚ್‌ಪಿ ಸೇರಿ 8.9ಎನ್‌ಎಂ ಟಾರ್ಕ್‌ ಸಾಮರ್ಥ್ಯ ಹೊಂದಿದೆ. ನಗರ ಪ್ರದೇಶದ ಓಡಾಟಕ್ಕೆ ಹೇಳಿ ಮಾಡಿಸಿದ ಸ್ಕೂಟರ್‌ ಇದಾಗಿದ್ದು, ಪ್ರತಿ ಗಂಟೆಗೆ 83 ಕಿ.ಮೀ. ಗರಿಷ್ಠ ಸ್ಪೀಡ್‌ ಹೊಂದಿದೆ.

ಎಕ್ಸ್‌ ಶೋ ರೂಂ ಬೆಲೆ: 50, 200 ರೂ. 

- ಎಸ್‌ಟಿಡಿ, ಡಿಎಲ್‌ಎಕ್ಸ್‌ ಲಭ್ಯವಿರುವ ವೇರಿಯಂಟ್‌
- ಡ್ರಮ್‌ ಬ್ರೇಕ್‌, ಅಲಾಯ್‌ ವೀಲ್‌
- ಇಂಧನ ಸಾಮರ್ಥ್ಯ 5.3 ಲೀಟರ್‌

-ಗಣಪತಿ ಅಗ್ನಿಹೋತ್ರಿ

Trending videos

Back to Top