ಅವಳ ತಟವನ್ನು ಶುದ್ಧಗೊಳಿಸಲಿಕ್ಕೆ ಇನ್ನೆಷ್ಟು ವರ್ಷಗಳು ಬೇಕೋ?


Team Udayavani, Nov 4, 2017, 11:47 AM IST

04-26.jpg

ಇದೂ ಒಂದು ನಗರದ ಕಥೆ. ಆರಂಭವಾಗುವುದು ನಗರದ ಒಂದು ಭಾಗದಿಂದ. ಕೊನೆಗೊಳ್ಳುವುದು ಗಂಗೆಯ ತಟದಲ್ಲಿ. ಯಾವ ಪವಿತ್ರ ಭಾವನೆಯೂ ಗಂಗೆ ಅಪವಿತ್ರವಾಗುವುದನ್ನು ತಡೆಯುತ್ತಿಲ್ಲ ಎಂಬುದೇ ಖೇದಕರ.

ನದಿಗಳ ಬಗ್ಗೆ ಮಾತನಾಡಲಿಕ್ಕೆ ಬಹಳಷ್ಟಿದೆ. ಆದರೂ ನಮಗಾಗಲೀ, ನಮ್ಮನ್ನಾಳುವವರಿಗೆ ಮತ್ತು ವ್ಯವಸ್ಥೆಗಾಗಲೀ ನದಿಗಳ ಮೌಲ್ಯ ಗೊತ್ತಾಗುವುದೇ ಇಲ್ಲ ಎಂದೇ ನನ್ನ ಅನಿಸಿಕೆ. ಇದು ನೇತ್ಯಾತ್ಮಕ ದೃಷ್ಟಿಕೋನ ಎನಿಸಬಹುದು. ಆದರೆ, ವಿಶ್ವದಾದ್ಯಂತ ತೀರಾ ಕಲುಷಿತಗೊಂಡಿರುವ ನದಿಗಳ ವಿವರಕ್ಕೆ ಹೋದರೆ ಸಿಗುವ ಮಾಹಿತಿ ಇಂಥದ್ದೇ ಹೊರತು ಬೇರೇನೂ ಅಲ್ಲ. ನದಿಗಳ ಶುದ್ಧೀಕರಣಕ್ಕೆ ಮನಸ್ಸು ಮಾಡಿದರೂ ಅದಕ್ಕೆ ಅಡ್ಡಿ ಯಾಗುವುದು ಇಂಥದ್ದೇ ಮತ್ತೂಂದು ನೆಲೆ. ಅನ್ನದ ಪ್ರಶ್ನೆ, ಉದ್ಯೋಗದ ಪ್ರಶ್ನೆಯನ್ನೆಲ್ಲ ಮುಂದಿಡುತ್ತಾ ಸಾಧಿಸಲು ಹೊರಡುವುದು ಮತ್ತೇನೂ ಅಲ್ಲ. ಪ್ರಾಕೃತಿಕ ಸಂಪನ್ಮೂಲಗಳ ದರೋಡೆಗೆ (ಇಲ್ಲಿ ದರೋಡೆ ಎನ್ನುವುದರ ಅರ್ಥ ಸಂಪತ್ತಿನ ಮೌಲ್ಯ ಗೊತ್ತಿಲ್ಲದೇ ಬೇಕಾಬಿಟ್ಟಿ ಬಳಕೆ) ನಮಗೆ ನಾವೇ ಪರವಾನಗಿ ಕೊಟ್ಟುಕೊಳ್ಳುತ್ತೇವೆ. ಒಂದು ಸಮರ್ಥನೆಯನ್ನು ಹುಡುಕಿಕೊಳ್ಳುತ್ತೇವೆ. ಇಷ್ಟು  ಬಿಟ್ಟರೆ ಬೇರೇನೂ ಆಗುವುದಿಲ್ಲ. ಹೆಚ್ಚೆಂದರೆ ಮುಂದಿನ ಚುನಾವಣೆಯಲ್ಲಿ ಆ ಪ್ರದೇಶದ ನಾಲ್ಕು ಮಂದಿಯ ಓಟು ಗಿಟ್ಟಿಸಬಹುದು. ಇದಕ್ಕಿಂತ ದೊಡ್ಡ ಯಾವ ಲಾಭವೂ ಇರುವುದಿಲ್ಲ. ಅದರಿಂದ ನಷ್ಟವನ್ನು ಲೆಕ್ಕ ಹಾಕುವುದು ಸಾಧ್ಯವೇ ಇಲ್ಲ.

