CONNECT WITH US  

ಶಿವಪ್ರಸಾದ್‌ ಅಂತ್ಯ ಸಂಸ್ಕಾರದಲ್ಲಿ ಸಿಎಂ ಭಾಗಿ

ತುಮಕೂರು: ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌ ಅವರ ಸಹೋದರ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ. ಜಿ.ಶಿವಪ್ರಸಾದ್‌ ಅವರ ಅಂತ್ಯ ಸಂಸ್ಕಾರ ಶುಕ್ರವಾರ ನಗರದ ಸಮೀಪದ ಗೊಲ್ಲಹಳ್ಳಿಯ ಸಿದ್ದಾರ್ಥ ನಗರದಲ್ಲಿ  ಬೌದ್ಧ ಧರ್ಮದ ಸಂಪ್ರದಾಯದಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿದಂತೆ ಹಲವಾರು ರಾಜಕೀಯ ಗಣ್ಯರ ಅಧಿಕಾರಿಗಳ ಸಮ್ಮುಖದಲ್ಲಿ ನೆರವೇರಿತು.   

ಕಳೆದ ಮೂರು ನಾಲ್ಕು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಡಾ.ಜಿ.ಶಿವಪ್ರಸಾದ್‌ ಅವರು ಗುರುವಾರ ಬೆಂಗಳೂರಿನ ಯಶವಂತಪುರದಲ್ಲಿರು ಸ್ಪರ್ಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಅಪಾರ ಬಂಧು ಬಳಗದ ನಡುವೆ ನಗರ ಸಮೀಪದ ಗೊಲ್ಲಹಳ್ಳಿಯ ಸಿದ್ದಾರ್ಥ ನಗರದಲ್ಲಿ ಬೌದ್ಧ ಧರ್ಮದ ಆಚರಣೆಯಂತೆ ನೆರವೇರಿತು. 

ಅಂತಿಮ ದರ್ಶನ ಪಡೆದ  ಮುಖ್ಯಮಂತ್ರಿ: ಡಾ.  ಜಿ. ಶಿವಪ್ರಸಾದ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪಡೆದರು. ನಂತರ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ಡಾ.ಜಿ.ಶಿವಪ್ರಸಾದ್‌ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. 

 ಈ ವೇಳೆ ಮಾಜಿ ಸಿಎಂ ಎಸ್‌.ಎಂ.ಕೃಷ್ಣ, ವಿಧಾನ ಸಭೆಯ ಸಭಾಪತಿ ರಮೇಶ್‌ಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪ್ರಿಯಾಂಕ ಖರ್ಗೆ, ವೆಂಕಟರಮಣಪ್ಪ, ಶ್ರೀನಿವಾಸ್‌, ಕೃಷ್ಣಭೈರೇಗೌಡ, ಜಮೀರ್‌ ಅಹಮದ್‌ಖಾನ್‌,

ಕೆ.ಜೆ.ಜಾರ್ಜ್‌, ಡಿ.ಕೆ.ಶಿವಕುಮಾರ್‌, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಮೋಟಮ್ಮ, ಶ್ಯಾಮನೂರು ಶಿವಶಂಕರಪ್ಪ, ಈಶ್ವರಖಂಡ್ರೆ ಸೇರಿದಂತೆ ಜಿಲ್ಲೆಯ ಶಾಸಕರು ಮತ್ತಿತರ ಜನಪ್ರತಿನಿಧಿಗಳು, ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು, ಜಿಲ್ಲಾಧಿಕಾರಿ ಡಾ. ಆರ್‌. ವಿಶಾಲ್‌  ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಮಾಡಿದರು. 

ಉಲ್ಲೇಖನೀಯ: ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಿವಪ್ರಸಾದ್‌ ಸಾವು ಅಘಾತ ತಂದಿದೆ, 40 ವರ್ಷದ ಪರಿಚಯ. ಸಿ¨ªಾರ್ಥ ಶಿಕ್ಷಣ ಸಂಸ್ಥೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರಳ, ಸಜ್ಜನ, ಪ್ರಾಮಾಣಿಕ ಯಾರ ಮನಸು ನೋಯಿಸದೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು.

ನಮ್ಮ ಕುಟುಂಬದ ಸದಸ್ಯ ನಮ್ಮನ್ನು ಅಗಲಿ¨ªಾರೆ. ಹೃತೂ³ರ್ವಕ ಶ್ರದ್ಧಾಂಜಲಿ ಅರ್ಪಿಸಿದ್ದೇನೆ. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಅವರ ಕುಟುಂಬ ಸದಸ್ಯರು ಉಳಿಸಿಕೊಳ್ಳಲಿ. ದಲಿತ ಸಮುದಾಯದಲ್ಲಿ ಇಷ್ಟು ದೊಡ್ಡ ಸಂಸ್ಥೆ ಕಟ್ಟಿದ್ದು ಉಲ್ಲೇಖನೀಯ ಎಂದರು. 

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ಡಾ.ಜಿ.ಶಿವಪ್ರಸಾದ್‌ ಅವರು ಸಿದ್ಧಾರ್ಥ  ಶಿಕ್ಷಣ ಸಂಸ್ಥೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.   ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು. ಇವರ ಸಾವು ಶಿಕ್ಷಣ ಕ್ಷೇತ್ರ ಕ್ಕೆ ತುಂಬಲಾರದ ನಷ್ಠ. ಇವರ ಕುಟುಂಬಕ್ಕೆ ಭಗವಂತ ದು:ಖ ಭರಿಸುವ ಶಕ್ತಿ  ನೀಡಲಿ ಎಂದು ನುಡಿದರು.  

Trending videos

Back to Top