ಗಂಗೆಯಂತೆಯೇ ಇಂಡೋನೇಶಿಯಾದ ಸಿಟ್ರಮ್‌ ನದಿ


Team Udayavani, Oct 14, 2017, 9:35 AM IST

River-13-10.jpg

ಇದು ನಮ್ಮ ನಮ್ಮ ನದಿಗಳ ಆರೋಗ್ಯವನ್ನು ಪರಿಶೀಲಿಸಿಕೊಳ್ಳುವ ಕಾಲ. ಆದಷ್ಟು ಸುಸ್ಥಿತಿಯಲ್ಲಿಡುವ ಹೊಣೆಗಾರಿಕೆಯನ್ನು ಹೊರುವ ಹೊತ್ತು. ಸರಕಾರಕ್ಕೆ, ಆಡಳಿತದ ಅಂಕಿತಕ್ಕೆ ಕಾಯದೇ ನಾಗರಿಕರಾದ ನಾವೇ ನೇತೃತ್ವ ವಹಿಸಬೇಕಾದ ತುರ್ತು ಸಮಯವೂ ಇದು.

ಗಂಗೆ ಕಥೆ ಗೊತ್ತಿದೆ. ಯಮುನೆಯ ಕಥೆಯೂ ಭಿನ್ನವಾಗಿಲ್ಲ. ದೇಶದ ಬಹುಪಾಲು ನದಿಗಳು ಒಂದಲ್ಲ ಒಂದು ಮಾಲಿನ್ಯದಿಂದ ಬಸವಳಿದಿವೆ. ಅದು ನಗರೀಕರಣದಿಂದ ಇರಬಹುದು, ಕೈಗಾರೀಕರಣದಿಂದ ಇರಬಹುದು. ಹೀಗೆ ಕಲುಷಿತಗೊಳಿಸುವ ಮುನ್ನ ನದಿಗಳ ಆರೋಗ್ಯ ಹಾಳಾದರೆ ನಗರಗಳ ಆರೋಗ್ಯ ಚೆನ್ನಾಗಿರಲು ಹೇಗೆ ಸಾಧ್ಯವೆಂಬ ಕನಿಷ್ಟ ಜಾನವೂ ನಮಗಿರುವುದಿಲ್ಲ. ಹಾಗಾಗಿ ನದಿಗಳನ್ನು ಕಲುಷಿಗೊಳಿಸುವುದು ನಮ್ಮ ಹಕ್ಕೆಂದು ಭ್ರಮಿಸುತ್ತೇವೆ. 