ಗಂಗಾ ನದಿಯನ್ನು ಸ್ವತ್ಛಗೊಳಿಸಲು ಕೇಂದ್ರ ಸರಕಾರ ಮನಸ್ಸು ಮಾಡಿದ್ದು ಹಳೆಯ ಸಂಗತಿ. ಅದಕ್ಕೆ ಪುಷ್ಟಿ ಎಂಬಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠವೂ ಕೆಲವು ಸೂಚನೆಗಳನ್ನು ನೀಡಿತ್ತು. ಗಂಗೆ ನದಿ ಪಾತ್ರದಲ್ಲಿ ಬರುವ ಎಲ್ಲ ರಾಜ್ಯಗಳೂ ಗಂಗೆಗೆ ಸೇರುತ್ತಿರುವ ತಮ್ಮ ಪಾಲಿನ ಮಾಲಿನ್ಯವನ್ನು ನಿಲ್ಲಿಸಬೇಕಿತ್ತು. ಅದು ಮೊದಲು ಆಗಬೇಕಾದ ಕೆಲಸವಾಗಿತ್ತು. ಗಂಗೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದಲ್ಲಿ ಉತ್ತರ ಪ್ರದೇಶವೂ ಒಂದು. 

ಇಲ್ಲಿಯ ಕಾನ್ಪುರ ಚರ್ಮೋದ್ಯಮಕ್ಕೆ ಹೆಸರುವಾಸಿ. ಅಂತಾ ರಾಷ್ಟ್ರೀಯ ಗುಣಮಟ್ಟದ ಚರ್ಮವನ್ನು ಇಲ್ಲಿ ಉತ್ಪಾದಿಸಲಾಗು
ತ್ತದೆ. ಚರ್ಮೋತ್ಪನ್ನ ಕೈಗಾರಿಕೆಗಳಿಗೆ ಕಾನ್ಪುರ ದೊಡ್ಡ ಹೆಸರು. ಉತ್ತರ ಪ್ರದೇಶದ ಆರ್ಥಿಕತೆಗೆ ಕಾನ್ಪುರದ ಕೊಡುಗೆಯೂ ಬಹಳಷ್ಟಿದೆ. ಸುಮಾರು ನೇರವಾಗಿ 2 ಲಕ್ಷ ಹಾಗೂ ಪರೋಕ್ಷವಾಗಿ 10 ಲಕ್ಷಕ್ಕೂ ಹೆಚ್ಚು ಮಂದಿಗೆ ಆಶ್ರಯವಾದ ಉದ್ದಿಮೆ ಇದು ಎಂದು ಅಂದಾಜಿಸಲಾಗಿದೆ. ಅದೇ ಕಾರಣದಿಂದ ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ಆದರೆ ಈ ಉದ್ದಿಮೆ ಸಮಸ್ಯೆಗೆ ಸಿಲುಕಿದ್ದು ತನ್ನ ತ್ಯಾಜ್ಯದಿಂದಾಗಿ.

