ಈ ನದಿಯೂ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು!


Team Udayavani, Oct 28, 2017, 1:10 PM IST

27-27.jpg

ನಾವು ಮೋಡ ಸೃಷ್ಟಿಸಿ ಮಳೆ ತರಲು ಹೊರಡಬಹುದು. ಆದರೆ ಮಳೆ ತರುವುದು ಕಷ್ಟ ಎಂಬುದು ಸ್ಪಷ್ಟ. ನದಿಯೊಂದನ್ನು ಹಾಳು ಮಾಡಿದರೆ ಸೃಷ್ಟಿಸುವುದೂ ಅಸಾಧ್ಯ.

ನದಿಗಳ ಬಗೆಗಿನ ಮಾತು ಎಷ್ಟು ಹೇಳಿದರೂ ಮುಗಿಯದು. ನಾಗರಿಕತೆಯ ಜನನಕ್ಕೆ ಕಾರಣವಾದದ್ದು ಇದೇ ನದಿಗಳು. ಸಿಂಧೂ ನಾಗರಿಕತೆ ಹುಟ್ಟಿದ್ದು ಸಿಂಧೂ ನದಿಯ ತೀರದಲ್ಲಿ. ಅದಕ್ಕೆ ಬೇಕಾದಷ್ಟು ಐತಿಹಾಸಿಕ ಪುರಾವೆಗಳಿವೆ. ಅಷ್ಟೇ ಏಕೆ? ಹಲವು ನಗರಗಳು ಇಂದು ಬದುಕಿರುವುದೇ ನದಿಗಳ ತೀರದಲ್ಲಿ. ಯಮುನಾ ನದಿಯಿಲ್ಲದ ದಿಲ್ಲಿಯನ್ನು ನೆನೆಸಿಕೊಳ್ಳಿ. ಗಂಗೆ ಇಲ್ಲದ ವಾರಣಾಸಿ ನೆನಪಿಸಿಕೊಳ್ಳಿ, ಕಾವೇರಿ ಇಲ್ಲದ ಮೈಸೂರನ್ನು ಕಲ್ಪಿಸಿಕೊಳ್ಳಿ. 

ದುರಂತದ ಸಂಗತಿಯೆಂದರೆ ಅಂಥದೊಂದು ದಿನ ಹತ್ತಿರವಾಗುತ್ತಿದೆ. ಯಾವ ನದಿ ತೀರಗಳಲ್ಲಿ ನಗರಗಳು ಅರಳಿದವೋ, ಅವುಗಳೇ ಆ ನದಿಗಳನ್ನು ನುಂಗತೊಡಗಿವೆ. ಇದೊಂದು ಬಗೆಯಲ್ಲಿ ಭಸ್ಮಾಸುರನ ಕಥೆಯಂತೆಯೇ. ನಗರಗಳು ತಮ್ಮ ತಲೆಯ ಮೇಲೆಯೇ ತಮ್ಮ ಕೈಯನ್ನು ಇಟ್ಟುಕೊಂಡು ನಾಶವಾಗಲು ಅಭ್ಯಾಸ ಮಾಡುತ್ತಿವೆ ಎಂದೇ ಅನಿಸುವುದುಂಟು. ಇದು ಬರಿಯ ಅನಿಸಿಕೆಯಲ್ಲ; ಎದುರಿನ ವಾಸ್ತವ. 

