CONNECT WITH US  

ಮಕ್ಕಳಿಗೆ ವಿಪತ್ತಿನಿಂದ ಪಾರಾಗುವ ಅರಿವು ಮೂಡಿಸಿ 

ಕೊರಟಗೆರೆ: ಪ್ರಾಥಮಿಕ ಹಂತದಲ್ಲೇ ಶಾಲೆಯಲ್ಲಿ ಮಕ್ಕಳಿಗೆ ಪ್ರತಿಯೊಂದು ವಿಪತ್ತುಗಳು ಬಂದಾಗ ಹೇಗೆ ರಕ್ಷಿಸಿಕೊಳ್ಳಬೇಕು ಹಾಗೂ ಇತರರನ್ನು ಹೇಗೆ ರಕ್ಷಿಸಬೇಕು ಎಂಬ ಮಾಹಿತಿಯನ್ನು ನೀಡುವುದರಿಂದ ಅಪಘಾತಗಳು ತಡೆಯಬಹುದು ಎಂದು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸುಬ್ರಹ್ಮಣ್ಯ ತಿಳಿಸಿದರು. 

ಪಟ್ಟಣದ ಅಗ್ನಿಶಾಮಕ ಠಾಣೆಯ ವೀಕ್ಷಣೆಗೆ ಬಂದಿದ್ದ ಕನ್ನಿಕಾ ವಿದ್ಯಾಪೀಠ ಶಾಲೆಯ ಮಕ್ಕಳಿಗೆ ಪ್ರಾತ್ಯಕ್ಷಿಕೆಯನ್ನು ಮಾತನಾಡಿ ನಿತ್ಯವೂ ಸಮಾಜದಲ್ಲಿ ಒಂದಿಲ್ಲೊಂದು ಅವಘಡಗಳು ನಡೆಯುತ್ತಿರುತ್ತವೆ ಇವುಗಳಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಹಾಗೂ ಹೇಗೆ ನಡೆಯದಂತೆ ಮುಂಜಾಗ್ರತೆ ವಹಿಸಿಕೊಳ್ಳಬೇಕು.

ಅಗ್ನಿಶಾಮಕ ಠಾಣೆಗೆ ಬೆಂಕಿ ಅನಾಹುತ ಸೇರಿದಂತೆ ಹಲವು ತುರ್ತು ಸಂದರ್ಭದಲ್ಲಿ ಕರೆ ಮಾಡಬಹುದು ನಾವು ನಿಮ್ಮ ಕರೆಗೆ ಸದಾ ಸ್ಪಂದಿಸುತ್ತೇವೆ, ನಿಮ್ಮ ಮನೆ ಅಥವಾ ನೆರೆಹೊರೆಯ ನಡೆಯುವ ಅವಘಡಗಳನ್ನು ನಮಗೆ ದೂರವಾಣಿ ಮೂಲಕ ತಿಳಿಸಿದರೆ ನಾವು ನಿಗದಿತ ಸಮಯಕ್ಕೆ ಘಟನೆ ನೆಯುವ ಸ್ಥಳಕ್ಕೆ ಹೇಗೆ ಬರುವುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳಿಗೆ ತಿಳಿಸಿದರು.

ಕನ್ನಿಕಾ ವಿದ್ಯಾಪೀಠ ಮುಖ್ಯ ಶಿಕ್ಷಕ ಡಿ.ಎಂ.ರಾಘವೇಂದ್ರ, ಶಿಕ್ಷಕಿಯರಾದ ದಿವ್ಯಶ್ರೀ, ಮಂಜುಳಾ, ಶಹತಾಜ್‌, ಶಾಜಿಹಾಕೌಸರ್‌, ಶಾರದ, ಶಿಲ್ಪಾ, ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ರಘು, ಲಕ್ಷ್ಮೀಶ, ರಮೇಶ್‌, ಜಯಣ್ಣ, ವೆಂಕಟಾಚಲಪ್ಪ, ಆಂಜನೇಯ, ಸಂತೋಷ್‌, ಕುಮಾರ್‌, ಪ್ರವೀಣ್‌, ರಾಮು ಸೇರಿದಂತೆ ಹಾಜರಿದ್ದರು. 

Trending videos

Back to Top