ಕೇರಳ ಪುನರ್ ನಿರ್ಮಾಣಕ್ಕಾಗಿ ಜಿಯೋದಿಂದ 21 ಕೋಟಿ ದೇಣಿಗೆ


Team Udayavani, Sep 8, 2018, 3:36 PM IST

neetha-ambani.jpg

ಅಲಪ್ಪುಳ: ಪ್ರವಾಹ ಮತ್ತು ಮಳೆಯ ಅಬ್ಬರದಿಂದ ತತ್ತರಿಸಿ ಹೋಗಿರುವ ಕೇರಳದ ಪುನರ್ ನಿರ್ಮಾಣಕ್ಕಾಗಿ ನೀತಾ ಎಂ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಶನ್ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 21 ಕೋಟಿ ರೂಪಾಯಿ ದೇಣಿಗೆ ನೀಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರವಾಹ ಸಂತ್ರಸ್ತರಿಗೆ ರೂ. 50 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿಯನ್ನೂ ವಿತರಿಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಹಾನಿಗೊಳಗಾದ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿರುವ ಪಳ್ಳಿಪ್ಪಾಡ್ ಗ್ರಾಮಕ್ಕೆ ಭೇಟಿ ನೀಡಿದ ಶ್ರೀಮತಿ ನೀತಾ ಅಂಬಾನಿ ಪ್ರವಾಹ ಪರಿಸ್ಥಿತಿಯ ಪರಿವೀಕ್ಷಣೆ ನಡೆಸಿದರು.  ಈ ಭೇಟಿಯಿಂದಾಗಿ ಅಲ್ಲಿನ ಜನತೆಯ ಅಗತ್ಯಗಳ ಸ್ಪಷ್ಟ ಅರಿವು ದೊರಕುವುದರೊಡನೆ ದೀರ್ಘಕಾಲೀನ ಮರುವಸತಿ ಕಾರ್ಯವನ್ನು ರೂಪಿಸಲೂ ಸಹಾಯವಾಗಿದೆ. ಈ ಸಂದರ್ಭದಲ್ಲಿ ಅವರು ಕೇರಳದ ಮಾನ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನೂ ಭೇಟಿ ಮಾಡಿ ಕೇರಳದ ಜನತೆಯೊಡನೆ ಐಕ್ಯಮತ್ಯವನ್ನೂ ಅಗತ್ಯ ಮೂಲಸೌಕರ್ಯರೂಪಿಸಲು ಬೇಕಾದ ನೆರವನ್ನೂ ಘೋಷಿಸಿದರು.

ನಿರಾಶ್ರಿತರಿಗೆ ಸೂಕ್ತ ಸಮಯದಲ್ಲಿ ಪರಿಹಾರ ಒದಗಿಸುವ ಆಶ್ವಾಸನೆ ನೀಡಿದ ನೀತಾ ಅಂಬಾನಿ, “ಸಂಕಟದ ಈ ಸಮಯದಲ್ಲಿ ಕೇರಳದ ಜನತೆಗೆ ಬೆಂಬಲ ನೀಡಲು ರಿಲಯನ್ಸ್ ಫೌಂಡೇಶನ್ ಬದ್ಧವಾಗಿದೆ. ನಿಮ್ಮೆಲ್ಲರ ಜೊತೆಯಲ್ಲಿ ನಾವೂ ಇದ್ದೇವೆ, ಮತ್ತು ನಾವೆಲ್ಲ ಒಟ್ಟಾಗಿ ಈ ಆಪತ್ತಿನಿಂದ ಹೊರಬರುತ್ತೇವೆ. ನಂಬಿಕೆಯಿರಲಿ, ದೇವರ ನಾಡು ಸದ್ಯದಲ್ಲೇ ತನ್ನ ವೈಭವವನ್ನು ಮರಳಿ ಪಡೆಯುತ್ತದೆ” ಎಂದು ಹೇಳಿದರು.

ರಿಲಯನ್ಸ್ ಫೌಂಡೇಶನ್ ವತಿಯಿಂದ ಮೂವತ್ತು ಮಂದಿಯ ತಂಡವೊಂದನ್ನು ಆಗಸ್ಟ್ 14ರಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ರಾಜ್ಯವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಸ್ಡಿಎಂಎ) ಸಹಯೋಗದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ನಡೆಸಿದ ರಿಲಯನ್ಸ್ ಫೌಂಡೇಶನ್ ಇನ್ಫರ್ಮೇಶನ್ ಸರ್ವಿಸಸ್, ತನ್ನ ಶುಲ್ಕರಹಿತ ಹೆಲ್ಪ್ ಲೈನ್ ಮೂಲಕ 1600ಕ್ಕೂ ಹೆಚ್ಚು ಜನರನ್ನು ರಕ್ಷಿಸುವಲ್ಲಿ ಸಫಲವಾಗಿತ್ತು. 

