CONNECT WITH US  

ಥಾಮ್ಸನ್ ಕಂಪನಿಯಿಂದ ಭಾರತದ ಅತಿ ಅಗ್ಗದ ಸ್ಮಾರ್ಟ್ ಟಿವಿ ಬಿಡುಗಡೆ

ಕಳೆದ ಒಂದೂವರೆ ದಶಕಗಳ ಹಿಂದೆ ಭಾರತದ ದೂರದರ್ಶನ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದ ಫ್ರಾನ್ಸ್ ಮೂಲದ ಥಾಮ್ಸನ್ ಕಂಪನಿ ಅನಂತರ ಹೇಳ ಹೆಸರಿಲ್ಲದೆ ಹೋಗಿತ್ತು ಆದರೆ ಈಗ ಮತ್ತೆ ಅದೇ ಕಂಪನಿ ಭಾರತದಲ್ಲಿ 5 ವಿವಿಧ ಬಗೆಯ ಅತಿ ಅಗ್ಗದ ಟಿವಿಯನ್ನು ಬಿಡುಗಡೆಗೊಳಿಸಿ ಇತರ ಪ್ರಖ್ಯಾತ ಕಂಪನಿಗಳಿಗೆ ಸೆಡ್ಡು ಹೊಡೆದಿದೆ. ಇವುಗಳಲ್ಲಿ 3 ಸ್ಮಾರ್ಟ್ ಎಲ್.ಇ.ಡಿ ಟಿವಿ ಹಾಗೂ 3 ಸ್ಮಾರ್ಟ್ ಅಲ್ಲದ ಮಾಮೂಲಿ ಎಲ್.ಇ.ಡಿ ಟಿವಿಯನ್ನು ಬಿಡುಗಡೆಗೊಳಿಸಿದೆ.

B 9 ಶ್ರೇಣಿಯಲ್ಲಿ 2 ಸ್ಮಾರ್ಟ್ ಟಿವಿ ಇದ್ದು
◆ 32 ಇಂಚಿನ ಹೆಚ್.ಡಿ - 720p ನ ಬೆಲೆ - 13,499 ರೂ.
◆ 40 ಇಂಚಿನ ಫುಲ್ ಹೆಚ್.ಡಿ  ಬೆಲೆ - 19,999 ರೂ.
UD 9 ಶ್ರೇಣಿಯಲ್ಲಿ 
◆ 43 ಇಂಚಿನ 4k ಹೆಚ್.ಡಿ ಟಿವಿ - 27,999 ರೂ. ಲಭ್ಯವಿದೆ.

ಇವುಗಳಲ್ಲಿ ಯೌಟ್ಯೂಬ್, ಹಾಟ್ ಸ್ಟಾರ್ ಸೇರಿದಂತೆ ಅನೇಕ ಆಪ್ಸ್ ಮುಂಗಡವಾಗಿ ಇರಲಿದ್ದು ಹಾಗೂ ಆಪ್ ಸ್ಟೋರ್'ನಿಂದ ನಮಗೆ ಬೇಕಾದ ಆಪ್ ಡೌನ್ಲೋಡ್ ಮಾಡಿಕೊಳ್ಳಬಹುದು.
ವೈ-ಫೈ / RJ 45 ಕೇಬಲ್ ಬ್ರಾಡ್ಬ್ಯಾಂಡ್ ಮೂಲಕ ಇಂಟರ್ನೆಟ್ ಚಲಾಯಿಸಬಹುದಾಗಿದೆ.
1GB ಯ Ram ಹಾಗೂ 8 GB ಯ ಆಂತರಿಕ ಸಂಗ್ರಹವನ್ನು ನೀಡಲಾಗಿದೆ.
ಉತ್ತಮ ಗುಣಮಟ್ಟದ ಪರದೆ ಹೊಂದಿದ್ದು,
20 W ನ ಉತ್ಕೃಷ್ಟ ಗುಣಮಟ್ಟದ ಧ್ವನಿವರ್ಧಕಗಳಿವೆ.
ಸದ್ಯ ಇದು ಒನ್ಲೈನ್'ಲ್ಲಿ ಫ್ಲಿಪ್ಕಾರ್ಟ್'ನ ಮೂಲಕ ಮಾರಾಟ ಮಾಡಲಾಗುತ್ತಿದ್ದು ಕೆಳಗಿನ ಲಿಂಕ್ ಮೂಲಕ ಭೇಟಿ ಕೊಟ್ಟು ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು ಹಾಗೂ ಖರೀದಿಸಬಹುದು.
http://fkrt.it/TlzLxLuuuN

ಹಾಗೆಯೇ ಇದರೊಂದಿಗೆ ಸ್ಮಾರ್ಟ್ ರಹಿತ ಹೆಚ್.ಡಿ ಟಿವಿಗಳನ್ನು ಬಿಡುಗಡೆ ಮಾಡಿದ್ದು ಅವುಗಳ ಬೆಲೆ 
24 ಇಂಚಿನ ಹೆಚ್. ಡಿ - 720p ಬೆಲೆ - 8,999 ರೂ. 
32 ಇಂಚಿನ ಹೆಚ್.ಡಿ - 720p ಬೆಲೆ - 11,499 ರೂ.
48 ಇಂಚಿನ ಫುಲ್ ಹೆಚ್.ಡಿ ಬೆಲೆ - 26,999ರೂಗೆ  ಲಭ್ಯವಿದೆ.

ದೇಶಾದ್ಯಂತ 350ಕ್ಕೂ ಹೆಚ್ಚು ಗ್ರಾಹಕ ಕೇಂದ್ರಗಳಿದ್ದು.ಈ ಎಲ್ಲ ಉತ್ಪನ್ನಗಳ ಮೇಲೂ 1 ವರ್ಷದ ವ್ಯಾರಂಟಿ ಇದ್ದು, ಇನ್ನೂ 2 ವರ್ಷಗಳ ಹೆಚ್ಚುವರಿ ವ್ಯಾರಂಟಿಯನ್ನು ಹೆಚ್ಚುವರಿ ಹಣ ಕೊಟ್ಟು ಕೊಳ್ಳಬಹುದು.

*ಸೂರಜ್ ಅಣ್ವೇಕರ್, ಬೆಂಗಳೂರು


Trending videos

Back to Top