ನಮಗೆ ಸಂಗೀತ ಬೇಕು; ಯಂತ್ರಗಳಿಗೆ ಯಾವುದೂ ಬೇಕಾಗಿಲ್ಲ


Team Udayavani, Nov 11, 2017, 4:20 PM IST

pravaha.jpg

ನಮ್ಮ ದೇಶವೇ ಪರಂಪರೆಯ ಜಗತ್ತು. ಪ್ರತಿ ರಾಜ್ಯದ ಯಾವು ದಾದರೂ ಊರುಗಳಲ್ಲಿ ದೇಶಿ ಪರಂಪರೆಯ ಸೊಗಡು ಇದ್ದೇ ಇದೆ. ಆಧುನಿಕತೆಯ ಮಹಾ ಪ್ರವಾಹ ಬಂದಾಗ ಹಲವು ಊರುಗಳು ಪಾರಂಪರಿಕ ಬೇರಿನ ಸಾಮರ್ಥ್ಯದಿಂದಲೇ ಬದುಕಿಕೊಂಡವು. ಇನ್ನು ಹಲವು ಊರುಗಳು ಪ್ರವಾಹದಲ್ಲಿ ಕೊಚ್ಚಿ ಹೋದವು. ಇಲ್ಲಿ ಕೊಚ್ಚಿ ಹೋಗುವುದನ್ನು ನಾಶವಾದವು ಎಂದು ಪರಿಗಣಿಸಬೇಕಾಗಿಲ್ಲ. ಅದರ ಬದಲು ಆಧುನಿಕತೆಯ ಮಹಾ ಪ್ರವಾಹದ ಭಾಗವಾದವು. ನಮ್ಮ ಹಂಪಿ, ಪಟ್ಟದಕಲ್ಲು, ಬೇಲೂರು, ಹಳೇಬೀಡಿನಿಂದ ಹಿಡಿದು ವಾರಣಾಸಿ, ಜೈಪುರದವರೆಗೂ ಪಾರಂಪರಿಕ ಸೊಲ್ಲು ಕೇಳಿಬರುತ್ತದೆ.

ಕೆಲವೆ ದಿನಗಳ ಹಿಂದಷ್ಟೇ ಚೆನ್ನೈಗೆ ಯುನೆಸ್ಕೋ “ಸೃಜನಶೀಲ ನಗರ’ವೆಂಬ ಅಭಿದಾನ ನೀಡಿ ಗೌರವಿಸಿದೆ. ಅದು ಸಿಕ್ಕಿರುವುದು ಅಲ್ಲಿ ರೂಪುಗೊಂಡು ಬೆಳೆದಿರುವ ಕರ್ನಾಟಕ ಸಂಗೀತ ಕ್ಕಾಗಿ. ಇದೇ ಕಾರಣಕ್ಕೆ ಇನ್ನು ಚೆನ್ನೈಯನ್ನು ಸಂಗೀತ ನಗರವೆಂದೇ ಕರೆಯಬಹುದು. ವಾರಣಾಸಿಯಲ್ಲಿ ಗಂಗೆ ಹರಿಯುವಂತೆಯೇ, ಚೆನೈನಲ್ಲೂ ಸಂಗೀತ ಗಂಗೆ ಹರಿಯುತ್ತಿದ್ದಾಳೆ- ಹಲವು ಶತಮಾನ ಗಳಿಂದ. ಸೃಜನಶೀಲ ನಗರ (ಕ್ರಿಯೇಟಿವ್‌ ಸಿಟಿ) ಆಗಿ ಆಯ್ಕೆಯಾಗಿ ರುವುದೂ ಇದೇ ಕಾರಣಕ್ಕೆ.