ಎರ್ನಾಕುಲಂ, ವಯನಾಡ್, ಅಲಪ್ಪುಳ, ತ್ರಿಶೂರ್, ಇಡುಕ್ಕಿ ಹಾಗೂ ಪಟ್ಟಣಂತಿಟ್ಟ ಸೇರಿ ಒಟ್ಟು ಆರು ಜಿಲ್ಲೆಗಳಲ್ಲಿ ರಿಲಯನ್ಸ್ ಫೌಂಡೇಶನ್ ಕ್ಷೇತ್ರ ಕಾರ್ಯಕೈಗೊಂಡಿತ್ತು. ಬಳಸಲು ಸಿದ್ಧ (ರೆಡಿ ಟು ಈಟ್) ಆಹಾರ ಪದಾರ್ಥಗಳು, ಗ್ಲುಕೋಸ್ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಸರಕಾರ ನಡೆಸುವ 160 ಪರಿಹಾರ ಕೇಂದ್ರಗಳಿಗೆ ನೀಡಿದ ರಿಲಯನ್ಸ್ ರೀಟೇಲ್ ಸಹಯೋಗದಲ್ಲಿ ಈ ಚಟುವಟಿಕೆಯನ್ನು ನಡೆಸಲಾಯಿತು. ರೇಶನ್ ಕಿಟ್ಗಳ ಜೊತೆಯಲ್ಲಿ ಈಪ್ರದೇಶದಲ್ಲಿ ಉಡುಪು ಹಾಗೂ ಪಾತ್ರೆಗಳ ಕಿಟ್ಗಳನ್ನೂ ವಿತರಿಸಲಾಗಿದ್ದು, ಸುಮಾರು 70,000 ಜನಕ್ಕೆ ನೆರವು ನೀಡಲಾಗಿದೆ.  

ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯನ್ನೂ ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಫೌಂಡೇಶನ್ ವಯನಾಡ್ ಜಿಲ್ಲೆಯಲ್ಲಿ ಮೆಡಿಕಲ್ ಕ್ಯಾಂಪ್ ಗಳನ್ನು ಆಯೋಜಿಸಿತ್ತು. ವಯನಾಡ್ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಜಾನುವಾರುಗಳಿಗೆ ಹಲವು ಕ್ಯಾಂಪ್ಗಳನ್ನೂ ನಡೆಸಲಾಯಿತು. ಜಿಲ್ಲಾಡಳಿತದ ಮೂಲಕ ಬಳಸಲೆಂದು ಸರಕಾರಕ್ಕೆ ಔಷಧಗಳನ್ನೂ ವಿತರಿಸಿದೆ.

ಅಲಪ್ಪುಳ ಜಿಲ್ಲೆಯಲ್ಲಿ ಪ್ರವಾಹದಿಂದ ಅಪಾರ ಹಾನಿ ಅನುಭವಿಸಿದ ಗ್ರಾಮಗಳ ಪೈಕಿ ಪಳ್ಳಿಪ್ಪಾಡ್ ಕೂಡ ಒಂದು. ಜಿಲ್ಲೆಯ ಮುಖ್ಯ ಕೇಂದ್ರ ಅಲಪ್ಪುಳದಿಂದ 36ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ 6430 ಮನೆಗಳಿವೆ (ಜನಸಂಖ್ಯೆ 24640). ಸರಕಾರ, ಟ್ರಸ್ಟ್ ಗಳು ಹಾಗೂ ಎನ್ಟಿಪಿಸಿ ಈ ಗ್ರಾಮದಾದ್ಯಂತ  ಶಾಲೆಗಳು, ದೇವಸ್ಥಾನಗಳು ಹಾಗೂ ಎನ್ಟಿಪಿಸಿ ಪಂಪ್ಹೌಸ್ ಮೈದಾನದಲ್ಲಿ   ಒಟ್ಟು 17 ಕ್ಯಾಂಪ್ ಗಳನ್ನು ತೆರೆದಿವೆ. ಸರಕಾರದ ಸ್ಥಳೀಯ ಪ್ರತಿನಿಧಿಗಳೊಡನೆ ಒಟ್ಟಾಗಿ ಕೆಲಸ ಮಾಡುತ್ತಿರುವ ರಿಲಯನ್ಸ್ ಫೌಂಡೇಶನ್ ಉಡುಪುಗಳ ಕಿಟ್ ಗಳನ್ನು ನೀಡುವ ಮೂಲಕ 3,500 ಕುಟುಂಬಗಳಿಗೆ ನೆರವಾಗಿದೆ. 

