CONNECT WITH US  

ಗಾಂಧಿ ನಾಡಿನಲ್ಲಿ ಪ್ರಾಮಾಣಿಕತೆಗಿಲ್ಲ ಜಾಗ

ಕುಣಿಗಲ್‌: ಅನ್ಯಾಯ, ಶೋಷಣೆ ಹಾಗೂ ವರ್ಣ ಭೇದ ನೀತಿ ವಿರುದ್ಧ ಹೋರಾಟ ನಡೆಸುವ ಮೂಲಕ ಸರ್ವರಿಗೂ ಸಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಗಾಂಧೀಜಿ ಪ್ರಾಮಾಣಿಕ ಪ್ರಯತ್ನ ಮಹತ್ವದ್ದಾಗಿದೆ ಎಂದು ಸರ್ವೋದಯ ಚಿಂತನ ಮಂಡಲಿ ರಾಜ್ಯಾಧ್ಯಕ್ಷ ಎಲ್‌. ನರಸಿಂಹಯ್ಯ ತಿಳಿಸಿದರು.

ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ಜಿಲ್ಲಾ ಸರ್ವೋದಯ ಮಂಡಲಿ, ಮಹಾತ್ಮಗಾಂಧಿ ಚಿಂತನಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಗಾಂಧಿ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಾಂಧಿ ತತ್ವ ಅದರ್ಶಗಳನ್ನು ಕೇವಲ ಮಾತಿಗೆ ಸೀಮಿತಗೊಳಿಸದೆ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲಿ ಸಮಾನತೆ, ಸ್ವತ್ಛತೆ, ಗುಣವರ್ಧನೆ ಇರುತ್ತದೋ ಅಲ್ಲಿ ಗಾಂಧೀಜಿ ಇರುತ್ತಾರೆ. ಪ್ರಸ್ತುತ ಸಮಾಜದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆ ಒಂದೇ ಹಾದಿಯಲ್ಲಿ ಸಾಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಂಧಿ ನಾಡಿನಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಒಬ್ಬ ದಕ್ಷ ಜನಪ್ರತಿನಿಧಿ ಹಾಗೂ ಅಧಿಕಾರಿಗಳಲ್ಲಿ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಇರುವುದು ದುರಂತವೇ ಸರಿ ಎಂದರು. 

ತುಳಿತಕ್ಕೆ ಒಳಗಾದ ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ದಬ್ಟಾಳಿಕೆ ಹಾಗೂ ಅಸ್ಪೃಶ್ಯತೆಯನ್ನು ತೀವ್ರವಾಗಿ ವಿರೋಧಿಸಿದ ಗಾಂಧೀಜಿ ದಲಿತರ ಕೇರಿಗಳಿಗೆ ಹೋಗಿ ಸ್ವತ್ಛತೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಅಸ್ಪೃಶ್ಯತೆ ಆಚರಣೆ ಮಹಾ ಪಾಪ ಎಂದು ಸಾರಿ, ಇದರ ವಿರುದ್ಧª ಹೋರಾಟ ನಡೆಸಿ ಆ ಸಮುದಾಯದ ಜನರಿಗೆ ಸಮಾಜಿಕ, ಶೆ„ಕ್ಷಣಿಕ ಹಾಗೂ ರಾಜಕೀಯ ಸ್ಥಾನಮಾನ ಕಲ್ಪಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಕಸಾಪ ತಾಲೂಕು ಅಧ್ಯಕ್ಷ  ಕ.ಚ.ಕೃಷ್ಣಪ್ಪ ಮಾತನಾಡಿ, 1942ರ ಆಗಸ್ಟ್‌ 8 ರಂದು ಗಾಂಧೀಜಿ ಕ್ವಿಟ್‌ ಇಂಡಿಯಾ ಚಳವಳಿಗೆ ಚಾಲನೆ ನೀಡಿದರು. ಮಾಡು ಇಲ್ಲವೇ ಮಡಿ ಎನ್ನುವ ಪ್ರಸಿದ್ಧ ಮಾತಿನಿಂದ ಕ್ವಿಟ್‌ ಇಂಡಿಯಾ ಚಳವಳಿಗೆ ಜೀವ ತುಂಬಿದರು.

ಈ ಕರೆಗೆ ದೇಶದ ಜನತೆ ಉತ್ತಮ ರೀತಿಯಲ್ಲಿ ಸ್ಪಂದಿಸಿದರು. ಬಂಧಿಸಿದರೂ ಧೃತಿಗೆಡಲಿಲ್ಲ. ವಿದ್ಯಾರ್ಥಿಗಳ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನರಾಯಪ್ಪ, ಉಪ ಪ್ರಾಚಾರ್ಯೆ ಮಮತಾ ಮಣಿ ಇತರರಿದ್ದರು.

Trending videos

Back to Top