ಈ ಕೈಗಾರಿಕೆಗಳಿಂದ ಲಭ್ಯ ಮಾಹಿತಿ ಪ್ರಕಾರ ದಿನಕ್ಕೆ ಸುಮಾರು 30 ಕೋಟಿ ಲೀಟರ್‌ ಕಲುಷಿತ ತ್ಯಾಜ್ಯ (ದ್ರವ)ವನ್ನು ಹರಿಯಬಿಡಲಾಗುತ್ತಿತ್ತು. ಕಾನ್ಪುರದಲ್ಲಿ ಸ್ಥಳೀಯ ಆಡಳಿತ ಸುಮಾರು 17 ಕೋಟಿ ಲೀಟರ್‌ ತ್ಯಾಜ್ಯ ನೀರನ್ನು ಸಂಸ್ಕರಿಸುವ ಸೌಲಭ್ಯವನ್ನು ಕಲ್ಪಿಸಿದೆ. ಉಳಿದೆಲ್ಲವೂ ನೇರವಾಗಿ ನದಿಗೆ ಬಿಡಲಾಗು ತ್ತಿತ್ತು. ಚರ್ಮವನ್ನು ಹದ ಮಾಡುವಲ್ಲಿ ಹತ್ತು ಹಲವಾರು ಅಪಾ ಯಕಾರಿ ಮಟ್ಟದ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು. ಅವೆ‌ಲ್ಲವೂ ನೇರವಾಗಿ ನದಿಗೆ ಸೇರುತ್ತಿದ್ದ ಕಾರಣ, ಸುತ್ತಲೆಲ್ಲ ಹಲವು ರೋಗಗಳಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ನ್ಯಾಯ ಹಸಿರುಪೀಠಕ್ಕೆ ಅರ್ಜಿಗಳು ರವಾನೆಯಾದವು. ಈ ಸಂದರ್ಭದಲ್ಲಿ ನ್ಯಾಯಾಲಯ ಗಂಗೆಯನ್ನು ಶುದ್ಧೀಕರಿಸುವ ಪ್ರಯತ್ನದಲ್ಲೇ ಗಂಗೆಗೆ ತ್ಯಾಜ್ಯವನ್ನು ಬಿಡಲು ಏನಾದರೂ ಯೋಚನೆ ಮಾಡಿ ಎಂದು ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಆಗ ಅಖೀಲೇಶ್‌ ಯಾದವ್‌ ಮುಖ್ಯಮಂತ್ರಿ. ಅವರು ಹೇಳಿದ ಮಾತು ಏನು ಗೊತ್ತೇ?- “ಹಾಗೆಲ್ಲ ಚರ್ಮೋತ್ಪನ್ನ ಕೈಗಾರಿಕೆಗಳನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರ ಸಾಧ್ಯವಿಲ್ಲ. ಒಂದುವೇಳೆ ಕ್ರಮ ಕೈಗೊಂಡರೆ ಉದ್ಯೋಗದ ಸಮಸ್ಯೆ ಬಂದೀತು’ ಎಂದಿದ್ದರು. ಈಗ ಹೊಸ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌, ಸೂಕ್ತ ಜಾಗವನ್ನು ಹುಡುಕಿ ಚರ್ಮೋತ್ಪನ್ನ ಕೈಗಾರಿಕೆಗಳನ್ನು ಸ್ಥಳಾಂತರಿಸುವುದಾಗಿ ಹೇಳಿದ್ದು ಸ್ವಲ್ಪ ಸಮಾಧಾನ ತಂದಿರುವುದು ಸುಳ್ಳಲ್ಲ.