ಸೃಜನಶೀಲ ನಗರ!
ಕ್ರಿಯೇಟಿವ್‌ ಸಿಟಿ ಅಥವಾ ಸೃಜನಶೀಲ ನಗರ ಎಂಬ ಅಭಿದಾನವೇ ಒಂದು ಬಗೆಯಲ್ಲಿ ನಮ್ಮೊಳಗೆ ಬರೀ ಖುಷಿ ತುಂಬುವಂಥದ್ದಲ್ಲ; ಮನುಷ್ಯನ ಅಗತ್ಯವನ್ನು ಮತ್ತು ಅಸ್ತಿತ್ವವನ್ನು ಹೇಳುವಂಥದ್ದು. ನಗರಗಳಲ್ಲಿ ಯಾಂತ್ರಿಕ ಬದುಕೇ ಗತಿ ಎಂದು ಕೊರಗುವ ಹೊತ್ತಿನಲ್ಲೂ ಅಂಥದೊಂದು ಪರಿಸರವನ್ನು ಹೆಚ್ಚು ಜೀವನ್ಮುಖೀಯಾಗಿ ಮಾಡ ಬಹುದಾದ ಸಾಧ್ಯತೆ ನಮ್ಮ ಕೈಯಲ್ಲೇ ಇದೆ ಎಂಬುದೂ ಈ ಎರಡು ಪದಗಳು ಒತ್ತಿ ಹೇಳುತ್ತವೆ. ಅದರೊಂದಿಗೆ ನಮ್ಮೊಳಗೆ ಆತ್ಮವಿಶ್ವಾಸದ ಕಿಡಿಯನ್ನು ಹಚ್ಚುತ್ತವೆ. ಯಂತ್ರಗಳಿಂದಷ್ಟೇ ನಗರವನ್ನು ಕಟ್ಟಲಾಗದು; ಮನುಷ್ಯರೂ ಅವಶ್ಯ ಎಂದು ಹೇಳಿವೆ. 

ನಗರಗಳು ಸೃಷ್ಟಿಯಾದ ಬಗೆ ಗೊತ್ತೇ ಇದೆ. ಅದರಲ್ಲೂ ಪಾಶ್ಚಿಮಾತ್ಯ ನಗರಗಳ ಕಲ್ಪನೆಗಳು (ಹೆಚ್ಚು ಜನದಟ್ಟಣೆಯಿಂದ ಕೂಡಿದ, ಹೆಚ್ಚು ಒತ್ತಡವನ್ನು ಹೊಂದಿದ ಇತ್ಯಾದಿ) ಹೆಚ್ಚಾಗಿ ಒರಗಿಕೊಂಡಿ ರುವುದು ಕೈಗಾರೀಕರಣದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕಾಲನಿಗಳ ಗೋಡೆ ಗಳನ್ನು. ಡೆಟ್ರಾಯಿಟ್‌ ಎಂಬ ನಗರ ಹುಟ್ಟಿಕೊಂಡ ಕ್ರಮ ಹಾಗೆಯೇ ತಾನೇ. 1701ರಲ್ಲಿ ಫ್ರೆಂಚ್‌ ವಸಾಹತುಶಾಹಿಯಿಂದ ಆರಂಭಗೊಂಡಿ ತಾದರೂ ಜನಪ್ರಿಯವಾದುದು, ನಗರದ ಮಟ್ಟಿಗೆ ಬೆಳೆದದ್ದು 20ನೇ ಶತಮಾನದಲ್ಲಿನ ಕೈಗಾರೀಕರಣ ಬೆಳವಣಿಗೆಯಿಂದ. 1920ರಲ್ಲಿ ಅದು ಜಾಗತಿಕ ಮಟ್ಟದ ಕೈಗಾರಿಕಾ ನಗರ ವಾಗಿತ್ತು. ಇಂದು ಹೇಗಿದೆ ಎಂಬುದು ಬೇರೆ ಕಥೆ.

