CONNECT WITH US  

ಮನಸ್ಸಿನಂತೆ ದೇಗುಲಗಳು ಶುಚಿಯಾಗಿರಬೇಕು 

ಮಧುಗಿರಿ: ಭಕ್ತಾಧಿಗಳ ಮನಸ್ಸಿಗೆ ನೆಮ್ಮದಿ ನೀಡುವ ದೇವಾಲಯಗಳ ಪರಿಸರ ಶುಚಿಯಾಗಿಟ್ಟರೆ ಮನಸ್ಸು ಸಹ ಶುಚಿಯಾಗಿರುತ್ತದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟರು. 

ಪಟ್ಟಣ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ನಮ್ಮ ಊರು-ನಮ್ಮ ಶ್ರದ್ಧಾ ಕೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮನಸ್ಸಿಗೆ ನೆಮ್ಮದಿ: ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯರು ಶಾಂತಿ-ನೆಮ್ಮದಿಗಾಗಿ ಧಾರ್ಮಿಕ ಮಠ ಮಂದಿರಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಪರಿಸರ ಶುಭ್ರವಾಗಿದ್ದರೆ ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ. ಧರ್ಮಸ್ಥಳ ಸಂಸ್ಥೆ ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಗಳಿಸಲು ಕೃಷಿ, ಪಶು ಸಂಗೋಪನೆ, ಬ್ಯಾಂಕಿಂಗ್‌ ವ್ಯವಹಾರ,

ಕಸೂತಿ ತರಬೇತಿ ನೀಡುತ್ತಿದ್ದು, ಈ ಯೋಜನೆ ರಾಜ್ಯಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ವಿಸ್ತಾರಗೊಳ್ಳಲಿ ಎಂದರು. ಮುಂದಿನ ತಿಂಗಳು ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು ಮಧುಗಿರಿಗೆ ಆಗಮಿಸುತ್ತಿದ್ದು, ತಾಲೂಕಿನ ಜನತೆ ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸೋಣ ಎಂದರು. 

150 ದೇಗುಲಗಳ ಸ್ವತ್ಛತೆ: ಯೋಜನಾಧಿಕಾರಿ ಶ್ರೀಮೂರ್ತಿ ಶೆಟ್ಟಿ ಮಾತನಾಡಿ, ದೇವಸ್ಥಾನಗಳ ಒಳಾಂಗಣ, ಹೊರಾಂಗಣ ಸ್ವತ್ಛತೆಗೆ ಆದ್ಯತೆ ನೀಡಬೇಕು. ಮನಸ್ಸು, ಮನೆ, ಸ್ವತ್ಛವಾಗಿರಬೇಕೆಂಬ ಹೆಗ್ಗಡೆಯವರ ಪರಿಕಲ್ಪನೆಯಂತೆ ಈ ಕಾರ್ಯಕ್ರಮವನ್ನು ರೂಪಿಸಿದ್ದು, ಆ.15 ರೊಳಗೆ ನಮ್ಮ ತಾಲೂಕಿನ 150 ದೇವಸ್ಥಾನಗಳನ್ನು ಸ್ವತ್ಛಗೊಳಿಸಲಾಗುವುದು ಎಮದರು.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಾರತದ ಸ್ವತ್ಛ ಧಾರ್ಮಿಕ ಕ್ಷೇತ್ರ ಎಂಬ ಪ್ರಶಸ್ತಿ ದೊರಕಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳು ಸ್ವತ್ಛತೆಯಿಂದ ಕೂಡಿರಬೇಕು ಎಂಬುದು ನಮ್ಮ ಆಶಯ ಎಂದರು. 

ಮಠದ ಅರ್ಚಕ ಅನಂತಾಚಾರ್‌ ಮಾತನಾಡಿ, ಒಂದು ಮನೆ ಕಟ್ಟಲು ಎಲ್ಲಾ ಕೆಲಸಗಾರರು ಬೇಕು. ಅದೇ ರೀತಿ ಈ ಸಂಸ್ಥೆ ಕಟ್ಟಲು ಜಾತಿ ಮತ, ಬೇಧವಿಲ್ಲದೆ ಎಲ್ಲಾ ಸಮುದಾಯದವರು ಶ್ರಮಿಸುತ್ತಿದ್ದು, ಇನ್ನು ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದರು. 

ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿಗಳಾದ ರಂಗನಾಥ್‌, ಗಾಯಿತ್ರಿ, ಒಕ್ಕೂಟದ ಉಪಾಧ್ಯಕ್ಷೆ ಕೆ.ಶಾಂತಲರಾವ್‌, ಜಂಟಿ ಕಾರ್ಯದರ್ಶಿ ದಾûಾಯಣಿ, ಕೋಶಾಧಿಕಾರಿ ಗಾಯಿತ್ರಿ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪಟ್ಟಣದ ಶ್ರೀಚೌಡೇಶ್ವರಿ ದೇವಾಲಯವನ್ನು ಸಂಸ್ಥೆಯ ಸದಸ್ಯರು ಸ್ವತ್ಛಗೊಳಿಸಿದರು.

Trending videos

Back to Top