ಮತ್ತೂಂದು ನದಿಯ ಕಥೆ
ಈ ನದಿಯ ಕಥೆಯನ್ನೂ ಕೇಳಿದ ಮೇಲೆ ಆಗುವ ಬೇಸರವೇ ಬೇರೆ. ಸಾಕಷ್ಟು ಹಣವಿರುವ, ವಿದ್ಯಾವಂತರಿರುವ ಅಮೆರಿಕದಲ್ಲೂ ನದಿಗಳದ್ದು ದಾರಿದ್ರ ಸ್ಥಿತಿ ಎಂದರೆ ತಪ್ಪೇನೂ ಇಲ್ಲ. “ಕುಯಹೋಗೊ’ ಎಂಬುದು ಈ ನದಿಯ ಹೆಸರು. ಇದು ಬಹಳ ಕುಪ್ರಸಿದ್ಧವಾಗಿರುವುದು ತನ್ನ ಪರಿಸರ ಮಾಲಿನ್ಯದಿಂದಾಗಿಯೇ. ಈ ನದಿಯ ದುರಾದೃಷ್ಟವೋ ಏನೋ, ಇದು ಹರಿಯುವುದು ಅತ್ಯಂತ ಕಿಷ್ಕಿಂಧೆಯಂತಿರುವ ನಗರ ಪ್ರದೇಶಗಳ ಮಧ್ಯೆಯೇ. ಹಾಗಾಗಿ ತ್ಯಾಜ್ಯಗಳಿಂದ ಹಿಡಿದು ಎಲ್ಲವನ್ನೂ ಹೊತ್ತುಕೊಂಡು ಸಾಗಬೇಕು. ಇದರೊಂದಿಗೆ ಕೈಗಾರಿಕೆಗಳ ತ್ಯಾಜ್ಯಕ್ಕಂತೂ ಕೊನೆಯೇ ಇಲ್ಲ. ನೀವು ನಂಬಲಾರಿರಿ. 1868ರಿಂದಲೇ ಇದುವರೆಗೆ ಸುಮಾರು 13 ಬಾರಿ ಬೆಂಕಿ ಹೊತ್ತಿರಬಹುದು. ಇದಕ್ಕೆ ಕಾರಣ ಕೈಗಾರಿಕೆಗಳ ತ್ಯಾಜ್ಯ ವಿಲೇವಾರಿ ಎಂಬುದೂ ಸ್ಪಷ್ಟವಾಗಿದೆ. 

ಬೆಳ್ಳಂದೂರು ಕೆರೆಯ ಕಥೆಯೇ
ಈ ನದಿಯ ಕಥೆಯೂ ನಮ್ಮ ಬೆಂಗಳೂರಿನ ಬೆಳ್ಳಂದೂರು ಕೆರೆಯ ಕಥೆಯೇ. ವರ್ಷಕ್ಕೆ ಒಂದು ಬಾರಿಯೋ, ಎರಡು ಬಾರಿಯೋ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹೊತ್ತಿಕೊಂಡು ಸುದ್ದಿಯಾಗುವುದು ಗೊತ್ತೇ ಇದೆ. ಮೊದ ಮೊದಲಿಗೆ ಆಡಳಿತಗಾರರು ಯಾವುದ್ಯಾವುದೋ ಕಾರಣ ಹೇಳಿದರೂ ಬಳಿಕ ಕೈಗಾರಿಕೆಗಳ ತ್ಯಾಜ್ಯಗಳ ವಿಲೇವಾರಿ ಪರಿಣಾಮ ಎಂಬುದು ಸ್ಪಷ್ಟವಾಯಿತು. ಇಡೀ ಕೆರೆಯಲ್ಲಿ ನೊರೆ ಬಂದು ಸೋಪಿನ ಗುಳ್ಳೆಗಳು ತುಂಬಿಕೊಂಡಂತೆ ಕಾಣುತ್ತಿದ್ದುದು ಹಳೆಯ ಮಾತು. ನೀರಿನಲ್ಲಿ ಬೆಂಕಿ ಉರಿಯದು ಎಂದೇನಾದರೂ ಮಕ್ಕಳಿಗೆ ಹೇಳಿದರೆ, ಅವರು ನಮ್ಮನ್ನೇ ಬೆಳ್ಳಂದೂರು ಕೆರೆಯ ಬಳಿ ಕರೆದುಕೊಂಡು ಹೋಗಿ ತೋರಿಸಬಹುದು. ಅಂಥ ಸ್ಥಿತಿ ಇತ್ತು. 