ನಮ್ಮ ಹಲವು ನಗರಗಳೂ ಹೀಗೇ ಹುಟ್ಟಿಕೊಂಡಿರುವುದು. ಹಾಗೆಂದು ನಗರ ಬದುಕಿನ ಬಗ್ಗೆ ಯಾರನ್ನೇ ಕೇಳಿ. ಅನಿವಾರ್ಯವಾಗಿ ಇದ್ದೇವೆ ಎನ್ನುವ ಮಾತು ಆಡುತ್ತಾರೆ. ಇದರರ್ಥ ಹೀಗೂ ವ್ಯಾಖ್ಯಾ ನಿಸಬಹುದು. ಬದುಕುತ್ತಿಲ್ಲ, ಬರೀ ಉಸಿರಾಡುತ್ತಿದ್ದೇವೆ, ಜೀವಿಸುತ್ತಿ ದ್ದೇವೆ. ದಿಲ್ಲಿಯಲ್ಲಿ ಉಸಿರಾಡಲೂ ಕಷ್ಟವಾಗಿರುವುದು ಬೇರೆ ಮಾತು. ಜೀವನ್ಮುಖೀಯಾಗುವ ಬಗ್ಗೆ ಚೆನ್ನೈ ಹೇಳಬಲ್ಲದು, ವಾರಣಾಸಿ ನಿದರ್ಶನವಾಗಿ ತೋರಬಲ್ಲದು. ಇದೇ ಸಂದರ್ಭದಲ್ಲಿ ನಮ್ಮ ನಗರಗಳನ್ನು ಒಮ್ಮೆ ನೋಡಿ. ನಮಗೆ ಟ್ರಾಫಿಕ್‌ ಜಾಮ್‌, ಮೇಲ್ಸೇತುವೆಗಳಷ್ಟೇ ತೋರಬಹುದು.

ಜೀವನ್ಮುಖೀಯಾಗುವುದು ಹೇಗೆ?
ಚೆನ್ನೈಗೂ ಕರ್ನಾಟಕ ಶಾಸ್ತ್ರೀಯ ಸಂಗಿತಕ್ಕೂ ಇರುವ ಅವಿನಾಭಾವ ಸಂಬಂಧ ಇಂದು ಮೊನ್ನೆಯದಲ್ಲ. ಅದರಲ್ಲೂ ಸಿನಿಮಾ ದಂತೆಯೇ ಸಂಗೀತವನ್ನೂ ದುಡ್ಡು ಕೊಟ್ಟು ಕೇಳುವ ಪರಂಪರೆ ಬೆಳೆಯಲೂ ಚೆನ್ನೈ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ ಕೊಂಡು ಬಂದಿರುವಂಥ ನಗರ. ಇಲ್ಲಿಯ ಬದುಕಿನಲ್ಲೂ ಮೂಲ ಸೌಕರ್ಯಗಳ ಕೊರತೆಯಿದೆ, ವಸತಿ ಸಮಸ್ಯೆಯಿದೆ, ಆಹಾರ ಕೊರತೆಯಿದೆ. ಅದೆಲ್ಲದರ ಜತೆಗೆ ಆ ಕೊರತೆಯನ್ನು ಮೀರುವಂಥ ಸಂಗೀತವಿದೆ.

ಜನರೂ ಅದಕ್ಕೆ ಆಶ್ರಯ ಕೊಟ್ಟು ಬೆಳೆಸುತ್ತಿದ್ದಾರೆ. ಇದು ನಿಜವಾದ ಪಾರಂಪರಿಕ ನಡಿಗೆ. ಚೆನ್ನೈ ಸೇರಿದಂತೆ ನಮ್ಮ ರಾಜ್ಯದಲ್ಲೂ ಸಂಗೀತ, ನೃತ್ಯದಂಥ ಪ್ರದರ್ಶನ ಕಲೆಗಳು ರಾಜರ ಪ್ರೋತ್ಸಾಹದಲ್ಲೇ ನಡೆಯುತ್ತಿತ್ತು. ಅದರಂತೆಯೇ ಚೆನ್ನೈನಲ್ಲೂ ಸಹ. ಬಳಿಕ ರಾಜರ ಪರಂಪರೆ ಮುಗಿದು, ಪ್ರಜಾ ಪರಂಪರೆ ಆರಂಭವಾದಾಗ ಸಂಗೀತದಂಥ ಕಲೆಯನ್ನು ಪ್ರೋತ್ಸಾಹಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿತು. ಆಗ ಹುಟ್ಟಿಕೊಂಡಿದ್ದು ಈ ಸಂಗೀತ ಸಭಾಗಳು. ಆರಂಭದಲ್ಲಿ ಕಲಾವಿದ ತನ್ನ ಸಂಗೀತ ಕಛೇರಿಯನ್ನು ಮುಗಿಸುತ್ತಿರುವಾಗ ಸಂಘಟಕರು ಕಾಣಿಕೆ ತಟ್ಟೆಯನ್ನು ಎಲ್ಲರ ಎದುರು ಇಡುತ್ತಿದ್ದರು.