ಪ್ರವಾಹದಿಂದ ಅಪಾರ ಹಾನಿಯಾಗಿರುವ ಆರು ಜಿಲ್ಲೆಗಳ ಜನರಿಗೆ ರಿಲಯನ್ಸ್ ಫೌಂಡೇಶನ್ ಹದಿನೈದು ದಿನಗಳಿಗೆ ಸಾಲುವಷ್ಟು ಒಣ ಆಹಾರದ (ಡ್ರೈ ರೇಶನ್)ಕಿಟ್, ಮೂರು ಮಂದಿಯ ಕುಟುಂಬಕ್ಕೆ ಅಗತ್ಯವಾದ ಬೆಡ್ಡಿಂಗ್ ಕಿಟ್, ಮನೆಗಳನ್ನು ಶುಚಿಗೊಳಿಸಲು ಬೇಕಾದ ಸ್ಯಾನಿಟರಿ ಕಿಟ್ ಹಾಗೂ ಅಡುಗೆ ಮನೆಯನ್ನುಮತ್ತೆ ಪ್ರಾರಂಭಿಸಲು ಅಗತ್ಯವಾದ ಪಾತ್ರೆಗಳ ಕಿಟ್ ಗಳನ್ನು ನೀಡುವ ಮೂಲಕ ನೆರವಾಗಿದೆ. ಪರಿಹಾರ ಹಂತದಿಂದ ಮುಂದಿನ ಹೆಜ್ಜೆಗಳನ್ನೂ ಯೋಜಿಸುತ್ತಿರುವರಿಲಯನ್ಸ್ ಫೌಂಡೇಶನ್, ಗ್ರಾಮಗಳಲ್ಲಿ ಶಾಲೆಗಳಂತಹ ಮಹತ್ವದ ಮೂಲ ಸೌಕರ್ಯವನ್ನು ಗುರುತಿಸುವ ಹಾಗೂ ಪುನರ್ನಿರ್ಮಿಸುವ ಕೆಲಸದಲ್ಲೂ ಸಮುದಾಯದೊಡನೆ ಕೆಲಸ ಮಾಡುತ್ತಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MIT: ಮಾ.27ರಿಂದ 31ರವರೆಗೆ ಸೋಲಾರ್‌ ಎಲೆಕ್ಟ್ರಿಕ್‌ ವೆಹಿಕಲ್‌ ಚಾಂಪಿಯನ್‌ಶಿಪ್‌

MIT: ಮಾ.27ರಿಂದ 31ರವರೆಗೆ ಸೋಲಾರ್‌ ಎಲೆಕ್ಟ್ರಿಕ್‌ ವೆಹಿಕಲ್‌ ಚಾಂಪಿಯನ್‌ಶಿಪ್‌

IIT Madras graduate Pawan Davuluri heads Microsoft Windows

Microsoft Windows ಮುಖ್ಯಸ್ಥರಾಗಿ ಐಐಟಿ ಮದ್ರಾಸ್ ಪದವೀಧರ ಪವನ್ ದಾವುಲೂರಿ

1-qweewqe

Sony Float Run: ಓಟ, ವಾಕಿಂಗ್, ಜಿಮ್ ಮಾಡುವವರಿಗೆ ವಿನ್ಯಾಸಗೊಳಿಸಿದ ಹೆಡ್ ಫೋನ್

STEAG: ಸೇನೆಯಲ್ಲಿ ಹೈಟೆಕ್‌ ತಂತ್ರಜ್ಞಾನ ಅಧ್ಯಯನಕ್ಕೆ “ಸ್ಟೀಗ್‌’ ತಂಡ!

STEAG: ಸೇನೆಯಲ್ಲಿ ಹೈಟೆಕ್‌ ತಂತ್ರಜ್ಞಾನ ಅಧ್ಯಯನಕ್ಕೆ “ಸ್ಟೀಗ್‌’ ತಂಡ!

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.