ಕಾನ್ಪುರದ ಕಥೆ
ವೆಬ್‌ಸೈಟ್‌ವೊಂದರಲ್ಲಿ ಇಲ್ಲಿಯ ಚರ್ಮೋತ್ಪನ್ನ ಕೈಗಾರಿಕೆಗಳ ಮಾಲಿನ್ಯ ಮುಖವನ್ನು ಪರಿಚಯಿಸಿದೆ. ಇಲ್ಲಿನ ಜಜ್ಮಾಹು ಎಂಬ ಪ್ರದೇಶವೊಂದರಲ್ಲೇ ಸುಮಾರು 400 ಚರ್ಮೋತ್ಪನ್ನ ಘಟಕಗಳು ಇರಬಹುದು. ಇಲ್ಲೆಲ್ಲ ಚರ್ಮವನ್ನು ಹದ ಮಾಡಲಾಗು ತ್ತದೆ. ಇಲ್ಲಿಯ ತ್ಯಾಜ್ಯಗಳೆಲ್ಲ ಹರಿಯುವುದು ದಬ್ಕಾ ಘಾಟ್‌ನಲ್ಲಿ ಹರಿಯುವಂಥ ಚರಂಡಿಯಲ್ಲಿ. ಇದರಲ್ಲಿ ಹರಿಯುವುದು ವಾಸ್ತವವಾಗಿ ನೀರಲ್ಲ; ಬದಲಾಗಿ ಚರ್ಮವನ್ನು ಹದ ಮಾಡಲು ಬಳಸುವ ಅಪಾಯಕಾರಿ ರಾಸಾಯನಿಕಗಳು. ಸುತ್ತಲಿನ ಸುಮಾರು ನೂರು ಕೈಗಾರಿಕೆಗಳ ತ್ಯಾಜ್ಯವಿದು. ಪ್ರಾಣಿಗಳಿಗೆ, ಮನುಷ್ಯರ ಆರೋಗ್ಯಕ್ಕೆ ಒಳ್ಳೆಯದಲ್ಲದ ಕ್ರೋಮಿಯಂ, ಕಾಡ್ಮಿಯಂ, ಸೀಸ, ಆರ್ಸೆನಿಕ್‌, ಕೋಬಾಲ್ಟ್ನಂಥ ರಾಸಾಯನಿಗಳು ಈ ತೆರೆದ ಚರಂಡಿಯಲ್ಲಿ ಮುಕ್ತ ಮುಕ್ತವೆನ್ನುವಂತೆ ಹರಿಯುತ್ತದೆ. ಇವೆಲ್ಲವೂ ಹೋಗಿ ಸೇರುವುದು ಗಂಗಾ ನದಿಯನ್ನೇ. ಈ ಬಗ್ಗೆ ಆಡಳಿತಗಾರರಿಗೂ ಗೊತ್ತಿಲ್ಲವೆಂದೇನೂ ಅಲ್ಲ. ಆದರೂ ತ್ಯಾಜ್ಯ ಸೇರುವುದೇನೂ ನಿಂತಿಲ್ಲ. ಇದರಿಂದಲೇ ಇಂದು ಗಂಗಾ ಶುದ್ಧಿಗೊಳ್ಳಲು ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂಬುದು ಪರಿಸರಾಸಕ್ತರ ಅಂಬೋಣ. 

ಈ ತ್ಯಾಜ್ಯದ ಪರಿಣಾಮ ಯಾವುದೋ ಒಂದರ ಮೇಲಾಗು ವುದಿಲ್ಲ. ಸ್ಥಳೀಯ ಪ್ರಾಕೃತಿಕ ಸಂಪತ್ತು, ಜೀವಜಲ, ಜಲಚರ, ಪ್ರಾಣಿ ಸಂಪತ್ತು ಎಲ್ಲವನ್ನೂ ಅಪಾಯಕ್ಕೆ ಸಿಲುಕಿಸುತ್ತದೆ. ಉದಾಹರಣೆಗೆ ಈ ಕಾನ್ಪುರದ ಘಾಟ್‌ ಪ್ರದೇಶದ ಚಿತ್ರವನ್ನೇ ನೋಡಿದರೆ, ಹಿಂದೆಲ್ಲ ಹಲವಾರು ಬಗೆಯ ಪಕ್ಷಿಗಳು ಬರುತ್ತಿದ್ದವಂತೆ. ಇವತ್ತಿಗೂ ಹೇಳ ಹೆಸರಿಲ್ಲದಂತಾಗಿ ಹೋಗಿವೆ ಅವು. ಇಲ್ಲಿ ಎಷ್ಟೋ ಮನೆಗೆ ತಲುಪುತ್ತಿರುವ ಕುಡಿಯುವ ನೀರೂ ಸಹ ಶುದ್ಧವಿಲ್ಲ. ಒಂದು ಬಗೆಯ ಬಣ್ಣ, ರುಚಿ ಇದೆ. ನಮಗೆಲ್ಲ ಪಾಠದಲ್ಲಿ ಹೇಳಿಕೊಟ್ಟಿರುವುದು ಏನೆಂದರೆ, ಶುದ್ಧ ನೀರಿಗೆ ಬಣ್ಣವಿರುವುದಿಲ್ಲ, ರುಚಿ ಇರುವುದಿಲ್ಲ. ವಿಚಿತ್ರವೇನೆಂದರೆ, ನಾವೆಲ್ಲ ಕುಡಿಯುವ ನೀರಿಗೆ ರುಚಿ ಬರುತ್ತಿದೆ, ಬಣ್ಣ ಬರುತ್ತಿದೆ!

