CONNECT WITH US  

"ಪ್ರತಿಷ್ಠೆಗಾಗಿ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸದಿರಿ'

ತುಮಕೂರು: ಇತ್ತೀಚೆಗೆ ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೂ ಪೋಷಕರು
ಸಮಾಜದಲ್ಲಿ ಅಂತಸ್ತು ಪ್ರತಿಷ್ಠೆಗೆ ಮಾರುಹೋಗಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದು ಸಮಾನ ಮಕ್ಕಳ ಮಂಟಪದ ಅಧ್ಯಕ್ಷೆ ಪವಿತ್ರ ವಿಷಾದಿಸಿದರು.

ತಾಲೂಕಿನ ಗಂಗಸಂದ್ರದ ಸರ್ಕಾರಿ ಶಾಲೆಯಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಸಮಾನ ಮಕ್ಕಳ ಮಂಟಪದಿಂದ ಸರ್ಕಾರಿ ಶಾಲೆ, ಲಿಂಗ ತಾರತಮ್ಯ ಹಾಗೂ ಬಾಲ ಕಾರ್ಮಿಕರ ಬಗ್ಗೆ ಹಮ್ಮಿಕೊಂಡಿದ್ದ ರೂಪಕ ಕಾರ್ಯಕ್ರಮದಲ್ಲಿ
ಮಾತನಾಡಿದರು. ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೂ ಸರ್ಕಾರದ ಮಲತಾಯಿ ಧೋರಣೆಯಿಂದ ಹಾಗೂ ಜನ ಸಮುದಾಯಕ್ಕೆ ಸರ್ಕಾರಿ ಶಾಲೆಗಳ ಬಗ್ಗೆ ಅರಿವು ಮೂಡಿಸುವುದರಲ್ಲಿ ಸರ್ಕಾರ ಹಿಂದೆ ಬಿದ್ದಿದ್ದು ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ ಎಂದರು. 

ಈ ರೂಪಕವನ್ನು ನಗರದ ಕುರಿಪಾಳ್ಯ, ಲೇಬರ್‌ ಕಾಲೋನಿ, ಮಾರಿಯಮ್ಮನಗರ, ವಿನಾಯಕನಗರ, ಭಾರತಿನಗರ, ಎನ್‌.ಆರ್‌.ಕಾಲೋನಿ, ಡಿ.ಎಂ.ಪಾಳ್ಯ, ಮತ್ತು ದಿಬ್ಬೂರಿನ ಶಾಲೆಗಳಲ್ಲಿ ಪ್ರದರ್ಶಿಸಿ ಅರಿವು ಗ್ರಾಮಸ್ಥರಲ್ಲಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಗಂಗಸಂದ್ರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ, ಶಿಕ್ಷಕ ಸದಾನಂದ. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಗೌರಮ್ಮ, ಕೊಳಗೇರಿ ಸಮಿತಿ ಶೆಟ್ಟಾಳಯ್ಯ, ರಘು, ಶೃತಿ ಲತಾ, ಗಾಯಿತ್ರಿ, ಕೆಂಪೇಶ್ವರಿ, ಗಂಗಸಂದ್ರದ ಗ್ರಾಮಸ್ಥರು 
ಉಪಸ್ಥಿತರಿದ್ದರು.

Trending videos

Back to Top