CONNECT WITH US  

ಮಕ್ಕಳನ್ನು ಸುಂಸಸ್ಕೃತರನ್ನಾಗಿ ಮಾಡಿ

ಕುಣಿಗಲ್‌: ವಿದ್ಯಾರಂಭ ಒಂದು ಸಂಸ್ಕಾರ, ಇದು ಬಹಳ ಪೂರ್ವದಿಂದಲು ವಾಲ್ಮೀಕಿ ಮಹರ್ಷಿಗಳು ಲವ-ಕುಶರಿಗೆ ಚೂಡಾಕರ್ಮದ ಮೇಲೆ ವಿದ್ಯಾರಂಭ ಮಾಡಿಸಿದರು. ಶಾಸ್ತ್ರದ ಪ್ರಕಾರ ಮಕ್ಕಳಿಗೆ 5 ವರ್ಷ ಐದನೇ ತಿಂಗಳ ಐದನೇ ದಿನ ಅಕ್ಷರಾಭ್ಯಾಸ ಮಾಡಬೇಕು ಆದರೆ ಈಗಿನ ಮಕ್ಕಳು ಈ ವೇಳೆಗಾಗಲೇ ಶಾಲೆಗೆ ಹೊಗುತ್ತಿರುತ್ತಾರೆ ಹಾಗಾಗಿ ಅವರ ಬೆಳವಣಿಗೆ ಹಾಗೂ ಬುದ್ಧಿ ತಿಳಿಸುವ ಇದಕ್ಕೆ ಮುಂಚೆಯೇ ಅಕ್ಷರಾಭ್ಯಾಸ ಮಾಡಿಸುವುದು ಉತ್ತಮ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.

ಶುಕ್ರವಾರ ಪಟ್ಟಣದ ಬಿಜಿಎಸ್‌ ಶಾಲೆಯಲ್ಲಿ ಹಮ್ಮಿಕೊಂಡಿದ ಜ್ಞಾನಾಂಕುರ-2018 ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಗುವಿನ ಕೈಯನ್ನು ಹಿಡಿದುಕೊಂಡು ತಟ್ಟೆಯ ಮೇಲೆ ಇರುವ ಅಕ್ಕಿಯ ಮೇಲೆ  ಓಂ ನಮಃ ಶಿವಾಯ, ಓಂ ನಮೋ ನಾರಾಯಣಾಯ ನಮಃ, ಓಂ ಸರಸ್ವತಿಯೇ ನಮಃ ಎಂದು ಮೂರು ಸಲ ಮಕ್ಕಳ ಬಾಯಲ್ಲಿ ಹೇಳಿಸುತ್ತಾ ಕನ್ನಡದ ವರ್ಣಮಾಲೆಯನ್ನು ಬರೆಸುತ್ತಾ ಬಳಿಕ ಆರತಿ ಅಕ್ಷತೆ ಕೊಟ್ಟು ಸ್ವಾಮೀಜಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

ಬಳಿಕ ಸ್ವಾಮೀಜಿ ಮಾತನಾಡಿ, ಹಿಂದು ಸಂಸ್ಕೃತಿ ಅಥವಾ ಶಾಸ್ತ್ರದ ಪ್ರಕಾರ ಮಕ್ಕಳಿಗೆ ಅನೇಕ ಶಾಸ್ತ್ರಗಳಿವೆ ನಾಮಕರಣ, ಅನ್ನಶಾಸ್ತ್ರ, ಅಕ್ಷರಾಭ್ಯಾಸ ಎಂಬುದು ಕೂಡ ಪದ್ದತಿಯಲ್ಲಿ ಇದೆ. ಅಕ್ಷರ ಎಂಬ ಶಬ್ದವು ವೃತ್ತಿಯಾದರೂ ನಕ್ಷರತಿಃ ಇತಿಃ ಅಕ್ಷರಂ ಎಂಬುದಾಗಿ ಯಾವುದಕ್ಕೆ ಅಳಿವಿಲ್ಲವೋ ಅದು ಅಕ್ಷರ ಎಂದು ಅರ್ಥವಾಗುತ್ತದೆ ಬರೆದ ಲಿಪಿಯಾದರೋ ಅಳಿಸಿ ಬಿಟ್ಟರೆ ನಾಶಹೊಂದುತ್ತದೆ. ಆಗ ಈ ಅಕ್ಷರ ಶಬ್ದ ಲಿಪಿಗೆ ಸರಿಯಾಗಿ ಹೊಂದುವುದಿಲ್ಲ, ಈಗಿನ ಸಮಾಜದಲ್ಲಿ ಮಕ್ಕಳಿಗೆ ಈ ರೀತಿ ಅಕ್ಷರಾಭ್ಯಾಸ ಮಾಡುವ ಮೊದಲೇ ಸಿ.ಡಿಗಳನ್ನು ಮನೆಗೆ ತಂದು ಡಿವಿಡಿ ಮೂಲಕ ಸೀಡಿಯಲ್ಲಿ ತೋರಿಸಿ ಬಾಯಿಪಾಠ ಮಾಡಿಸುವುದು ಸರಿಯಲ್ಲ ಎಂದು ಹೇಳಿದರು. 

ಉತ್ತರ ಸಂಸ್ಕಾರ ಕಲಿಸಿ: ಮಕ್ಕಳ ಉತ್ತಮ ವಿದ್ಯಾಭ್ಯಾಸ ಮೊದಲ ಮೆಟ್ಟಿಲು ಮನೆಯ ಪಾಠ ಹೀಗಾಗಿ ಮನೆಯಲ್ಲಿ ಉತ್ತಮ ವಾತಾವರಣ ಇರಬೇಕು. ತಂದೆ ತಾಯಂದಿರು ಮಕ್ಕಳ ಎದುರಲ್ಲೇ ಕಿತ್ತಾಡ ಬಾರದು. ಉತ್ತಮ ಸಂಸ್ಕಾರದ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಿ ಇದನ್ನು ತಿಳಿಹೇಳಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಕರ ಜವಾಬ್ದಾರಿಗಿಂತ, ಪೋಷಕರ ಜವಾಬ್ದಾರಿ ಬಹಳ ದೊಡ್ಡದು ಎಂದು ಸ್ವಾಮೀಜಿ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಜಿ ಸಿದ್ದಯ್ಯ ಮಾತನಾಡಿ, ಎಲ್ಲರ ಮನೆಯಲ್ಲೂ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಪದ್ದತಿ ಬೆಳೆಸಿಕೊಂಡರೆ ಆ ಮಕ್ಕಳು ವಿದ್ಯಾಪಾರಂಗತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು. ಬಿಜಿಎಸ್‌ ಚಿಕ್ಕಬಳ್ಳಾಪುರ ವಿಭಾಗದ ಸಿಎಒ ಶಿವರಾಮರೆಡ್ಡಿ, ಕಾಲೇಜು ಪ್ರಾಚಾರ್ಯ ಆರ್‌. ವೆಂಕಟಮುನಿರೆಡ್ಡಿ, ಉಪ ಪ್ರಚಾರ್ಯ ಡಿ.ಪಿ ಕುಮಾರ್‌, ಹರ್ಷವರ್ಧನ ಐಟಿಐ ಕಾಲೇಜು ಪ್ರಾಚಾರ್ಯ ಟಿ.ಜಿ ಚನ್ನಪ್ಪ ಇದ್ದರು.

Trending videos

Back to Top