ಅದೇ ನಮಗೆ ಖುಷಿ
ಭವಿಷ್ಯಕ್ಕೆ ಒಂದಿಷ್ಟು ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಲು ಇಂದು ಹಣ ಹೂಡಿಕೆ ಮಾಡುವುದೆಂದರೆ ನಮ್ಮನ್ನಾಳುವವರಿಗೆ ಬಹಳ ಬೇಸರದ ಸಂಗತಿ. ಸಂತೆ ವ್ಯಾಪಾರದಂತೆ ಅಂದಿನಂದು ಅಂದಿಗೆ ಮಾಡಿ ಮುಗಿಸುವುದೆಂದರೆ ಬಹಳ ಖುಷಿ. ಅದಕ್ಕಾಗಿಯೇ ಎಲ್ಲ ಯೋಜನೆಗಳೂ ದೂರದೃಷ್ಟಿ ಕೊರತೆಯಿಂದ ಬಳಲುತ್ತವೆ. ಅದೇ ಸಮಸ್ಯೆ ಇಲ್ಲಿಯೂ ನಡೆದದ್ದು. 1986ರಲ್ಲಿ ಗಂಗಾನದಿ ಶುದ್ಧೀಕರಣ ನೆಲೆಯಲ್ಲಿ ಈ ಚರ್ಮೋತ್ಪನ್ನ ಘಟಕಗಳ ತ್ಯಾಜ್ಯ ಸಂಸ್ಕ ರಣೆಗೆ ಕ್ರಮ ಕೈಗೊಳ್ಳಲಾಯಿತು. ಸಂಸ್ಕರಣಾ ಘಟಕವನ್ನು ಸ್ಥಾಪಿಸು ವಾಗ ಕಾಳಜಿ ತೆಗೆದುಕೊಂಡಿದ್ದು ಕಡಿಮೆ. ಸುಮಾರು 400ಕ್ಕೂ ಹೆಚ್ಚು ಘಟಕಗಳಿದ್ದರೆ ಆಡಳಿತ ಕಲ್ಪಿಸಿದ ವ್ಯವಸ್ಥೆಯಿಂದ ಹೆಚ್ಚೆಂದರೆ 175 ಘಟಕಗಳ ತ್ಯಾಜ್ಯವನ್ನು ಶುದ್ಧೀಕರಿಸಬಹುದಾಗಿತ್ತಷ್ಟೇ. 

