CONNECT WITH US  

ಹುಳಿಯಾರು ಗ್ರಂಥಾಲಯ ಕಟ್ಟಡ ದುರಸ್ತಿಗೆ ಸೂಚನೆ

ಹುಳಿಯಾರು: ಹುಳಿಯಾರಿನ ಸಂತೆ ಬೀದಿಯಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡವನ್ನು ತಕ್ಷಣ ದುರಸ್ತಿ ಮಾಡುವಂತೆ ಪಟ್ಟಣ ಪಂಚಾಯ್ತಿ ಮುಖ್ಯಸ್ಥರಿಗೆ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ.ಸತೀಶ್‌ಕುಮಾರ್‌ ಸೂಚನೆ ನೀಡಿದರು.

ಹುಳಿಯಾರಿನ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು ಇಲ್ಲಿನ ಗ್ರಂಥಾಲಯ ಕಟ್ಟಡದ ದುಸ್ಥಿತಿ ಕಂಡು ಬೆಚ್ಚಿ ಬಿದ್ದರು. ಆಗಲೋ ಈಗಲೂ ಬೀಳುವಂತಿರುವ ಈ ಕಟ್ಟಡದಲ್ಲಿ ಪುಸ್ತಕಗಳನ್ನು ಓದಲು ಓದುಗರು ಯಾವ ಧೆ„ರ್ಯದ ಮೇಲೆ ಬರುತ್ತಾರೆ ಎಂದು ಪ್ರಶ್ನಿಸಿದರಲ್ಲದೆ ಪಟ್ಟಣ ಪಂಚಾಯ್ತಿ ಪಕ್ಕದಲ್ಲೇ ಇರುವ ಗ್ರಂಥಾಲಯ ದುರಸ್ತಿ ಮಾಡದೆ ನಿರ್ಲಕ್ಷಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಗ್ರಂಥಾಲಯ ಕರ ಸದ್ಬಳಕೆಯಾಗಲಿ: ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965 ರ ನಿಯಮ 35 ರ ಅನ್ವಯ ಆಸ್ತಿ ತೆರಿಗೆ ಶೇ. 6ರಷ್ಟು ಗ್ರಂಥಾಲಯ ಕರ ಕೊಡಬೇಕು. ಆದರೆ ಹಲವಾರು ವರ್ಷಗಳಿಂದ ಹುಳಿಯಾರಿನಲ್ಲಿ ಗ್ರಂಥಾಲಯ ಕರ ಕೊಡದೇ ಬಾಕಿ ಉಳಿಸಿದ್ದಾರೆ. ತಕ್ಷಣ ಈ ಹಣದಲ್ಲಿ ಕಟ್ಟಡ ದುರಸ್ತಿ ಮಾಡಿಕೊಡಿ ಇಲ್ಲವಾದರೆ ಸದಸ್ಯರ ಸಭೆ ನಡೆಸಿ ಶಿಫ್ಟ್‌ ಸಮ್ಮತಿಸಿದರೆ ಇಲಾಖೆಯಿಂದ ಉತ್ತಮ ಕಟ್ಟಡಕ್ಕೆ ಸ್ಥಳಾಂತರಿಸುವುದಾಗಿ ತಿಳಿಸಿದರು.

ವಿದ್ಯಾಸಂಸ್ಥೆ ಗ್ರಂಥಾಲಯಕ್ಕೆ ನೆರವು: ವಿದ್ಯಾಸಂಸ್ಥೆಗಳು ಸೇರಿದಂತೆ ಸಂಘ-ಸಂಸ್ಥೆಗಳೂ, ಟ್ರಸ್ಟ್‌ಗಳೂ ಸಹ ತಮ್ಮ ಊರಿನಲ್ಲಿ ಖಾಸಗಿ ಗ್ರಂಥಾಲಯ ತೆರೆದು 3 ವರ್ಷ ಉತ್ತಮ ನಿರ್ವಹಣೆ ಮಾಡಿದರೆ ರಾಜರಾಮ ಮೋಹನರಾಯ್‌ ಗ್ರಂಥಾಲಯ ಪ್ರತಿಷ್ಠಾನದ ಅಡಿಯಲ್ಲಿ ಗಣಕಯಂತ್ರ, ಕಟ್ಟಡ,

ಪೀಠೊಪಕರಣ, ಪುಸ್ತಕಗಳು ಹೀಗೆ ಅನೇಕ ಮೂಲ ಸೌಕರ್ಯ ನೀಡಲಾಗುತ್ತದೆ. ಹಾಗಾಗಿ ತುಮಕೂರು ಸಾರ್ವಜನಿಕ ಗ್ರಂಥಾಲಯದ ಅಧಿಕಾರಿಗಳ ಮಾರ್ಗದರ್ಶನ ಪಡೆದು ಖಾಸಗಿಯಾಗಿ ಗ್ರಂಥಾಲಯ ತೆರೆದು ಜ್ಞಾನ ವಿಕಾಸಕ್ಕೆ ನೆರವಾಗಿ ಎಂದು ಕಿವಿ ಮಾತು ಹೇಳಿದರು.

ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಿ: ಗ್ರಂಥಗಳು ಬದುಕಿನ ದಾರಿದೀಪಗಳಾಗಿದ್ದು ಗ್ರಂಥಗಳನ್ನು ಓದುವವರು ವೈಚಾರಿಕ ಚಿಂತನೆಗೆ ಒಳಪಡುತ್ತಾರೆ. ಹಾಗಾಗಿ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಪುಸ್ತಕ ಓದುವ ಹವ್ಯಾಸ ಬೆಳೆಸಿ ಹಾಗೂ ತಮ್ಮತಮ್ಮ ಊರುಗಳ ಗ್ರಂಥಾಲಯಕ್ಕೆ ಭೇಟಿ ನೀಡಿವ ಅಭಿರುಚಿ ರೂಢಿ ಮಾಡಿ

ಎಂದರಲ್ಲದೆ ಪ್ರತಿ ವರ್ಷ 8 ರಿಂದ 10 ಸಾವಿರ ಪುಸ್ತಕಗಳನ್ನು ಇಲಾಖೆ ಖರೀದಿ ಮಾಡಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿ ಗ್ರಾಪಂ ಗ್ರಂಥಾಲಯಗಳಿಗೆ ನೀಡಲಾಗುತ್ತದೆ. ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮತಮ್ಮ ಜ್ಞಾನ ಮಟ್ಟ ವೃದ್ಧಿಸಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಂಗಚೇತನ ಸಂಸ್ಕೃತಿ ಕೇಂದ್ರದ ವ್ಯವಸ್ಥಾಪಕ ಧರ್ಮದರ್ಶಿ ತೊಟ್ಟವಾಡಿ ನಂಜುಂಡಸ್ವಾಮಿ, ಮಾತಾ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಗಂಗಾಧರ್‌, ಲೆ„ಬ್ರರಿಯನ್‌ ಗಿರೀಶ್‌, ಆರ್ಟಿಸ್ಟ್‌ ಮುರಳಿ ಉಪಸ್ಥಿತರಿದ್ದರು.

Trending videos

Back to Top