CONNECT WITH US  

ಎದೆಹಾಲಿನಿಂದ ಪೌಷ್ಟಿಕಾಂಶ ಜತೆ ಬಾಂಧವ್ಯವೂ ವೃದ್ಧಿ

ತಿಪಟೂರು: ತಾಯಿಯ ಎದೆ ಹಾಲು ಮಗುವಿನ ಪೌಷ್ಟಿಕಾಂಶಕ್ಕಾಗಿ ಮಾತ್ರವಲ್ಲದೇ ತಾಯಿ ಮಗುವಿನ ಬಾಂಧವ್ಯ ವೃದ್ಧಿಸಲು ಸಹಕಾರಿಯಾಗಿದ್ದು, ತಾಯಂದಿರು ಅಮೃತಕ್ಕೆ ಸಮಾನವಾದ ಎದೆಹಾಲನ್ನು ಮಕ್ಕಳಿಗೆ ತಪ್ಪದೇ ಉಣಿಸಬೇಕೆಂದು ಶಾಸಕ ಬಿ.ಸಿ.ನಾಗೇಶ್‌ ಸಲಹೆ ನೀಡಿದರು.

ನಗರದ ಆರ್ಯ ಬಾಲಿಕಾ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ, ಕೃಷಿ ವಿಜಾnನ ಕೇಂದ್ರ ಕೊನೇಹಳ್ಳಿ ಹಾಗೂ ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ತಾಯಂದಿರ ದೇಶವಾಗಿದ್ದು, ಹಿಂದಿನ ಕಾಲದಲ್ಲಿ ಒಬ್ಬ ತಾಯಿ ಹಲವು ಮಕ್ಕಳನ್ನು ಸಾಕಿ ಬೆಳೆಸುತ್ತಿದ್ದಳು. ಆದರೆ, ಇಂದು ಮಕ್ಕಳನ್ನು ಸಾಕುವ ಬಗ್ಗೆ ಮಹಿಳೆಯರಿಗೆ ಪಾಠ ಹೇಳಿಕೊಡುವಂತಹ ಪರಿಸ್ಥಿತಿ ಬಂದಿದೆ. ತಾಯಂದಿರುವ ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸುವ ಮೂಲಕ ಮಾಹಿತಿ ಪಡೆದುಕೊಳ್ಳಬೇಕು. ಸರ್ಕಾರ ಬಾಣಂತಿ ಮತ್ತು ಮಗುವಿನ ಆರೋಗ್ಯಕ್ಕೆ ವಿಶೇಷ ಒತ್ತು ನೀಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಯುವ ಸಮೂಹ ಭಾರತೀಯ ಸಂಪ್ರದಾಯ-ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕೆಂದರು. 

ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಕಾಶ್‌ ಮಾತನಾಡಿ, ಸರ್ಕಾರ ಬಾಣಂತಿ ಹಾಗೂ ಮಗುವಿಗೆ ಒತ್ತು ನೀಡಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಬಾಣಂತಿ ಹಾಗೂ ಮಗು ಸುರಕ್ಷಿತವಾಗಿರುವಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

 ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಬಿ.ಎನ್‌.ಚಂದ್ರಶೇಖರ್‌, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ.ಈಶ್ವರಯ್ಯ, ವಿಷಯ ತಜ್ಞ ಕೊನೆಹಳ್ಳಿ ಡಾ.ಶಂಕರ್‌, ಬದುಕು ಸಂಸ್ಥೆಯ ನಂದಕುಮಾರ್‌, ಸಿಡಿಪಿಒ ಓಂಕಾರಪ್ಪ, ಜಾnನ ಜ್ಯೋತಿ ಸಾಕ್ಷರತಾ ಕಚೇರಿಯ ರೇಖಾ, ನಗರಸಭಾ ಸದಸ್ಯ ತರಕಾರಿ ಗಂಗಾಧರ್‌, ಕೀರ್ತಿಕುಮಾರ್‌, ಮೇಲ್ವಿಚಾರಕಿ ಪ್ರೇಮಾ ಇತರರಿದ್ದರು.

Trending videos

Back to Top