ತಟ್ಟೆಯಲ್ಲಿ ಸಂಗ್ರಹವಾದ ಹಣವನ್ನು ಕಲಾವಿದರಿಗೂ, ಸಂಘಟನೆಗೂ ಬಳಸ ಲಾಗುತ್ತಿತ್ತು. ಬಳಿಕ ಟಿಕೇಟು ಪದ್ಧತಿ ಆರಂಭವಾಯಿತು. ಮೊದಲಿಗೆ ಅದನ್ನು ಕೆಲವು ಸಂಗೀತಗಾರರು, ಸಂಗೀತಾಸಕ್ತರು ಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳಲಿಲ್ಲವಾದರೂ ಕ್ರಮೇಣ ಅದಕ್ಕೆ ಒಪ್ಪಿಗೆ ಮೊಹರು ಸಿಕ್ಕಿತು. ಹಾಗೆ ಹೇಳುವುದಾದರೆ 1887ರ ಸಂದರ್ಭದಲ್ಲೇ ತೊಂಡೈಮಂಡಳಂ ಸಭಾ ಟಿಕೇಟು ಪದ್ಧತಿ ಜಾರಿಗೆ ತಂದಿತ್ತೆಂಬುದು ಇತಿಹಾಸ. ಬಳಿಕ ಹಲವು ಸಂಗೀತ ಸಭಾಗಳು ಆರಂಭವಾಗಿದ್ದು, ಮ್ಯೂಸಿಕ್‌ ಅಕಾಡೆಮಿ ಸ್ಥಾಪನೆಯಾಗಿ ಸಂಗೀತ ಕ್ಷೇತ್ರಕ್ಕೆ ದುಡಿಯ ಲಾರಂಭಿಸಿದ್ದೆಲ್ಲ ಗೊತ್ತಿದ್ದದ್ದೇ. 

ಇಂಥದೊಂದು ಪರಂಪರೆಯ ದೀವಿಗೆ ಹಿಡಿದು ಹೊರಟಿದ್ದಕ್ಕೆ ಯುನೆಸ್ಕೋ ಕ್ರಿಯೇಟಿವ್‌ ಸಿಟೀಸ್‌ ನೆಟ್‌ವರ್ಕ್‌ನ ಜಾಲಕ್ಕೆ ಚೆನ್ನೈ ಯನ್ನು ಸೇರಿಸಲಾಯಿತು. ಈ ಹಿಂದೆ ವಾರಣಾಸಿ ಮತ್ತು ಜೈಪುರ ಈ ಪಟ್ಟಿಗೆ ಸೇರಿದ್ದವು. ಲಲಿತಕಲೆಗಳು, ಚಿತ್ರಕಲೆ, ಜಾನಪದ ಕಲೆ, ವಿನ್ಯಾಸ, ಸಿನಿಮಾ ಇತ್ಯಾದಿ ನಮ್ಮನ್ನು ಉಲ್ಲಾಸದಲ್ಲಿಡಲು ಶ್ರಮಿಸುವಂಥ ಕಲೆಗಳುಳ್ಳ ನಗರವನ್ನು ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಸುಮಾರು 116 ನಗರಗಳು ಈ ಸಂಪರ್ಕ ಜಾಲದಲ್ಲಿವೆ. 

