CONNECT WITH US  

ಸಾಮಾಜಿಕ ಕಾರ್ಯಕ್ರಮವಾಗಿ ಡಿಸಿಎಂ ಜನ್ಮದಿನ 

ಕೊರಟಗೆರೆ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ 68ನೇ ಹುಟ್ಟುಹಬ್ಬವನ್ನು ಸಾಮಾಜಿಕ ಸೇವಾ ಕಾರ್ಯಕ್ರಮವನ್ನಾಗಿ ಆಚರಿಸುತ್ತಿದ್ದೇವೆ ಬ್ಲಾಕ್‌ ಕಾಂಗ್ರೆಸ್‌ ನಗರ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ ತಿಳಿಸಿದರು. ಡಾ. ಜಿ. ಪರಮೇಶ್ವರ್‌ ಅವರ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್‌ ವಿತರಿಸಿ ಮಾತನಾಡಿದರು.

ಅರ್ಥಪೂರ್ಣ ಆಚರಣೆ: ಡಾ. ಜಿ. ಪರಮೇಶ್ವರ್‌ ಅವ ಅವರ ಹುಟ್ಟು ಹಬ್ಬದ ದಿನವನ್ನು ಈ ರೀತಿಯ ಸಾಮಾಜಿಕ ಸೇವೆ ಮಾಡುತ್ತಿರುವುದು ಅರ್ಥ ಪೂರ್ಣವಾಗಿದ್ದು ಅವರ ಹುಟ್ಟು ಹಬ್ಬವನ್ನು ಬಡಜನರ ಸೇವೆಯನ್ನು ಮಾಡುವ ಕೆಲಸವನ್ನಾಗಿ ಮಾಡಿದ್ದು, ಸಾವಿರಾರು ಬಡವರಿಗೆ ಅವರ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಿರುವುದು ಅವರ ಸೇವೆಗೆ ಹಿಡಿದ ಕನ್ನಡಿಯಾಗಿದೆ ಎಂದು ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ಅರಕೆರೆ ಶಂಕರ್‌ ಮಾತನಾಡಿ, ಡಾ. ಜಿ ಪರಮೇಶ್ವರ್‌ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಸತತ 10ವರ್ಷಗಳಿಂದ ಇಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಡಾ.ಜಿ.ಪರಮೇಶ್ವರ್‌ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಆರ್‌ ಓಬಳರಾಜು ಮಾತನಾಡಿ, ಡಾ. ಜಿ. ಪರಮೇಶ್ವರ್‌ ಅವರ ಅಣ್ಣರಾದ ಡಾ. ಶಿವಪ್ರಸಾದ್‌ ನಿಧನರಾದ ಹಿನ್ನೆಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಉಪಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

ಆದರೆ ಅವರ ಹುಟ್ಟು ಹಬ್ಬವನ್ನು ಸಾಮಾಜಿಕ ಸೇವಾ ಕಾರ್ಯಕ್ರಮವನ್ನಾಗಿ ಆಚರಿಸಲು ನಿರ್ಧರಿಸಿ ಈ ರೀತಿಯ ಸೇವಾ ಕೆಲಸವನ್ನು ಮಾಡಲಾಗುತ್ತಿದೆ. ಈಗಾಗಲೇ ಡಾ. ಜಿ ಪರಮೇಶ್ವರ್‌ ಕ್ಷೇತ್ರದ ನೂರಾರು ಆಟೋ ಚಾಲಕರಿಗೆ ಉಚಿತ ಪರವಾನಗಿಯನ್ನು ಮಾಡಿಸಿದ್ದು, ಅದನ್ನು ನೀಡುವ ಕೆಲಸವನ್ನು ಮುಂಬರುವ ದಿನಗಳಲ್ಲಿ ಮಾಡಲಾಗುವುದು ಎಂದರು. 

ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ್‌, ಮಾಜಿ ಪ.ಪಂ ಉಪಾಧ್ಯಕ್ಷ ಕೆ.ವಿ ಮಂಜುನಾಥ, ಮಾಜಿ ಸದಸ್ಯರಾದ ಕೆ.ವಿ ಪುರುಷೋತ್ತಮ್‌, ಮುಖಂಡರಾದ ಕೆ.ಎಂ. ಸುರೇಶ್‌, ಆಟೋಕುಮಾರ್‌, ಲಾರಿ ಮಂಜುನಾಥ್‌, ರಾಜಣ್ಣ, ಅನ್ಸರ್‌ಪಾಷ, ನಾಗರಾಜು, ಚನ್ನಕೇಶವ, ದಯಾನಂದ್‌, ರಂಗನಾಥ್‌, ವೆಂಕಟಾಚಲಿ, ಹನುಮತರಾಯಪ್ಪ ಸೇರಿದಂತೆ ಇತರರು ಇದ್ದರು. 


Trending videos

Back to Top