CONNECT WITH US  

ಸರ್ಕಾರಿ ಶಾಲೆ ಮಕ್ಕಳೇ ಹೆಚ್ಚು ಕ್ರಿಯಾಶೀಲರು

ತುರುವೇಕೆರೆ: ತಾಲೂಕಿನಲ್ಲಿ ಅತ್ಯುತ್ತಮ ಗುಣಮಟ್ಟದ ಪ್ರತಿಭಾನ್ವಿತ ಮತ್ತು ಸೃಜನಶೀಲ ಶಿಕ್ಷಕರಿದ್ದು ಅವರೆಲ್ಲರ ಪರಿಶ್ರಮದಿಂದಲೇ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಾಗಿದೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ  ಶಾಸಕ ಎ.ಎಂ.ಮಸಾಲಜಯರಾಮ್‌ ಹೇಳಿದರು. 

ತಾಲೂಕಿನ ದೊಂಬರನಹಳ್ಳಿ  ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ‌ಶಾಲಾ  ಮಕ್ಕಳ ದಂಡಿನಶಿವರ ಹೋಬಳಿ ಮಟ್ಟದ  ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಹೆಚ್ಚು ಕ್ರಿಯಾಶೀಲವಾಗಿ ದುಡಿಯುತ್ತಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿವೆ ಎಂದರು.

ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಅಂತಾರಾಷ್ಟೀಯ ಮಟ್ಟದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ. ಅವರ ಹಾದಿಯಲ್ಲಿ ಇಂದಿನ ಯುವಕರು  ಸಾಗಬೇಕಿದೆ. ತಾಲೂಕಿನ ಎಲ್ಲ ಕೆರೆಗಳಿಗೂ ಹೇಮಾವತಿ ನಾಲಾ ನೀರು ಹರಿಸುವುದು ನನ್ನ ಮೊದಲ ಆದ್ಯತೆಯಾಗಿದ್ದು ಅದಕ್ಕಾಗಿ ದಿನವೂ ಹೇಮಾವತಿ ನಾಲೆ ಮೇಲೆ ನೀರುಗಂಟಿಯಾಗಿ ನಿಂತು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಜಿಲ್ಲಾ ತುಮುಲ್‌ ನಿರ್ದೇಶಕ ಸಿ.ಮಹಲಿಂಗಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಲಾ ಅಭಿವೃದ್ಧಿಗೆಂದು ಕೋಟಿಗಟ್ಟಲೆ ಹಣ ಖರ್ಚುಮಾಡುತ್ತದೆ. ಅದೇ ರೀತಿ ಕ್ರೀಡೆಯ ಬಗ್ಗೆಯೂ ಹೆಚ್ಚಿನ ಒತ್ತನ್ನು ನೀಡಬೇಕು. ಕ್ರೀಡೆ ಮಕ್ಕಳ ದೈಹಿಕ ಸದೃಢತೆ ಮತ್ತು ಮಾನಸಿಕ ಸ್ವಾಥ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಚೆನ್ನಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡವನ್ನು ಪಠ್ಯ ವಿಷಯವನ್ನೂ ಹೆಚ್ಚಿನ ಆಸಕ್ತಿಯಿಂದ ಓದುತ್ತಾನೆ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ ಅವರನ್ನು ಹುಡುಕಿ ಕ್ರೀಡಾ ಸ್ಫೂರ್ತಿ ಬೆಳೆಯುವಂತೆ ಶಿಕ್ಷಕರು ಮತ್ತು ಪೋಷಕರು ಮಾಡಬೇಕಿದೆ. ಜಿಲ್ಲಾ, ತಾಲೂಕು, ಶಾಸಕರ ನಿಧಿ, ಸಂಸದರು ಮತ್ತು ಎಂಎಲ್‌ಸಿ ಅವರ ಅನುದಾನದಿಂದ ಹೆಚ್ಚಿನ ಶಾಲೆಗೆ ಅನುದಾನ ಬರುತ್ತದೆ ಅದನ್ನು ವ್ಯವಸ್ಥಿತವಾಗಿ ಶಿಕ್ಷಕರು ಬಳಸಬೇಕು ಎಂದು ತಿಳಿಸಿದರು.

ಇಂದು ಕ್ರಿಕೆಟ್‌ನ ಅಬ್ಬರದಲ್ಲಿ ಕಬಡ್ಡಿ, ಖೋ-ಖೋ, ಹಾಕಿಯಂತಹ ನೂರಾರು ಗ್ರಾಮೀಣ ಜನಪದ ಆಟಗಳು ಕಣ್ಮರೆಯಾಗುತ್ತಿವೆ. ಗ್ರಾುàಣ ಪ್ರದೇಶದ ಮಕ್ಕಳು ಕ್ರೀಡೆಯ ಬಗ್ಗೆ ಹೆಚ್ಚಿನ ಒಲವನ್ನು ತೋರಿಸಿದ್ದೇ ಆದಲ್ಲಿ ಅಂತಹವರಿಗೆ ಮುಂದಿನ ದಿನಗಳಲ್ಲಿನ ವಿದ್ಯಾಭ್ಯಾಸದಲ್ಲಿ ಕೃಪಾಂಕ ಸಿಗುತ್ತದೆ ಹಾಗೂ ಜಿಲ್ಲಾ ತುಮುಲ್‌ ವತಿಯಿಂದ ರೈತರ ಮಕ್ಕಳು ತಾಂತ್ರಿಕ ವಲಯದ ಪವಿದ ಮಾಡುತ್ತಿರುವವರಿಗೆ 25 ಸಾವಿರ ರೂಪಾಯಿಗಳ ಪ್ರೋತ್ಸಾಹದ ಹಣ ನೀಡಲಾಗುವುದು ಎಂದರು.

ದಂಡಿನಶಿವರ ಹೋಬಳಿಯ 25 ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಪಥ ಸಂಚಲನೆ ಮಾಡಿದರು. ನಂತರ ಕ್ರೀಡಾ ಜ್ಯೋತಿಯನ್ನು ಬೆಳಗಲಾಯಿತು. ಪ್ರಥಮ ಸ್ಥಾನ ಪಡೆ ಮಕ್ಕಳಿಗೆ ಬಹುಮಾನ ನೀಡಿ, ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ ಮಾಡಲಾಯಿತು.

ಕೊಂಡಜ್ಜಿ ಗ್ರಾಪಂ ಅಧ್ಯಕ್ಷೆ ಕುಸುಮಾ, ಎಪಿಎಂಸಿ ಮಾಜಿ ಸದಸ್ಯ ವಿಶ್ವನಾಥ್‌, ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್‌, ಮುಖ್ಯ ಶಿಕ್ಷಕರಾದ ಎಚ್‌.ಕೆ.ರತ್ನಮ್ಮ, ಶಂಕರಮ್ಮ, ಮುಖಂಡರಾದ ಡಿ.ಆರ್‌. ಬಸವರಾಜು, ವಕೀಲ ಡಿ.ಟಿ.ರಾಜಶೇಖರ್‌, ಬಸವರಾಜು,  ಸುಮಿತ್ರಾ, ಅಂಬಿಕಾ, ರತೀಶ್‌ಕುಮಾರ್‌, ನಂಜುಂಡಯ್ಯ, ಗ್ರಾಮಸ್ಥರಾದ ಸಿದ್ದೇಶ್‌, ಧನಂಜಯ್ಯ ಪೋಷಕರು ಮತ್ತು ಮಕ್ಕಳು ಇದ್ದರು.

Trending videos

Back to Top