ಇತ್ತೀಚಿನ ಲೆಕ್ಕಾಚಾರದಂತೆ ಸುಮಾರು 50 ಎಂಎಲ್‌ಡಿ ತ್ಯಾಜ್ಯ ನೀರು ಉತ್ಪತ್ತಿಯಾದರೆ, ಸಂಸ್ಕರಣಾ ಘಟಕಗಳು ಕೇವಲ 9 ಎಂಎಲ್‌ಡಿ ನಷ್ಟು ನೀರನ್ನು ಮಾತ್ರ ಸಂಸ್ಕರಿಸುತ್ತವೆ. ಉಳಿದೆಲ್ಲವೂ ಮತ್ತೆ ಗಂಗೆಗೆ. ಇದಲ್ಲದೇ ಸುಮಾರು 40 ಎಂಎಲ್‌ಡಿಯಷ್ಟು ಕೈಗಾರಿಕೆಗಳ ಇನ್ನಿತರ ತ್ಯಾಜ್ಯಗಳೆಲ್ಲವೂ ಸಂಸ್ಕರಣಗೊಳ್ಳುವುದೇ ಅಸಂಭವ ಎನ್ನುವಂತಿದೆ. ಒಟ್ಟೂ ಅಂದಾಜಿನಂತೆ ಸುಮಾರು 450 ಎಂಎಲ್‌ಡಿಯಷ್ಟು ತ್ಯಾಜ್ಯ ನೀರು ಉತ್ಪತ್ತಿಯಾದರೆ, ಅದರ ಅರ್ಧ ಭಾಗದಷ್ಟೂ ಸಂಸ್ಕರಿಸುವ ಸೌಲಭ್ಯ ಕಾನ್ಪುರದಲ್ಲಿಲ್ಲ. ಇಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಾದದ್ದು ಇದೇ. ಸೌಲಭ್ಯ ಇಲ್ಲವೆಂದರೆ ನಮ್ಮ ನದಿಗಳು ಮತ್ತಷ್ಟು ಅಪಾಯಕ್ಕೆ ಸಿಲುಕುತ್ತವೆ ಎಂದೇ ಅರ್ಥೈಸಿಕೊಳ್ಳಬೇಕಾಗಿದೆ. ಈ ಕೈಗಾರಿಕೆಯ ತ್ಯಾಜ್ಯದ ಇನ್ನಿತರ ದುಷ್ಪರಿಣಾಮಗಳ ಬಗ್ಗೆ ಮತ್ತೂಮ್ಮೆ ಚರ್ಚಿಸೋಣ. 

ನಮ್ಮದೂ ಇದೇ ಸ್ಥಿತಿ
ನಮ್ಮ ನದಿಗಳೂ ಇಂದು ಕಲುಷಿತಗೊಳ್ಳುತ್ತಿರುವುದು ಹೀಗೆಯೇ. ಕಾವೇರಿಯಿಂದ ಹಿಡಿದು ಯಾವ ನದಿಯೂ ಶುದ್ಧವಾಗಿದೆ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನದಿಗಳು ಕಲುಷಿತಗೊಂಡಿವೆ. ಸರಕಾರಗಳಿಗೆ ನದಿಗಳ ಮೌಲ್ಯ ತಿಳಿಯುವವರೆಗೂ ನದಿಯ ಮಾಲಿನ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹಾಗೆಯೇ ನಾವೂ ಸಹ, ಶುದ್ಧ ನೀರಿನ ಮೌಲ್ಯ ಅರಿಯುವವರೆಗೂ ಬದಲಾಗುವುದಿಲ್ಲ. ಇದು ಹಲವು ನದಿಗಳ ತಟದಲ್ಲಿ ಹೋದಾಗ ಅನಿಸಿದ್ದು. ಯಾವ ಪವಿತ್ರ ಭಾವನೆಯಿಂದಲೂ ಗಂಗೆ ಅಪವಿತ್ರಗೊಳ್ಳುವುದನ್ನು ತಡೆಯ ಲಾಗುತ್ತಿಲ್ಲ ಎನ್ನುವುದೇ ದುಃಖಕರವಾದ ಸಂಗತಿ.

ಅರವಿಂದ ನಾವಡ

ಟಾಪ್ ನ್ಯೂಸ್

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.