ಅದೇ ಸ್ಥಿತಿ ಈ ನದಿಯಲ್ಲೂ ಇತ್ತು. ವಿಪರೀತ ಕೈಗಾರಿಕೆಗಳ ತ್ಯಾಜ್ಯ ವಿಲೇವಾರಿ ಮಾಡಿದ್ದ ಕಾರಣ, ಇಲ್ಲಿ ಆಗಾಗ್ಗೆ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಎಷ್ಟೋ ಬಾರಿ ಇಡೀ ನದಿಯ ಭಾಗ ಕಪ್ಪು ಬಣ್ಣಕ್ಕೆ ತಿರುಗಿ ಆತಂಕ ಹುಟ್ಟಿಸುತ್ತಿತ್ತು. 1952 ರ ಸಂದರ್ಭದಲ್ಲಿ ಇಂಥದ್ದೇ ಒಂದು ಬೆಂಕಿ ಹೊತ್ತಿಕೊಂಡು ಯಾವ ಬಗೆಯ ಅವಾಂತರವನ್ನು ಸೃಷ್ಟಿಸಿತ್ತೆಂದರೆ, ಸುಮಾರು ಒಂದು ಮಿಲಿಯನ್‌ ಅಮೆರಿಕನ್‌ ಡಾಲರ್‌ಗಿಂತಲೂ ಹೆಚ್ಚು ನಷ್ಟ ಉಂಟು ಮಾಡಿತ್ತು. ಅಪಾರ ಪ್ರಮಾಣದ ದೋಣಿಗಳು, ಸೇತುವೆ, ನದಿ ತೀರದಲ್ಲಿದ್ದ ಬೃಹತ್ತಾದ ಕಟ್ಟಡವನ್ನೆಲ್ಲಾ ಆಹುತಿ ತೆಗೆದುಕೊಂಡಿತ್ತು. ವಿಶೇಷವೆಂದರೆ, ಟೈಮ್‌ ನಿಯತಕಾಲಿಕ ಈ ಅನಾಹುತವನ್ನು ಅತ್ಯಂತ ಗಂಭೀರವಾಗಿ ಪ್ರಕಟಿಸಿತ್ತು. “ಕಯುಹೋಗಾ ನದಿ ಹರಿಯುವುದಕ್ಕಿಂತ ಹೆಚ್ಚಾಗಿ ಉರಿಯುತ್ತದೆ’ ಎಂದು ಹೇಳಿತ್ತು. ಇದು ಸಮಸ್ಯೆಯ ಭೀಕರತೆಯನ್ನು ಹೇಳಿದ ಮಾದರಿ ಎನ್ನುವುದು ಸುಳ್ಳಲ್ಲ. ಮತ್ತೆ 1969ರಲ್ಲಿ ನದಿ ಹೊತ್ತಿಕೊಂಡು ಉರಿದು ಮತ್ತಷ್ಟು ನಷ್ಟವನ್ನು ಉಂಟು ಮಾಡಿತು. 

ಇದರ ಹಿನ್ನೆಲೆಯಲ್ಲೇ ಎಚ್ಚೆತ್ತ ನಾಗರಿಕರು ನದಿ ಮಾಲಿನ್ಯ ವಿರುದ್ಧ ಹೋರಾಟ ಆರಂಭಿಸಿದರು. ಈ ಹೋರಾಟದ ಪರಿಣಾಮವೋ ಎಂಬಂತೆ ಸ್ಥಳೀಯ ಸರಕಾರ ನದಿ ಸಂರಕ್ಷಣೆಗೆಂದು ಕಾಯಿದೆ ರೂಪಿಸಿತು. ಜತೆಗೆ ಗ್ರೇಟ್‌ ಲೇಕ್ಸ್‌ ಎನ್ನುವ ಕಲ್ಪನೆಯನ್ನು ತಂದಿತು. ಇದರೊಂದಿಗೆ ಪರಿಸರ ಸಂರಕ್ಷಣಾ ಘಟಕವನ್ನು ಸ್ಥಾಪಿಸಿತು. ಇವೆಲ್ಲವೂ ಬಳಿಕ ನದಿಗೆ ಸೇರುತ್ತಿರುವ ತ್ಯಾಜ್ಯಗಳು, ಕಲುಷಿತಗೊಳ್ಳುತ್ತಿರುವ ಮಾರ್ಗಗಳನ್ನೆಲ್ಲ ಗಮನಿಸತೊಡಗಿದವು. ಹತ್ತು ಹಲವು ಕ್ರಮಗಳನ್ನು ಕೈಗೊಂಡ ಮೇಲೂ ನಿಧಾನವಾಗಿ ನದಿಯ ನೀರಿನ ಗುಣಮಟ್ಟ ಸುಧಾರಿಸತೊಡಗಿತು. ಇಂಥದೊಂದು ಪ್ರಯತ್ನಕ್ಕೆ ಸಾಕಷ್ಟು ಇಂಬು ಸಿಗಲೆಂದು ಅಮೆರಿಕದ 18 ಪಾರಂಪರಿಕ ನದಿಗಳ ಸ್ಥಾನದಲ್ಲಿ ಈ ನದಿಗೂ ಸ್ಥಾನ ಕಲ್ಪಿಸಲಾಯಿತು. ಆದರೂ ಸುಧಾರಣೆ ನಿಧಾನವಾಗಿ ನಡೆಯುತ್ತಿದೆ ಎಂದು ಸಮಾಧಾನ ಪಟ್ಟುಕೊಳ್ಳಬೇಕಷ್ಟೇ. 