ಸಿಟ್ರಮ್‌ ನದಿಯ ಕಥೆ ಕೇಳಿ: ಇಂಡೋನೇಶಿಯಾದ ಸಿಟ್ರಮ್‌ ನದಿಯ ಕಥೆಯೂ ಇಂಥದ್ದೇ. ಅಲ್ಲಿನ ಜನರು ತಮ್ಮ ತ್ಯಾಜ್ಯಗಳನ್ನು ಸುರಿಯಲು ನದಿಯೇ ಸೂಕ್ತವಾದ ಸ್ಥಳ ಎಂಬ ದೃಢ ನಂಬಿಕೆಗೆ ಎಷ್ಟರಮಟ್ಟಿಗೆ ಬಂದಿದ್ದರೆಂದರೆ ನೀವು ನಂಬುವುದಿಲ್ಲ. ಅಲ್ಲಿನ ಉಚ್ಚ ನ್ಯಾಯಾಲಯದಲ್ಲಿ ಗ್ರೀನ್‌ ಪೀಸ್‌ ಸಂಸ್ಥೆ ಮತ್ತು ಉಳಿದ ಸಮುದಾಯ ಸಂಘಟನೆಗಳು, ಫೌಂಡೇಷನ್‌ನವರು ನದಿ ಮಾಲಿನ್ಯಗೊಳ್ಳುತ್ತಿರುವುದನ್ನು ತಡೆಯಬೇಕು ಎಂದು ಕೋರ್ಟ್‌ ಮೆಟ್ಟಿಲೇರಿದವು. ಈ ಮಾಲಿನ್ಯಕ್ಕೆ ಅಲ್ಲಿಯ (ನದಿ ಪಾತ್ರದಲ್ಲಿರುವ) ಮೂರು ಬೃಹತ್‌ ಕೈಗಾರಿಕೆಗಳು ಪ್ರಮುಖ ಕಾರಣವಾಗಿದ್ದವು. ಕೂಲಂಕಷ ವಿಚಾರಣೆ ನಡೆಸಿದ ಕೋರ್ಟ್‌ಗೆ ಕೈಗಾರಿಕೆಗಳು ಹೇಳಿದ್ದೇನು ಗೊತ್ತೇ? ‘ಮಹಾಸ್ವಾಮಿಗಳೇ, ನಮ್ಮಲ್ಲಿನ ತ್ಯಾಜ್ಯನೀರನ್ನು ಹೊರಗೆ ಹಾಕಲು ಅನುಮತಿ ನೀಡದಿದ್ದರೆ ನಾವು ಕೈಗಾರಿಕೆಗಳನ್ನೇ ಮುಚ್ಚಬೇಕಾದೀತು. ಇದರಿಂದ ಲಕ್ಷಾಂತರ ಮಂದಿ ಕಾರ್ಮಿಕರು ಉದ್ಯೋಗ ಕಳೆದುಕೊಂಡಾರು’. ಇದನ್ನು ಕೇಳಿದ ನ್ಯಾಯಾಲಯ ವಿಚಾರಣೆ ಮುಂದುವರಿಸಿತು. ಅಂತಿಮವಾಗಿ 2016ರ ಮೇಯಲ್ಲಿ ಸುಪ್ರೀಂಕೋರ್ಟ್‌, ಅದೇನೇ ಇರಬಹುದು, ಆದರೆ ಹೀಗೆ ತ್ಯಾಜ್ಯಗಳನ್ನು ನದಿಗೆ ಸುರಿದು ಕಲುಷಿತಗೊಳಿಸುವುದನ್ನು ಮಾನ್ಯ ಮಾಡಲಾಗದು. ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘನೆಯನ್ನು ಕಡಿವಾಣ ಹಾಕಬೇಕೆಂದು ಸೂಚಿಸಿತು. ಈ ತೀರ್ಪು ಜವಳಿ ಕೈಗಾರಿಕೆಗಳಲ್ಲದೇ ಹಲವು ಕೈಗಾರಿಕೆಗಳನ್ನು ಸಂಕಷ್ಟಕ್ಕೆ ದೂಡಿದ್ದು ನಿಜ. ಆದರೆ, ಕೋಟ್ಯಂತರ ಜನರ ಬದುಕಿಗೆ ಜೀವಜಲವಾದ ನದಿಯನ್ನು ಮತ್ತಷ್ಟು ಕಲುಷಿತಗೊಳ್ಳದಿರುವಂತೆ ತಡೆದಿದ್ದು ನಿಜ. 