ಏನು ಮಾಡಬೇಕು?
ಈ ಸಂಪರ್ಕ ಜಾಲಕ್ಕೆ ಸೇರಿದ ಮೇಲೆ ಆ ಸಂಬಂಧಪಟ್ಟ ನಗರ ಗಳಲ್ಲಿನ ನಾಗರಿಕರ ಜೀವನದಲ್ಲಿ ಉಲ್ಲಾಸ ತುಂಬಲು ಶ್ರಮಿಸ ಬೇಕೆಂಬುದು ಒಂದು ಬಗೆಯ ಅಘೋಷಿತ ಷರತ್ತಿದ್ದಂತೆ. ಆ ನಗರ ದಲ್ಲಿನ ಸಾಂಸ್ಕೃತಿಕ ಜೀವನದ ಉನ್ನತಿಗೆ ಶ್ರಮಿಸಬೇಕು. ಇದರಲ್ಲಿ ಜನರ ಪಾತ್ರವೂ ಇದೆ, ಆಡಳಿತಗಾರರ ಪಾತ್ರವೂ ಇದೆ. ಸುಸ್ಥಿರ ಅಭಿ ವೃದ್ಧಿಯ ಕನಸನ್ನು ನನಸು ಮಾಡುವಲ್ಲಿ ಬರೀ ಆರ್ಥಿಕ ಜೀವನ ಮಟ್ಟವಷ್ಟೇ ಸಾಕಾಗದು. ಅದರೊಂದಿಗೆ ಸಾಂಸ್ಕೃತಿಕ ಬದುಕಿನ ಮಟ್ಟವೂ ಬಹಳ ಮುಖ್ಯ. ಈ ಹಿನ್ನೆಲೆಯಲ್ಲೇ ನಗರವನ್ನು ವಿನ್ಯಾಸ ಗೊಳಿಸುವಾಗಲೂ ಸಾಂಸ್ಕೃತಿಕ ನೆಲೆಗಳನ್ನು ಅರಿತು, ಆ ಪರಂಪರೆ ಯನ್ನು ಮುಂದುವರಿಸಲು ಶ್ರಮಿಸಲು ಚಿಂತಿಸಬೇಕು ಎಂಬುದು. ಬಹುಶಃ ಇಂಥವು ನಮ್ಮ ನಗರಗಳಲ್ಲಿ ಒಂದಿಷ್ಟು ಉಲ್ಲಾಸ ತುಂಬಬಹುದೇನೋ?

ಈಗ ಹೇಗೆ?
ನಮ್ಮ ರಾಜ್ಯದಲ್ಲಿ ಈಗಿನ ಪರಿಸ್ಥಿತಿ ಕಂಡರೆ ತಮಾಷೆ ಎನಿಸಬಹುದು. ಸುಮಾರು ಇಪ್ಪತ್ತು ವರ್ಷಗಳಿಂದಲೂ ಜಿಲ್ಲೆಗೊಂದು ರಂಗ ಮಂದಿರ ಬೇಕೆಂಬ ಬೇಡಿಕೆ ಇನ್ನೂ ತೂಗುಯ್ನಾಲೆಯಲ್ಲಿದೆ. ಎಲ್ಲ ಜಿಲ್ಲೆಗಳಲ್ಲಿ ಸುಸಜ್ಜಿತ ರಂಗ ಮಂದಿರಗಳು ಎದ್ದಿಲ್ಲ. ಇನ್ನೂ ಹಲವೆಡೆ ರಂಗಮಂದಿರಗಳಿವೆ, ಅದು ನಗರದಿಂದ ಬೇರಾವುದೋ ದಿಕ್ಕಿನಲ್ಲಿದೆ. ಅಲ್ಲಿಗೆ ಜನರಿಗೆ ತಲುಪುವುದೇ ಕಷ್ಟ. ಹಾಗಾಗಿ ಅವು ಕೆಲವೇ ವರ್ಷಗಳಲ್ಲಿ ಪಾಳು ಬೀಳುತ್ತವೆ. ಇಂಥ ಉದಾಹರಣೆ ಬೇಕಾದಷ್ಟಿವೆ.