ಅಂದುಕೊಂಡಂತೆ ಇಂದೂ ನಡೆದಿಲ್ಲ
ಇಷ್ಟೆಲ್ಲದರ ನಡುವೆ ಬೆಳೆಯುತ್ತಿರುವ ನಗರಗಳು ಮತ್ತು ಅವುಗಳು ಸೃಷ್ಟಿಸುತ್ತಿರುವ ತ್ಯಾಜ್ಯಗಳೆಲ್ಲ ಒಂದಲ್ಲ ಒಂದು ರೂಪದಲ್ಲಿ ಮತ್ತೆ ನದಿಗೆ ಅಲ್ಪ ಪ್ರಮಾಣದಲ್ಲಾದರೂ ಸೇರುತ್ತಿವೆ. ಇದರೊಂದಿಗೆ ಒಳಚರಂಡಿಯಲ್ಲಿ ನೀರು ಉಕ್ಕಿ ಹರಿದು ಇದೇ ನದಿಗೆ ಸೇರುವ ಮೂಲಕ ಮತ್ತಷ್ಟು ಕಲುಷಿತಗೊಳಿಸುವುದನ್ನು ನಿಲ್ಲಿಸಲಿಲ್ಲ. ಇಂಥ ನೂರಾರು ಸಮಸ್ಯೆಗಳು ಎಲ್ಲ ದೇಶಗಳಲ್ಲೂ ನದಿಗಳನ್ನು ಕಲುಷಿತಗೊಳಿಸುತ್ತಿರುವುದು ಸತ್ಯ. ಈಗ ಕಯಹೋಗಾ ನದಿಯ ಜಲಾನಯನ ಪ್ರದೇಶವನ್ನು ಕಾಳಜಿ ತೋರಬೇಕಾದ 43 ಬೃಹತ್‌ ಜಲಮೂಲಗಳ ಪ್ರದೇಶವೆಂಬ ವ್ಯಾಪ್ತಿಗೆ ತರಲಾಯಿತು. ಬಳಿಕ ಹತ್ತು ಹಲವು ಕಸರತ್ತುಗಳನ್ನು ನಡೆಸಿ ನದಿಯನ್ನು ಸುಸ್ಥಿತಿಗೆ ತರಲು ಪ್ರಯತ್ನಿಸಲಾಯಿತು. ಈಗಲೂ ಆ ಪ್ರಯತ್ನಗಳು ಜಾರಿಯಲ್ಲಿವೆ. 