ಹಾಗಾಗಿ ಈಗ ಇಂಡೋನೇಶಿಯಾದಲ್ಲೂ ಕೈಗಾರಿಕೆಗಳಾಗಲೀ, ಯಾರೇ ಆಗಲಿ ತ್ಯಾಜ್ಯವನ್ನು ನದಿಗೆ ಸೇರಿಸುವುದನ್ನು ಅಕ್ರಮ ಎಂದು ಪರಿಗಣಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ ವಿಚಾರಣೆಯ ಸಂದರ್ಭದಲ್ಲಿ ಹೊರಬಂದ ಭೀಕರ ಅಂಶಗಳೆಂದರೆ, ಸರಕಾರ ಈ ಕೈಗಾರಿಕೆಗಳಿಗೆ ಯಾವುದೇ ಮುಲಾಜಿಲ್ಲದೇ ತ್ಯಾಜ್ಯ ನೀರನ್ನು ನದಿಗೆ ಸೇರಿಸಲು ಅವಕಾಶ ನೀಡಿತ್ತು. ಇದರರ್ಥ ತ್ಯಾಜ್ಯ ನೀರಿನ ವಿಲೇವಾರಿ ಕುರಿತು ಏನನ್ನೂ ಪ್ರಸ್ತಾಪಿಸಿರಲಿಲ್ಲ. ನದಿಯ ಧಾರಣಾ ಸಾಮರ್ಥ್ಯವನ್ನೂ ಪರಿಗಣಿಸಿರಲಿಲ್ಲ. ಹೀಗೆ ತ್ಯಾಜ್ಯ ನೀರನ್ನು ನದಿಗೆ ಬಿಟ್ಟರೆ, ಅಲ್ಲಿರಬಹುದಾದ ಮತ್ಸ್ಯ ಸಂಪತ್ತು, ಜಲಚರಗಳ ಬದುಕಿಗೆ ಏನಾಗಬಹುದು, ಕ್ರಮೇಣ ಸುತ್ತಲಿನ ಪರಿಸರದ ಮೇಲೆ ಬೀರಬಹುದಾದ ಪರಿಣಾಮವೇನು ಇತ್ಯಾದಿ ಯಾವುದೇ ಅಂಶಗಳ ಬಗ್ಗೆ ಅಧ್ಯಯನವನ್ನೂ ನಡೆಸಿರಲಿಲ್ಲ. ಸಂಶೋಧನೆಯನ್ನೂ ಕೈಗೊಂಡಿರಲಿಲ್ಲ. ಇದರೊಂದಿಗೆ ಇದರ ಪರಿಶೀಲನೆ ಕುರಿತು ಯಾವುದೇ ಪದ್ಧತಿ ಅಥವಾ ವ್ಯವಸ್ಥೆಯನ್ನು ರೂಪಿಸುವ ಕುರಿತೂ ಚಿಂತನೆ ನಡೆಸಿರಲಿಲ್ಲ. ಇವೆಲ್ಲವನ್ನೂ ಬಹಳ ಗಂಭೀರವಾಗಿ ಪರಿಗಣಿಸಿದ ಕೋರ್ಟ್‌, ಇನ್ನುಮುಂದೆ ಇಂಥದ್ದು ನಡೆಯದು ಎಂದು ಆದೇಶಿಸಿತು. ಇಂಥದೊಂದು ತೀರ್ಪು ಬಂದೀತೆಂದು ನಾಗರಿಕರೂ ಸೇರಿದಂತೆ ಯಾರೂ ನಿರೀಕ್ಷಿಸಿರಲಿಲ್ಲ. ಈ ಅನಿರೀಕ್ಷಿತ ತೀರ್ಪಿನಿಂದ ಜನರು ಬರೀ ಖುಷಿಪಡಲಿಲ್ಲ. ಒಗ್ಗಟ್ಟಿನಿಂದ ಗೆಲುವು ಸಾಧ್ಯ ಎಂಬುದನ್ನು ಸಾಬೀತು ಪಡಿಸಿತು.