ಜತೆಗೆ ಬೆಂಗಳೂರಿನಂಥ ನಗರಗಳಲ್ಲಿ ಬಡಾವಣೆಗೊಂದು ರಂಗ ಮಂದಿರವಿರಬೇಕೆಂಬ ಚಿಂತನೆಯೂ ಈ ಹಿಂದೆಯೇ ಚರ್ಚೆಯ ಮುನ್ನೆಲೆಗೆ ಬಂದಿತ್ತು. ಅದೂ ಸಹ ಅಕ್ಷರಶಃ ಜಾರಿ ಯಾಗಿಲ್ಲ. ಕೆಲವು ಹಳೇ ಬಡಾವಣೆಗಳಲ್ಲಿ ನಾಗರಿಕರೇ ಆಸಕ್ತಿ ತೋರಿ ಕಟ್ಟಿಕೊಂಡಿರುವ ಕೆಲವು ರಂಗಮಂದಿರಗಳಿರಬಹುದು. ಮಹಾನಗರ ಪಾಲಿಕೆಯಂಥ ವ್ಯವಸ್ಥೆ ತನ್ನ ಕಾಳಜಿಯ ಭಾಗವಾಗಿ ಕಟ್ಟಿಸಿದ್ದು ಕಡಿಮೆ. ಎಂದೋ ಕಟ್ಟಿದ ಪುರಭವನಗಳನ್ನೂ ಸರಿಯಾಗಿ ನಿರ್ವಹಿಸಲು ಹೆಣಗಾಡುತ್ತಿ ರುವ ಸಂಗತಿಯೂ ಹೊಸದೇನಲ್ಲ. 

ನಮ್ಮ ಅಭಿವೃದ್ಧಿ ಹೇಗೆ?
ಬೆಂಗಳೂರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ನೂರಾರು ಮೇಲ್ಸೇತುವೆಗಳು ಬಂದಿವೆ. ಕೆಳಸೇತುವೆಗಳೂ ನಿರ್ಮಾಣವಾಗಿವೆ. ಎಕ್ಸ್‌ಪ್ರೆಸ್‌ ವೇ ಮಾದರಿಯ ರಸ್ತೆಗಳು ರೂಪಿತಗೊಂಡಿವೆ. ಸಾವಿರಾರು ವಸತಿ ಸಮುಚ್ಚಯಗಳು, ವಸತಿ ಪ್ರದೇಶಗಳು ತಲೆ ಎತ್ತಿವೆ. ನಮ್ಮ ಸ್ಥಳೀಯಾಡಳಿತ, ಸರಕಾರಗಳು ಇಂಥ ಮೂಲ ಸೌಕರ್ಯ ಗಳನ್ನು ಕಲ್ಪಿಸುವತ್ತಲೇ ಹೆಚ್ಚು ಗಮನಹರಿಸಿವೆ.

ನಮ್ಮ ಆಡಳಿತದಲ್ಲಿ ಎಷ್ಟು ಮೇಲ್ಸೇತುವೆ ಕಟ್ಟಿದವೆಂಬುದೇ ಪ್ರತಿಷ್ಠೆಯ ಸಂಗತಿ ಎಂಬಂತಾಗಿದೆ. ಅದೇ ನಮ್ಮ ಅರ್ಥದಲ್ಲಿ ನಿಜವಾದ ಪ್ರಗತಿಯಾಗಿರು ವುದೇ ವಿಷಾದನೀಯ ಸಂಗತಿ.ಎಲ್ಲ ಕೊರತೆಯ ಮಧ್ಯೆಯೂ ಮನಸ್ಸನ್ನು ಸಂತೋಷವಾಗಿಡು ವುದೆಂದರೆ ಒಂದು ಕಲೆ. ಅದಕ್ಕೆ ಅಂಗಳ ದೊರಕಿಸಲು ಯೋಚಿಸಿದರೆ ನಾವು ಮತ್ತೆ ಮನುಷ್ಯರಾಗಿ ಬದುಕಿರಬಹುದು. ಜೀವನ್ಮುಖೀ ಯಾಗ ಬಲ್ಲೆವು. ಇಲ್ಲವಾದರೆ ಏನೂ ಹೇಳುವಂತಿಲ್ಲ. ಯಂತ್ರಗಳಿಗೆ ಏನೂ ಬೇಕಾಗಿಲ್ಲ.

* ಅರವಿಂದ ನಾವಡ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.