ನಿಜ, 40 ವರ್ಷಗಳಿಗಿಂತ ಈಗ ನೀರಿನ ಗುಣಮಟ್ಟದಲ್ಲಿ ಪರವಾಗಿಲ್ಲ ಎಂಬ ಅಭಿಪ್ರಾಯವಿದೆ. ಆದರೂ, ಹಲವು ಭಾಗಗಳಲ್ಲಿ ಗುಣಮಟ್ಟದ ಬಗ್ಗೆ ದೂರುಗಳೂ ಇವೆ. ನದಿ ಸಂರಕ್ಷಣಾ ಸಮಿತಿಯು ವಿವಿಧ ವಿಧಾನಗಳನ್ನು ಬಳಸಿ ನೀರಿನ ಗುಣಮಟ್ಟವನ್ನು ಹೆಚ್ಚಿಸಲು ಕಾರ್ಯೋನ್ಮುಖವಾಗಿವೆ. ಅಲ್ಲಿಗೆ ಪ್ರಕೃತಿದತ್ತವಾದ ಸಂಪನ್ಮೂಲವನ್ನು ಹಾಳು ಮಾಡಿಕೊಳ್ಳುವುದು ಎಷ್ಟೊಂದು ಮೂರ್ಖತನವೆಂಬುದು ಸಾಬೀತಾದಂತಾಯಿತು. ಹಾಗೆಯೇ, ಪ್ರಕೃತಿದತ್ತ ಸಂಪನ್ಮೂಲದ ಮರುಸೃಷ್ಟಿ ಸಾಧ್ಯವೇ ಇಲ್ಲವೆಂಬುದೂ ಸ್ಪಷ್ಟವಾದಂತಾಗಿದೆ. 

ನದಿಗಳನ್ನು ಉಳಿಸಿ
ಈ ಹಿನ್ನೆಲೆಯಲ್ಲೇ ದೇಶದ ವಾಟರ್‌ ಮ್ಯಾನ್‌ ರಾಜೇಂದ್ರ ಸಿಂಗ್‌ ಅವರ ಮಾತನ್ನು ನೆನಪಿಸಿಕೊಳ್ಳಬೇಕು. ನದಿಗಳ ಸಂರಕ್ಷಣೆಗೆ ಈಗಲಾದರೂ ಮುಂದಾಗೋಣ ಎಂದು ಅವರು ಕರೆ ನೀಡಿದ್ದರು. ಮುಂದಿನ ವರ್ಷಗಳಲ್ಲಿ ಜಲ ಕ್ಷಾಮ ಬಾರದಿರಬೇಕಾದರೆ ಇಂದೇ ನಾವು ನದಿಗಳನ್ನು ಸಂರಕ್ಷಿಸಬೇಕು. ಜತೆಗೆ ಈಗಿರುವ ನದಿಗಗಳ ಪರಿಸರ ಮಾಲಿನ್ಯವನ್ನು ತಡೆಯಬೇಕು. ಈಗಾಗಲೇ ಕಲುಷಿತಗೊಂಡಿರುವ ನದಿಗಳನ್ನು ಸ್ವತ್ಛಗೊಳಿಸಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಕೇಂದ್ರ ಸರಕಾರ ಗಂಗಾ ನದಿಯ ಸ್ವತ್ಛತೆಗೆ ಹೊರಟಿರುವುದು ಹೊಸ ಸಂಗತಿಯೇನೂ ಅಲ್ಲ. ಇದೇ ಕಾರಣಕ್ಕಾಗಿಯೇ ನಾಗರಿಕರಾದ ನಾವೂ ನದಿಗಳನ್ನು ಉಳಿಸಿಕೊಳ್ಳುವತ್ತ ಕಾರ್ಯಶೀಲರಾಗಬೇಕಿದೆ.

ನಮ್ಮ ದೇಶದಲ್ಲಿ ನದಿಗಳನ್ನು ಬರೀ ಪುರಾಣದ ನೆಲೆಯಿಂದ ಆಲೋಚಿಸುವುದಿಲ್ಲ; ಬದಲಾಗಿ ಐತಿಹಾಸಿಕವಾಗಿ, ಚಾರಿತ್ರಿಕವಾಗಿ ನೋಡಲಾಗುತ್ತದೆ. ಆದರೂ ಇಷ್ಟೆಲ್ಲ ಒಳ್ಳೆಯ ಅಂಶಗಳು ನದಿಯನ್ನು ಕಲುಷಿತಗೊಳಿಸುವುದನ್ನು ತಡೆಯುವಲ್ಲಿ ಯಾವ ಪರಿಣಾಮ ಬೀರಿದೆ ಎಂದರೆ ಉತ್ತರ ಶೂನ್ಯಕ್ಕಿಂತ ಹೆಚ್ಚಿನದೇನೂ ಸಿಗದು.

ಟಾಪ್ ನ್ಯೂಸ್

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.