ಬಾಟಲಿಗಳೇ ಸಿಗುತ್ತಿದ್ದವು: ನದಿ ಕಲುಷಿತ ವಿಷಯವನ್ನು ಕೋರ್ಟ್‌ ಮೆಟ್ಟಿಲೇಗೇರುವ ಮುನ್ನ ನದಿ ಸ್ಥಿತಿ ಹೇಗಿತ್ತು ಗೊತ್ತೇ? ಬಹಳ ಕಷ್ಟದಿಂದ ಅರಗಿಸಿಕೊಳ್ಳಬೇಕಾದೀತು. ಈ ನದಿ ಇಂಡೋನೇಶಿಯಾದ ಬಹುಭಾಗದಲ್ಲಿ ಹರಿದು ಹೋಗುವಂಥದ್ದು. ಅಲ್ಲಿನ ಬಹಳ ಪ್ರಮುಖ ನಗರವಾದ ಬಂದುಂಗ್‌ಗೆ ಈ ನದಿಯೇ ಆಧಾರ. ಬೃಹತ್‌ ಜಕಾರ್ತಾ ಪ್ರದೇಶದಲ್ಲಿ ಬರುವಂಥದ್ದು. ಈ ಬಂದುಂಗ್‌ ನಗರ ಸುಮಾರು 2.5 ಕೋಟಿ ಜನರಿಗೆ ಆಶ್ರಯ ತಾಣ. ಈ ಸಿಟ್ರಮ್‌ ನದಿಯ ನೀರನ್ನು ಆಶ್ರಯಿಸಿ ಭತ್ತ ಕೃಷಿಯೂ ನಡೆಯುತ್ತಿದೆ. ಜತೆಗೆ ಎರಡು ಸಾವಿರ ಕೈಗಾರಿಕೆಗಳು ಈ ನದಿ ತೀರ ಪ್ರದೇಶದಲ್ಲಿವೆ. ಇದರೊಂದಿಗೆ ಅಪಾರ ಸಂಖ್ಯೆಯ ಮೀನುಗಾರರು ಮತ್ತು ಮತೊÕéàದ್ಯಮಕ್ಕೆ ಸಂಬಂಧಿಸಿದ ಉದ್ಯೋಗಗಳಲ್ಲಿ ಜನರು ಕಾರ್ಯ ನಿರತರಾಗಿದ್ದರು. 

ಸುಮಾರು 20 ವರ್ಷದ ಮಿತಿಯಿಲ್ಲದ ನಗರೀಕರಣ ತಂದೊಡ್ಡಿದ ಸ್ಥಿತಿಯೆಂದರೆ ನದಿ ಕಲುಷಿತವಾದದ್ದು. ದಿನೇ ದಿನೇ ನದಿ ತೀರಕ್ಕೆ ಸಾವಿರಾರು ಟನ್‌ಗಟ್ಟಲೆ ತ್ಯಾಜ್ಯಗಳು ಬಂದು ಬೀಳತೊಡಗಿದವು. ಎಲ್ಲ ಕೈಗಾರಿಕೆಗಳು ಯಾರನ್ನೂ ಕೇಳದೇ ನಿರ್ಭೀತಿಯಿಂದ ತ್ಯಾಜ್ಯವನ್ನು ನದಿಗೆ ಹರಿಸಿದವು. ಸ್ಥಳೀಯ ಆಡಳಿತವಾಗಲೀ, ಸರಕಾರವಾಗಲೀ ಗಮನಿಸಲೇ ಇಲ್ಲ. ಒಂದುವೇಳೆ ಗಮನಿಸಿದರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದ ಕಾರಣ, ದಿನದಿಂದ ದಿನಕ್ಕೆ ನದಿ ಹೆಚ್ಚೆಚ್ಚು ಕಲುಷಿತಗೊಳ್ಳತೊಡಗಿತು. ಕೈಗಾರಿಕೆಗಳ ಬಳಸಿದ ರಾಸಾಯನಿಕ, ಜವಳಿ ಕೈಗಾರಿಕೆಗಳು ಬಳಸಿದ ಬಣ್ಣ ಸೇರಿದಂತೆ ಇತರ ತ್ಯಾಜ್ಯಗಳು ನದಿಗೆ ಸೇರಿ, ನೀರನ್ನೇ ಕೊಲ್ಲತೊಡಗಿದವು. ನೀರಿನಲ್ಲಿ ವಿಷದ ಪ್ರಮಾಣ ಹೆಚ್ಚತೊಡಗಿತು. ಎಲ್ಲಿ ನೋಡಿದರೂ ತ್ಯಾಜ್ಯ ರಾರಾಜಿಸತೊಡಗಿತು. 

ಒಂದು ಸಂದರ್ಭದಲ್ಲಿ ನದಿಯಲ್ಲಿಳಿದು ಮೀನು ಹಿಡಿಯುತ್ತಿದ್ದ ಮೀನುಗಾರರಿಗೆ ಮೀನಿನ ಬದಲು ಬಲೆಗೆ ಬಾಟಲಿಗಳು, ಮತ್ತಿತರ ತ್ಯಾಜ್ಯಗಳು, ಪ್ಲಾಸ್ಟಿಕ್‌ ತೊಟ್ಟೆ ಇತ್ಯಾದಿ ಸಿಗತೊಡಗಿದವು. ಇದರಿಂದ ನದಿ ಸತ್ತಿತು. ವಿವಿಧ ರೋಗಗಳಿಗೆ ಕಾರಣವಾಯಿತು, ಹೈಡ್ರೋ ಎಲೆಕ್ಟ್ರಿಕ್‌ ಟರ್ಬೈನ್‌ಗಳ ತಿರುಗುವಿಕೆಯನ್ನೂ ಈ ತ್ಯಾಜ್ಯಗಳು ತಡೆದವು. ಪರಿಸರ ಮಾಲಿನ್ಯದ ಪರಿಣಾಮ ಇಲ್ಲಿಗೇ ನಿಲ್ಲಲಿಲ್ಲ. ನಗರಗಳ ಮಳೆ ನೀರು ಚರಂಡಿ ವ್ಯವಸ್ಥೆಯೂ ಹಾಳಾದವು. ಇದರೊಂದಿಗೇ ಅರಣ್ಯ ನಾಶ ಇತ್ಯಾದಿಯ ಕಾರಣದಿಂದ ಮಳೆ ನೀರು ಚರಂಡಿಯಲ್ಲೇ ಕಟ್ಟಿಕೊಂಡು ಕೃತಕ ನೆರೆ ಸ್ಥಿತಿ ಸೃಷ್ಟಿಸಿದವು. ಜನರಲ್ಲಿ ಇಡೀ ವ್ಯವಸ್ಥೆಯ ಬಗ್ಗೆ ಅಕ್ರೋಶ ಹುಟ್ಟಿಸಿತು.

ಸ್ವಚ್ಛತೆಗೆ ಮುನ್ನುಡಿ: ಇದು ನದಿಯ ಸ್ಥಿತಿ. ಬಳಿಕ 2008ರಲ್ಲಿ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಸುಮಾರು 500 ದಶಲಕ್ಷ ಅಮೆರಿಕನ್‌ ಡಾಲರ್‌ಗಳನ್ನು ನದಿಯ ಶುದ್ಧೀಕರಣಕ್ಕೆ ಕೊಡಲು ಒಪ್ಪಿತು. ಈ ಬಹುವರ್ಷದ ಸಾಲದಲ್ಲಿ ನದಿ ತೀರದ ಪುನಶ್ಚೇತನಕ್ಕೂ ಯೋಜನೆ ರೂಪಿಸಲಾಗಿತ್ತು. ಜತೆಗೆ ಟರುಮ್‌ ಕಾಲುವೆಯ ಶುದ್ಧೀಕರಣಕ್ಕೂ ಹಣ ನೀಡಿತು. ಈ ಕಾಲುವೆ ರಾಜಧಾನಿ ಜಕಾರ್ತಾಕ್ಕೆ ನೀರು ಪೂರೈಸುವ ಪ್ರಮುಖವಾದ ಕಾಲುವೆಯಾಗಿತ್ತು. ಈ ಹಿನ್ನೆಲೆಯಲ್ಲಿ ನದಿಯ ಮಾಲಿನ್ಯ ತಡೆಯಲು ಪ್ರಯತ್ನಿಸಿದರೂ ಬಹಳ ದೊಡ್ಡ ಸಾಧನೆಯಾಗಲಿಲ್ಲ.

ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಮೇಲೂ ಶುದ್ಧೀಕರಣ ಪ್ರಗತಿಯಲ್ಲಿದೆ. ಕೋರ್ಟ್‌ ತೀರ್ಪು ಈ ಪ್ರಯತ್ನಕ್ಕೆ ಒಂದಿಷ್ಟು ಇಂಬು ನೀಡಿರುವುದು ನಿಜ. ಆದರೆ, ಈ ನದಿ ಎಷ್ಟರಮಟ್ಟಿಗೆ ಕಲುಷಿತಗೊಂಡಿದೆಯೆಂದರೆ ಹೇಗೆ ಶುದ್ಧೀಕರಿಸುವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದರೂ ಪ್ರಯತ್ನ ನಿಂತಿಲ್ಲವೆನ್ನುವುದೇ ಸಮಾಧಾನದ ಸಂಗತಿ. 

ಬಾಟಲಿಗಳನ್ನು ಮಾರಿ ಬದುಕುವ ಸ್ಥಿತಿ: ನದಿ ಶುದ್ಧೀಕರಣದ ಹಿನ್ನೆಲೆಯಲ್ಲಿ ಈಗ ಮೀನುಗಳ ಬದಲು ಬಾಟಲಿಗಳನ್ನು, ಗುಜರಿ ಸಾಮಾನುಗಳನ್ನು ನದಿಯಿಂದ ಹೆಕ್ಕಿ ಮಾರಿ ಬದುಕುವ ಸ್ಥಿತಿ ಜನರದ್ದಾಗಿದೆ. ಒಂದು ಲೆಕ್ಕದಲ್ಲಿ ಅದೊಂದು ಸಣ್ಣ ಕೈಗಾರಿಕೆಯಾಗಿಯೂ ಮಾರ್ಪಟ್ಟಿದೆ ಎಂದರೆ ಸುಳ್ಳಲ್ಲ. ಸಂಪೂರ್ಣ ಶುದ್ಧೀಕರಣಕ್ಕೆ ಇನ್ನೆಷ್ಟು ವರ್ಷಗಳು ಬೇಕೋ ತಿಳಿಯದು.

ಬುದ್ಧಿ ಕಲಿಯೋಣ: ಇನ್ನಾದರೂ ನಾವು ಬುದ್ಧಿ ಕಲಿಯಬೇಕು. ಈಗ ಕಲುಷಿತಗೊಳಿಸಿದಷ್ಟು ಸಾಕು. ಇನ್ನಾದರೂ ನಿಲ್ಲಿಸೋಣ. ಗಂಗೆಯ ಕಥೆ ಬಿಡಿ, ಯಮುನಾ ಕಥೆ ಹೇಳಬೇಡಿ ಎಂದು ನಾವಂದುಕೊಳ್ಳಬಹುದು. ಅಷ್ಟು ದೂರ ಹೋಗಬೇಕಿಲ್ಲ. ನಮ್ಮ ಮನೆಯ ಅಂಗಳದಲ್ಲಿ, ಊರಿನಲ್ಲಿರುವ ನದಿಗಳು, ಜಲ ಮೂಲಗಳನ್ನು ಪರಿಶೀಲಿಸೋಣ, ಸಾಕು. ಅವುಗಳನ್ನು ಸ್ವತ್ಛವಾಗಿಟ್ಟುಕೊಳ್ಳಲು ಏನು ಮಾಡಬಹುದೆಂಬುದನ್ನು ಯೋಚಿಸಿ ಕೂಡಲೇ ಕಾರ್ಯ ಪ್ರವೃತ್ತವಾದರೆ ಮತ್ತಷ್ಟು ಕಲುಷಿತ ಗಂಗೆಗಳನ್ನು ರೂಪಿಸುವ ಪಾಪದಿಂದ ಮುಕ್ತವಾದಂತೆಯೇ ಸರಿ.

ಟಾಪ್ ನ್ಯೂಸ್

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.